ಅವನಿಗರಿವಿಲ್ಲ ಅವನೂರ ದಾರಿ.....

ಅವನಿಗರಿವಿಲ್ಲ ಅವನೂರ ದಾರಿ.....

ಕವನ

 ಅವನೊಬ್ಬ ಅಲೆಮಾರಿ

ನಿತ್ಯ ಸಂಚಾರಿ

ಅವನಿಗಿಲ್ಲ  ಸಹಚಾರಿ

ಅವನಿಗರಿವಿಲ್ಲ ಅವನೂರ ದಾರಿ.....

 

ಅವನಡಿಯಿಟ್ಟಲ್ಲಿ ಬದುಕು

ಭೂಮಿಯೇ ಹಾಸಿಗೆ

ಗಗನವೇ ಹೊದಿಕೆ.

 

ನಿನ್ನೆಗಳ  ಅರಿವಿಲ್ಲ

ನಾಳೆಯಾ  ಚಿಂತೆಯಿಲ್ಲ

ಬದುಕೆಂಬ ಮಾಯೆಯ ಸೆಳೆತವಿಲ್ಲ

 

ಬೇಗೆಯಿಲ್ಲ, ಬೇಗುದಿಯಿಲ್ಲ

ಕುಹಕವಿಲ್ಲ

ಬದುಕಿನೆಡೆಗೆ  ಮರುಕವಿಲ್ಲ

 

ಅತಂತ್ರತೆಯ ಗೊಡವೆಯಿಲ್ಲ

ಬದುಕಿನೆಡೆಗೆ  ಬೆರಗಿಲ್ಲ

ಅವನು ನಡೆದದ್ದೇ ಅವನ ಹಾದಿ ....

 

ಬಾಲ್ಯವಿಲ್ಲ , ಯವ್ವನವಿಲ್ಲ

ಮುಪ್ಪಿನಾ   ಭಯವಿಲ್ಲ .

ಅಹಂಕಾರವಿಲ್ಲ, ಮೌಡ್ಯತೆಯಿಲ್ಲ ,

ಲೋಕದ  ಡೊಂಕ ತಿದ್ದುವ ನೆನೆಗುದಿಯಿಲ್ಲ

ಬೆತ್ತಲೆ  ಬದುಕಿನ ಹರಿಕಾರನು ಅವನು .......      

 

Comments