ಸಾಧನೆ

ಸಾಧನೆ

ಆತ ಕುರುಡ,
ಮುಂದೊಂದು ದಿನ ಅವ ನಡೆದ ಹಾದಿ ಹೆದ್ದಾರಿಯಾಯಿತು.


ಆತ ಮೂಕ,
ಮುಂದೊಂದು ದಿನ ಆತನ ಭಾವನೆಗಳು ಧ್ವನಿಸುರುಳಿಯಾಯಿತು.


ಆತ ದಡ್ಡ,
ಮುಂದೊಂದು ದಿನ ಆತನ ಕೃತಿ ವ್ಯಾಕರಣ ಗ್ರಂಥವಾಯಿತು.


ಆತ ಹುಚ್ಚ,
ಮುಂದೊಂದು ದಿನ ಅವನ ಶಿಷ್ಯ ವಿಶ್ವ ವಿಖ್ಯಾತಿಯಾದ.


ಆತ ಕರಿಯ,
ಮುಂದೊಂದು ದಿನ ಅವ ರಾಜ್ಯವನ್ನು ಆಳಿದ.


ಭವಿಷ್ಯವ ಹೇಗೋ ನಾ ಕಾಣೆ,
ವರ್ತಮಾನದಲ್ಲಿ ಶ್ರಮವಿದ್ದರೆ ಎಲ್ಲವೂ ಶಕ್ಯ.


ದತ್ತಾತ್ರೇಯ.

Rating
No votes yet

Comments