ಇನ್ನೂ ಕೇಳದೆ ನಿಮಗೆ ಮಹಾತ್ಮನ ಕೂಗು!

ಇನ್ನೂ ಕೇಳದೆ ನಿಮಗೆ ಮಹಾತ್ಮನ ಕೂಗು!

ಕವನ

 ಎದ್ದೆಳು  ಯುವಕ

ನಿಲ್ಲದು ನನ್ನ  ಚರಕ

ನೀನೇಳುವ   ತನಕ

ರಾಮರಾಜ್ಯದ ಕನಸು ನನಸಾಗುವ ತನಕ

ಎದ್ದೆಳು ಯುವಕ

ಇನ್ನೇಕೆ ತವಕ,

 

ಕಾದು ಕುಳಿತಿಹನು ನೇಸರ

ಮುಳುಗಲವನಿಗೂ ಒಮ್ಮೊಮ್ಮೆ  ಬೇಸರ

ರಾಮರಾಜ್ಯದ  ಕನಸಿನ್ನು ಕನಸೇ ಏಂದು,,,

 

ಮಾಸಿಹೊಗಿದೆ  ನನ್ನ  ಮಸೂರ

ಆಳುವ  ದೊರೆ  ಹಾಳುಮಾಡುವುದ  ಕಂಡು,

ಬಂದಿಯಾಗಿದೆ  ಅಯಿಂಸೆಯ  ತತ್ತ್ವ 

ಅರಾಜಕತೆಯ  ರಾಜಕೀಯ  ಕಂಡು,

ಬೇಸತ್ತಿದೆ  ವಿದಾನಮಂಡಲ  

ಚಿತ್ರ ವಿಚಿತ್ರಗಳ ವರ್ತನೆಯ  ಕಂಡು,

ಇದೊಂದೆ ಕ್ಶೆತ್ರ  ನಿನ್ನಿಂದ  ಬಹು ದೂರ,

ಮೊಳಗಲಿ  ಯುವಪೀಳಿಗೆಯ  ಕಾಳಗ,

ಮಾಸಿದ  ಮಸೂರಕ್ಕೆ  ನೀರೆರಚಿಕೊಂಡು

ಬಡಿದೆಬ್ಬಿಸುತ್ತಿರುವೆ,

 

ಎದ್ದೆಳು ಯುವಕ

ನಿಲ್ಲದು ನನ್ನ ಚರಕ

ನೀನೇಳುವ ತನಕ

ರಾಮರಾಜ್ಯದ ಕನಸು ನನಸಾಗುವ ತನಕ.

 

 

Comments