"ಸ್ನೇಹದುಂಬಿ"

"ಸ್ನೇಹದುಂಬಿ"

ಕವನ

 ಬಾಳಿನಾ ಹೂತೋಟದೀ ದುಂಬಿಯೊಂದು ಹಾರಿದೇ

ಸ್ನೇಹಕಾಗಿ ತಾ ಹುಡುಕಿ ನೊಂದು ಹಾಡಿದೇ  (ಪ)

 

ಸ್ನೇಹವೆಂಬ ಹೂವ ಕಾಣದೆ ಬೆಂದ ಹೃದಯವು ನೊಂದಿದೇ

ನೊಂದ ಹೃದಯವು ವಿಧಿಯನು ತಾ ನಿಂದಿಸುತಲಿ ನಿಂತಿದೆ  (ಪ)

 

ಸಿಕ್ಕಿತೊಂದು ಹೂ ಅದಕೆ ಬಾಳಿನಾ ಆ ತೊಟದೇ

ಸ್ವರ್ಗವೇ ತನದಾಯಿತೆಂದು ಭ್ರಮಿಸಿ ಹರುಷದಿ ನಲಿದಿದೆ  (ಪ)

 

ವಿಧಿಯ ಲೀಲೆ ಯಾರು ಅರಿವರು ಮುಂದೆ ಹೀಗಿಹುದೆಂದು

ತೋಟದೊಡೆಯನು ಕಿತ್ತನದನು ದೇವನಾ ಮುಡಿಗೆಂದು  (ಪ)

 

-ಎಂ.ಎಸ್.ಮುರಳಿಧರ್, ಶಿರಾ

Comments