ದೊಡ್ಡವರಾಗುತ! ದಡ್ಡರಾಗುತ!

Submitted by ashoka_15 on Mon, 04/30/2012 - 12:18
ಬರಹ

 ನೆನಪುಗಳ ಮೆಲುಕುಹಾಕಿ

ಒಂದಿಷ್ಟು  ಕನಸುಗಳ ಇಡಿದು

ದೊಡ್ಡವರಾದಂತೆಲ್ಲಾ

ದಡ್ಡರಾಗುತ್ತಿದ್ದೆವೆ,

ಹಿಂತಿರುಗಿ ನೋಡದೆ

ಮಾಡಿದ ತಪ್ಪುಗಳ 

ಮತ್ತೆ ಮತ್ತೆ ಮಾಡುತ.

 

ಅಂತೆ ಕಂತೆಗಳ ಜೀವನ

ಏನನ್ನೋ ಹುಡುಕುವ ನಯನ

ಹುಟ್ಟಿದ್ದು ಬಡವನೆನ್ನುತ

ಬಗವಂತನೆಡೆಗೆ ಬೆರಳುಮಾಡುತ

ಸಾದಕರ ದಾರಿ ಹಿಡಿಯದೆ

ಪಾದಗಳಿಗೆ ಬುದ್ದಿ  ಹೇಳದೆ

ದೊಡ್ಡವರಾದಂತೆಲ್ಲ್ಲಾ 

ದಡ್ಡರಾಗುತ್ತಿದ್ದೆವೆ

ಬೇರೆಯವರಿಗೆ ಬುದ್ದಿಹೆಳುತ.

 

ಗುರಿಇಲ್ಲದ ಪಯಣ

ಗುರುಇಲ್ಲದ ಪಯಣ

ಅವಕಾಶವನ್ನುಪಯೊಗಿಸದ ಪಯಣ

ಕೊನೆಗೊಂದು ದಿನ ಮರಣ,

ಈಡೇರದ ಕನಸುಗಳ ಹೊತ್ತು

ಬಹುದೂರ ಸಾಗಿ ಬಂದಿಹೆವು

ದೊಡ್ಡವರಾಗುತ

ದಡ್ಡರಾಗುತ

ಹಿಂತಿರುಗಿ ನೋಡದೆ

ಮಾಡಿದ ತಪ್ಪುಗಳ

ಮತ್ತೆ ಮತ್ತೆ ಮಾಡುತ.

Comments