ಬಾಬ್ರಿ ಮಸೀದಿ, ಇತಿಹಾಸ ಹಾಗೂ ರಾಷ್ಟ್ರೀಯ ಭಾವೈಕ್ಯತೆ
ಜನಮನಗಳ ನೆನಪಿನಾಳದಲ್ಲಿ ಹುದುಗಿಹೋಗಿದ್ದ ಬಾಬ್ರಿ - ರಾಮ ಜನ್ಮಭೂಮಿ ವಿವಾದ ಮರುಕಳಿಸಿ ಬಂದು ನಮ್ಮ ಮುಂದೆ ನಿಂತಿದೆ. ಈ ತೀರ್ಪನ್ನು ಒಪ್ಪದಿದ್ದರೆ, ಅಂತಿಮ ತೀರ್ಪಿಗೆ ಇನ್ನೊಂದೇ ಮೆಟ್ಟಿಲು!
ಈ ನಡುವೆ ಒಂದು ತಲೆಮಾರು ಸಂದಿದೆ. ಇಂದಿನ ಪೀಳಿಗೆಗೆ ಈ ವಿಷಯದಲ್ಲಿ ಅಷ್ಟೇನೂ ಆಸಕ್ತಿಯಿಲ್ಲದಿರಬಹುದು. ಇರಲೂ ಬೇಕಾಗಿಲ್ಲ ಎಂಬುದು ನನ್ನ ಅನಿಸಿಕೆ. ಎರಡು ದಶಕಗಳ ಹಿಂದೆ ದೇಶದಲ್ಲಿ ತಾಂಡವವಾಡುತ್ತಿದ್ದ ನಿರುದ್ಯೋಗ, ವಸತಿ, ಶಿಕ್ಷಣ ಮೊದಲಾದ ಸಮಸ್ಯೆಗಳು ಇಂದು ತಕ್ಕಮಟ್ಟಿಗೆ ಇಳಿಮುಖವಾಗಿವೆ (ಕನಿಷ್ಟ ಪಟ್ಟಣಗಳಲ್ಲಿ). ಮಾಹಿತಿ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಹಾಗಾಗಿ ಇಂದಿನ ಯುವಜನತೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಅವಕಾಶಗಳು ಹೆಚ್ಚಾಗಿರುವುದರಿಂದ ಕೆಲವು ಭಾವನಾತ್ಮಕ ವಿಷಯಗಳಿಗೆ "ಅಗತ್ಯ"ಕ್ಕಿಂತಲೂ ಹೆಚ್ಚು ಸ್ಪಂದಿಸಲು ಸಮಯವಿಲ್ಲ. ಇದರಲ್ಲಿ ನನಗೆ ತಪ್ಪೇನೂ ಕಂಡುಬರುವುದಿಲ್ಲ. ಈದನ್ನು ಅವರು ಮುಕ್ತವಾಗಿ ಹೇಳಿಕೊಂಡರೆ ಅವರಿಗೆ ಜೀವನದಲ್ಲಿ ಅನುಭವ ಸಾಲದೆಂದೋ ಅಥವಾ ಇತಿಹಾಸವನ್ನು ಕಡ್ಡಾಯವಾಗಿ ಓದಬೇಕೆಂದೋ ಉಪದೇಶಗಳು ಢಾಳಾಗಿ ಸಿಗುತ್ತವೆ!
ಇತಿಹಾಸವನ್ನು ಓದಿದರೆ ರಾಷ್ಟ್ರೀಯ ಭಾವೈಕ್ಯತೆ ಮೂಡಿಬರುವುದಿಲ್ಲ! ಒಳ್ಳೆಯ ಭಾವುಕ / ಉದೇಕಕಾರಿ ಭಾಷಣ ಮಾಡಬಹುದಷ್ಟೆ!! ಏಕೆಂದರೆ ಇತಿಹಾಸ ಎಂದಿಗೂ ವಸ್ತುನಿಷ್ಠವಾಗಿರುವುದಿಲ್ಲ. ಇತಿಹಾಸದ "ಇತಿಹಾಸ"ವನ್ನು ಸ್ವಲ್ಪ ಗಮನಿಸಿದರೆ ಅದು ಎಂದಿಗೂ ಗೆದ್ದವರ ಹೊಗಳಿಕೆಗೋ ಅಥವಾ ಇತಿಹಾಸ ರಚನಕಾರರ ಆಯಾ ಕಾಲಘಟ್ಟದ ಆಳರಸರ ಬಗೆಗಿನ ಓಲೈಕೆಗೋ / ನಿಷ್ಠೆಗೋ ಬದ್ಧವಾಗಿರುತ್ತದೆ. ಉದಾಹರಣೆಗೆ ನಮ್ಮ ದೇಶದ ಮೊದಲ ಐದು ದಶಕಗಳಲ್ಲಿ ಸಾವರ್ಕರರು ಪ್ರತಿಯೊಂದು ಹಂತದಲ್ಲೂ ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ಜೈಲಿನಿಂದ ಹೊರಬಂದ ವ್ಯಕ್ತಿಯೆಂದು ಚಿತ್ರಿತವಾಗಿದ್ದು "ಅಧಿಕೃತ" ಇತಿಹಾಸವಾದರೆ, ಬಿಜೆಪಿಯ ಆಳ್ವಿಕೆಯಲ್ಲಿ ಸಾವರ್ಕರರು ಮಹಾನ್ ದೇಶಭಕ್ತರೆಂದು ಹೇಳಿ ಪಾರ್ಲಿಮೆಂಟ್ ನಲ್ಲಿ ಅವರ ತೈಲಚಿತ್ರ ಅನಾವರಣವೂ ಆಯಿತು. ಆ ಅವಧಿಯಲ್ಲಿ ದೇಶದ ಇತಿಹಾಸವನ್ನು ಮತ್ತೆ ರಚಿಸುವ, ಪಠ್ಯಪುಸ್ತಕಗಳನ್ನು ತಿದ್ದುವಪ್ರಯತ್ನಗಳೂ ನಡೆದವು. ಅಷ್ಟರಲ್ಲಿ ಬಿಜೆಪಿ ಆಳ್ವಿಕೆ ಕೊನೆಗೊಂಡು ಮತ್ತೆ ಕಾಂಗ್ರೆಸ್ ರಾಜ್ಯಭಾರ ಶುರುವಾದದ್ದರಿಂದ ಇತಿಹಾಸದ "ಇತಿಹಾಸ" ಪುನರಾವರ್ತನೆಯಾಯಿತು!ಈ ಮೇಲೆ ಹೇಳಿದ ಉದಾಹರಣೆಯಲ್ಲಿ ಸಾವರ್ಕರರ ದೇಶಭಕ್ತಿಯ ಪ್ರಶ್ನೆಗಿಂತ ಇತಿಹಾಸವನ್ನು ರಚಿಸಿದವರ ನಿಷ್ಠೆಯೇ ವಸ್ತುನಿಷ್ಠತೆಯನ್ನು ನುಂಗಿಹಾಕುತ್ತದೆ.
"ಪೂರ್ವಾಗ್ರಹವಿಲ್ಲದ ವಸ್ತುನಿಷ್ಠ" ಮಾಹಿತಿ ಇರಬೇಕು. ಅದರಿಂದ ಮುಂದಿನ ಪೀಳಿಗೆ ಹಿಂದಿನ ತಲೆಮಾರುಗಳ ತಪ್ಪು ಒಪ್ಪುಗಳನ್ನು ಭಾವನಾತೀತರಾಗಿ ವಿಶ್ಲೇಷಿಸುವ ಯುವಜನಾಂಗವಾಗಿ ರೂಪುಗೊಳ್ಳಬಹುದು.
ಇಂತಹ ಏಕತಾ ಭಾವನೆ ನಮಗೆ ಮತ್ತು ಮುಂದಿನ ಪೀಳಿಗೆಗಳಿಗೆ ಅತಿ ಅವಶ್ಯಕವೇ ಹೊರತು ಇತಿಹಾಸದ ಅಧ್ಯಯನವಲ್ಲ ಎಂಬುದು ನನ್ನ ಅನಿಸಿಕೆ.
- ಕೇಶವ ಮೈಸೂರು
2) ಭಾರತದ ಪ್ರತಿಯೊಬ್ಬ ನಾಗರಿಕನಿಗೂ ಭಾರತೀಯ ರಕ್ಷಣಾ ಪಡೆಗಳಲ್ಲಿ ೨-೩ ವರ್ಷಗಳ ಸೇವೆ ಕಡ್ಡಾಯಗೊಳಿಸಬೇಕು. ಈ ಸಲಹೆ ಹೊಸತೇನೂ ಅಲ್ಲ. ಆದರೆ ಇದು ಸಾಧ್ಯವೇ ಅಥವಾ ಸರಿಯೇ ಎಂಬುದು ತಿಳಿದವರು ಹೇಳಬೇಕು. ಏಕೆಂದರೆ ನನ್ನ ಅನುಭವದಲ್ಲಿ, ರಕ್ಷಣಾಪಡೆಯ ಸಿಬ್ಬಂದಿಗಳ ಒಡನಾಟದಲ್ಲಿ (ಅಂಟಾರ್ಕ್ಟಿಕಾದಲ್ಲಿ) ಕಂಡುಬಂದ ಮುಖ್ಯವಾದ ಅಂಶವೆಂದರೆ ಅವರಲ್ಲಿ ಪ್ರಾಂತೀಯ, ಮತೀಯ ಒಡಕು ಇಲ್ಲದಿರುವುದು ಮತ್ತು ಭಾರತವೆಂದರೆ "ಒಂದು" ಎಂಬ ಏಕತಾ ಭಾವನೆ ಎದ್ದು ಕಾಣುವುದು. ಈ ವಿಷಯದಲ್ಲಿ ಭಾರತೀಯ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸಂಪದಿಗರ ಅಭಿಪ್ರಾಯ ತಿಳಿದರೆ ಒಳ್ಳೆಯದಲ್ಲವೆ?
ಭ್ರಿಟಿಷರ "ಇತಿಹಾಸ"ದಲ್ಲಿ ಭಗತ್ ಸಿಂಗ್, ಬಾಬ್ಬಿ ಸ್ಯಾಂಡ್ಸ್, ನೆಲ್ಸನ್ ಮಾಂಡೇಲಾ ಟೆರರಿಸ್ಟ್ ಗಳಾದರೆ, ಕ್ರಮವಾಗಿ ಭಾರತೀಯರಿಗೆ, ಐರಿಷ್ ಜನರಿಗೆ ಮತ್ತು ದಕ್ಷಿಣ ಆಫ್ರಿಕದ ಕಪ್ಪು ಜನರಿಗೆ ಅವರು ಸ್ವಾತಂತ್ರ ಹೋರಾಟಗಾರರು. ಇನ್ನೊಂದು ತುದಿಯಲ್ಲಿ ನಾಥೂರಾಮನ ಬಾಯಲ್ಲಿ ಭಗತ್ ಸಿಂಗನ ಹೆಸರು ಹೇಳಿಸಿ ಅವನ ಬಗೆಗೆ ನಮ್ಮಲ್ಲಿ ಪಾಪ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನಗಳೂ ನಡೆಯುತ್ತವೆ! ಈಗ ಹೇಳಿ, ಇಂತಹ ಇತಿಹಾಸವನ್ನು ಓದುವುದರಿಂದ ಒಂದು ಪೀಳಿಗೆ ಎಂತಹ ನಿಲುವನ್ನು ತಳೆದರೂ ಅದು ಒಮ್ಮುಖವಾಗಿರುತ್ತದೆ ಅಲ್ಲವೆ?
ಎಲ್ಲ ದೃಷ್ಟಿಕೋನಗಳನ್ನೂ ಆಳವಾಗಿ ಓದಿ ತಿಳಿದುಕೊಂಡು ವಸ್ತುನಿಷ್ಠವಾದ ಅಭಿಪ್ರಾಯವನ್ನು ಬೆಳೆಸಿಕೊಳ್ಳುವುದು ಎಲ್ಲರಿಂದಲೂ ಸಾಧ್ಯವಾಗದಿರುವುದರಿಂದ, ತಾವು ತಿಳಿದದ್ದೇ ನಿಖರವಾದ ಇತಿಹಾಸವೆಂದು ವಾದಿಸುವ ಅರ್ಧಬೆಂದ ಮಡಿಕೆಗಳು ಎಲ್ಲೆಲ್ಲೂ ಕಾಣುತ್ತವೆ. (ಹಾಗೆಂದು ನಾನು ಪೂರ್ಣ ಬೆಂದ ಮಡಿಕೆಯೆಂದು ಹೇಳುತ್ತಿಲ್ಲ - ನಾನು ತಿಳಿದಿರುವುದಕ್ಕಿಂತ ತಿಳಿಯದೇ ಇರುವ ವಿಷಯಗಳೇ ಹೆಚ್ಚು!).
ಇದಕ್ಕೆ ಪರಿಹಾರವೇನಾದರೂ ಇದೆಯೆ? ನಮಗೆ ಮನಸ್ಸಿದ್ದಲ್ಲಿ, ಖಂಡಿತವಾಗಿಯೂ ಪರಿಹಾರವಿದೆ.
- 1) ನಾವು ನಮ್ಮ ಮಕ್ಕಳನ್ನು ಬೆಳೆಸಬೇಕಾದರೆ ಅವರಲ್ಲಿ ರಾಷ್ಟ್ರೀಯತೆಯ ಭಾವವನ್ನು ಮೂಡಿಸಲು ಏನು ಮಾಡಿದ್ದೇವೆ? ಶಿಕ್ಷಣ ಪದ್ಧತಿಯಂತೂ ಅದರಲ್ಲಿ ವಿಫಲವಾಗಿದೆ. ಅದು ಹೆಚ್ಚಾಗಿ ಪ್ರಾಂತೀಯ ಮನೋಭಾವನೆಗೆ ಕಾರಣವಾಗುತ್ತದೆ. ನಮ್ಮ ಸಮಾಜಶಾಸ್ತ್ರದ ಪಠ್ಯಗಳಲ್ಲಿ ಎಳೆಯ ಮನಸ್ಸುಗಳಿಗೆ "ಸಮಗ್ರ ಭಾರತ"ದ "ಸಮತೋಲಿತ" "ವಸ್ತುನಿಷ್ಠ" ಮಾಹಿತಿ (ಕರ್ನಾಟಕ ಹೆಚ್ಚಲ್ಲ, ಝಾರ್ಖಂಡ ಕಡಿಮೆಯಲ್ಲ ಎಂಬಂತೆ) ಸಿಗುತ್ತದೆಯೆ? ಆ ಮಟ್ಟದ ಶಾಲಾ ಶಿಕ್ಷಣದಲ್ಲಿ "ಇತಿಹಾಸ" ಇರಕೂಡದು.
Comments
ಉ: ಬಾಬ್ರಿ ಮಸೀದಿ, ಇತಿಹಾಸ ಹಾಗೂ ರಾಷ್ಟ್ರೀಯ ಭಾವೈಕ್ಯತೆ