ಒಮ್ಮೊಮ್ಮೆ ಅನ್ಸುತ್ತೆ - ೫ [ ಛೆ! ಎಂತ ಮನುಷ್ಯನಿವನು ]

ಒಮ್ಮೊಮ್ಮೆ ಅನ್ಸುತ್ತೆ - ೫ [ ಛೆ! ಎಂತ ಮನುಷ್ಯನಿವನು ]

 ಈಗೆರಡು ದಿನದಲ್ಲಿ ನಡೆದ ಘಟನೆ ಏಕೊ ಮನಸಿಗೆ ಬೇಸರವೆನಿಸುತ್ತದೆ.
ಟೀವಿಗಳಲ್ಲಿ ಬರುತ್ತಿದ್ದ ಸುದ್ದಿ. ತನ್ನ ಮಗುವನ್ನೆ ತಾನು ಕೊಲ್ಲುವುದು ಅದು ಕೊಲ್ಲುವಾಗ ಸಹ ತನ್ನ ಕ್ರೌರ್ಯ ತೋರಿರುವುದು ನೆನೆದಾಗ ನಮ್ಮ ನಾಗರೀಕ ಸಮಾಜ ಯಾವ ದಿಕ್ಕಿನತ್ತ ಸಾಗಿದೆ ಎಂದು ಚಿಂತೆಯಾಗುತ್ತದೆ. ಕೊಂದಿರುವುದು ಒಬ್ಬನೆ ಒಬ್ಬ ವ್ಯಕ್ತಿ ಇರಬಹುದು,  ಆದರು ಅವನು ಈಗಿನ ಸಮಾಜದಲ್ಲಿ ಜೀವಿಸಿರುವ ವ್ಯಕ್ತಿಯೆ ಅನ್ನುವಾಗ ಅಂತಹ ಹೀನಮನಸಿನ ವ್ಯಕ್ತಿ ಸಮಾಜದಲ್ಲಿದ್ದಾನೆ ಅಂದರೆ ಅಂತಹ ಮನಸು ಬೆಳೆಯಲು ಕಾರಣವಾದ ನಮ್ಮ ಸಮಾಜ ಹಾಗು ಸಾಮಾಜಿಕ ಸ್ಥಿಥಿಗೆ ನಾವೆಲ್ಲರು ಪೂರ್ಣ ಹೊಣೆಯಲ್ಲವೆ.

    ಮತ್ತೆ ಇಂತಹ ಕ್ರೂರಮನಸಿನ ವ್ಯಕ್ತಿಗಳನ್ನು ಏನೆಂದು ಕರೆಯಬಹುದು
"ಕ್ರೂರ ಮೃಗ" ಎನ್ನಬಹುದೆ ಆದಾಗದು ಕಾಡಿನಲ್ಲಿರುವ ನಾವು ಕ್ರೂರಮೃಗವೆಂದು ಕರೆಯುವ ಹುಲಿ ಸಿಂಹಗಳಲ್ಲಿ ಸಹಿತ ಮಾತೃ ಹೃದಯವಿದೆ. ಅದು ಎಂದಿಗು ತನ್ನ ಮರಿಯನ್ನೆ ಕೊಲ್ಲದು.
 ಮತ್ತೆ ಏನು ಅನ್ನೋಣ
"ನರರಾಕ್ಷಸ" ಎಂದೆ. ಅದು ಸಹ ಆಗದು , ಯಾವ ರಾಕ್ಷಸನು ತನ್ನ ಮಗುವನ್ನು ಕ್ರೂರವಾಗಿ ಕೊಂದ ಉದಾಹರಣೆಯಿಲ್ಲ.
ಹಾಗಿರುವಾಗ ಬೇಡ ಬಿಡಿ ಅವನನ್ನು ಮನುಷ್ಯನೆಂದೆ ಕರೆಯೋಣ
ಛೆ! ಎಂತ ಮನುಷ್ಯನಿವನು.

Rating
No votes yet

Comments