ಅರಸನ ಮೆರವಣಿಗೆ.....

ಅರಸನ ಮೆರವಣಿಗೆ.....

 ಹತ್ತೂರ ಸರದಾರ ಪತ್ತು ಪೀತಾಂಬರ

  
ತೊಟ್ಟು   ಗತ್ತಾಗಿ  ಕುದುರೆ ಹತ್ತಿ ..

.
ಬಾಣ ಬಿರುಸಿನ ಜೊತೆಯಾಗಿ


ಗೆಲುವಿನ ನಗೆ ಬೀರುತ್ತಾ  ಹೊರಟಿರಲು......

.
ದಾರಿಯಲಿ ಸುತ್ತೂರ ಜನ ನೆರೆದಿದ್ರು


ನೋಡಾಲು ಅರಸನ ಮೆರವಣಿಗೆ...


ಕಹಳೆಕೊಂಬು, ಬಾಜಭಜಂತ್ರಿ ಜೊತೆ


ಬಹುಪರಾಕ್ ಹೇಳುತ್ತಾ ನಡೆದಿದ್ರು


ಬಾಲ ಬಡುಕರು ಜೊತೆಯಾಗಿ ......


ಇಂತಿಪ್ಪ ದೊಂಬರಾಟ ಚಿತ್ತೈಸಿರಲು ,


ಅರಸನ ವೈಭೋಗ 


ಕಂಡ  ದೈವ  ನಾಚಿತ್ತು...


ನಲುಗಿತ್ತು ಜನಹಿತ ಅರಸೊತ್ತಿಗೆಯ ಹಿಡಿತದಲ್ಲಿ .....


ಕಮಲಬೆಲಗೂರ್.

 

Rating
No votes yet

Comments