ನಿನ್ನ ಕಣ್ಣ ಕೊಳದಲ್ಲಿ
ಮೀನಾಗಿರಬಯಸಿದ್ದೆ ಗೆಳತಿ
ನಿನ್ನ ತುಟಿಯ ಮಂದಹಾಸಕ್ಕೆ
ಕಾರಣವಾಗ ಬಯಸಿದ್ದೆ ಗೆಳತಿ
ನಿನ್ನ ಮುಂಗುರುಳಾಗಿ
ಕೋಮಲ ಕೆನ್ನೆಯ ಮುತ್ತಾಗಬಯಸಿದ್ದೆ
ಮೌನವಾಗಿ ನಿನ್ನ ಕೊರಳ
ಪಿಸುಮಾತಾಗ ಬಯಸಿದ್ದೆ ಗೆಳತಿ
ನಾ ನಿನ್ನವನಾಗ ಬಯಸಿದ್ದೆ
ನಾ ನೀನಾಗ ಬಯಸಿದ್ದೆ
ನಿನ್ನ ಅಂಗಾಲಿಗೆ
ಹೂವಾಗ ಬಯಸಿದ್ದೆ ಗೆಳತಿ
ನನಗೇನು ಗೊತ್ತಿತ್ತು
ನೀ ಹಗಲುಗನಸಾಗೆ ಉಳಿಯುವೆ ಎಂದು
ಅದೇ ಕಾಲಲ್ಲಿ ಪ್ರೀತಿಯ ಹೂವ
ಹೊಸಕಿ ಹಾಕುವೆ ಎಂದು
ನನಗೇನು ಗೊತ್ತಿತ್ತು
ಪ್ರೀತಿಯೇ ಹೃದಯದ ಕಣ್ಣೀರಿಗೆ
ಕಾರಣವಾಗುವುದೆಂದು
ನೋವೆ ಕಾವ್ಯವಾಗುವುದೆಂದು
ಗುರುಶಿಷ್ಯ (ರಾಘವೇಂದ್ರ ಗುಡಿ)
Comments
ಉ: ನನಗೇನು ಗೊತ್ತಿತ್ತು
In reply to ಉ: ನನಗೇನು ಗೊತ್ತಿತ್ತು by venkatb83
ಉ: ನನಗೇನು ಗೊತ್ತಿತ್ತು
ಉ: ನನಗೇನು ಗೊತ್ತಿತ್ತು
In reply to ಉ: ನನಗೇನು ಗೊತ್ತಿತ್ತು by makara
ಉ: ನನಗೇನು ಗೊತ್ತಿತ್ತು
ಉ: ನನಗೇನು ಗೊತ್ತಿತ್ತು
In reply to ಉ: ನನಗೇನು ಗೊತ್ತಿತ್ತು by jaikissan
ಉ: ನನಗೇನು ಗೊತ್ತಿತ್ತು