ಜಗನ್ಮಾಯೇ....
ಕವನ
ಏನು ತಾಯೇ ನಿನ್ನ ಲೀಲೆ
ಕಾಯೇ ತಾಯೇ ಮಹಾಮಾಯೆ
ಜಗದ ಜನ್ಮಧಾತೆಯೇ......
ನಿನ್ನ ಮಮತೆ ಮಡಿಲು
ಪ್ರೀತಿ ತುಂಬಿದ ಒಡಲು
ಬಡವ ಬಲ್ಲಿದ ತ್ಯಾಗಿ ಭೋಗಿ
ಬೇದವಿಲ್ಲ ನಲಿವರೆಲ್ಲಾ
ಎಣೆಯಿಲ್ಲ ನಿನ್ನ ಪ್ರೀತಿಗೆ ಏನು ತಾಯೇ ನಿನ್ನ ಲೀಲೆ
ಮೊಗೆದಸ್ಟೂ ಬತ್ತದ ಜೀವಸೆಲೆ
ಬಾನೆತ್ತರಕ್ಕೆ ನಿನ್ನ ನೆಲೆ
ಅದಕಿಲ್ಲ ಎಲ್ಲೆ, ಬೆಲೆ ......
ಉರುಳುವುವು ತಲೆಗಳು
ಮುನಿದರೊಮ್ಮೆ ನೀ, ಸಮಾಧಿಯಾಗುವುವು
ಸಾಮ್ರಾಜ್ಯಗಳು......
ಕೊನೆಗೆಲ್ಲಾ ನಿನ್ನ ಮಡಿಲಿಗೆ ಏನು ತಾಯೇ ನಿನ್ನ ಲೀಲೆ
ನಿನ್ನ ಮರೆತ ಮನುಜಗೆ
ನೀಡು ನಿನ್ನ ಹಸಿರ ಉಸಿರು
ತುಸು ಅರಿವು--ಬೆವರಿನ,ನೆತ್ತರ.......... .
ಕಮಲಬೆಲಗೂರ್
Comments
ಉ: ಜಗನ್ಮಾಯೇ....
In reply to ಉ: ಜಗನ್ಮಾಯೇ.... by venkatb83
ಉ: ಜಗನ್ಮಾಯೇ....