ಕಥೆ ಹೇಳುವೇ ನನ್ನ ಕಥೆ ಹೇಳುವೆ...

ಕಥೆ ಹೇಳುವೇ ನನ್ನ ಕಥೆ ಹೇಳುವೆ...

ಚಿತ್ರ

 
                                                      
 
ಎಂದಾದರೂ ನಮ್ಮಗಳ ಮನೆಯಲ್ಲಿ ಕಾರಣಾಂತರಗಳಿಂದ ಕೇಬಲ್ ಸಂಪಕ್ರ, ದೂರವಾಣಿ ಸಂಪಕ್ರ, ಕಡಿತಗೊಂಡರೆ, ಕಂಪ್ಯೂಟರ್, ಇಂಟರ್ನೆಟ್, ವೊಬೈಲ್ ಸೌಕರ್ಯ ಯಾವುದೂ ಇಲ್ಲವೆಂದಾದರೆ? ಆಗ ನಮ್ಮ ನಿಮ್ಮ ಪರಿಸ್ಥಿತಿ ಊಹಿಸಿಕೊಳ್ಳಲೂ ಅsಸಾಧ್ಯ.  ಅಲ್ಲವೇ?  ಇದೇ ಸ್ಥಿತಿ ಇನ್ನೂ ಕೆಲವುಕಾಲ ಹೀಗೇ ಮುಂದುವರೆುತೆಂದರೆ ನಮಗೆ ಹುಚ್ಚು ಹಿಡಿಯುವುದಂತೂ ಖಂಡಿತಾ.  ಆದರೆ ಇಲ್ಲೊಬ್ಬ ಮಹಿಳೆ ತನ್ನ ಜೀವಮಾನದ ಬಹು ಅಮೂಲ್ಯವಾದ ಸುಮಾರು 20 ವಷ್ರಗಳನ್ನು ‘ಗೃಹ ಬಂಧನ’ದಲ್ಲೇ ಕಳೆದಳೆಂದರೆ ಅವಳ ಸಹನೆ, ಸಂಯಮ, ಸೌಜನ್ಯಕ್ಕೇನೆನ್ನಬೇಕು.  ನೀವೇ ಹೇಳಿ.  ಈ ಅನಾಗರೀಕ ಶಿಕ್ಷೆ ಅವಳ ಯಾವುದೋ ಕೊಲೆಯತಪ್ಪಿಗೋ, ವೋಸದ ತಪ್ಪಿಗೋ ಅಥವಾ ದೇಶದ್ರೋಹದ ತಪ್ಪಿಗೋ ಅಲ್ಲ, ಗೆಳೆಯರೇ! ಸವ್ರಾಧಿಕಾರಿ ಧೋರಣೆಯ, ಮಿಲಿಟರಿ ಅಧಿಕಾರಶಾಹಿಯ ವಿರುದ್ದ ಸೆಟೆದು ನಿಂತದ್ದಕ್ಕಾಗಿ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವಸಲುವಾಗಿ ಶಾಂತಿಯುತ ಹೋರಾಟ ನೆಡೆಸಿದ್ದಕ್ಕಾಗಿ.  ತನ್ನ ಸ್ವಜನರನ್ನು ತಾುಯಂತೆ ನಿಶ್ಕಲ್ಮಶ ಹೃದಯದಿಂದ ಪ್ರೀತಿಸಿದ್ದಕ್ಕಾಗಿ.  ಎಲ್ಲಾದರೂ ಕೇಳಿದ್ದೀರಾ ಇಂತಹ ರಾಕ್ಷಸೀ ಕೃತ್ಯ? ಇಂತಹ ದೌಜ್ರನ್ಯ.  ಅದೂ ಒಬ್ಬ ಅಬಲೆಯ ಮೇಲೆ.  ಯಾವಳು ತನ್ನ ಜೀವನದುದ್ದಕ್ಕೂ ಬರೀ ಕಹಿಗಳನ್ನೇ ರುಚಿಸಿದ್ದಳೋ ಅಂತಹವಳಿಗೆ ಇಂತಹ ಅಮಾನವೀಯ ಶಿಕ್ಷೆ.  ಆ ದಿಟ್ಟ ಮಹಿಳೆ ಯಾರೆಂದು ತಿಳಿುತೇ, ಹೌದು ಅವಳೇ ‘ಆಂಗ್ ಸಾನ್ ಸೂ ಕಿ’.  ಈ ಅಸಾಧಾರಣ ಮಹಿಳೆಯ ಕರುಣಾಜನಕ, ರೋಚಕ ಕಥೆಯನ್ನು ಅವರ ಬಾುಂದಲೇ ಕೇಳಿ.
 
ಎಲ್ಲರಿಗೂ ನನ್ನ ನಮಸ್ಕಾರಗಳು, ನಾನು ಹುಟ್ಟಿದ್ದು ರಂಗೂನ್ನಲ್ಲಿ, 19, ಜೂನ್, 1945ರಲ್ಲಿ.  ಈಗ ರಂಗೂನನ್ನು ‘ಯಾಂಗಾನ್’ ಎಂದು ಹೆಸರಿಸಲಾಗಿದೆ.  ನನ್ನ ಹೆಸರಲ್ಲೇ ಒಂದು ವಿಷೇಶವಿದೆ.  ಏನೆಂದರೆ, ನನ್ನ ತಂದೆಯ ಹೆಸರಿನ ‘ಆಂಗ್ ಸಾನ್’, ತಾುಯ ಹೆಸರಿನ ‘ಕಿ’ ಮತ್ತು ನನ್ನಜ್ಜಿಯ (ತಂದೆಯ ತಾು) ಹೆಸರಿನ ‘ಸೂ’, ಈ ಮೂರೂ ಸೇರಿ ‘ಆಂಗ್ ಸಾನ್ ಸೂ ಕಿ’ ಆುತು. 
 
ನನ್ನತಂದೆ 1947ರಲ್ಲಿ ಬಮ್ರಾದೇಶಕ್ಕೆ ಬ್ರಿಟಿಷರಿಂದ ಸ್ವಾತ್ರಂತ್ರ್ಯ ತಂದುಕೊಟ್ಟರು.  ನನಗೆ  ಎರಡು ವಷ್ರವಿದ್ದಾಗ ನನ್ನ ತಂದೆ ಶತೃಗಳ ಗುಂಡೇಟಿಗೆ ಬಲಿಯಾದರು.  ನನ್ನ ತಂದೆಯ ಬಗ್ಗೆ ನನಗೆ ಹೆಮ್ಮೆುದೆ.  ಅವರೂ ಸಹ ಸ್ವಾತಂತ್ರ್ಯ ಹೋರಾಟಗಾರರೇ ಆಗಿದ್ದರು. ‘ಮಾಡ್ರನ್ ಬಮ್ರೀಸ್ ಆಮ್ರಿ’ಯನ್ನು ಸ್ಥಾಪಿಸಿ ಬಲಾಢ್ಯ ಬ್ರಿಟಿಷ್ ಆಡಳಿತದ ವಿರುದ್ದ ಹೋರಾಟ ನಡೆಸಿದ ವೀರ ಯೋಧ ನಮ್ಮತಂದೆ.                
ನಂತರ ನಾನು ಬೆಳದದ್ದೇಲ್ಲಾ ನನ್ನ ತಾು ಮತ್ತು ಅಣ್ಣಂದಿರೊಂದಿಗೇ.  ನನಗೆ ಇಬ್ಬರು ಅಣ್ಣಂದಿರು.  ವೊದಲನೆಯವನು ‘ಆಂಗ್ ಸಾನ್ ಲಿನ್’, ಎರಡನೆಯವನು ‘ಆಂಗ್ ಸಾನ್ ಊ’.  ನನ್ನ ದುರದೃಷ್ಟ ನೋಡಿ, ದೊಡ್ಡಣ್ಣ ತನ್ನ ಎಂಟನೇ ವಯಸ್ಸಿನಲ್ಲೇ ಮನೆಯಮುಂದಿನ ಅಲಂಕಾರಿಕ ಸರೋವರದಲ್ಲಿ ಮುಳುಗಿ ತೀರಿಹೋದ.  ಈ ಘಟನೆಯ ಬಳಿಕ ನಮ್ಮ ವಾಸ್ತವ್ಯವನ್ನು ‘ಇನ್ಯಾ ಸರೋವರ’ದ ಬಳಿಯ ಮನೆಗೆ ಸ್ಥಳಾಂತರಿಸಲಾುತು.  ಅಲ್ಲಿ ನನಗೆ ವೈವಿಧ್ಯ ಹಿನ್ನೆಲೆಯುಳ್ಳ ಜನಗಳ, ಧಮ್ರಗಳ ಪರಿಚಯವಾುತು.  ನಾನು ಕಲಿತದ್ದು ‘ಮೆಥೋಡಿಸ್್ಟ ಇಂಗ್ಲೀಷ್ ಹೈಸ್ಕೂಲ್’ನಲ್ಲಿ.  ನನ್ನ ಬಾಲ್ಯದ ಬಹಳಷ್ಟು ಸಮಯ ನಾನು ಕಳೆದದ್ದು ಬಮ್ರಾದಲ್ಲಿಯೇ.  ನಾವು ‘ಥೇರಾವಾದ ಬೌದ್ಧರು’.  ನಾನು ಅನೇಕ ಭಾಷಾಪ್ರೌಢಿಮೆ ಗಳಿಸಿದ್ದು ಇಲ್ಲಿಯೇ.
 
1960ರಲ್ಲಿ ನನ್ನ ತಾು, ಹೊಸದಾಗಿ ಅಸ್ತಿತ್ವಕ್ಕೆ ಬಂದ ‘ಬಮ್ರೀಸ್ ಸಕ್ರಾರ’ದಿಂದ ಭಾರತ ಮತ್ತು ನೇಪಾಳಗಳ ರಾಯಭಾರಿಯಾಗಿ ನೇಮಕವಾದರು.  ಅಲ್ಲಿಂದ ನಮ್ಮ ವಾಸ ಭಾರತದ ರಾಜಧಾನಿ ನವದೆಹಲಿಯಲ್ಲಿ.  ನಾನು ಓದಿದ್ದು ಇಲ್ಲಿಯ ಜೀಸಸ್ ಮತ್ತು ಮೇರಿ ಕಾನ್ವೆಂಟ್ನಲ್ಲಿ.  1964ರಲ್ಲಿ ದೆಹಲಿಯ ಮಹಿಳಾ ಕಾಲೇಜ್ ‘ಲೇಡಿ ಶ್ರೀರಾಮ್ ಕಾಲೇಜ್’ನಲ್ಲಿ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದೆ.  ಇದೇ ಸಂದಭ್ರದಲ್ಲಿ ನಾನು ಗಾಂಧಿಯವರಿಂದ ಹೆಚ್ಚು ಪ್ರಭಾವಿತಳಾದೆ.  ಅವರ ಅಹಿಂಸಾವಾದದ ಸತ್ಯಾಗ್ರಹ ನನ್ನ ಮನಸೂರೆಗೊಂಡಿತ್ತು. ಭಗವಾನ್ ಬುದ್ಧ ನನ್ನ ಆರಾಧ್ಯ ದೈವ.             
                
ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಆಕ್ಸ್ ಫರ್ಡ್ ಗೆ ತೆರಳಿದ ನಾನು 1969ರಲ್ಲಿ ತತ್ವಶಾಸ್ತ್ರ, ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರದಲ್ಲಿ ಬಿ.ಎ. ಪದವಿ ಪಡೆದೆ.  ನಂತರ ಕುಟುಂಬದೊಂದಿಗೆ ನ್ಯೂಯಾಕ್ರನಲ್ಲೇ ನೆಲೆಸಿದೆವು.  ಅಮೇರಿಕಾದಲ್ಲೇ ಮೂರುವಷ್ರ ಕೆಲಸಮಾಡಿದ ನಾನು, ವೊದಲಿಗೆ ಆಯವ್ಯಯ ಮಂಡನೆಗೆ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ದುಡಿದೆ.
 
1972ರಲ್ಲಿ ನನ್ನ ಮದುವೆ ಡಾ.ಮೈಕೇಲ್ ಆರಿಸ್ರೊಂದಿಗೆ ನೆರವೇರಿತು.  ನನ್ನವರು ಟಿಬೆಟಿಯನ್ ಸಂಸ್ಕೃತಿಯ ಸ್ಕಾಲರ್ ಆಗಿದ್ದರು. ಅಲ್ಲಿಯೇ ಇಬ್ಬರು ಗಂಡುಮಕ್ಕಳಿಗೆ ಜನ್ಮವಿತ್ತೆ, ವೊದಲನೆಯವ ಅಲೆಕ್ಸಾಂಡರ್ ಆರಿಸ್ ಮತ್ತು ಕಿಮ್ ಅಂತ.  1985ರಲ್ಲಿ ಲಂಡನ್ ವಿಶ್ವವಿದ್ಯಾಲಯದ ‘ಸ್ಕೂಲ್ ಆ¥sóï ಓರಿಯಂಟಲ್ ಅಂಡ್ ಆಫಿû್ರಕನ್ ಸ್ಟಡೀಸ್’ನಲ್ಲಿ ಪಿ.ಹೆಚ್ಡಿ ಪದವಿಯನ್ನೂ ಪಡೆದೆ.  ನಂತರ ಎರಡು ವಷ್ರಗಳಕಾಲ ಐ.ಐ.ಎ.ಎಸ್. ಗಾಗಿ ಶಿಮ್ಲಾದಲ್ಲಿ ನೆಲೆಸಿದೆ.  ಬಮ್ರಾಸಕ್ರಾರದಲ್ಲು ಕೆಲಕಾಲ ಸೇವೆಸಲ್ಲಿಸಿದೆ.
 
1988ರಲ್ಲಿ ನನ್ನ ತಾುಯವರ ಅನಾರೋಗ್ಯದ ನಿಮಿತ್ತಾ ಬಮ್ರಾಗೆ ಮರಳಿದೆ.  ಇಲ್ಲಿಂದ ನನ್ನ ಕೆಟ್ಟದಿನಗಳು ಪ್ರಾರಂಭವದವು.  ನನ್ನ ತಾುಯ ಶುಶ್ರೂಷೆ ಮಾಡುತ್ತಲೇ ಪ್ರಜಾಪ್ರಭುತ್ವದ ಪರವಾದ ಚಳುವಳಿಯ ಮುದಾಳತ್ವ ವಹಿಸಿದೆ. ‘ನ್ಯಾಷನಲ್ ಲೀಗ್ ಆಫ್ ಡೆಮಾಕ್ರಸಿ’ ಸ್ಥಾಪಿಸಿ ಬಮ್ರಿಗರ ಪ್ರಜಾಪ್ರಭುತ್ವಕ್ಕಾಗಿ ಹೋರಾಡಲು ನಿಧ್ರರಿಸಿದ್ದೆ.  26 ಆಗಸ್್ಟ, 1988ರಲ್ಲಿ ನಾನು ವೊಟ್ಟ ವೊದಲಿಗೆ ‘ಶ್ವೇಡಗಾನ್ ಪಾಗೋಡ’ ದಲ್ಲಿ ನೆರೆದಿದ್ದ ಬೃಹತ್ ಜನಸ್ತೋಮವನ್ನುದ್ದೇಶಿಸಿ ರಾಜಕೀಯ ಭಾಷಣ ಮಾಡಿದ್ದೆ.            
 
1989ರಲ್ಲಿ ನಾನು ಪ್ರಥಮವಾಗಿ ‘ಗೃಹ ಬಂಧನ’ಕ್ಕೊಳಗಾದೆ.  1990ರಲ್ಲಿ ಮಿಲಿಟರಿ ಆಡಳಿತ ಸಮಿತಿ ನಡೆಸಿದ ಸಾವ್ರತ್ರಿಕ ಚುನಾವಣೆಯಲ್ಲಿ ನಮ್ಮ ಪಕ್ಷ ‘ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ’ ಶೇಕಡ 59ರಷ್ಟು ಮತಗಳನ್ನು ಪಡೆದಿತ್ತು. ಮಿಲಿಟರಿ ಸಕ್ರಾರ ಆಡಳಿತವನ್ನು ಹಸ್ತಾಂತರಿಸಲು ನಿರಾಕರಿಸಿತ್ತು.  ಇದಕ್ಕಿಂತಾ ರಾಜಕೀಯ ವಿಡಂಬನೆ ಬೇಕೇ?  ಇದು ಅಂತರ್ಟ್ರಾೀಯ ಮಟ್ಟದಲ್ಲಿ ದೊಡ್ಡ ಕೋಲಾಹಲವನ್ನೇ ಮಾಡಿತ್ತು. ಆಡಳಿತದ ಹಸ್ತಾಂತರದ ಬದಲಾಗಿ ಮಿಲಿಟರಿ ಸಕ್ರಾರ ನನ್ನನ್ನು ಮತ್ತೆ ಗೃಹ ಬಂಧನದಲ್ಲಿರಿಸಿತು.
 
1990ರಲ್ಲಿ ಶ್ರೇಷ್ಠ ಸ್ವಾತಂತ್ರ್ಯ ಚಿಂತನೆಗಾಗಿ ನನಗೆ ‘ಸಾಖರೋವ್ ಬಹುಮಾನ’ವನ್ನು ನೀಡಲಾುತು.
1991ರಲ್ಲಿ ಸವ್ರಶ್ರೇಷ್ಠ ನೋಬಲ್ ಶಾಂತಿ ಪ್ರಶಸ್ತಿ ಬಂದಾಗ ಅದನ್ನು ನನ್ನ ಪರವಾಗಿ ನನ್ನ ಮಕ್ಕಳೇ ಸ್ವೀಕರಿಸಿದರು.  ಈ ಪ್ರಶಸ್ತಿುಂದ ನನಗೆ ಲಭ್ಯವಾದ ವೊತ್ತ 1.3 ಮಿಲಿಯನ್ ಅಮೇರಿಕನ್ ಡಾಲಸ್್ರ.  ಬಂದ ಆ ಹಣದಿಂದ ನನ್ನವರಿಗಾಗಿ ನಾನೊಂದು “ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್” ನೇಮಿಸಿದೆ. 
 
1995ರ ಕ್ರಿಸ್ಮಸ್ ಆಚರಣೆಯಲ್ಲಿ ನಾನು ನನ್ನ ಗಂಡನೊಂದಿಗೆ ಕಳೆದ ಕ್ಷಣಗಳೇ, ನನ್ನ ಮತ್ತು ಅವರ ಕಡೆಯ ಭೇಟಿಯ ಕ್ಷಣಗಳಾಗುತ್ತದೆಂದು ನನಗೆ ತಿಳಿದಿರಲಿಲ್ಲ.  ನಾನು ಬಮ್ರಾದಲ್ಲೇ ಉಳಿದೆ.  ಸವ್ರಾಧಿಕಾರಿ ಧೋರಣೆಯ ಸಕ್ರಾರ ಮತ್ತೆಂದೂ ನನ್ನವರಿಗೆ ಬಮ್ರಾ ಪ್ರವೇಶಿಸಲು ವೀಸಾ ನೀಡಲಿಲ್ಲ.                                         
 
9 ನವಂಬರ್, 1996ರಲ್ಲಿ ನನ್ನ ಮೇಲೊಂದು ಹಲ್ಲೆ ನಡೆುತು.  ವಿವಿಧ ಮಾರಕಾಸ್ತ್ರಗಳನ್ನು ಹಿಡಿದಿದ್ದ 200 ಮಂದಿಯ ತಂಡವೊಂದು ನಾವು ಪ್ರಯಾಣ ಮಾಡುತ್ತಿದ್ದ ವೋಟಾರ್ಕ್ಯಾಡ್ ನಮೇಲೆ ಮುಗೀಬಿದ್ದಿತ್ತು.  ನನ್ನೊಂದಿಗೆ ‘ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ’ಯ ಇನ್ನಿಬ್ಬರು ಮುಖಂಡರಾದ ಟಿನ್ ಊ ಮತ್ತು ಊ ಕಿ ಮಾಂಗ್ ಕೂಡ ಇದ್ದರು.  ನಮ್ಮ ವೋಟಾರ್ಕ್ಯಾಡ್ನ ಹಿಂಭಾಗದ ಕಿಟಕಿ  ಮತ್ತು ಹಿಂಭಾಗದ ಬಾಗಿಲಿನ ಕಿಟಕಿಗಳು ಸಂಪÇಣ್ರ ಜಕಂಗೊಂಡಿತ್ತು.  ದೈವವಶಾತ್ ನಾವು ಪ್ರಾಣಾಪಾಯದಿಂದ ಸ್ವಲ್ಪದರಲ್ಲೇ ಪಾರಾಗಿದ್ದೆವು.  ಈ ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬರಿಗೂ 500ಕ್ಯಾಟ್್ಸ ಕೊಡಲಾಗಿತ್ತೆಂದು ನಂತರದಲ್ಲಿ ತಿಳಿುತು.  ‘ಯೂನಿಯನ್ ಸಾಲಿಡಾರಿಟಿ ಮತ್ತು ಡೆವಲೆಪ್ಮೆಂಟ್ ಅಸೋಸಿಯೇಷನ್’ಸಂಸ್ಥೆ ಈ ದುಶ್ಕೃತ್ಯವೆಸಗಿತ್ತೆಂಬ ಗುಮಾನಿಯೂ ಇತ್ತು.  ನಾವು ನಮ್ಮ ಎನ್.ಎಲ್.ಡಿ ುಂದ ಒಂದು ಲಿಖಿತ ದೂರನ್ನೂ ನೀಡಿದೆವು.  ಸಕ್ರಾರ ವಿಚಾರಣಾ ಸಮಿತಿಯನ್ನು ನೇಮಿಸಿತೇ ವಿನಹ ಅದರಿಂದ ಯಾವ ಉಪಯೋಗವೂ ಆಗಲಿಲ್ಲ.  ಈ ನೀಚ ಕೃತ್ಯದ¯್ಲ ಭಾಗಿಯಾದ ಯಾರಿಗೂ ಶಿಕ್ಷೆ ಆಗಲಿಲ್ಲ.
 
1997ರಲ್ಲಿ ನನ್ನ ಪತಿಗೆ ‘ಪ್ರಾಸ್ಟೇಟ್ ಕ್ಯಾನ್ಸರ್’ ಇದೆಯೆಂದು ಪತ್ತೆಯಾಗಿ ನನ್ನ ಭೇಟಿಗೆಂದು ಶತಪ್ರಯತ್ನ ನೆಡೆಸಿದರು.  ಕೋಫಿ ಅನ್ನಾನ್, ಜಾನ್ ಪೆÇೀಪ್ ಪಾಲ್ 2, ವಿಶ್ವಸಂಸ್ಥೆ ಆದಿಯಾಗಿ ಎಲ್ಲರೂ ನನ್ನ ಹಾಗೂ ಮೈಕೇಲ್ ಭೇಟಿಗಾಗಿ ಪ್ರಯತ್ನಿಸಿ  ವಿಫಲವಾದವು.  ಕೊನೆಗೂ ನನ್ನವರಿಗೆ ವೀಸಾ ದೊರೆಯಲಿಲ್ಲ.  ನನ್ನ ಗಂಡನನ್ನು ಭೇಟಿಯಾಗುವ ಸಲುವಾಗಿ ಬಮ್ರಾ ಆಡಳಿತ ನನ್ನನ್ನು ‘ಗೃಹಬಂಧನ’ದಿಂದ ಮುಕ್ತಿಗೊಳಿಸಿ ಬಮ್ರಾ ಬಿಟ್ಟು ಹೋಗಲು ಅವಕಾಶ ನೀಡಿತು.  ಆದರೆ ನನಗೆ ತಿಳಿದಿತ್ತು, ಮುಂದೆಂದೂ ನಾನು ಬಮ್ರಾ ಪ್ರವೇಶ ಮಾಡಲಾಗದೆಂದು.  ಈ ಕಾರಣಕ್ಕಾಗಿ ನನಗೆ ನನ್ನ ಗಂಡ ಮಕ್ಕಳನ್ನು ನೋಡಲು ಸಿಕ್ಕ ಒಂದೇ ಒಂದು ಅವಕಾಶವನ್ನೂ ನಿರಾಕರಿಸಿದ್ದೆ.  ನನ್ನ ಗಂಡನಿಗೆ ಗೊತ್ತಿತ್ತು ನಾನು ಮಾಡುತ್ತಿರುವುದು ಸರಿಯೆಂದು.  ಏಕೆಂದರೆ, ಅವರೂ ಸ್ವಾಥ್ರಿಯಾಗ ಬಯಸಿರಲಿಲ್ಲ.  27 ಮಚ್್ರ, 1999 ನನ್ನವರು ನನ್ನನ್ನು ಮತ್ತು ಮಕ್ಕಳನ್ನು ಅಗಲಿದ್ದರು.  ಮನಸಿಗೆ ಬಹಳ ದುಃಖವಾುತು.  ಮಕ್ಕಳ ಲಾಲನೆ ಪಾಲನೆುಂದಲೂ ವಂಚಿತಳಾದ ನಾನು ಒಬ್ಬಂಟಿಗಳಾಗಿ ನೆಲೆಸಿದ್ದೆ.  ನನ್ನ ಜನರಿಗಾಗಿ.
 
ಈ ಮಧ್ಯ ನಾನು ಹಲವಾರುಬಾರಿ ಅನಾರೋಗ್ಯಕ್ಕೆ ತುತ್ತಾದೆ.  ಬಮ್ರಾ ಸಕ್ರಾರ ನನ್ನ ಗೃಹಬಂಧನಕ್ಕೆ ಕೊಟ್ಟ ಕಾರಣ ಏನು ಗೊತ್ತೇ? ನಾನು ಬಮ್ರೀಯರ ಶಾಂತಿ ಮತ್ತು ಸೌಹಾದ್ರತೆಗೆ ದಕ್ಕೆಯುಂಟುಮಾಡುತ್ತಿದ್ದೇನಂತೆ.  ಇದಕ್ಕಾಗಿ ನನ್ನ ಮೇಲೆ ಆಟ್ರಿಕಲ್ 10(ಚಿ) ಮತ್ತು 10(b) ಹಾಗೂ ಮುಂತಾದ ಕೇಸ್ಗಳನ್ನು ಹಾಕಿನನ್ನ ಗೃಹಬಂಧನದ ಅವಧಿಯನ್ನು ಹೆಚ್ಚಿಸಿದರು.  ಈ ಸಂದಭ್ರದಲ್ಲಿ ಮಾನವೀಯತೆಯ ಸೆಲೆಇರುವ ಎಲ್ಲರೂ ಇದನ್ನು ದೇಶಾತೀತವಾಗಿ, ಪಕ್ಷಾತೀತವಾಗಿ ವಿರೋಧಿಸಿದರು.  ನನ್ನ ಬಿಡುಗಡೆಗಾಗಿ ಒತ್ತಾುಸಿದರು.  ನನ್ನ ಬಮ್ರೀಯರಂತೂ ನನ್ನ ಮೇಲಿಟ್ಟಿದ್ದ ಪ್ರೀತಿಯನ್ನು ನಾನೆಂತು ಮರೆಯಲಿ?  ನನ್ನ ಬಿಡುಗಡೆಗಾಗಿ ಅವರು ನಡೆಸಿದ ಶಾಂತಿಯುತ ಸತ್ಯಾಗ್ರಹ, ಉಪವಾಸ ಎಲ್ಲವೂ ನನ್ನನ್ನು ಮೂಕವಿಸ್ಮಿತಳನ್ನಾಗಿಸಿತ್ತು.                        
             
                           
19ಮೇ, 2007, ಬೌಧ ಸನ್ಯಾಸಿಗಳೂ ಸಹ ನನ್ನ ಬಿಡುಗಡೆಗಾಗಿ ಶಾಂತಿಯುತ ಹೋರಾಟ ನಡೆಸಿದ್ದರು.  22 ಸೆಪ್ಟೆಂಬರ್ 2007ರಂದು ನನ್ನ ಮನೆಯ ಮುಂಬಾಗದಲ್ಲೇ ನಾನೊಂದು ಸಾವ್ರಜನಿಕರನ್ನುದ್ದೇಶಿಸಿ ಮಾತನಾಡಿದ್ದೆ.  ಮಾನವೀಯ ಮೌಲ್ಯಗಳ ರಕ್ಷಣೆಗೆ ಹೋರಾಟ ನಡೆಸುತ್ತಿರುವ ಬೌದ್ಧ ಸನ್ಯಾಸಿಗಳ ಆಶೀವ್ರಾದವನ್ನು ಸ್ವೀಕರಿಸಿದ್ದೆ. 
 
ಮೇ 2, 2008.  ಅದೊಂದು ಭೀಕರ ದಿನ.  ‘ನಗ್ರಿಸ್ ಚಂಡಮಾರುತ’ ನನ್ನ ದೇಶವನ್ನಪ್ಪಳಿಸಿತ್ತು.  ಬಹಳಷ್ಟು ಸಾವು, ನೋವುಗಳಾಗಿದ್ದವು. ಇದು ನನ್ನೆದೆಯ ಕಲಕಿತ್ತು.  ನನ್ನ ಮನೆಯ ಚಾವಣಿ ಚಂಡಮಾರುತಕ್ಕೆ ಸಿಕ್ಕೆ ಹಾರಿಹೋಗಿತ್ತು.  ವಿದ್ಯುತ್ ಸಂಪಕ್ರ ಕಡಿದುಬಿದ್ದಿತ್ತು.  ಎಷ್ಟೋ ರಾತ್ರಿಗಳು ನಾನು ಮೆಣದಬತ್ತಿಯೊಂದಿಗೇ ಕಳೆದೆ.  ನಾಡಿನಲ್ಲಿ ಪ್ರಕೃತಿಯ ಆಟಾಟೋಪಕ್ಕೆ ಜನ ಸಿಲುಕಿ ನಲುಗಿದ್ದರೂ, ನನ್ನ ಬಿಡುಗಡೆಗಾಗಿ ಎಲ್ಲರ ಹೋರಾಟ ಮಾತ್ರ ಮುಂದುವರೆದಿತ್ತು. ಮುಂದಿನ ದಿನಗಳಲ್ಲಿ ನನ್ನನ್ನು ‘ಇನ್ಸೈನ್ ಬಂಧೀಖಾನೆ’ಗೆ ಸ್ಥಳಾಂತರಿಸಿ ಐದು ವಷ್ರಗಳಕಾಲ ಇರಿಸಲಾಗಿತ್ತು.   ವಯಸ್ಸಿನ ಹುಡುಗರಿಂದಾ ಹಿಡಿದು, ಇಳಿವಯಸ್ಸಿನ ವೃದ್ದರೂ ಸಹ ನನ್ನ ಬಿಡುಗಡೆಗಾಗಿ ಹೋರಾಟ ನೆಡೆಸಿದ್ದರು. ಅವರೆಲ್ಲರ ಮುಗ್ಧ ಅಭಿಮಾನಕ್ಕೆ ನಾನೇನು ನೀಡಲಿ?   ಇವರಿಗಾಗಿ ನಾನು ಏನನ್ನಾದರೂ ಮಾಡಲೇಬೇಕೆಂಬ ಹಟ ನನ್ನಲ್ಲಿ ಬಲವಾಗಿ ಮೂಡಿತ್ತು.           
                       
2009ರಲ್ಲಿ ನನ್ನ ಬಿಡುಗಡೆಗಾಗಿ ದೊಡ್ಡ ಆಂದೋಳನವೇ ನಡೆದುಹೋುತು.  2009ರಲ್ಲಿ ನಡೆದ ಸುಮೀತ್ನಲ್ಲಿ ಅಮೇರಿಕದ ಅಧ್ಯಕ್ಷ ಬರಾಕ್ ಒಬಾಮ ಎಲ್ಲಾ ರಾಜಕೀಯ ಖೈದಿಗಳನ್ನು, ಪ್ರಮುಖವಗಿ ನನ್ನ ಬಿಡುಗಡೆಗಾಗಿ ಒತ್ತಾುಸಿದರು.  ಯು.ಕೆ. ಪ್ರಧಾನಮಂತ್ರಿಯಂತೂ ಒಂದು ಹೆಜ್ಜೆ ಮುಂದೆಹೋಗಿ ನನ್ನನ್ನು ಬಿಡುಗಡೆ ಮಾಡದೇ ಹೋದಲ್ಲಿ ಬಮ್ರೀಸ್ ಸಕ್ರಾರ, ಮುಂದೊದಗುವ ಭೀಕರ ಪರಿಣಾಮವನ್ನು ಎದುರಿಸಬೇಕಾಗಿರುತ್ತದೆಂದು ಎಚ್ಚರಿಸಿದರು.  ಕೊನೆಗೂ ನನ್ನವರ ಹಾಗೂ ಇತರ ದೇಶಬಾಂಧವರ ಹೋರಾಟಕ್ಕೆ ಜಯ ಸಿಕ್ಕಿತ್ತು.  13 ನವಂಬರ್, 2010ರಂದು ನನ್ನ ಬಿಡುಗಡೆಯಾುತು.  ಇಡೀ ವಿಶ್ವವೇ ನನ್ನ ಹೋರಾಟವನ್ನು ಬೆಂಬಲಿಸಿತ್ತು.  ನನ್ನನ್ನು ಅನುಕಂಪದಿಂದ ನೋಡಿತ್ತು.  ನಾನು ಬಿಡುಗಡೆಯಾದಂದು ನನ್ನವರಿಗಾದ ಆನಂದ ಅ್ಟಷ್ಟಲ್ಲ. 
                
ನವಂಬರ್, 2011ರಲ್ಲಿ ನಮ್ಮ ‘ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ’ ಪಾಟ್ರಿಯ ಮುಖಂಡರೆಲ್ಲರೂ ಒಂದು ತುತ್ರುಸಭೆ ನೆಡೆಸಿ, ನಮ್ಮ ಪಕ್ಷವನ್ನು ಒಂದು ರಾಜಕೀಯ ಪಕ್ಷವನ್ನಾಗಿ ನೊಂದಾುಸಬೇಕೆಂದು ತೀಮ್ರಾನಿಸಿದೆವು.  ಇದರ ನಿಮಿತ್ತ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮರೊಂದಿಗೆ ದೂರವಾಣಿಯಲ್ಲಿ ಚಚ್ರೆನೆಡೆಸಿದೆ.  ಯು.ಎಸ್. ನ ರಾಜ್ಯ ಸೆಕ್ರೆಟರಿ ಹಿಲ್ಲರಿ ಕ್ಲಿಂಟನ್ರನ್ನು ಯಾಗಾನ್ಗೆ ಕಳಿಸುವಂತೆ ಮನವಿ ಮಾಡಿದೆ.  1 ಡಿಸೆಂಬರ್, 2011 ಹಿಲ್ಲರಿ ಕ್ಲಿಂಟನ್ರನ್ನು ನಾನು ಭೇಟಿಯಾದೆ.
              
2012ರ ಮಧ್ಯಂತರ ಚುನಾವಣೆಗೆ ಸ್ಪಧ್ರಿಸಲು ಜನವರಿ 18, 2012ರಂದು ನನ್ನ ಹೆಸರು ನೋಂದಾುಸಿದೆ.  ನಾನು ಕ್ವಾಹ್ಮು ಟೌನ್ಶಿಪ್ ಕೇತ್ರದಿಂದ ಸ್ಪಧ್ರಿಸಿದ್ದೆ.  ಮಾಚ್್ರ 3, 2012 ಚುನಾವಣಾ ಪ್ರಚಾರಕ್ಕಾಗಿ ನಾನು ಮಂಡಾಲೆಗೆ ಹೋದೆ.  ಕೇವಲ 15ನಿಮಿಷಗಳಲ್ಲಿ ಉಸಿರಾಟದ ತೊಂದರೆುಂದಾಗಿ ಹಿಂದಿರುಗಿದೆ.  ಏಪ್ರಿಲ್ 1, 2012 ರಂದು ನಡೆದ ಚುನಾವಣೆಯಲ್ಲಿ ನಾನು ಬಹುಮತದೊಂದಿಗೆ ಆರಿಸಿ ಬಂದಿದ್ದೆ.  ಒಟ್ಟು 45 ಕ್ಷೇತ್ರಗಳಲ್ಲಿನ ಚುನಾವಣೆಗಳಲ್ಲಿ ನಮ್ಮ ಪಕ್ಷ 40 ಕ್ಷೇತ್ರಗಳನ್ನು ತನ್ನ ತೆಕ್ಕೆಯೊಳಗೆ ತೆಗೆದುಕೊಂಡಿತ್ತು.  ನನ್ನನ್ನು ಒಮ್ಮತವಾಗಿ ಪ್ರತಿಪಕ್ಷದ ನಾಯಕಿಯೆಂದು ಘೋಶಿಸಿದರು.  ನಾನು ಸಂಸತ್ತು ಪ್ರವೇಶಿಸಿದ್ದೆ.
 
“ಈ ಗೆಲುವು ನನ್ನದೆಂದು ನಾನೆಂದೂ ಭಾವಿಸಿಲ್ಲ.  ಈ ಗೆಲುವು ಪ್ರಜಾಪ್ರಭುತ್ವದ ಗೆಲುವು.  ನಾನೇನೋ ಸಾಧನೆ ಮಾಡಿರುವ ಭಾವನೆ ನನ್ನಲ್ಲಿಲ್ಲ.  ನನಗಿರುವ ಆಲೋಚನೆಯೆಲ್ಲಾ ಒಂದೇ, ಪ್ರಜಾಪ್ರಭುತ್ವದ ಭದ್ರ ತಳಹದಿಯಮೇಲೆ ಒಂದು ಸುಂದರ ಆಡಳಿತ ನೀಡುವುದು.  ಅಲ್ಲಿ ನನ್ನ ಜನರು ಸುಖವಾಗಿರುತ್ತಾರೆ, ನೆಮ್ಮದಿುಂದ ಇರುತ್ತಾರೆ. ಇದು ನನ್ನ ಕನಸು.  ಈ ಕನಸಿನಿಂದಲೇ ನನ್ನ ಹೋರಾಟವನ್ನು ಪ್ರಾರಂಬಿಸಿದೆ.  ನಾನು ಗೆದ್ದಿರುವುದರಿಂದ ನನಗೆ ನೆಮ್ಮದಿುಲ್ಲ.  ನನ್ನ ಕನಸನ್ನು ನನಸಾಗಿಸುವವರೆವಿಗೂ ನಾನು ವಿಶ್ರಮಿಸುವುದಿಲ್ಲ, ಧನ್ಯವಾದಗಳು”  -ಆಂಗ್ ಸಾನ್ ಸೂ ಕಿ.
 
ಗೆಳೆಯರೇ, ನೋಡಿದಿರಾ ಒಬ್ಬ ಹೆಣ್ಣುಮಗಳ ಇಚ್ಛಾಶಕ್ತಿಯನ್ನು.  ಅವಳ ತ್ಯಾಗ ಬಲಿದಾನಗಳನ್ನು. ನಮ್ಮಲ್ಲಿ ಇಂತಹ ಇಚ್ಛಾಶಕ್ತಿಇರುವ ಒಬ್ಬ ರಾಜಕಾರಣಿಯನ್ನು ತೋರಿಸಿ.  ದೇಶವನ್ನು ಹೇಗೆ ದೋಚಬೇಕೆಂಬ ನಿತ್ಯಕಾಯಕದಲ್ಲಿರುವ ಇವರಿಗೂ ತನ್ನ ಜನರಿಗಾಗಿ ತನ್ನವರನ್ನು, ತನ್ನ ಸ್ವಾತಂತ್ರ್ಯವನ್ನೂ ತೊರೆದ, ಆಂಗ್ ಸಾನ್ ಸೂ ಕಿ ಗೂ ಎಲ್ಲಿಂದೆಲ್ಲಿಗೆ ಹೋಲಿಕೆ.
 
(ಈ ಲೇಖನ "ಕಣ್ಣು" ಪತ್ರಿಕೆಯಲ್ಲಿ ಸಂಬಂಧಿದ ಫೋಟೋಗಳೊಂದಿಗೆ ಉತ್ತಮವಾಗಿ ಮೂಡಿಬಂದಿದೆ.)
 
-ಎಂ.ಎಸ್.ಮುರಳಿಧರ್, ಶಿರಾ
 

 

Rating
No votes yet

Comments