ಸ್ವಿಚ್ಚ್ ಹೋಲ್ಚರ್ ಪಿನ್ ಹಾಗೂ ಅಡಾಪ್ಟರ್ ಗಳು

ಸ್ವಿಚ್ಚ್ ಹೋಲ್ಚರ್ ಪಿನ್ ಹಾಗೂ ಅಡಾಪ್ಟರ್ ಗಳು

HOLDERS

ಇವು ವಿದ್ಯುತ್ ಬಲ್ಬ್‌ಹೋಲ್ಡರ್,ಸ್ಪಿಚ್,ಪಿನ್‌ಗಳು. ಹಾಗೂ ಅಡಾಪ್ಟರ್‌ಗಳು ಬಹುಶಃ ಇಲ್ಲಿರುವ ಒಂದು ಹಳೇಮಾದರಿ ಸ್ವಿಚ್ಚ್‌ನ್ನು ಹೊರತು ಪಡಿಸಿ ಉಳಿದ ಸ್ವಿಚ್‌ಗಳನ್ನು ಬಹಳಜನರು ನೋಡಿರಲಿಕ್ಕಿಲ್ಲ. ಉಳಿದ ಸ್ವಿಚ್‌ಗಳು ಎಲ್ಲಿವೆ? ಹುಡಿಕಿನೋಡಿ.

ನಮ್ಮ ಮನೆಯಲ್ಲಿ ಇವು ಅರ್ಧ ಶತಮಾನಕ್ಕಿಂತ ಪೂರ್ವದಿಂದ ಇಂದಿನವರೆಗೂ ನಿತ್ಯ ಕಾರ್ಯನಿರ್ವಹಿಸುತ್ತಿರುವವುಗಳು. ಚಿತ್ರದಲ್ಲಿರುವವು ಹೆಚ್ಚಿನವು ಹಿತ್ತಾಳೆಯಂತಃ ಲೋಹದಿಂದ ಮಾಡಿದ್ದವು. ಅರ್ಧ ಶತಮಾನ ದಾಟಿದೆ ಎಂಬುದಷ್ಟೇ ಇವುಗಳ ವಿಷೇಶತೆ ಅಲ್ಲ. ಇವು ಅಪರೂಪದ ಸೌಲಭ್ಯಗಳನ್ನೂ ಹೊಂದಿವೆ.

ಕೆಲವು ಹೊಲ್ಡರ್ ನಲ್ಲಿ ಕಿವಿಯಂತಹ ಸಾಧನವಿದೆ. ಕಿವಿ ಹಿಂಡಿದರೆ ಇದು ಕೆಲಸಮಾಡುತ್ತದೆ! ಆ ಕಿವಿಯೇ ಅದರ ಸ್ವಿಚ್ಚು ಅದನ್ನು ತಿರುವ ಬೇಕು. ನೆಲಕ್ಕೆ ಲಂಬವಾಗಿದ್ದಾಗ ಅದು ವಿದ್ಯುತ ಪ್ರವಾಹವನ್ನು ಬಲ್ಬಿಗೆ ಸಾಗಿಸುತದೆ. ಅಡ್ಡವಾಗಿಟ್ಟರೆ, ವಿದ್ಯುತ ಹರಿವನ್ನು ತಡೆಹಿಡಿಯುತ್ತದೆ. ಮಕ್ಕಳಿಗೂ ಕಿವಿಹಿಂಡದ ಈಕಾಲದಲ್ಲಿ ಇದು ವಿಚಿತ್ರವೆನ್ನಿಸುತ್ತದೆಯಾ?

ಕೆಲವು ಹೋಲ್ಡರುಗಳಿಗೆ ಸರಿಸುವ ಅಗಳಿಗಳು ಇವೆ. ಇವುಗಳನ್ನು ಎಡಕ್ಕೆ ಬಲಕ್ಕೆ ಸರಿಸುವುದರಿಂದ ದೀಪವನ್ನು ಹೊತ್ತಿಸಬಹುದು/ಆರಿಸಬಹುದು.

ಮೂರು ಬಾಯಿಯನ್ನು ಹೊಂದಿರುವ ಹೊಲ್ಡರ್ ನಲ್ಲಿ ಒಂದೇ ಕಡೆಗೆ ಮೂರು ಬಲ್ಬಗಳನ್ನು ಉರಿಸಬಹುದು. ಅಥವಾ ಉಳಿದೆರಡು ಬಾಯಿಗಳಿಗೆ ಅಡಾಪ್ಟರ್‌ಗಳನ್ನು ಬಳಸುವುದರ ಮೂಲಕ ದೂರದಲ್ಲಿಯೂ ಎರಡು ಬಲ್ಬಗಳನ್ನು ಉರಿಸಬಹುದು.

ಅತ್ಯಂತ ವಿಶೇಷವಾದದ್ದೆಂದರೆ, ಚಿತ್ರದಲ್ಲಿರುವ ಹೊಲ್ಡರ್/ ಪಿನ್. ಇವು ಎರಡು ಬೇರೆ ಬೇರೆ ವಸ್ತುಗಳಲ್ಲ. ಟೂ ಇನ್ ಒನ್. ಪಿನ್ನ್‌ನ ಕುತ್ತಿಗೆಯನ್ನು ಮೇಲೆ ಕೆಳಗೆ ಮಾಡುವುದರ ಮೂಲಕ ಇದನ್ನು ಅಡಾಪ್ಟರ್ ಆಗಿಯೂ ಬಳಸಬಹುದು. ಪಿನ್ ಆಗಿಯೂ ಬಳಸಬಹುದು.

 

 

Rating
No votes yet

Comments