ತುಂತುರು ಹನಿಗಳು
ಸುಡುತಿವೆ ನಲ್ಲ
ಪ್ರತಿಯೊಂದು ಹನಿಯೂ
ಸುಟ್ಟ ಗಾಯದಂತೆ
ಈ ಸುಡುಗಾಲದಲಿ
ತಂಪೆರೆಯುವುದೆಂದು ಕಾದೆ
ತಡೆಯಲಾರೆನಲ್ಲ ನನ್ನನಿದು
ಸುಡುವ ಬಾಧೆ
ಹನಿ ಹನಿಗಳೆಲ್ಲ ಸೇರಿ
ಭೋರ್ಗರೆವ ಮಳೆಯಾಗಿ
ನನ್ನ ಕೊಲ್ಲುತಿವೆ
ಬೆಂಕಿಯ ಬಲೆಯಾಗಿ
ಬರಬಾರದೇ ನಲ್ಲ
ಇನ್ನಾದರೂ ಸನಿಹಕೆ?
ತಾಳಲಾರದಾದೆ ನಾನು
ನಮ್ಮೀ ವಿರಹಕೆ!!
Comments
ಉ: ತುಂತುರು ಹನಿಗಳು ಸುಡುತಿವೆ!
ಉ: ತುಂತುರು ಹನಿಗಳು ಸುಡುತಿವೆ!
ಉ: ತುಂತುರು ಹನಿಗಳು ಸುಡುತಿವೆ!
In reply to ಉ: ತುಂತುರು ಹನಿಗಳು ಸುಡುತಿವೆ! by venkatb83
ಉ: ತುಂತುರು ಹನಿಗಳು ಸುಡುತಿವೆ!