ಕನವರಿಕೆ

ಕನವರಿಕೆ

ಬಯಸದೆ ಬಂದ 'ಭಾಗ್ಯ'
ಪಕ್ಕದಮನೆಯ 'ಸೌಭಾಗ್ಯ'
ಹಾಡುತ ಬಂದಳು 'ಆ-ರತಿ'
ಸೋಕಿಸಿದಳು ಸೆರಗನ್ನ ಒಂದು ಸರತಿ
ಸರ ಸರ ಅಂತ ಬಂದಳು ಸರಸ್ವತಿ
ಅವಸರ ಮಾಡಿದಳು ಅವರತ್ತಿ
ನೋಡ್ತಾ ಇದ್ದರೆ ದಿವ್ಯನೋಟ
ಕೊಡ್ತಾ ಇದ್ದರೆ ಕಾಫಿಲೋಟ
ಪಕ್ಕದಲ್ಲಿ ಇರೋದು ಒಂದೇ ತೋಟ
ಆದರೆ ಕಾಡ್ತಿದೆ ನನ್ನವಳ
ಕಣ್ಣಂಚಿನ ಕುಡಿ ನೋಟ
ಇವೆಲ್ಲ ಕನವರಿಸುತ್ತಿದ್ದೆ ನಾ ಜೋರಾಗಿ
ಮಗ್ಗುಲಲ್ಲಿ ಇದ್ದವ ಗುನುಗುತಿದ್ದ
ಮುಚ್ಕೊಂಡು ಮಲಗೋ ಹಾಸಿಗೆ ಮ್ಯಾಗಿ....................

Rating
No votes yet

Comments