ಓ ಹೃದಯ

ಓ ಹೃದಯ

ಕವನ

ಓ ಹೃದಯ ನೀನೆಷ್ಟು ನಯ

ಮುಷ್ಠಿಯಷ್ಟೇ ಇರುವೆಯಾ?

 
ಧೂಮಪಾನವೊಲ್ಲೆಯಂತೆ
ಮಧ್ಯಪಾನ ಹಿಡಿಸದಂತೆ
ಕೊಬ್ಬು ನಿನ್ನ ಶತೃವಂತೆ
ಜಿಡ್ಡನಂತೂ ಸಹಿಸೆಯಂತೆ
 
ಮನಸೆಂದರೆ ನೀನೇನಾ?
ಬೇರೊಬ್ಬನಿರುವನಾ?
ದುಃಖವೂ ನಿಂದೇನಾ?
ಸಂತಸವೂ ನಿನಗೇನಾ?
 
ಓ ಹೃದಯ ನೀನೆಷ್ಟು ನಯ
ಮುಷ್ಠಿಯಷ್ಟೇ ಇರುವೆಯಾ?
ನಿನ್ನ ಬಡಿತದಾ ಲಯ, 
ನಿಂತರೀ ಜೀವ ಮಾಯ
 
-ಎಂ.ಎಸ್.ಮುರಳಿಧರ್, ಶಿರಾ.
 
 

 

Comments