ನಾನು ನಾನಾಗಲಿಲ್ಲ
ಕವನ
ಆಕಾಶದಷ್ಟು ಆಸೆಗಳು
ಆಸರೆಯಾಗಿ ನಿಲ್ಲಲಿಲ್ಲ
ಭೂಮಿಯಗಲ ಮಾತುಗಳು
ಬಾಯ್ಬಿಚ್ಚಿ ಮಾತಾಡಲಿಲ್ಲ
ನೆಮ್ಮದಿಯ ರೇಖೆಗಳು
ಕೈಯಲ್ಲಿ ಮೂಡಲಿಲ್ಲ
ಒಂದು ಕ್ಷಣ ಕಾಯಿರಿ
ಅವುಗಳನ್ನು ಅಳಿಸಿಬಿಡುತ್ತೇನೆ
ಮೊದಲು
ನಾನು ನಾನಾಗಬೇಕಿದೆ
ಕನಸುಗಳಿಗೆ ರೆಕ್ಕೆಬರಲಿಲ್ಲ
ಭಾವನೆಗಳು ಬಲಗೊಳ್ಳಲಿಲ್ಲ
ಕಣ್ಣೀರಿಗೆ ಭರವಿರಲಿಲ್ಲ
ಸಂಬಂಧಗಳು ಸಾವರಿಸಲಿಲ್ಲ
ಒಂದು ಕ್ಷಣ ಕಾಯಿರಿ
ಅವುಗಳನ್ನು ಕಳೆದುಬಿಡುತ್ತೇನೆ
ಮೊದಲು
ನಾನು ನಾನಾಗಬೇಕಿದೆ
ದಾರಿ ದಿಕ್ಕುತೋರಲಿಲ್ಲ
ಮೌನ ಮಾತನಾಡಲಿಲ್ಲ
ರಕುತ ಒಳಸೇರಲಿಲ್ಲ
ಹೃದಯ ಸದ್ದುಮಾಡಲಿಲ್ಲ
ಒಂದು ಕ್ಷಣ ಕಾಯಿರಿ
ಅವುಗಳನ್ನು ಬದಲಿಸಿಬಿಡುತ್ತೇನೆ
ಮೊದಲು
ನಾನು ನಾನಾಗಬೇಕಿದೆ
ಸೂರ್ಯ ಕೆಂಪಾಗಲಿಲ್ಲ
ಗಾಳಿ ತಣ್ಣಗಾಗಲಿಲ್ಲ
ಚಂದ್ರ ಬೆಳಕತೋರಲಿಲ್ಲ
ಕತ್ತಲು ಕವಲೊಡೆಯಲಿಲ್ಲ
ಕ್ಷಮಿಸಿ ಬಿಡಿ ನನಗೆ
ಈ ಬದುಕು ಅರ್ಥವಾಗಲಿಲ್ಲ
ಅದಕ್ಕಾಗಿ
ನಾನು ನಾನಾಗಲಿಲ್ಲ
Comments
ಉ: ನಾನು ನಾನಾಗಲಿಲ್ಲ
In reply to ಉ: ನಾನು ನಾನಾಗಲಿಲ್ಲ by mmshaik
ಉ: ನಾನು ನಾನಾಗಲಿಲ್ಲ
ಉ: ನಾನು ನಾನಾಗಲಿಲ್ಲ
In reply to ಉ: ನಾನು ನಾನಾಗಲಿಲ್ಲ by geethavision
ಉ: ನಾನು ನಾನಾಗಲಿಲ್ಲ
ಉ: ನಾನು ನಾನಾಗಲಿಲ್ಲ
In reply to ಉ: ನಾನು ನಾನಾಗಲಿಲ್ಲ by ಭಾಗ್ವತ
ಉ: ನಾನು ನಾನಾಗಲಿಲ್ಲ
ಉ: ನಾನು ನಾನಾಗಲಿಲ್ಲ
In reply to ಉ: ನಾನು ನಾನಾಗಲಿಲ್ಲ by sheela_gawi
ಉ: ನಾನು ನಾನಾಗಲಿಲ್ಲ
In reply to ಉ: ನಾನು ನಾನಾಗಲಿಲ್ಲ by nanjunda
ಉ: ನಾನು ನಾನಾಗಲಿಲ್ಲ
In reply to ಉ: ನಾನು ನಾನಾಗಲಿಲ್ಲ by sheela_gawi
ಉ: ನಾನು ನಾನಾಗಲಿಲ್ಲ
ಉ: ನಾನು ನಾನಾಗಲಿಲ್ಲ
In reply to ಉ: ನಾನು ನಾನಾಗಲಿಲ್ಲ by venkatb83
ಉ: ನಾನು ನಾನಾಗಲಿಲ್ಲ
ಉ: ನಾನು ನಾನಾಗಲಿಲ್ಲ
ಉ: ನಾನು ನಾನಾಗಲಿಲ್ಲ
ಉ: ನಾನು ನಾನಾಗಲಿಲ್ಲ
ಉ: ನಾನು ನಾನಾಗಲಿಲ್ಲ
In reply to ಉ: ನಾನು ನಾನಾಗಲಿಲ್ಲ by muneerahmedkumsi
ಉ: ನಾನು ನಾನಾಗಲಿಲ್ಲ