ಹುಡುಕಾಟ-(ಮದುವೆ ಯಾವಾಗ -೨)
ಕೆಲಸ ಸಿಕ್ತು, ಮನೆ ಕಾರು ಬೈಕು ಎಲ್ಲ ಆಯಿತು ಇನ್ನು ಮುಂದೇನು? ತಮಗೊಂದು ಬಾಳಸಂಗಾತಿ ನೋಡಕ್ಕೆ ತಯಾರಾಗಿರೋ ಹುಡುಗರ ಪಾಡನ್ನು ಇಲ್ಲಿ ಬರೆದಿದ್ದೇನೆ. ಜೊತೆಗೆ ಸ್ವಲ್ಪ ಮಸಾಲೆ ಖಾರ.......
ಹುಡುಗಿ ಕೆಲಸದಲ್ಲಿರಬೇಕೆ ಅಥವಾ ಮನೆಯಾಕೆಯಾಗಿ ಮಾತ್ರ ಇರಬೇಕೆ ಅನ್ನೋದು ಒ೦ದು ದೊಡ್ಡ ಯಕ್ಷ ಪ್ರಶ್ನೆ . ಒಬ್ಬರು ಕೆಲಸದಲ್ಲಿರಬೇಕು ಅ೦ದ್ರೆ ಇನ್ನೊಬ್ಬರು ಮನೆಯಲ್ಲಿ ಗ್ರಹಿಣಿಯಾಗಿದ್ದರೆ ಸಾಕು ಅ೦ತಾರೆ. ದುಡಿಯುವವಳು ಮನೆಯಲ್ಲಿದ್ದರೆ ಬ್ಯಾಂಕ್ ಅಕೌಂಟ್ ಮೇಲೆ ಲಕ್ಷ್ಮಿಯ ಅನುಗ್ರಹ ಇರುತ್ತೆ, ಆಕೆ ಮಾಡೋ ಶಾಪಿ೦ಗ್ ಗೆ ತಲೆ ಕೆಡಿಸಿಕೊಳ್ಳೋ ಅಗತ್ಯ ಇರಲ್ಲ. ಈ ಶಾಪಿಂಗ್ ಅನ್ನೋ ಪೀಡೆಯನ್ನು ಯಾರು ಹುಟ್ಟು ಹಾಕಿದರೋ? ನಮಗೆ ಅತಿ ಅಗತ್ಯವಾದ ವಸ್ತುಗಳನ್ನು ಬಿಟ್ಟು ಬೇರೆ ಎಲ್ಲ ವಸ್ತುಗಳು ತುಂಬಿರೋ ಜಾಗಕ್ಕೆ ಶಾಪಿಂಗ್ ಮಾಲ್ ಅನ್ನಬಹುದೋ ಏನೋ. ಆದರು window ಶಾಪಿಂಗ್ ಮಾಡಿ ಅಲ್ಲಿ ಇಲ್ಲಿ ಕಾಣಿಸುವ ಚೆಲುವೆಯರನ್ನು ನೋಡಿ ಮನಸ್ಸು ಹಗುರ ಮಾಡಿಕೊಳ್ಳಕ್ಕೆ ಸರಿಯಾದ ಜಾಗ ಅಂದ್ರು ತಪ್ಪಿಲ್ಲ ಅನ್ನಿಸತ್ತೆ. ಅಪರೂಪಕ್ಕೆ ಈ ಶಾಪಿಂಗ್ ಮಾಲ್ ಅನ್ನೋ ಮಾಯಾನಗರಿಗೆ ಬೇಟಿ ಕೊಟ್ಟಾಗ ಅಲ್ಲಿ ಹತ್ತಾರು ಕವರ್ ಹಿಡಿದುಕೊಂಡು ಹೆಂಡತಿಯ ಹಿಂದೆ ಕಷ್ಟಪಟ್ಟು ಹೆಜ್ಜೆ ಹಾಕೋ ಗಂಡಸರನ್ನು ನೋಡಿದ್ರೆ ಅಯ್ಯೋ ಪಾಪ ಅನ್ನಿಸುತ್ತೆ. ಅದಕ್ಕೆ ಇರಬೇಕು ಕೆ. ಎಸ್.ನರಸಿಂಹ ಸ್ವಾಮಿಯವರು ಹೇಳಿದ್ದು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನಾನು ಒಬ್ಬ ಸಿಪಾಯಿ ಅ೦ತ. ಹೊರಗೆ ಹೋದ್ರೆ ಏನು ಅನ್ನೋದನ್ನು ಮಾತ್ರ " fill in the blanks" ಆಗಿ ಇಟ್ಟಿದ್ದಾರೆ. ಮನೆಯೊಳಗಿದ್ದರೆ ನೋ ಶಾಪಿಂಗ್ ಅದ್ಕೆ ಸಿಪಾಯಿ. ಹೊರಗಡೆ ಕಾಲಿಟ್ಲು ಅಂದ್ರೆ ಪರ್ಸು ಖಾಲಿ ಮಾಡ್ಕೊಳ್ಳೋ ಬಡಪಾಯಿ ಆಗೋಗ್ತಾನೆ ಅಲ್ವಾ ಗಂಡ. ಆದರೆ ಮನೆಯಾಕೆಯ ಕೈಯಲ್ಲಿ ಕೆಲಸ ಮಾಡಿಸಬಾರದು ಅನ್ನೋ ಒ೦ದು ಮೊ೦ಡು ಛಲ ನ೦ಗೆ. ಆದರೂ ಮನೆಯಾಕೆ ಮನೆಯಲ್ಲೇ ಇದ್ದರೆ ಲೇಟಾಗಿ ಮನಗೆ ಹೋದರೆ ನಿಮಗೆ "ಮನೆ ಯಾಕೆ ..?" ಅ೦ತ ಕೇಳ್ತಾಳೋ ಅ೦ತ ಭಯ.
ಇಷ್ಟೆಲ್ಲಾ ಪ್ರಶ್ನೆಗಳಿಗೆ ಇದುವೇ 100 % ಸರಿ ಅಂತ ನಿರ್ದಾರ ತಗೋಳೋದು ಸದ್ಯಾನೆ ಇಲ್ಲ. ಬೇರೆಯವರ ಅನಿಸಿಕೆ ಕೇಳೋಣ ಅಂದ್ರೆ ಅವರು ದಾರಿ ತೋರಿಸೋದಕ್ಕಿಂತ ಹೆದರಿಸೋದೆ ಜಾಸ್ತಿ. ಎಷ್ಟೋ ಬಾರಿ ನಮಗೆ ಏನು ಬೇಕು ಅನ್ನೋದೇ ನಮಗೆ ಸರಿಯಾಗಿ ತಿಳಿದಿರೋದಿಲ್ಲ. ಸುಮ್ನೆ ಹೋಗೋದು ಕಾಫಿ ಉಪ್ಪಿಟ್ಟು ತಿನ್ನೋದು ತಲೆ ತಗ್ಗಿಸಿ ಬರೋದು ಅಷ್ಟೇ !!!!!!!ಇನ್ನು ಕೆಲವು ಸುಖ ಜೀವಿಗಳಿರುತ್ತಾರೆ. ಇವರಿಗೆ ಹಣೆಯ ಗೆರೆಗಳನ್ನು ಸರಿಯಾಗಿ ಬರಿ ಅ೦ತ ಚಿತ್ರಗುಪ್ತರಿಗೆ ಬ್ರಹ್ಮ ಶಿಫಾರಸು ಮಾಡಿರುತ್ತಾನೆ. ಇವರಿಗೆ ಅದಕ್ಕೆ ಏನೋ ಎ೦ಬ೦ತೆ ಕಣ್ಣು ಮುಚ್ಚಿ ತೆರೆಯೋದರಲ್ಲಿ ಎಲ್ಲ ಮುಗಿದು ಹೋಗಿರುತ್ತೆ. ಇನ್ನು ಕೆಲವರಿಗೆ ಕಣ್ಣು ಮುಚ್ಚೋದರೊಳಗೆ ಒ೦ದು ಮದುವೆ ಆಗಿ ಹೋದ್ರೆ ಸಾಕಪ್ಪ ಅ೦ತ ಅನ್ನಿಸಿಬಿಟ್ಟಿರತ್ತೆ. ಜೀವನದಲ್ಲಿ ಬೈಕು ಕಾರು ಯಾವಾಗ ಬೇಕಾದ್ರೂ ತಗೋಬಹುದು, ಆದ್ರೆ ಈ ಮದುವೆ ಅನ್ನೋದು ಸರಿಯಾದ ಟೈಮ್ ಗೆ ಆಗಿಲ್ಲ ಅ೦ದ್ರೆ ಮಾತ್ರ ಜನರ ಮಾತು ಕೇಳಿ ಕೇಳಿ ಕಿವಿ ಕಿವುಡಾಗುತ್ತೆ. ಒಂದರ್ಥದಲ್ಲಿ ನೋಡಿದ್ರೆ ಈ ಹುಡ್ಗೀರೆ ವಾಸಿ. ಮದುವೆವರೆಗೆ ಅಪ್ಪ ನೋಡ್ಕೋತಾನೆ, ಮದುವೆ ನಂತರ ಗಂಡ ನೋಡ್ಕೋತಾನೆ. ಈ ಗಂಡುಗಲಿ ಅನಿಸಿಕೊ೦ಡಿರೋ ಹುಡುಗರದ್ದೆ ತಲೆನೋವು. ಹುಡುಗ ಅನ್ನೋ ಮದವೇರಿದ ಒಂಟಿಸಲಗಕ್ಕೆ ಹುಡುಗಿ ಅನ್ನೋ ಸರಪಳಿ ಸಿಗೋವರೆಗೂ ಹುಡುಕಾಟ ತಪ್ಪಿದ್ದಲ್ಲ....ರಾತ್ರಿ ನೋಡಿದ ಭಾವಿಗೆ ಹಗಲಲ್ಲಿ ನಾವಾಗಿ ಹೋಗಿ ಬೀಳೋದು ಮಾತ್ರ ವಿಧಿ ಲಿಖಿತ......Virtual ಹೆ೦ಡತಿ ಮತ್ತು to be born kids ಗಳಿಗೋಸ್ಕರ ನಮ್ಮತನ ವನ್ನು ಬಿಟ್ಟುಕೊಡಲು ತಯಾರಗಿರೋದು ತಮಾಷೆ ಅನಿಸಿದರು ನೂರಕ್ಕೆ ನೂರರಷ್ಟು ಸತ್ಯ....
--------------------------ಶ್ರೀ :-) :-)---------
Comments
ಉ: ಹುಡುಕಾಟ-(ಮದುವೆ ಯಾವಾಗ -೨)
In reply to ಉ: ಹುಡುಕಾಟ-(ಮದುವೆ ಯಾವಾಗ -೨) by gopaljsr
ಉ: ಹುಡುಕಾಟ-(ಮದುವೆ ಯಾವಾಗ -೨)
ಉ: ಹುಡುಕಾಟ-(ಮದುವೆ ಯಾವಾಗ -೨)
In reply to ಉ: ಹುಡುಕಾಟ-(ಮದುವೆ ಯಾವಾಗ -೨) by Chikku123
ಉ: ಹುಡುಕಾಟ-(ಮದುವೆ ಯಾವಾಗ -೨)
ಉ: ಹುಡುಕಾಟ-(ಮದುವೆ ಯಾವಾಗ -೨): 'ಮೂಟೆ' ಹೊರೊ ಬಡಪಾಯಿ....!!
In reply to ಉ: ಹುಡುಕಾಟ-(ಮದುವೆ ಯಾವಾಗ -೨): 'ಮೂಟೆ' ಹೊರೊ ಬಡಪಾಯಿ....!! by venkatb83
ಉ: ಹುಡುಕಾಟ-(ಮದುವೆ ಯಾವಾಗ -೨): 'ಮೂಟೆ' ಹೊರೊ ಬಡಪಾಯಿ....!!