ತಿಂಬಟ್ ಸ್ವಾಮಿಯ ಉದ್ಗಾರಗಳು
(ತಿಂಬಟು ಸ್ವಾಮಿ = ತಿನ್ನುವುದರಲ್ಲಿ ಎಕ್ಸ್ಪರ್ಟು ಸ್ವಾಮಿ = ಅಂಡಾಂಡಭಂಡ ಸ್ವಾಮಿ)
ಎಡೆಬಿಡದೇ ವರ್ಷಾನುಗಟ್ಟಲೆ "ಡೈನಿಂಗ್ ರೂಮಲ್ಲಿ" ತಿನ್ನುತ್ತಾ ಇದ್ದಾಗ, ಸ್ವಾಮೀಜಿಗೆ ಜ್ಞಾನೋದಯವಾಯಿತು. ಅವರು ಪ್ರವಚನ/ಉಪದೇಶ ಕೊಡುವ ಕ್ರಮವಿಲ್ಲ. ಯಾವಾಗಲೂ ಧ್ಯಾನದ(ತಿನ್ನುವುದರ)ಲ್ಲಿ ಮಗ್ನರಾಗಿರುವುದರಿಂದ, ಎಡೆಎಡೆಯಲ್ಲಿ ಅವರು ಹೇಳಿದ ಮಾತುಗಳನ್ನು ಸಂಗ್ರಹಿಸಿ, ಸರ್ಫ್ನಲ್ಲಿ ತೊಳೆದು, ಒಣಗಿಸಿ, ಇಸ್ತ್ರಿ ಹಾಕಿ ಇಲ್ಲಿ ಕೊಡಲಾಗಿದೆ-
ದೇವರು :
ಮಾನವ ಜೀವನದಲ್ಲಿ ಹೇಗೆ ಬಾಲ್ಯ, ಕೌಮಾರ್ಯ, ಯೌವನ್ಯ, ವೃದ್ಧಾಪ್ಯ ಎಂದು ನಾಲ್ಕು ಹಂತಗಳಿರುವುದೋ (ಯೌವನ್ಯ-ಪ್ರಾಸಕ್ಕಾಗಿ "ಯ" ಅಡಿ ಒತ್ತುಕೊಟ್ಟಿರುವರು), ಹಾಗೇ ದೇವರ ವಿಷಯದಲ್ಲೂ ನಾಲ್ಕು ಹಂತಗಳಿವೆ.
ಮೊದಲನೆಯದು : ಅಣು ರೇಣು ತೃಣ ಕಾಷ್ಠ ಎಲ್ಲದರಲ್ಲೂ ಭಗವಂತನನ್ನು ಕಾಣುವುದು.
ಎರಡನೆಯದು : ಕೆಲ ದೇವರನ್ನು ಅಥವಾ ಏಕದೇವೋಪಾಸನೆ ಮಾಡುವುದು.
ಮೂರನೆಯದು : ಭಗವಂತನನ್ನು "ನಿರಾಕಾರ" ರೂಪದಲ್ಲಿ ಕಾಣುವುದು.
ನಾಲ್ಕನೆಯದು : (ಸರಿಯಾದ ಗುರುವಿನ ಮಾರ್ಗದರ್ಶನ ಬೇಕು) ನಮ್ಮ "ತಿಂ. ಸ್ವಾಮಿ"ಯಂತಹ ಕೆಲವರಿಗೆ ಮಾತ್ರ ಅರಿವಿಗೆ ಬರುವುದು- ದೇವರು.................................................... .....................................................................
ಇಲ್ಲ! ಎಂದು.
ಅದನ್ನೇ ಬಂದು ಸಾಮಾನ್ಯ ಜನತೆಗೆ ಉಪದೇಶ ಮಾಡಿದರೆ, " ಎಲ್ಲೋ ಹೋಗಿ ಮಜವಾಗಿದ್ದು ಬಂದು, ದೇವರಿಲ್ಲ ಎಂದು ಹೇಳುತ್ತಾನೆ-ಕಳ್ಳ ಸ್ವಾಮಿ..." ಎಂದು ಜರೆಯುವರು.
ಅದರ ಬದಲು "ನಾನೇ ದೇವರು" ಎಂದರೆ ಅದೇ ಜನ-ಅದೇ "ಕಳ್ಳಸ್ವಾಮಿ"ಯ ಫೋಟೋವನ್ನು ದೇವರ ಪೀಠದಲ್ಲಿಟ್ಟು ಭಜನೆ ಮಾಡುವರು!
ಭಕ್ತಿ, ಪೂಜೆ, ಧ್ಯಾನ... :
ದೇವರಿಲ್ಲ ಎಂದರೆ ಯಾರೂ ಒಪ್ಪುವುದಿಲ್ಲ. ಹಿರಿಯರು, ಜ್ಞಾನಿಗಳ ಮಾತೇ ಒಪ್ಪಿ, ಪರಮಾತ್ಮ ಇದ್ದಾನೆ ಎಂದೇ ಇಟ್ಟುಕೊಳ್ಳೋಣ- ಅವರ ಭಕ್ತಿ, ಪೂಜೆ, ಧ್ಯಾನದಲ್ಲೇ ನಾವು ಯಾಕೆ ಕಾಲ ಕಳೆಯಬೇಕು?
ಮೊಬೈಲ್ ಸೃಷ್ಟಿಸಿದಾತ (ದೇವರು) ಮೊಬೈಲಲ್ಲಿ ಅನೇಕ ಫಂಕ್ಷನ್ಗಳನ್ನು ಇಟ್ಟು ಮಾರುಕಟ್ಟೆಗೆ (ಜಗತ್ತಿಗೆ) ಬಿಡುಗಡೆ ಮಾಡಿದ. ಆ ಮೊಬೈಲ್ಗಳೆಲ್ಲಾ ಬರೀ ಸೃಷ್ಟಿಸಿದಾತನಿಗೆ ಮಾತ್ರ ಕನೆಕ್ಟ್ ಆಗುತ್ತಾ ಇದ್ದರೆ ಸರಿನಾ? ಅಥವಾ-
ದಿನದಲ್ಲಿ ಪ್ರಾತ:ಕಾಲ, ಸಂಧ್ಯಾಕಾಲದಲ್ಲಿ ಒಂದೆರಡು ಗಂಟೆ ನೋಕಿಯಾ ಹೆಡ್ ಆಫೀಸ್ಗೇ ಮೀಸಲಾಗಿಟ್ಟರೆ, ಅಂತಹ ಮೊಬೈಲ್ ಯಾರಿಗೆ ಬೇಕು? ದೇವರು ನಮ್ಮನ್ನು ಸೃಷ್ಟಿಸಿ ಕಳುಹಿಸಿದ್ದಾನೆ ಅಂತಾದರೆ ನಾವು ನಮ್ಮ ಕೆಲಸ ಮಾಡುತ್ತಾ ಇದ್ದರಾಯಿತು. ದೇವರು ಹೊಸ ಹೊಸ ಮಾಡೆಲ್ಗಳನ್ನು ತಯಾರಿಸಿ ಕಳುಹಿಸುತ್ತಾ ಇರಲಿ..
ತೊಂದರೆ, ಕಾಯಿಲೆಗಳು ಬಂದರೆ ಅದಕ್ಕೆ ಸಂಬಂಧಿಸಿದ ರಿಪೇರಿ ಅಂಗಡಿಗಳಲ್ಲಿ ತೋರಿಸಿ ಸರಿಮಾಡಿಕೊಳ್ಳುವುದು ಬಿಟ್ಟು ಭಜನೆ, ಧ್ಯಾನ, ಹರಕೆ ಎಂದು ಸುತ್ತಾಡುವುದಲ್ಲ.
ಮುಂದಿನ ಭಾಗದಲ್ಲಿ : ಆತ್ಮ-ಪರಮಾತ್ಮ ಬಗ್ಗೆ :)
(ಗಂಭೀರವಾಗಿ ಯಾರೂ ತೆಗೆದುಕೊಳ್ಳುವುದಿಲ್ಲ ಎಂಬ ನಂಬಿಕೆಯೊಂದಿಗೆ)
-ಗಣೇಶ.
Comments
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು
In reply to ಉ: ತಿಂಬಟ್ ಸ್ವಾಮಿಯ ಉದ್ಗಾರಗಳು by makara
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು
In reply to ಉ: ತಿಂಬಟ್ ಸ್ವಾಮಿಯ ಉದ್ಗಾರಗಳು by partha1059
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು
In reply to ಉ: ತಿಂಬಟ್ ಸ್ವಾಮಿಯ ಉದ್ಗಾರಗಳು by sathishnasa
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು
In reply to ಉ: ತಿಂಬಟ್ ಸ್ವಾಮಿಯ ಉದ್ಗಾರಗಳು by Chikku123
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು: ಹೀಗ್ ಓದ್-ಆಗ್ ಮರೆಯ್ಲು ಅಲ್ಲ..!!
In reply to ಉ: ತಿಂಬಟ್ ಸ್ವಾಮಿಯ ಉದ್ಗಾರಗಳು: ಹೀಗ್ ಓದ್-ಆಗ್ ಮರೆಯ್ಲು ಅಲ್ಲ..!! by venkatb83
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು: ಹೀಗ್ ಓದ್-ಆಗ್ ಮರೆಯ್ಲು ಅಲ್ಲ..!!
In reply to ಉ: ತಿಂಬಟ್ ಸ್ವಾಮಿಯ ಉದ್ಗಾರಗಳು: ಹೀಗ್ ಓದ್-ಆಗ್ ಮರೆಯ್ಲು ಅಲ್ಲ..!! by ಗಣೇಶ
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು: ಹೀಗ್ ಓದ್-ಆಗ್ ಮರೆಯ್ಲು ಅಲ್ಲ..!!
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು
In reply to ಉ: ತಿಂಬಟ್ ಸ್ವಾಮಿಯ ಉದ್ಗಾರಗಳು by RAMAMOHANA
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು
In reply to ಉ: ತಿಂಬಟ್ ಸ್ವಾಮಿಯ ಉದ್ಗಾರಗಳು by ಗಣೇಶ
ಉ: ತಿಂಬಟ್ ಸ್ವಾಮಿಯ ಉದ್ಗಾರಗಳು