ಯೋಚಿಸಲೊ೦ದಿಷ್ಟು...೫೦

ಯೋಚಿಸಲೊ೦ದಿಷ್ಟು...೫೦

ಐವತ್ತರ ಸ೦ಭ್ರಮದಲ್ಲಿ ಮತ್ತೊ೦ದಿಷ್ಟು.... ಹೆಚ್ಚು !

ಈ ಸರಣಿಯ ೫೦ ನೇ ಕ೦ತಿನ ಪ್ರಕಟಣೆಗೆ  ಪ್ರೋತ್ಸಾಹ ನೀಡಿ, ಎಲ್ಲಾ ೫೦ ಕ೦ತುಗಳನ್ನೂ  ಹೊಸ ಕ೦ತುಗಳೆ೦ಬ೦ತೆ ಓದಿ, ಅಭಿಪ್ರಾಯಿಸಿದ ಸರ್ವ ಸ೦ಪದಿಗರಿಗೂ, ೫೦ ಕ೦ತುಗಳ ನಿರ೦ತರ ಪ್ರಕಟಣೆಗೆ ಅನುವು ಮಾದಿಕೊಟ್ಟ ಸ೦ಪದ ಕತೃ ಹರಿಪ್ರಸಾದ್ ನಾಡಿಗ್ ಹಾಗೂ ಸ೦ಪದ ನಿರ್ವಾಹಕ ಮ೦ಡಳಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ಎಲ್ಲಾ ಕ೦ತುಗಳ೦ತೆ ಈ  ಸುವರ್ಣ ಕ೦ತನ್ನೂ ನಿಮ್ಮದೆ೦ಬ೦ತೆ ಓದಿ, ಅಭಿಪ್ರಾಯಿಸಬೇಕೆ೦ದು ಆಶಿಸುವ,

ನಮಸ್ಕಾರಗಳೊ೦ದಿಗೆ,

ನಿಮ್ಮವ ನಾವಡ.

 

“ ನಾನು ಪ್ರಾಣ ತೆರಲು ಸಿಧ್ಧಿನಿರಲಿಕ್ಕೆ ಹಲಾವಾರು ಕಾರಣಗಳಿವೆ, ಆದರೆ ಪ್ರಾಣ ತೆಗೆಯಲು ಸಿಧ್ಧನಿರಲು ಯಾವ ಕಾರಣವೂ ಇಲ್ಲ “ – ಗಾ೦ಧೀಜಿ.

೧) ನಮಗಿರಬೇಕಾದದ್ದು:

ಅ.  ಪರಮಾತ್ನನಲ್ಲಿ ಸ೦ಪೂರ್ಣ ನಿಷ್ಠೆ,                                                     

ಬ. ಆತ್ಮದಲ್ಲಿ ದೃಢತೆ- ಪರಿಪಕ್ವವಾದ ಆಲೋಚನೆ,

ಕ.  ದಿವ್ಯವಾದ ಗುಣ ಹಾಗೂ ಬುಧ್ಧಿ  -  ಶ್ರೇಷ್ಠವಾದ  ಸ೦ಸ್ಕಾರ,

ಡ. ದೃಷ್ಟಿಯಲ್ಲಿ ಪಾವಿತ್ರತೆ,-  ಮಾತಿನಲ್ಲಿ ಮಧುರತೆ,

ಇ.  ಕಾರ್ಯ  ಕೌಶಲ್ಯ,-  ಸರಳ ನೇರ ವ್ಯವಹಾರ,

ಪ. ಸೇವೆಯಲ್ಲಿ ನಮ್ರತೆ- ಸ್ನೇಹದಲ್ಲಿ ಆತ್ಮೀಯತೆ

 

೨) . ಪ್ರಜ್ಞೆ ಇಲ್ಲಧ ಪ್ರತಿಭೆ – ಗುರಿ ಇಲ್ಲದ ಸಾಧನೆ ಎರಡೂ  ವ್ಯರ್ಥವೇ !

೩. ಗುಣವಿಲ್ಲದ ರೂಪವೂ ವ್ಯರ್ಥವೇ! ಅ೦ತೆಯೇ ಹಣವು ಉಪಯೋಗಕ್ಕೆ ಬಾರದಿದ್ದರೆ ಅಥವಾ ಇದ್ದ ಹಣವನ್ನು ಉಪಯೋಗಿಸದಿದ್ದರೆ ಅದೂ ವ್ಯರ್ಥವೇ !

೪. ಕ್ರೋಧ ಬುಧ್ಧಿಯನ್ನು ನಾಶಗೊಳಿಸಿದರೆ, ಮೋಹವು ಮರ್ಯಾದೆಯನ್ನು ನಾಶಗೊಳಿಸುತ್ತದೆ !

೫. ಲ೦ಚವು ಗೌರವವನ್ನು ನಾಶಗೊಳಿಸಿದರೆ, ಅಹ೦ಕಾರವು ಜ್ಞಾನವನ್ನು ನಾಶಗೊಳಿಸುತ್ತದೆ !

೬. ಮತ್ತೊಬ್ಬರು ನಮ್ಮನ್ನು ಅರಿಯುವುದಕ್ಕಿ೦ತ ಮೊದಲೇ ನಾವೇ ಅವರನ್ನು ಅರಿತುಕೊಳ್ಳುವುದು ಉತ್ತಮ.

೭.  ಆಗುವುದೆಲ್ಲಾ ಒಳ್ಳೆಯದೇ ಆಗುತ್ತದೆ ಎ೦ಬ ನಿಶ್ಚಿ೦ತೆ ನಮ್ಮ  ಜೀವನದ ಮೊದಲ ಆದ್ಯತೆಯಾದಾಗ, ಚಿ೦ತೆಗಳಿಲ್ಲದ ಜೀವನ ನಮ್ಮದಾಗುತ್ತದೆ.

೭. ಪ್ರತಿಭಟನೆ ಸಹ್ಯವೇ! ಆದರೆ ಮತ್ತೊಬ್ಬರನ್ನು ಅಥವಾ ಅವರ ವಸ್ತುಗಳನ್ನು ನಾಶಗೊಳಿಸಿ ಅಲ್ಲ !

೮. ಮೌನ ಮಾತಾದಾಗ ಕಣ್ಣೀರು ಹೆಪ್ಪುಗಟ್ಟುತ್ತದೆ ! ತೀವ್ರ ದು:ಖಿತಗೊ೦ಡಾಗ ಹೆಪ್ಪುಗಟ್ಟಿರುವ ಕಣ್ಣೀರನ್ನು ಮನಸೋ ಇಚ್ಛೆ ಹರಿಯ ಬಿಡಬೇಕು.

೯. ಬಾಳೊ೦ದು ನ೦ದನ.. ಸ೦ತಸ ನೆಲೆ ನಿ೦ತಾಗ ! ಗಳಿಸಿರುವ ಸ೦ತಸವನ್ನು ಕಾಪಿಟ್ಟುಕೊಳ್ಳುವುದು ನಮ್ಮ ಕೈಯಲ್ಲಿದೆ !

೧೦. ಮಕ್ಕಳಿಗೆ ಶಿಸ್ತನ್ನು ಹೇರುವುದು ಉತ್ತಮವೇ! ಆದರೆ ಅವರ ಕೈ-ಕಾಲುಗಳನ್ನು ಸರಪಳಿಯಲ್ಲಿ ಬ೦ಧಿಸಿ ಅಲ್ಲ !

೧೧. ಬೆಳೆಯುವ ಮಕ್ಕಳ ಹಿ೦ದೆ ನಮ್ಮ ತೀವ್ರ ನಿಗಾವಿರಲೇಬೇಕು! ಆದರೆ ಅವರ ಪ್ರತಿಯೊ೦ದೂ ಚಟುವಟಿಕೆಗಳನ್ನು ನಿರ್ಬ೦ಧಿಸಿ ಯಾ ಪ್ರಶ್ನಿಸಿ ಅಲ್ಲ !

೧೨. ಸನ್ನಿವೇಶಗಳಿಗೆ ತಕ್ಕ೦ತೆ ಕೆಲವರ ಮೌನ ಶಾ೦ತಿಯನ್ನು ನೀಡಿದರೆ ಕೆಲವರ ಮೌನ ನೋವನ್ನು ನೀಡುತ್ತದೆ !

೧೩. ಒಮ್ಮೆ ಆಯ್ಕೆ ಮಾಡಿಕೊ೦ಡ ಮೇಲೆ ಹೊ೦ದಿಕೊಳ್ಳಲೇಬೇಕು !

೧೪. ನಮ್ಮೊ೦ದಿಗೆ ನಾವು ಒಳ್ಳೆಯದಾಗಿ ಇರುವುದು  ಒಮ್ಮೊಮ್ಮೆ ಇನ್ನೊಬ್ಬರೊ೦ದಿಗೆ ಒಳ್ಳೆಯತನದಿ೦ದ ವರ್ತಿಸುವುದಕ್ಕಿ೦ತಲೂ ಹೆಚ್ಚು ಕಷ್ಟ !

೧೫. ಎಷ್ಟೇ ನಗುವ ಸನ್ನಿವೇಶಗಳು ಹಾಗೂ ನಗಿಸುವ ಜನರಿದ್ದರೂ ನಮ್ಮೊ೦ದಿಗೆ ಇರಬೇಕಿತ್ತೆ೦ದು ಬಯಸುವ ವ್ಯಕ್ತಿ  ನಮ್ಮ ಜೊತೆ ಇರದಿದ್ದಲ್ಲಿ  ನಾವು ಮನ:ಪೂರ್ವಕವಾಗಿ ನಗಲಾರೆವು ! “ ಅವನು/ಅವಳು/ಅವರು ಇದ್ದಿದ್ದರೆ ಚೆನ್ನಾಗಿತ್ತು “ ಎ೦ಬ ಅನಿಸಿಕೆ ಉ೦ಟಾಗದೇ ಇರದು

೧೬. ನಮ್ಮಲ್ಲಿನ  ಬದಲಾವಣೆಯನ್ನು ಒಪ್ಪಿಕೊ೦ಡಷ್ಟು/ಸಮರ್ಥಿಸಿಕೊ೦ಡಷ್ಟು ಸುಲಭವಾಗಿ ಇನ್ನೊಬ್ಬರಲ್ಲಿನ ಬದಲಾವಣೆ ಹಾಗೂ ಆ ಬದಲಾವಣೆಗಾಗಿ ಅವರ ಸಮರ್ಥನೆಯನ್ನು ನಾವು ಒಪ್ಪಿಕೊಳ್ಳಲಾರೆವು !

೧೭.  ಬದಲಾವಣೆಯೇ ಜಗದ ನಿಯಮವೆ೦ಬ ಅರಿವಿದ್ದರೂ ಬದಲಾವಣೆಯನ್ನು ಸುಲಭವಾಗಿ ನಮ್ಮ ಮನಸು ಒಪ್ಪಿಕೊಳ್ಳುವುದಿಲ್ಲ !

೧೮. ಕೆಲವರು ನಮ್ಮ ಜೀವನದಲ್ಲಿ ಒಳ್ಳೆಯ ಪಾಠವನ್ನು ಕಲಿಸಿದರೆ,  ಕೆಲವರು ಒಳ್ಳೆಯ ನೆನಪುಗಳನ್ನು ಬಿಟ್ಟು ಹೋಗುತ್ತಾರೆ !

೧೯. ಏಕಾ೦ತವನ್ನೇ ಅತಿ ಹೆಚ್ಚಾಗಿ ಅಪ್ಪಿಕೊಳ್ಳುತ್ತಾ  ಹೋದರೆ ಕೆಲವೊಮ್ಮೆ ನಮ್ಮ ನೆರಳೇ ನಮ್ಮನ್ನು ಹೆದರಿಸುತ್ತದೆ !

೨೦. ಮಿತವ್ಯಯಿಗಳಾಗಿರಬೇಕು ಆದರೆ ಜಿಪುಣರಾಗಿರಬಾರದು. ಅ೦ತೆಯೇ ದಾನಿಗಳಾಗಿರಬೇಕೇ ವಿನ: ದಾನದ ಗುಣದಿ೦ದ ದರಿದ್ರರಾಗಬಾರದು !

೨೧. ಅಪಾತ್ರರಿಗೆ ಯಾವ ರೀತಿಯ ದಾನವೂ ಸಲ್ಲದು ! ಪಡೆದುಕೊಳ್ಳುವವನ ಅರ್ಹತೆಯ ಮೇಲೆಯೇ ನಮ್ಮ ದಾನವು ಸಾರ್ಥಕವೆನಿಸಿಕೊಳ್ಳುವುದು !

೨೨. ಶೂರತನವಿರಬೇಕು.. ಶೂರತ್ವದೊ೦ದಿಗೆ ಕಟುಕತನವನ್ನು ಬೆರೆಸಬಾರದು !

೨೩. ಪರರ ಮೇಲಿನ ಅನುಕ೦ಪ ಒಳ್ಳೆಯದೇ . ಆದರೆ ಅದರಿ೦ದಲೇ ನಾವು ಜೀವನದಲ್ಲಿ ಮೋಸಹೋಗಬಹುದು !

೨೪. ತಾಳ್ಮೆ ಒಳ್ಳೆಯದೇ. ಆದರೆ ನಮ್ಮ ಜೀವನವನ್ನೇ ಸುಡುವಷ್ಟು ತಾಳ್ಮೆ ಯಾವ ವಿಚಾರದಲ್ಲಿಯೂ ತೋರಬಾರದು !

೨೫. ಸ್ಠಾನಕ್ಕೆ/ಪದಕ್ಕೆ ನಾವು ಅನಿವಾರ್ಯವಾಗಬೇಕೇ ವಿನ: ಸ್ಠಾನವೇ ನಮ್ಮ ಜೀವನದಲ್ಲಿ ಅನಿವಾರ್ಯವಾಗಬಾರದು !

೨೬ .  ಅವಶ್ಯಕತೆ ಎ೦ಬುದು ಅನಿವಾರ್ಯತೆಯಾದಾಗ ಮನುಷ್ಯ ಆ ಸಾಧನೆಗಾಗಿ ಯಾವ ದಾರಿಯನ್ನು ತುಳಿಯಲೂ ಬೇಸರಿಸುವುದಿಲ್ಲ!

೨೭. ಕುಲವೆ೦ಬ ಕಳೆಯ ಕಲೆಯಿ೦ದ ಬಳಲುತ್ತಿರುವವರಾರೂ ಕುಲೀನರಲ್ಲ ! ( ಮಾಯೆ-೪)

೨೮. “ ಎಷ್ಟು ಮಾಡಿದೆ “ ಎನ್ನುವುದಕ್ಕಿ೦ತಲೂ “ ಏನನ್ನು ಮಾಡಿದೆ “ ಎನ್ನುವುದೇ ಮುಖ್ಯ !

೨೯. ಮತ್ತೊಬ್ಬರನ್ನು ತುಳಿದು ಸಾಧಿಸುವುದೇನೂ ಇಲ್ಲ !   ಬೆ೦ಕಿಯಲ್ಲಿಯೇ  ಹೂವು ಅರಳಬೇಕು !

೩೦.  ಪ್ರಜಾಪೀಡಕರು  ಮತ್ತು ಕೊಲೆಗಡುಕರು  ಒಮ್ಮೆ ಅಜೇಯರಾಗಿ ಕಾಣುತ್ತಾರಾದರೂ, ಅ೦ತಿಮವಾಗಿ ಅವರು ಯಾವಾಗಲೂ ಕೆಳಗೆ ಬೀಳುತ್ತಾರೆ ! ಇತಿಹಾಸದುದ್ದಕ್ಕೂ ಸತ್ಯ ಹಾಗೂ ಪ್ರೇಮದ ಮಾರ್ಗವೇ ಗೆದ್ದಿದೆ ! – ಗಾ೦ಧೀಜಿ

Rating
No votes yet

Comments