ಚಿಂತೆ ಎನ್ನುವ ಚಿತೆ (ಶ್ರೀ ನರಸಿಂಹ 31)

ಚಿಂತೆ ಎನ್ನುವ ಚಿತೆ (ಶ್ರೀ ನರಸಿಂಹ 31)

ನಡೆದಿಹ ಘಟನೆಗಳ ನೋಡಿ ಬೇಸರವು ಎಂದೆನ್ನದಿರು
ಕಷ್ಟಗಳೆತುಂಬಿಹುದು ಸುಖವಿಲ್ಲದ ಜೀವನವಿದೆನ್ನದಿರು
ಸುಖವೊಂದೆ ಇರಲೆಂದು ಬಯಸದಿರು ನೀ ಜೀವನದಿ
ಕಷ್ಟ,ಸುಖಗಳೆರಡರಲಿ ಸಮದೃಷ್ಠಿಯಿರಬೇಕು ಮನದಿ
 
ಹಗಲು ರಾತ್ರಿಗಳೆನುವ ದಿನದ ಚಕ್ರವೆಂಬುದಿರುವಂತೆ
ಜೀವನದ ಚಕ್ರದಲಿ ಕಷ್ಟ ಸುಖಗಳು ಎಂಬುದಿಹುದಂತೆ
ನಡೆದ,ನಡೆದಿಹ, ನಡೆವುದೆಲ್ಲವೂ ಒಳ್ಳೆಯದಕೆಂದರಿ
ಕಷ್ಟ ಬಂತೆಂದು ಮರುಗದಿರು ಸಲಹುವನೆಲ್ಲರ ಶ್ರೀಹರಿ
 
ಚಿತೆ ಸುಡುವುದು ನಿರ್ಜೀವವನು,ಚಿಂತೆ ಸುಡುವುದು ಜೀವನವನು
ಚಿಂತಿಸದಿರು ಬಿಡದೆ ಸಲಹುವನು ಶ್ರೀನರಸಿಂಹ ಎಲ್ಲ ಜೀವಗಳನು

 

Rating
No votes yet

Comments