ಇನ್ನೂ ಒಂದು ... ಕತೆ.
ಪಾರ್ಥಸಾರಥಿ : ಹಲೋ.. ರಾಮಮೋಹನರೇ...ನಿಮಗೂ ಫೋನ್ ಬಂದಿತ್ತಾ?
ರಾಮೋ : ಹೌದ್ರೀ..ಆಶ್ಚರ್ಯ! ಏರ್ಟೆಲ್ ಕಸ್ಟಮರ್ ಕೇರ್ಗೆ ಫೋನ್ ಮಾಡಿ, ಅದು ಗಣೇಶರದ್ದೇ ಅಂತ ಕನ್ಫರ್ಮ್ ಮಾಡಿಕೊಂಡೆ.
ಪಾ ಸಾ : ಅವರನ್ನು ಭೇಟಿಯಾಗುವುದು ನನಗೂ ಇಷ್ಟ. ಆದರೆ ರಾತ್ರಿ ಹನ್ನೊಂದುವರೆಗೆ ಬರಬೇಕು ಅಂದಿದ್ದಾರಲ್ಲಾ?
ರಾಮೋ : ಹೋಗೋಣಾರೀ..ಒಂದು ರಾತ್ರಿಯ ಮಟ್ಟಿಗೆ ನಿದ್ರೆ ಬಿಟ್ಟರಾಯಿತು. ನೀವು ಮೆಜೆಸ್ಟಿಕ್ಗೆ ೯ಗಂಟೆಗೆ ಸರಿಯಾಗಿ ಬನ್ನಿ. ಕಾರು ಕಳುಹಿಸುತ್ತೇನೆ ಎಂದು ಗಣೇಶರೇ ಹೇಳಿದ್ದಾರಲ್ಲಾ..
ಪಾಸಾ : ಅದು ಸರೀರೀ..ಹಿಂದೆ ಬರುವುದು..?
ರಾಮೋ : ಅದಕ್ಕೂ ಗಣೇಶರು ಏನಾದರೂ ವ್ಯವಸ್ಥೆ ಮಾಡಿಯಾರು. ಈಗ್ಯಾಕೆ ಅದರ ಯೋಚನೆ. ಉಳಿದವರಿಗೂ ಫೋನ್ ಮಾಡಿ ವಿಚಾರಿಸಿದಿರಾ?
ಪಾಸಾ : ಈಗ ವಿಚಾರಿಸುತ್ತೇನೆ. ನೀವು ಗ್ಯಾರಂಟಿ ತಾನೆ?
ರಾಮೋ : ೯ಕ್ಕೆ ಶಾರ್ಪ್-ಮೆಜೆಸ್ಟಿಕ್ನಲ್ಲಿ ಸಿಗೋಣ.
ಪಾಸಾ : ಹಲೋ..ಚಿಕ್ಕು.. ಚಿಕ್ಕು ಇದಾನಮ್ಮಾ ಮನೆಯಲ್ಲಿ?
ಹೆಣ್ಣಿನ ಧ್ವನಿ : ಚಿಕ್ಕೂನೂ ಇಲ್ಲಾ ಕುಕ್ಕೂನೂ ಇಲ್ಲ. ನೀವ್ಯಾರ್ರೀ ಮಾತನಾಡೋದು?
ಚಿ : ಲೇ..ಕೊಡೇ ಇಲ್ಲಿ..ಚಿಕ್ಕು ಎಂದು ಕರೆದರೆ ನಮ್ಮ ಸಂಪದಿಗರೇ ಇರಬೇಕು. ಓ..ಪಾರ್ಥಸರ್..ಗಣೇಶಣ್ಣನಲ್ಲಿ ಹೋಗಲು ತಾನೇ?... ನಾನಾ... ರಾತ್ರಿ ಹೊತ್ತು...ಸಾರ್..ಬೇಕಿದ್ದರೆ ನಿಮಗೆಲ್ಲಾ ನಿದ್ರೆ ಬರದ ಹಾಗೇ ಒಂದು ಫ್ಲಾಸ್ಕ್ ಪೂರ್ತಿ ಕಾಫಿ ಮೆಜೆಸ್ಟಿಕ್ಗೆ ತಂದು ಕೊಡುವೆ. ನಾನು ಮಾತ್ರ ರಾತ್ರಿ ಬರೊಲ್ಲಾ..ಬರೋಲ್ಲಾ..ಬರೋಲ್ಲಾ.
ಪಾಸಾ : ಸರಿ..ಒಂದು ಸಾರಿ ಹೇಳಿದರೆ ಅರ್ಥವಾಗುತ್ತದೆ. ಕಾಫಿ ನೆನಪಲ್ಲಿ ತಾ.
ಪಾಸಾ : ಹಲೋ..ಕವಿನಾಗರಾಜರೆ, ಗಣೇಶರು ನಿಮಗೂ ಬರಲು ಹೇಳಿದಾರಲ್ಲಾ?
ಕವಿ : ನಿಮಗೆಲ್ಲಾ ಬೇರೆ ಕೆಲಸವಿಲ್ಲವಾ? ಅವರಿಗೆ ಶಾಸ್ತ್ರ, ತತ್ವ ಏನೂ ಗೊತ್ತಿಲ್ಲ. ಸರಿಯಾಗಿ ಲೇಖನ ಬರೆಯಲೂ ಬರುವುದಿಲ್ಲ. ಅವರನ್ನು ಭೇಟಿಯಾಗಲು ನಡುರಾತ್ರಿ ಹೋಗಬೇಕಾ? ಹಾಂ..ನೀವು ಹೋಗುತ್ತೀರಾದರೆ ಮುಂಜಾಗ್ರತೆಯಾಗಿ ಹೊಟ್ಟೆ ತುಂಬಾ ತಿಂದುಕೊಂಡು ಹೋಗಿ. ಅಲ್ಲಿ ತಿನ್ನಲು ಇದ್ದರೂ ನಿಮಗೇನೂ ಸಿಗಲಿಕ್ಕಿಲ್ಲ.
ಪಾಸಾ : ಹ್ಹ ಹ್ಹ ಹೌದು ಸರ್. ಜಯಂತ್ ಬರುವನೋ ಎಂದು ವಿಚಾರಿಸುವೆ.
ಪಾಸಾ : ಹಲೋ ಜಯಂತ್...
ಜ : ನಾನು ರೆಡಿ ಸರ್. ೯ ಗಂಟೆಗೆ ಸರಿಯಾಗಿ ಬರುವೆ.
ಪಾಸಾ :ಹಾಗಿದ್ದರೆ ಮೂರು ಜನ ಈಗ ಕನ್ಫರ್ಮ್ ಆಯಿತು. ಇನ್ನು ಸಪ್ತಗಿರಿವಾಸಿಗೆ ಕಾಲ್ ಮಾಡುವೆ.
ಪಾಸಾ : ಸ.........
ಸ : ಗುರುಗಳೇ.. ಗಣೇಶಣ್ಣನ ಭೇ...
ಇಂತಹ ಸಂ...ಕ್ಕಾಗಿ ಕಾ....ದೆ. ಆದರೆ ಗುರುಗಳೇ, ನನಗೆ ನಾಳೆ ಪರೀಕ್ಷೆ ಇದೆ. ಕ್ಷ..ಸಿ
ಈಸಲ ನೀ......ನ್ನಿ.
ಪಾಸಾ : ಅರ್ಥವಾಯಿತು.
ರಾತ್ರಿ ೯ ಗಂಟೆಗೆ ಪಾರ್ಥಸಾರಥಿಯವರು, ರಾಮ ಮೋಹನರು, ಜಯಂತ್, ಚಿಕ್ಕು(ಫ್ಲಾಸ್ಕ್ನೊಂದಿಗೆ) ಮೆಜೆಸ್ಟಿಕ್ನಲ್ಲಿ ಒಬ್ಬರಿಗೊಬ್ಬರು ಭೇಟಿಯಾಗುವಾಗಲೇ...."ಶಾಂತಲಾ ಸಿಲ್ಕ್ ಮುಂದೆ ಒಂದು ಐಟೆನ್ ಕಾರು ನಿಂತಿದೆ. ಅದರಲ್ಲಿ ಬನ್ನಿ, ನಿಮ್ಮ ನಿರೀಕ್ಷೆಯಲ್ಲಿ-ಗಣೇಶ" ಎಂಬ ಮೆಸೇಜ್ ನಾಲ್ಕೂ ಜನರ ಮೊಬೈಲ್ಗೆ ಬಂತು. ಕಾರಿನ ಬಳಿ ಹೋಗಿ ಒಮ್ಮೆ ಕಾರಿನೊಳಗೆ ಬಗ್ಗಿ ನೋಡಿದರು. " ನಾನು ಗಣೇಶರಲ್ಲ. ಅವರ ಡ್ರೈವರ್. ದೂರದ ಹಳ್ಳಿಗೆ ಹೋಗಬೇಕು. ನೀವು ಬೇಗ ಹತ್ತಿ.." ಎಂದನು ಡ್ರೈವರ್.ಚಿಕ್ಕು ಬಿಟ್ಟು ಎಲ್ಲರೂ ಹಿಂದಿನ ಸೀಟಿನಲ್ಲಿ ಹತ್ತಿ ಕುಳಿತರು. ಡ್ರೈವರ್ ಚಿಕ್ಕುವನ್ನೊಮ್ಮೆ ನೋಡಿದ. "ಇಲ್ಲಾ.ನಾನು ಬರುವುದಿಲ್ಲ." ಎಂದು ಕಾಫಿ ಫ್ಲಾಸ್ಕ್ ಪಾರ್ಥರ ಕೈಗೆ ಒಪ್ಪಿಸಿ, ಓಡಿದ.
ಕೂಡಲೇ ಕಾರು ಸ್ಟಾರ್ಟ್ ಮಾಡಿದ ಡ್ರೈವರ್ ಕಾರನ್ನು ೧೦೦-೧೨೦ ಕಿ.ಮೀ ವೇಗದಲ್ಲಿ ಓಡಿಸುತ್ತಾ, ಟೇಪ್ ಆನ್ ಮಾಡಿದ. "ತಂಗಾಳಿಯಲ್ಲಿ ನಾನು........." ಇಂಪಾದ ಹಾಡು,ಜತೆಯಲ್ಲಿ ಎಸಿ ತಂಪು. ಆದರೂ ಪಾರ್ಥರು ಹಾಡು ಚೆನ್ನಾಗಿಲ್ಲ, ಬೇರೆ ಹಾಕು ಅಂದರು.
ಡ್ರೈವರ್ ಹಾಡು ಬದಲಾಯಿಸಿದ.."ಭೂತ್ ಹೂಂ ಮೈ........." ಪಾರ್ಥರು ಕರ್ಚೀಪ್ನಲ್ಲಿ ಮುಖ ಒರೆಸುತ್ತಾ, ಒದ್ದೆ ಕರ್ಚೀಪ್ನ್ನು ಹಿಂಡಿ ಪುನಃ ಮುಖ ಒರೆಸುತ್ತಾ " ಅಬ್ಬಾ..ಈಈ ಸಲ ಬೆಂಗಳೂರು ಸೆಖೆ ಸಹಿಸಲಾಗುತ್ತಿಲ್ಲ. ಸುಪ್ರೀತ್ ಬರೆದುದು ಸತ್ಯ."ಎಂದು ಜಯಂತ್ನನ್ನು ನೋಡಿದರೆ ಚಳಿಗಾಲದಲ್ಲಿ ಊಟಿಯಲ್ಲಿರುವಂತೆ ನಡುಗುತ್ತಿದ್ದಾನೆ. ರಾಮಮೋಹನರು ಕಣ್ಣು ಮುಚ್ಚಿ ಧ್ಯಾನ ಮಾಡುತ್ತಿದ್ದಾರೆ. "ಸರ್ರ.. ಸಂಪದದಲ್ಲಿ ದೆವ್ವಗಳ ಕತೆ ನೀವು ಮೂವರೇ ಬರೆಯುವುದಲ್ವಾ?" ಎಂದ ಡ್ರೈವರ್.
(ಮುಂದುವರೆಯುವುದು)
Comments
ಉ: ಇನ್ನೂ ಒಂದು ... ಕತೆ.
In reply to ಉ: ಇನ್ನೂ ಒಂದು ... ಕತೆ. by makara
ಉ: ಇನ್ನೂ ಒಂದು ... ಕತೆ.
In reply to ಉ: ಇನ್ನೂ ಒಂದು ... ಕತೆ. by partha1059
ಉ: ಇನ್ನೂ ಒಂದು ... ಕತೆ.
In reply to ಉ: ಇನ್ನೂ ಒಂದು ... ಕತೆ. by makara
ಉ: ಇನ್ನೂ ಒಂದು ... ಕತೆ.
ಉ: ಇನ್ನೂ ಒಂದು ... ಕತೆ.
ಉ: ಇನ್ನೂ ಒಂದು ... ಕತೆ.
ಉ: ಇನ್ನೂ ಒಂದು ... ಕತೆ.
ಉ: ಇನ್ನೂ ಒಂದು ... ದೆವ್ವದ ಕಥೆ ಇರಬಹುದು ಅನ್ನಿಸುವ -ಕಥೆ.
ಉ: ಇನ್ನೂ ಒಂದು ... ಕತೆ.
In reply to ಉ: ಇನ್ನೂ ಒಂದು ... ಕತೆ. by shreekant.mishrikoti
ಉ: ಇನ್ನೂ ಒಂದು ... ದೆವ್ವ-? ಕತೆ-ಓದುವ ದೆವ್ವಗಳು ನೂರಾರು!.
In reply to ಉ: ಇನ್ನೂ ಒಂದು ... ಕತೆ. by shreekant.mishrikoti
ಉ: ಇನ್ನೂ ಒಂದು ... ಕತೆ.
ಉ: ಇನ್ನೂ ಒಂದು ... ಕತೆ.
In reply to ಉ: ಇನ್ನೂ ಒಂದು ... ಕತೆ. by Chikku123
ಉ: ಇನ್ನೂ ಒಂದು ... ಕತೆ.
ಉ: ಇನ್ನೂ ಒಂದು ... ಕತೆ-ಮುಂದಿನ ಭಾಗ..
In reply to ಉ: ಇನ್ನೂ ಒಂದು ... ಕತೆ-ಮುಂದಿನ ಭಾಗ.. by ಗಣೇಶ
ಉ: ಇನ್ನೂ ಒಂದು ... ಕತೆ-2-ಮರದ ಮೇಲೆ???? 'ಅವರು'....!!..
In reply to ಉ: ಇನ್ನೂ ಒಂದು ... ಕತೆ-2-ಮರದ ಮೇಲೆ???? 'ಅವರು'....!!.. by venkatb83
ಉ: ಇನ್ನೂ ಒಂದು ... ಕತೆ-2-ಮರದ ಮೇಲೆ???? 'ಅವರು'....!!..
In reply to ಉ: ಇನ್ನೂ ಒಂದು ... ಕತೆ-2-ಮರದ ಮೇಲೆ???? 'ಅವರು'....!!.. by ಗಣೇಶ
ಉ: ಇನ್ನೂ ಒಂದು ... ಕತೆ-2- ಮರದ ಮೇಲಿಂದ ಭೂಮಿಗೆ ಇಳಿದ 'ಅವರು'....!!..
In reply to ಉ: ಇನ್ನೂ ಒಂದು ... ಕತೆ-ಮುಂದಿನ ಭಾಗ.. by ಗಣೇಶ
ಉ: ಇನ್ನೂ ಒಂದು ... ಕತೆ-ಮುಂದಿನ ಭಾಗ..
ಉ: ಇನ್ನೂ ಒಂದು ... ಕತೆ.
In reply to ಉ: ಇನ್ನೂ ಒಂದು ... ಕತೆ. by partha1059
ಉ: ಇನ್ನೂ ಒಂದು ... ಕತೆ:ಭಕ್ಚೀಸು -ಲಂಚ(ತಿಂಡಿ ತೀರ್ಥ!!) ಕೊಟ್ಟು ...??
In reply to ಉ: ಇನ್ನೂ ಒಂದು ... ಕತೆ:ಭಕ್ಚೀಸು -ಲಂಚ(ತಿಂಡಿ ತೀರ್ಥ!!) ಕೊಟ್ಟು ...?? by venkatb83
ಉ: ಇನ್ನೂ ಒಂದು ... ಕತೆ:ಭಕ್ಚೀಸು -ಲಂಚ(ತಿಂಡಿ ತೀರ್ಥ!!) ಕೊಟ್ಟು ...??
In reply to ಉ: ಇನ್ನೂ ಒಂದು ... ಕತೆ:ಭಕ್ಚೀಸು -ಲಂಚ(ತಿಂಡಿ ತೀರ್ಥ!!) ಕೊಟ್ಟು ...?? by partha1059
ಉ: ಇನ್ನೂ ಒಂದು ... ಕತೆ: ಛೇ!!ಛೇ.. ಎಂಥ ಕೆಲ್ಸಾ ಆಗೊಯ್ತು!!.
In reply to ಉ: ಇನ್ನೂ ಒಂದು ... ಕತೆ. by partha1059
ಉ: ಇನ್ನೂ ಒಂದು ... ಕತೆ.
In reply to ಉ: ಇನ್ನೂ ಒಂದು ... ಕತೆ. by ಗಣೇಶ
ಉ: ಇನ್ನೂ ಒಂದು ... ಕತೆ.ಮೇಜಿನ ಕೆಳಗೆ.-ಮೇಜಿನ ಮೇಲೆ ????
In reply to ಉ: ಇನ್ನೂ ಒಂದು ... ಕತೆ.ಮೇಜಿನ ಕೆಳಗೆ.-ಮೇಜಿನ ಮೇಲೆ ???? by venkatb83
ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ
In reply to ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ by ಗಣೇಶ
ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ....~!!!:((((
In reply to ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ....~!!!:(((( by venkatb83
ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ....~!!!:((((
In reply to ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ....~!!!:(((( by ಗಣೇಶ
ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ.!!-ರೇಲ್ವೇ ಟ್ರಾಕು.??
In reply to ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ by ಗಣೇಶ
ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ
In reply to ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ by ಗಣೇಶ
ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ
In reply to ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ by partha1059
ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ
In reply to ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ by ಗಣೇಶ
ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ
In reply to ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ by Chikku123
ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ
In reply to ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ by ಗಣೇಶ
ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ: ಅವರು? ಇವ್ರ?
In reply to ಉ: ಇದು ಯಾರು ಬರೆದ ಕತೆಯೋ? ಪಾಪ ......ಸಿ: ಅವರು? ಇವ್ರ? by venkatb83
ಉ: ಹೌದು ಸಪ್ತಗಿರಿವಾಸಿಯವರೆ, ಅವರೇ...ನಿಮಗೆ ಹೇಗೆ ಗೊತ್ತಾಯಿತು?
In reply to ಉ: ಹೌದು ಸಪ್ತಗಿರಿವಾಸಿಯವರೆ, ಅವರೇ...ನಿಮಗೆ ಹೇಗೆ ಗೊತ್ತಾಯಿತು? by ಗಣೇಶ
ಉ: ಹೌದು ಸಪ್ತಗಿರಿವಾಸಿಯವರೆ: ಅಚ್ಚರಿಯ ಮುಕ್ತಾಯ..!!!
In reply to ಉ: ಹೌದು ಸಪ್ತಗಿರಿವಾಸಿಯವರೆ: ಅಚ್ಚರಿಯ ಮುಕ್ತಾಯ..!!! by venkatb83
ಉ: ಹೌದು ಸಪ್ತಗಿರಿವಾಸಿಯವರೆ: ಅಚ್ಚರಿಯ ಮುಕ್ತಾಯ..!!!
In reply to ಉ: ಹೌದು ಸಪ್ತಗಿರಿವಾಸಿಯವರೆ: ಅಚ್ಚರಿಯ ಮುಕ್ತಾಯ..!!! by ಗಣೇಶ
ಉ: ಹೌದು ಸಪ್ತಗಿರಿವಾಸಿಯವರೆ: ಅಚ್ಚರಿಯ ಮುಕ್ತಾಯ..!!!
In reply to ಉ: ಹೌದು ಸಪ್ತಗಿರಿವಾಸಿಯವರೆ, ಅವರೇ...ನಿಮಗೆ ಹೇಗೆ ಗೊತ್ತಾಯಿತು? by ಗಣೇಶ
ಉ: ಹೌದು ಸಪ್ತಗಿರಿವಾಸಿಯವರೆ, ಅವರೇ...ನಿಮಗೆ ಹೇಗೆ ಗೊತ್ತಾಯಿತು?
In reply to ಉ: ಹೌದು ಸಪ್ತಗಿರಿವಾಸಿಯವರೆ, ಅವರೇ...ನಿಮಗೆ ಹೇಗೆ ಗೊತ್ತಾಯಿತು? by ಗಣೇಶ
ಉ: ಹೌದು ಸಪ್ತಗಿರಿವಾಸಿಯವರೆ, ಅವರೇ...ನಿಮಗೆ ಹೇಗೆ ಗೊತ್ತಾಯಿತು?
In reply to ಉ: ಹೌದು ಸಪ್ತಗಿರಿವಾಸಿಯವರೆ, ಅವರೇ...ನಿಮಗೆ ಹೇಗೆ ಗೊತ್ತಾಯಿತು? by ಗಣೇಶ
ಉ: ಹೌದು ಸಪ್ತಗಿರಿವಾಸಿಯವರೆ, ಅವರೇ...ನಿಮಗೆ ಹೇಗೆ ಗೊತ್ತಾಯಿತು?
ಉ: ಅಚ್ಚರಿಯ ಮುಕ್ತಾಯ
In reply to ಉ: ಅಚ್ಚರಿಯ ಮುಕ್ತಾಯ by makara
ಉ: ಅಚ್ಚರಿಯ ಮುಕ್ತಾಯ