ಯಾವುದೀ ಚೇತನ
ಕವನ
ಗೆಳತಿ ಬಲ್ಲೆಯ ನೀನು
ಕಾರಣ ಯಾರೆಂದು ಈ ಸೃಷ್ಠಿ ನಡೆಗೆ //೧//
ಯಾರು ಕಾರಣರೆಂದು ಬಲ್ಲವರು ಯಾರು
ನೀಡಲು ರವಿಯು ಬೆಳಕ ಈ ಧರೆಗೆ //೨//
ಬೆಳದಿಂಗಳ ಚೆಲ್ಲಿ ಧರೆಗೆ ತಂಪೆರೆಯೆ
ಕಾರಣವದಾರು ಚಂದಿರನ ಕೃಪೆಗೆ //೩//
ಕೋಗಿಲೆಯ ಕಂಠದಲಿ, ಕೊಳಲ ಗಾನದಲಿ
ಇತ್ತವರು ಯಾರು ಮಧುರ ರಾಗದ ಕೊಡುಗೆ //೪//
ಕಾಲ ಕಾಲಕ್ಕೆ ಮಳೆಯ ನೀರೆರೆದು
ಉಸಿರು ತುಂಬಿದವರಾರು ಈ ಹಸಿರು ಸಿರಿಗೆ //೫//
ಮುಚ್ಚಿದಾ ಮಣ್ಣನ್ನು ಸರಿಸಿ ಮೇಲೇಳೊ
ಛಲವನಿತ್ತವರಾರು ಮೊಳಕೆ ಕುಡಿಗೆ //೬//
ನಾನಾರೊ ನೀನಾರೊ ಆಗಿದ್ದರೂ ಒಮ್ಮೆ
ಒಂದು ಮಾಡಿದವರಾರು ಬೆಸೆದು ಈ ಬೆಸುಗೆ //೭//
ನಾನಂತು ಅರಿಯೆ ಈ ಸೃಷ್ಠಿಯ ಬಗ್ಗೆ
ತಿಳಿದಿದ್ದರೆ ಹೇಳು ಈ ಚೇತನದ ಬಗೆಗೆ //೮//
Comments
ಉ: ಯಾವುದೀ ಚೇತನ