ಎರಡು ಸಮಸ್ಯೆಗಳು - ಭಾಗ ೧
ಸಮಸ್ಯೆ - ಒಂದು (ಹುಲ್ಲು ಹೊರೆ, ಕುರಿ ಮತ್ತು ಹುಲಿ)
ಕಿರಿಯರ ಬುದ್ಧಿಮತ್ತೆಯನ್ನು ಚುರುಕುಗೊಳಿಸಲು ಈ ಸಮಸ್ಯೆಯನ್ನು ನಾವು ಚಿಕ್ಕವರಿದ್ದಾಗ ಕೇಳುತ್ತಿದ್ದರು. ನಾವು ಅದನ್ನು ಬಿಡಿಲಾರದೆ ಒದ್ದಾಡಿದ ಮೇಲೆ ಹಿರಿಯರು ಅದನ್ನು ಹೇಗೆ ಬಿಡಿಸಬೇಕು ಎನ್ನುವ ವಿವರಣೆ ಕೊಡುತ್ತಿದ್ದರು. ಹೀಗೆ ನಾವು ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಬಿಡಿಸುವುದಕ್ಕೆ ಅವು ಪ್ರಚೋದಕವಾಗುತ್ತಿದ್ದವು. ಇರಲಿ, ಆ ಜಮಾನಾದ ಎಲ್ಲರಿಗೂ ಬಹುಶಃ ತಿಳಿದಿರ ಬಹುದಾದ ಈ ಸಮಸ್ಯೆಯನ್ನು ನೋಡೋಣ.
ಒಬ್ಬ ಮನುಷ್ಯನ ಬಳಿಯಲ್ಲಿ ಒಂದು ಕುರಿ, ಒಂದು ಹುಲ್ಲಿನ ಹೊರೆ ಮತ್ತು ಒಂದು ಹುಲಿಯಿರುತ್ತದೆ (ಅದನ್ನೂ ಅವನು ಸಾಕಿಕೊಂಡಿರುತ್ತಾನೆ). ಈ ಎಲ್ಲ ವಸ್ತುಗಳೊಂದಿಗೆ ಅವನು ಅಡವಿಯಲ್ಲಿ ಸಾಗುತ್ತಿರಬೇಕಾದರೆ ಮಧ್ಯದಲ್ಲಿ ಒಂದು ನದಿ ಅಡ್ಡ ಬರುತ್ತದೆ. ಆ ನದಿಯನ್ನು ದಾಟಿ ಹೋಗಬೇಕೆಂದರೆ ಅವನಿಗೆ ಅಲ್ಲಿ ಒಂದು ಸಣ್ಣ ದೋಣಿ/ತೆಪ್ಪ ಸಿಗುತ್ತದೆ. ಆದರೆ ಆ ತೆಪ್ಪ ಬಹಳ ಸಣ್ಣದಿರುವುದರಿಂದ ಒಂದೇ ಬಾರಿಗೆ ಅವನು ಮತ್ತು ಅವನ ವಸ್ತುಗಳೆಲ್ಲವನ್ನೂ ತೆಪ್ಪದ ಮೂಲಕ ಸಾಗಿಸುವುದು ಸಾಧ್ಯವಿರುವುದಿಲ್ಲ. ಅದರಲ್ಲೇನಿದ್ದರೂ ಒಂದು ಬಾರಿಗೆ ಕೇವಲ ಎರಡು ವಸ್ತುಗಳನ್ನು ಮಾತ್ರ ಕೊಂಡೊಯ್ಯಲು ಸಾಧ್ಯವಿರುತ್ತದೆ. ಆಗ ಅವನು ಯೋಚಿಸುತ್ತಾನೆ ತಾನು ಮತ್ತು ಹುಲಿ ಪ್ರಯಾಣ ಮಾಡಿದರೆ, ತಾನು ವಾಪಸ್ ಬರುವಷ್ಟರಲ್ಲಿ ಕುರಿ ಹುಲ್ಲನ್ನು ತಿಂದು ಮುಗಿಸಿ ಬಿಡುತ್ತದೆ, ಒಂದು ವೇಳೆ ತಾನು ಹುಲ್ಲನ್ನು ಉಳಿಸಲು ಅದನ್ನು ತನ್ನೊಂದಿಗೆ ತೆಗೆದುಕೊಂಡು ಹೋದರೆ; ಹುಲಿ ಕುರಿಯನ್ನು ತಿಂದು ಮುಗಿಸಿ ಬಿಡುತ್ತದೆ. ಆದ್ದರಿಂದ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂದು ಆಲೋಚಿಸುತ್ತಿರಬೇಕಾದರೆ ಅವನಿಗೆ ಅದರ ಪರಿಹಾರ ಹೊಳೆಯುತ್ತದೆ. ಅದರಂತೆ ನಡೆದುಕೊಂಡು ಅವನು ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಾನೆ. ಅವನು ಅದನ್ನು ಹೇಗೆ ಸಾಧಿಸಿದ ಎನ್ನುವುದೇ ಸಮಸ್ಯೆಯ ಸ್ವಾರಸ್ಯ.
======================================================================================
ಸಮಸ್ಯೆ - ಎರಡು (ಡಾಕ್ಟರ್, ಮುದುಕಿ ಮತ್ತು ಸುಂದರಿ)
ಮೇಲೆ ತಿಳಿಸಿದಂತಹುದೇ ಸಮಸ್ಯೆಯನ್ನು ಇತ್ತೀಚೆಗೆ ಬ್ಲಾಗ್ ಒಂದರಲ್ಲಿ ಓದಿದೆ. ಇದು ಆಧುನಿಕರಿಗೆ ಅಂದರೆ ಜೀನ್ಸ್ ತೊಡುವ ಪಡ್ಡೆಗಳ ಜನಾಂಗಕ್ಕೆ ಹೇಳಿ ಮಾಡಿಸಿದಂತಿದೆ. ಹಳೆಯದು ಅಫ್ ಕೋರ್ಸ್ ನಿಕ್ಕರ್ ತೊಡುತ್ತಿದ್ದವರ ಜಮಾನಕ್ಕೆ ಸರಿಹೊಂದುತ್ತದೆ. ಇರಲಿ ಆ ಸಮಸ್ಯೆಯೇನೆಂದು ನೋಡೋಣ, ಅದು ಹೀಗಿದೆ.
ಬಿರುಗಾಳಿ ಸಹಿತ ಮಳೆ ಬರುತ್ತಿದೆ; ಆಗ ವ್ಯಕ್ತಿಯೊಬ್ಬ ಇಬ್ಬರೇ ಕುಳಿತುಕೊಳ್ಳ ಬಹುದಾದಂತಹ ಚಿಕ್ಕದಾದ ಕಾರೊಂದನ್ನು ಡ್ರೈವ್ ಮಾಡಿಕೊಂಡು ನಿರ್ಜನವಾಗಿದ್ದ ರಸ್ತೆಯಲ್ಲಿ ಹೋಗುತ್ತಿದ್ದಾನೆ. ಸ್ವಲ್ಪ ದೂರ ಸಾಗಿದ ನಂತರ ಒಂದು ಬಸ್-ಸ್ಟಾಪಿನಲ್ಲಿ ಒಬ್ಬ ಖಾಯಿಲೆಯಿಂದ ಬಳಲುತ್ತಿರುವ ವಯಸ್ಸಾದ ಹೆಂಗಸಿರುತ್ತಾಳೆ ಮತ್ತು ಅವಳೊಂದಿಗೆ ತನಗೆ ಹಿಂದೆ ಉಪಕಾರ ಮಾಡಿದ ಡಾಕ್ಟರೂ ಕೂಡ ಇರುತ್ತಾನೆ; ಅವರಿಬ್ಬರ ಜೊತೆಯಲ್ಲಿ ಇನ್ನೊಬ್ಬಳು ತಾನು ಕನಸು ಕಾಣುವ ತನ್ನ ಜೀವನ ಸಂಗಾತಿಯಾಗಬೇಕೆಂದು ಬಯಸುವಂತಹ ಸುರಸುಂದರಿಯಿರುತ್ತಾಳೆ. ಮುದುಕಿಯನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕಾಗಿರುತ್ತದೆ ಇಲ್ಲವೆಂದರೆ ಅವಳು ಸತ್ತೇ ಹೋಗುವ ಪರಿಸ್ಥಿತಿಯಲ್ಲಿ ಇರುತ್ತಾಳೆ. ಅವಳನ್ನು ಹತ್ತಿಸಿಕೊಂಡರೆ, ತನಗೆ ಉಪಕಾರ ಮಾಡಿದ ಡಾಕ್ಟರಿಗೆ ಪ್ರತ್ಯುಪಕಾರ ಮಾಡುವ ಅವಕಾಶವನ್ನು ಕಳೆದುಕೊಂಡಂತಾಗುತ್ತದೆ. ಹಾಗಾಗಿ ಆ ಡಾಕ್ಟರನ್ನು ಹತ್ತಿಸಿಕೊಂಡು ಹೋದರೆ, ತನ್ನ ಸಂಗಾತಿಯಾಗಬೇಕೆಂದು ಬಯಸುವಂತಹ ಸುಂದರಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಈ ಗೊಂದಲ್ಲಿರ ಬೇಕಾದರೆ ಅವನಿಗೊಂದು ಉಪಾಯ ಹೊಳೆಯುತ್ತದೆ ಅದರ ಪ್ರಕಾರ ಅವನು ಮುದುಕಿಯನ್ನು ಬದುಕಿಸುತ್ತಾನೆ, ಡಾಕ್ಟರಿಗೆ ಪ್ರತ್ಯುಪಕಾರ ಮಾಡುತ್ತಾನೆ ಮತ್ತು ಆ ಸುರಸುಂದರಿಯನ್ನು ಒಲಿಸಿಕೊಳ್ಳಲು ಅವಕಾಶವನ್ನೂ ಮಾಡಿಕೊಳ್ಳುತ್ತಾನೆ. ಅದು ಹೇಗೆ ಸಾಧ್ಯ.
Comments
ಉ: ಎರಡು ಸಮಸ್ಯೆಗಳು - ಭಾಗ ೧
ಉ: ಎರಡು ಸಮಸ್ಯೆಗಳು - ಭಾಗ ೧
In reply to ಉ: ಎರಡು ಸಮಸ್ಯೆಗಳು - ಭಾಗ ೧ by kamath_kumble
ಉ: ಎರಡು ಸಮಸ್ಯೆಗಳು - ಭಾಗ ೧
ಉ: ಎರಡು ಸಮಸ್ಯೆಗಳು - ಭಾಗ ೧
In reply to ಉ: ಎರಡು ಸಮಸ್ಯೆಗಳು - ಭಾಗ ೧ by mnupadhya
ಉ: ಎರಡು ಸಮಸ್ಯೆಗಳು - ಭಾಗ ೧
ಉ: ಎರಡು ಸಮಸ್ಯೆಗಳು - ಭಾಗ ೧
In reply to ಉ: ಎರಡು ಸಮಸ್ಯೆಗಳು - ಭಾಗ ೧ by dvkini
ಉ: ಎರಡು ಸಮಸ್ಯೆಗಳು - ಭಾಗ ೧
In reply to ಉ: ಎರಡು ಸಮಸ್ಯೆಗಳು - ಭಾಗ ೧ by makara
ಉ: ಎರಡು ಸಮಸ್ಯೆಗಳು - ಭಾಗ ೧
ಉ: ಎರಡು ಸಮಸ್ಯೆಗಳು - ಭಾಗ ೧
In reply to ಉ: ಎರಡು ಸಮಸ್ಯೆಗಳು - ಭಾಗ ೧ by Chikku123
ಉ: ಎರಡು ಸಮಸ್ಯೆಗಳು - ಭಾಗ ೧
ಉ: ಎರಡು ಸಮಸ್ಯೆಗಳು - ಭಾಗ ೧
In reply to ಉ: ಎರಡು ಸಮಸ್ಯೆಗಳು - ಭಾಗ ೧ by roopasagar
ಉ: ಎರಡು ಸಮಸ್ಯೆಗಳು - ಭಾಗ ೧
ಉ: ಎರಡು ಸಮಸ್ಯೆಗಳು - ಭಾಗ ೧
ಉ: ಎರಡು ಸಮಸ್ಯೆಗಳು - ಭಾಗ ೧
In reply to ಉ: ಎರಡು ಸಮಸ್ಯೆಗಳು - ಭಾಗ ೧ by ಗಣೇಶ
ಉ: ಎರಡು ಸಮಸ್ಯೆಗಳು - ಭಾಗ ೧
ಉ: ಎರಡು ಸಮಸ್ಯೆಗಳು - ಭಾಗ ೧
In reply to ಉ: ಎರಡು ಸಮಸ್ಯೆಗಳು - ಭಾಗ ೧ by venkatb83
ಉ: ಎರಡು ಸಮಸ್ಯೆಗಳು - ಭಾಗ ೧
In reply to ಉ: ಎರಡು ಸಮಸ್ಯೆಗಳು - ಭಾಗ ೧ by makara
ಉ: ಎರಡು ಸಮಸ್ಯೆಗಳು - ಭಾಗ ೧
In reply to ಉ: ಎರಡು ಸಮಸ್ಯೆಗಳು - ಭಾಗ ೧ by venkatb83
ಉ: ಎರಡು ಸಮಸ್ಯೆಗಳು - ಭಾಗ ೧