ಹೆಣ್ಣು ಮಗು ಅಂತ ತಾತ್ಸಾರ ಯಾಕೆ???

ಹೆಣ್ಣು ಮಗು ಅಂತ ತಾತ್ಸಾರ ಯಾಕೆ???

ಪ್ರೀತಿಯ ಸ್ನೇಹಿತರೆ,ಇತೀಚೆಗೆ ನಮ್ಮೆಲರಿಗೂ ತಿಳಿದಿರುವ ಹಾಗೆ ಮೂರು ತಿಂಗಳು ಹಸುಳೆ ಹೆಣ್ಣು ಮಗುವನ್ನು ಅದರ ತಂದೆಯೇ ಕೂಂದ ಘಟನೆ ನಡೆಯಿತು.
ಎಂತಹ ಪರಿಸ್ಥಿತಿ ನಮ್ಮಲ್ಲಿ ಉದ್ಬವ ಆಗಿದೆ ಅಂತ ವ್ಯಥೆ ಆಗುತಿದೆ ಕೇವಲ ಹೆಣ್ಣು ಮಗು ಅಂತ ಆತ ಇಂತಹ ಕೃತ್ಯಕ್ಕೆ ಎಸಗಿದನೆ.
ನನ್ನಲಿ ಇವಾಗ ಮೂಡುತಿರುವ ಪ್ರಶ್ನೆ ಹೆಣ್ಣು ಅಂದರೆ ಯಾಕೆ ಇಷ್ಟು ತಾತ್ಸಾರ,ಇದು ಬರಿ ಅನಕ್ಷಸ್ತರು ಮಾತ್ರವಲ್ಲ,ತಿಳುವಳಿಕೆ ಇರುವ  ಕೆಲು ಮಂದಿ ಸಹ ಹೀಗೆ ತಾತ್ಸಾರ ವ್ಯಕ್ತ ಪಡಿಸುತಾರೆ.ತಾವು ಹುಟ್ಟಿದು ಒಂದು ಹೆಣ್ಣು ಇಂದಾನೆ ಅನ್ನುವ ಸತ್ಯ ಮರೆಯುತಾರೆ.ಹೆಣ್ಣು ಮಗು ಆಯಿತು ಅಂದರೆ ತಲೆ ಮೇಲೆ ಕೈ ಇಟ್ಟುಕೊಳ್ಳುತಾರೆ.
ಹೆಣ್ಣು ಹುಟ್ಟಿತು ಅಂದರೆ ಖರ್ಚು ಅಂತ ಅರ್ಥ ಅನ್ನುತಾರೆ.
ಈಗಿನ ಎಷ್ಟು ಹೆಣ್ಣು ಮಕ್ಕಳು ತಮ್ಮ ಕಾಲು ಮೇಲೆ ನಿಂತು ತಮ್ಮ ಮನೆ ಹಾಗು ಗಂಡನ ಮನೆ ಎರಡನ್ನು ನಿಬಾಯಿಸುತಿದರೆ.ಆದರು ಗಂಡು ಮಗು ಇಲ್ಲ ಅಂದರೆ ನಮಗೆ ಮುಕ್ತಿ ಸಿಗೋಲ್ಲ ಅನ್ನು ಮಾತು ಬೇರೆ.

ದಯವಿಟ್ಟು ಇಂತಹ ಮೂಡ ನಂಬಿಕೆ ಮತ್ತು ಇಂತಹ ವಿಚಾರಗಳನ್ನು ನಿಮ್ಮ ಮನದಿಂದ ತೆಗದು,ಹೆಣ್ಣು ಮಕ್ಕಳನ್ನು ಜೀವಿಸೋಕೆ ಬಿಡಿ


 

Rating
No votes yet

Comments