ವಾರಸುದಾರನಿಲ್ಲದ ಒಂಟಿ ಚಪ್ಪಲಿ
೧.
ವಾರಸುದಾರನಿಲ್ಲದ ಒಂಟಿ
ಚಪ್ಪಲಿಯಂತಾಗಿದೆ ಮನ
ಜೊತೆ ಸಾಗಿದ ಹಾದಿಗಳ
ನೆನಪಲ್ಲಿ ಸಾಕಿ
ಬಂದು ಬಿಡು
ಕೊನೆಯ ಬಾರಿ
ಬದಿಯ ಬೇಲಿಯ ಮೇಲಿನ
ಹೂವು ಒಮ್ಮೆಯಾದರೂ
ನಕ್ಕೀತು.
೨.
ಎರೆಡೂ ಬದಿಯ
ಮೌನದ ನಡುವೆ
ಅನಾಥವಾಗಿವೆ
ನೆನಪುಗಳು.
೩.
ಆಗಂತುಕ
ರಾತ್ರಿಗಳಲ್ಲಿ
ಕಳೆದುಹೋಗಿವೆ
ಪರಿಚಿತ
ನೆನಪುಗಳು.
೪.
ನೊಂದ ಹೃದಯವಿದೆ
ಕೊಂದ ಕನಸುಗಳಿವೆ
ಸಾಗಬೇಕಿದೆ ಒಂಟಿ
ಯಾತ್ರಿಕ ನಾನು
ನೆನಪುಗಳ ಕ್ರೂರ
ಬಿಸಿಲಲ್ಲಿ.
೫.
ನೆನೆಪ ಜಾತ್ರೆಯಲಿ
ಅದೆಷ್ಟು ಮುಖಗಳು?
ಯಾವ ಮುಖದ
ಭರವಸೆಗೆ
ಕಣ್ಣೀರಾಗಲಿ?
Rating
Comments
ಉ: ವಾರಸುದಾರನಿಲ್ಲದ ಒಂಟಿ ಚಪ್ಪಲಿ
ಉ: ವಾರಸುದಾರನಿಲ್ಲದ ಒಂಟಿ ಚಪ್ಪಲಿ : ೪ನೇ ಸಾಲಿನಲ್ಲಿ ಬದಲಾವಣೆಯ ಅಗತ್ಯ???
In reply to ಉ: ವಾರಸುದಾರನಿಲ್ಲದ ಒಂಟಿ ಚಪ್ಪಲಿ : ೪ನೇ ಸಾಲಿನಲ್ಲಿ ಬದಲಾವಣೆಯ ಅಗತ್ಯ??? by venkatb83
ಉ: ವಾರಸುದಾರನಿಲ್ಲದ ಒಂಟಿ ಚಪ್ಪಲಿ : ೪ನೇ ಸಾಲಿನಲ್ಲಿ ಬದಲಾವಣೆಯ ಅಗತ್ಯ???