ಹೀಗೊಮ್ಮೆ ನಾ ಕಳೆದುಬಿಡುವೆ...!!

ಹೀಗೊಮ್ಮೆ ನಾ ಕಳೆದುಬಿಡುವೆ...!!

ಚಿತ್ರ

 

ಸಾಗರದ ಸಂತೋಶ,ಮರುಭೂಮಿಯ ನೋವು

ಒಟ್ಟಾಗಿ ನಿಂತವು ನನ್ನ ಕವನಗಳಿಗೆ,

  ಪ್ರತಿಮೆಗಳಾಗಿ..!

ಭೂಮಿಯ ಒದ್ದೆತನ,ಸಂಜೆಯ ಕನವರಿಕೆ

ಧುತ್ತಂದು ನುಗ್ಗಿದವು,ನನ್ನಶಬ್ದಗಳಿಗೆ,

   ಮಾತುಗಳಾಗಿ...!!

ಗೂಡು ಕಟ್ಟುವ ಸಮಯ,ದೀಪ ಮುಡಿವ ಹೊತ್ತು

ಆಶೆಗಳಾಗಿ ಚಿಗುರಿದವು,ನನ್ನ ಪ್ರಸ್ತಾಪಗಳಿಗೆ,

   ಮವ್ ನಿಗಳಾಗಿ....!!!

ಆ ನೋವಿದೆ,ಕಳೆದ ಘಳಿಗೆಗಳಿಗೆ ಉಸಿರಾಡಲು,

ಮತ್ತದೇ ಮವ್ ನವಿದೆ ಹೂಂಗುಟ್ಟುವ ಬಯಕೆಗಳಿಗೆ.

ನಾನಿನ್ನೂ ಬದುಕಬೇಕಾಗಿದೆ,

ಹೀಗೆಯೇ ಬದುಕಬೇಕಾಗಿದೆ..!!?

ನೆರಳ ಕನಸಿದೆ ಮರಗಳಿಗೆ,

ಇಬ್ಬನಿಯ ಮನಸಿದೆ ಹನಿಗಳಿಗೆ....

ಎಲ್ಲವೂ ಮತ್ತೆ ಮತ್ತೆ ಒದ್ದೆಯಾಗುತ್ತವೆ..

ಖಾಲಿ-ಖಾಲಿಯಾದ ಎದೆಗಳೊಳಗೆ.....!!

ನಿನ್ನ ಕಣ್ಣಂಚು ತುಸು ಒದ್ದೆಯಾದರೂ

ನಡೆಯುತ್ತವೆ ನನ್ನ ಎಶ್ಟೋ ಕಾಲಗಳು..

ನನಗದೇ ವಿಶೇಶಾಂಕ....!!!

ಮೂಡಿದ ಹೆಜ್ಜೆಗಳಿಗಿಲ್ಲ ಹೆಸರು...

ರಸ್ತೆಯ ಮಯ್ ಲುಗಳಿಗಿಲ್ಲ ಹೆಸರು...

ಆಕಾಶದ ತಾರೆಗಳಿಗಿಲ್ಲ ಹೆಸರು.....!!

Rating
No votes yet

Comments