ಮುಂಜಾನೆದ್ದು ಕುಂಬಾರಣ್ಣ
ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡಾನ
ಹಾರ್ಹಾರಿ ಮಣ್ಣಾ ತುಳಿದಾನ |
ಹಾರಿ ಹಾರ್ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ
ನಾರ್ಯಾರು ಹೊರುವಂತ ಐರಾಣಿ.. ||
ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡಾನ
ಘಟ್ಟಿಸಿ ಮಣ್ಣಾ ತುಳಿದಾನ |
ಘಟ್ಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ
ಮಿತ್ರೇರು ಹೊರುವಂತ ಐರಾಣಿ.. ||
ಅಕ್ಕಿ ಹಿಟ್ಟು ನಾವು ತುಂಬ್ಕೊಂಡು ತಂದೀವಿ
ಗಿಂಡೀಲಿ ತಂದೀವಿ ತಿಳಿದುಪ್ಪಾ |
ಗಿಂಡೀಲಿ ತಂದೀವಿ ತಿಳಿದುಪ್ಪಾ ಕುಂಬಾರಣ್ಣ
ತುಂಬೀತು ನಮ್ಮ ಐರಾಣಿ.. ||
ಕುಂಬಾರಣ್ಣನ ಮಡದಿ ಕಡದಾಗ ಕೈಯಿಟ್ಟು
ಕೊಡದಾ ಮ್ಯಾಲೇನ ಬರದಾಳ |
ಕೊಡದಾ ಮ್ಯಾಲೇನ ಬರದಾಳ್ ಕಲ್ಯಾಣದ
ಶರಣ ಬಸವನ ನೆನೆಸ್ಯಾಳ.. ||
*****************************ಪ್ರೀತಿಯಿಂದ ಪ್ರೀತಿಗಾಗಿ ಜಿ.ವಿಜಯ್ ಹೆಮ್ಮರಗಾಲ
Rating
Comments
ಉ: ಮುಂಜಾನೆದ್ದು ಕುಂಬಾರಣ್ಣ