ಸಾಧನೆ
ಕವನ
ಹಸಿರು ಬಣ್ಣದ
ಸಿಪ್ಪೆಯನ್ನು
ನವೋತ್ಸಾಹದಿಂದ
ಕಳಚಿದಾಗ
ಕಂಡದ್ದೇನು?
ಬರೀ ನಾರು.
ಹತಾಶನಾಗದೆ
ನಾರುಗಳೆಲ್ಲವನ್ನೂ
ಕಿತ್ತುಕಿತ್ತೆಸೆದಾಗ
ಕಂಡಿದ್ದು ಭದ್ರವಾದ
ರಕ್ಷಣಾ ಕವಚ
ಅಪ್ರತಿಭನಾಗದೆ
ಒಡೆದಾಗ ಕಂಡದ್ದು
ಸಾಧನೆಯಿಂದ ಸಿಕ್ಕಿದ
ಮಧುರ ಫಲ-
ಪಾನೀಯ.
ಎಲ್ಲರಿಗೂ ಹಂಚಿ
ಒಂದಷ್ಟನ್ನು
ನಾನೂ ತಿಂದು
ನಿಟ್ಟುಸಿರಿಟ್ಟು
ದಣಿವೆಲ್ಲವನ್ನೂ ಮರೆತೆ,
ಸುಖಿಯಾದೆ
Comments
ಉ: ಸಾಧನೆ
ಉ: ಸಾಧನೆ
In reply to ಉ: ಸಾಧನೆ by makara
ಉ: ಸಾಧನೆ
In reply to ಉ: ಸಾಧನೆ by GOPALAKRISHNA …
ಉ: ಸಾಧನೆ
In reply to ಉ: ಸಾಧನೆ by venkatb83
ಉ: ಸಾಧನೆ