ಮಂಗನೊಂದಿಗೆ ಮಾರ್ನಿಂಗ್

ಮಂಗನೊಂದಿಗೆ ಮಾರ್ನಿಂಗ್


ಬೆಳಗ್ಗೆ ಚಹಾ  ಕುಡಿಯುತ್ತಾ  ಪೇಪರ್ ಓದುತ್ತಿದ್ದೆ. ಪಾಪಿ ತಂದೆ ತನ್ನ ಮಗುವನ್ನೇ ಚಿತ್ರಹಿಂಸೆ ಮಾಡಿ ಕೊಂದ ಸುದ್ದಿ, ಹುಡುಗಿಯ ಕತ್ತು ಸೀಳಿ ಕೊಂದ ಸುದ್ದಿ.. ಆ ಸಮಯದಲ್ಲೇ ಹೊರಗೆ ಕಾಗೆಗಳ ಗದ್ದಲ ಕೇಳಿಸಿತು. ಮೇಲೆ ಹೋಗಿ ನೋಡಿದಾಗ ಪಕ್ಕದ ಮನೆ ಮೇಲೆ ಈ ಮಂಗ ಕಾಣಿಸಿತು.


ಮುಖದ ತುಂಬಾ ಚಿಂತೆ..ಕಾಗೆಗಳು ಕುಟುಕುವಷ್ಟು ಹತ್ತಿರ ಬಂದರೂ ಗಮನವೇ ಇಲ್ಲ. ತನ್ನ ಗುಂಪು ದೂರ ಮಾಡಿದ ಚಿಂತೆಯೋ? ಪ್ರೇಮಿ ಕೈಕೊಟ್ಟಿರಬಹುದೇ? ಕಾಗೆಗಳನ್ನೆಲ್ಲಾ ಓಡಿಸಿ ಹತ್ತಿರ ಹೋಗಿ ನಿಂತೆ-ನನ್ನನ್ನೊಮ್ಮೆ ನೋಡಿ ಪುನಃ ದೂರಕ್ಕೆ ದೃಷ್ಠಿ ನೆಟ್ಟು ಕುಳಿತಿತು. ನಿನ್ನ ಸಹಾಯ ನನಗೆ ಬೇಕಿಲ್ಲ ಎಂದಂತೆ ಅನಿಸಿತು.


 

Rating
No votes yet

Comments