ರಕ್ತದಾನ- ಒಂದು ಹಾಸ್ಯ ಪ್ರಸಂಗ

ರಕ್ತದಾನ- ಒಂದು ಹಾಸ್ಯ ಪ್ರಸಂಗ

 ಇದು ನಮ್ಮ ಕಾಲೇಜಿನಲ್ಲಿ ನೆಡೆದ ಘಟನೆ-     

ಕಾಲೇಜಿನಲ್ಲಿ ರಕ್ತದಾನ ಶಿಬಿರ ನೆಡಿಯುತ್ತಿತು. ಶಿಬಿರದಲ್ಲಿ ಪಾಲ್ಗೊಂಡವರಿಗೆ ಉಚಿತ ಹಾಜರಾತಿ ಎಂಬ ವಿಷಯ ನಮ್ಮನ್ನು ರಕ್ತದಾನ ಮಾಡಲು ಪ್ರೇರೆಪಿಸಿತು. ನನ್ನ ಸ್ನೇಹಿತ ಮೊದಲು ರಕ್ತ ಕೊಡುತ್ತಿದ್ದ, ಪಕ್ಕದಲ್ಲಿದ ಹುಡುಗಿ ರಕ್ತ  ನೀಡಿದ ನಂತರ ತೆಲೆತಿರುಗಿ ಬಿದ್ದಳು ಆಗ ಎಲ್ಲರೂ ಅವಳನ್ನು ಸುತ್ತುವರಿದರು. ಇದನ್ನು ನೋಡಿದ ನನ್ನ ಸ್ನೇಹಿತಹೆದರುತ್ತಾ ನನಗೆ -ಲೋ ಮಗ ಏನಾಯಿತು ಅವಳಿಗೆ ಅಂದ. ನಾನು ಸಮಾಧಾನದಿಂದ - ಏನು ಇಲ್ಲ ಗುರು ಭೂಮಿನೆ ತಿರುಗುತ್ತಿದೆ ಅದರೂ ಆ ಹುಡುಗಿ ತೆಲೆ ತಿರುಗಿದ್ದೆ ಡೊಡ್ಡ ವಿಷಯ ಮಾಡುತ್ತಾ ಇದ್ದಾರೆ, ನೀನು ಹೆದರಬೇಡ. ನನ್ನ ಉತ್ತರ ಹೆದರಿದವನ ಮೇಲೆ ಹಾವು ಎಸೆದಂತಾಯಿತು ಅವನು ಗಾಭರಿಯಿಂದ ನಂಗು ತೆಲೆ ತಿರುಗಿದರೆ ಏನು ಮಾಡೋದು ಅಂದ.  ನಿನಗೆ ತೆಲೆ ತಿರುಗಿದಾಗ ನನಗೆ ಹೇಳು ನಾನು ತಕ್ಷಣ ಕೆಳಗಿರುವ ರಕ್ತದ ಬಾಟಲ್  ಮೇಲಕ್ಕೆ ಎತ್ತುವೆ ಆಗ ಬಾಟಲ್ ನಲ್ಲಿರುವ ರಕ್ತ ವಾಪಸ್ಸ್ ಹೋಗುತ್ತೆ ನಿನಿಗೆ ತೆಲೆ ತಿರುಗೋದು ನಿಲ್ಲುತ್ತೆ ಅಂದಾಗ ಅಲ್ಲಿದವರೊಂದಿಗೆ ಗಾಭರಿಗೂಂಡಿದ್ದ ನನ್ನ ಸ್ನೇಹಿತನ ಮುಖದಲ್ಲೂ ನಗು ಮೂಡಿತ್ತು. 

Rating
No votes yet

Comments