ಗೋ(ಮಾತಾ)

ಗೋ(ಮಾತಾ)

ಅಬ್ಬೆ ಹಾಸಿಗೆ ಹಿಡಿದ ಅದೇ ಘಳಿಗೆಯಲ್ಲಿ, ಮನೆಯ ಗಬ್ಬದ ದನ ಕರು ಹಾಕಿತ್ತು. ಒಂದು ಕಡೆ ಕಳೆಗಟ್ಟಿದ ಮರದ ಕೊರಡಿನಂಥ ಅಮ್ಮನ ಮುಖ ಎದುರಿದ್ದರೆ, ಇನ್ನೊಂದು ಕಡೆ ಆಗ ತಾನೇ ಗರ್ಭದ ಹೊರಬಿದ್ದು ಗಾಳಿ ಕುಡಿಯಲು ಹಪಹಪಿಸುವ ಎಳೆ ಕರುವಿನ ಮುಖ. ಅಮ್ಮನೇ ಆ ದನವನ್ನ ಹಿಂದೊಮ್ಮೆ ಗುಡ್ಡೆಗೆ ಒಯ್ದು, ಒಳ್ಳೇ ಗೂಳಿಯೊಡನೆ ಕೂಡಿಸಿ, ಗಬ್ಬ ಮಾಡಿದ್ದಳು. ಈಗ ಅದೇ ಕರುವಿನ ಜನನ ಅಮ್ಮನ ಈ ಸ್ಥಿತಿಗೆ ಕಾರಣವ?? ಕಯ್ಯಲ್ಲಿ ಕಾಸಿಲ್ಲದ ಸಮಯದಿ ಕರುವಿನ ಜೋಪಾನ ಮಾಡಲಾ? ಇಲ್ಲ ಅಮ್ಮನ ಶುಶ್ರೂಷೆ ಮಾಡಲಾ?  ಮುಂದೇನು ಎಂಬ ಚಿಂತೆ. ಸಧ್ಯಕ್ಕೆ ಏನು ಮಾಡಲಿ ಎಂಬ ವಿಚಾರ. ಅದೇಕೋ ತಲೆ ಸುತ್ತು ಬಡಿದು ಎಚ್ಚರತಪ್ಪಿ ಬಿದ್ದೆ.ನನ್ನ ಗಮನಿಸಿಕೊಳ್ಳಲೇ ಒಂದು ಆಳು ಬೇಕಿರುವಾಗ, ನಾನೆಲ್ಲಿಂದ ಪರರ ಸೇವೆ ಗಯ್ಯಲಿ? ಮತ್ತೆ ಜೋರಾಗಿ ಹಸು ಕೂಗುವ ಶಬ್ದಕ್ಕೆ ಎಚ್ಚರವಾಗಿ ಕೊಟ್ಟಿಗೆಗೆ ಹೋಗಿ ನೋಡಲು, ಕರುವಿನ ಮರಣ. ಮನೆಗೆ ಬಂದು ನೋಡಿದರೆ ಅಮ್ಮ ಅಲ್ಲೇ ಎಚ್ಚೆತ್ತು ಆರಾಮವಾಗಿ ಕುಳಿತಿಹಳು. ನನ್ನ ಅಮ್ಮನ ಉಳಿಸಲು ಆ ಕರು ತನ್ನ ಆತ್ಮ ಕೊಟ್ಟಿತೆ????


ಬಹುಶ: ಅದಕ್ಕೆ ಕಾಮಧೆನು ಅಂತ ಕರಿಯುತ್ತಾರೇನೋ.
 


ದತ್ತಾತ್ರೇಯ.

Rating
No votes yet

Comments