मृग = ಜಿಂಕೆ ?

मृग = ಜಿಂಕೆ ?

Comments

ಬರಹ

ನಮಸ್ತೆ,

 ನಾನು ನನ್ನ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ’ಮೃಗನಯನಿ’ ಎನ್ನುವ ಶಬ್ದದ ಬಗ್ಗೆ ಪ್ರಸ್ತಾಪವಾಯಿತು. ನಾನು ನನಗೆ ತಿಳಿದಂತೆ ಅದನ್ನು ಅನುವಾದಿಸಿ ’ಕಾಡುಪ್ರಾಣಿಯಂತೆ ಚುರುಕಾದ ಕಣ್ಣುಳ್ಳವಳು’ ಎಂದು ವ್ಯಾಖ್ಯಾನಿಸಿದೆ. ನನ್ನ ಹಿಂದಿ ಸ್ನೇಹಿತರು, ಮೃಗ ಅಂದರೆ ಜಿಂಕೆ, ಮೃಗನಯನಿ ಅಂದರೆ ’ಜಿಂಕೆಯಂತೆ ಕಣ್ಣುಳ್ಳವಳು’ ಎಂದು ಹೇಳಿದರು. ಅಲ್ಲದೆ ಹಿಂದಿಯಲ್ಲಿ ’ಮೃಗ್’ ಅಂದರೆ ’ಜಿಂಕೆ’ ಎಂದೇ ಅರ್ಥ (absolute meaning) ಎಂದು ವಾದಿಸಿದರು.

ನನ್ನ ಊಹೆಯಂತೆ (happy to be corrected), ಮೃಗ ಸಂಸ್ಕೃತದಿಂದ ಕನ್ನಡ ಮತ್ತು ಹಿಂದಿಗೆ ಬಂದಿರಬಹುದು ಮತ್ತು ಅದರ ಮೂಲ ಅರ್ಥ ’ಪ್ರಾಣಿ’ (animal) ಹೊರತು ’ಜಿಂಕೆ’ ಅಲ್ಲ. ಸತತವಾದ ಬಳಕೆಯಿಂದ ಹಿಂದಿಯಲ್ಲಿ ’ಜಿಂಕೆ’ ಎಂಬ ಅರ್ಥ ಹೆಚ್ಚು ಪ್ರಚಲಿತದಲ್ಲಿರಬಹುದು.

ತಿಳಿದವರು ಹೇಳುವಿರಾ?

ವಸಂತ್ ಕಜೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet