ಹೂವಿನ ಹುಡುಗಿ....

ಹೂವಿನ ಹುಡುಗಿ....

ಆಫೀಸ್ ಇಂದ ಬರುವಾಗ ಎಲ್ಲಾರ್ಗೂ ಗೊತ್ತಿರೋ ಹಾಗೆ ಬೆಂಗಳೂರ್ ಅಲ್ಲಿ ಸಿಕ್ಕ್‌ಂಗ ಟ್ರ್ಯಾಫಿಕ್ ಇದ್ದೇ ಇರುತ್ತೆ, ಅವತ್ತು ಸ್ವಲ್ಪ ಜಾಸ್ತಿನೇ ಇತ್ತು,ನಾನೂ ಇಂದಿರಾನಗರ್ ಸಿಗ್ನಲ್ ಅಲ್ಲಿ ನಿಂತಿದ್ದೆ, ಒಬ್ಬ ಚಿಕ್ಕ ಹುಡುಗಿ, ಕೆಂಪು ಗುಲಾಬಿ ತೊಗೊಂಡು ಬಂದ್ಲು, ಸರ್ ಹೂ ಬೇಕಾ, ಎಲ್ಲಾರ್ಗೂ??ಕಾರ್ ಇದ್ದ ಜನ ತಮ್ಮ ಡೋರ್ ಬಂದು ಮಾಡಿ ಬಿಡೊರು, ಅವ್ಲು ಸಮೀಪಿಸ್ದಾಗ<ನಂಗೆ>, ಭಾಳ ಚ್ಛಂದ್ ಹುಡುಗಿ ನೋಡಾಕ್, ನೋಡಿದ್ರಾ ಹಂಗೆ ನೋಡಬೇಕು ಅನಿಸುತ್ತೆ, ಆ ಗುಲಾಬಿಗಿಂತ ಅದೇ ಹುಡುಗಿ ಮಸ್ತ್ ಇತ್ತು, ಪಾಪ ಈ ವಯಸ್ಸಲ್ಲಿ, ಅದು ಯಾವ ಕಾರ್ಮನೋ, ಆ ಚಿಕ್ಕ ಕೂಸಿಂದು, ಶಾಲೆ ಹೋಗೋ ವಯಸ್ಸಲ್ಲಿ, ಹೂ ಮಾರುತ್ತಾ ಇದೆ.
ನನ್ನ ಹತ್ರನೂ ಬಂತು ಸರ್ ಹೂ ?? ನಂಗೆ ಆ ಚಿಕ್ಕ ಕೋಗಿಲೆ ವಾಯ್ಸ್ ಕೇಳಿ ತುಂಬ ಖುಷಿ ಐತು, ಅವ್ಲಿಗೇ ಹೇಳ್ದೆ, ನೋಡು ನಂಗೆ ನನ್ನ ಹುಡಗಿರು ಅಂತ, ಯಾರು ಇಲ್ಲ ಯಾರಿಗೆ ಕೊಡ್ಲಿ???ಆಗ ಸುಮ್ನೇ ಹಾಗೆ ನಿಂತಿತ್ತು, ೧೦ ರೂ ಕೊಟ್ಟೆ, ಕೊಡು?? ಕೊಟ್ಟು ಹೊರಟಳು.
ಮತ್ತೆ ಸರ್ ಹೂ??ನಾನೂ ಕರ್ದೆ ಎ ಬಾ ಇಲ್ಲಿ, ನಂಗೆ ಅಂತ ಯಾರು ನನ್ನ ಹುಡಗಿರು ಇಲ್ಲ, ನೀನೆ ತೊಗೋ ಅಂದೇ, ತುಂಬ ಖುಷಿ ಮತ್ತು ನಾಚಿಕೆ ಇಂದ ತೊಗೊಂಡು ನಕ್ಕೂ ಹೋದಳು. ನಾನೂ ಕೂಡಾ ತುಂಬ ಹರ್ಷ, ಇನ್ನೂ ಕೆಲವರು ಹಾಗೆ ಸುಮ್ನೇ ನಿಂತ ಜನ ಕೂಡ ಹೂ ತೊಗೊಂಡ್ರೂ, ಹುಡುಗಿ ತುಂಬ ಖುಷಿಯಲ್ಲಿ ಮತ್ತೇ ಮತ್ತೇ ನನ್ನನ್ನೇ ನೋಡಿ ನಗ್ತಾ ಇತ್ತು.

ನಂಗೆ ತುಂಬ ಖುಷಿ ಐತು.

-ವಿನೋದ್.

Rating
No votes yet

Comments