ಪ್ರೀತಿಯಲಿ ಮತ್ತೆ ಮುಳುಗಿ ನಾನು ಈಜಬೇಕಿದೆ...

ಪ್ರೀತಿಯಲಿ ಮತ್ತೆ ಮುಳುಗಿ ನಾನು ಈಜಬೇಕಿದೆ...


ಪ್ರೀತಿಯಲಿ ಮತ್ತೆ ಮುಳುಗಿ ನಾನು ಈಜಬೇಕಿದೆ
ಸುಳಿಯಲಿ ಮತ್ತೆ ಸಿಲುಕಿ ನಾನು ಉಳಿಯಬೇಕಿದೆ

ನನ್ನ ಮನಸಲಿ ಗೀಚಿದ ಏಕಾಂತ ಟಿಪ್ಪಣಿ  ನೀನು ಓದಬೇಕಿದೆ
ನಿನ್ನ ಕನಸಲಿ ಕಿಚಗುಡುತ ಶಾಶ್ವತ ಟಿಕಾಣಿ ನಾನು ಹೂಡಬೇಕಿದೆ
ಮೆಲ್ಲ ಮೆಲ್ಲನೆ ಮುಂಗುರುಳ ಜಾರಿಸಿಸುತ ನನ್ನ ಗಮನಿಸಬೇಕಿದೆ
ಸಲ್ಪ ಸಲ್ಪವೇ ತಿಂಗಳಬೆಳಕಲಿ ವಿಹರಿಸುತ ನಿನ್ನ ಒಲಿಸಬೇಕಿದೆ || ಪ್ರೀತಿಯಲಿ ಮತ್ತೆ||

ಸಾವಿರ ಮಾತಿನ ನಡುವಲಿ ನಾನಾಡದ ಮಾತನು ಮಿತವಾಗಿ ಆಲಿಸಬೇಕಿದೆ
ಸಾವಿರ ಮಂದಿಯ ನಡುವಲಿ ನಾನೆಲ್ಲವ ಮರೆತು ನಿನಗಾಗಿ ಆಕಳಿಸಬೇಕಿದೆ
ಮಿಡಿವ ಹೃದಯ ತರಂಗಗಳಲಿ ಪ್ರೀತಿಯ ಪ್ರತಿಧ್ವನಿ ಕೇಳಬೇಕಿದೆ
ಬಡಿವ ರೆಪ್ಪೆಯ ತೆರೆಯಂಚಲಿ ಪ್ರೀತಿಯ ಪ್ರತಿಬಿಂಬ ಬೀಳಬೇಕಿದೆ  || ಪ್ರೀತಿಯಲಿ ಮತ್ತೆ||

ನಿಶಬ್ದ ಮೌನದ ಬೆನ್ನಲ್ಲಿ ನಿಲ್ಲದ ತವಕದಲಿ ನೂರು ಮಾತನು ನಾನಾಡಬೇಕಿದೆ
ಸದ್ಯದ ಸಂಭ್ರಮದ ಮರೆಯಲ್ಲಿ ಸಲ್ಲದ ಕುತೂಹಲದಿ ಮಾರು ನೆನೆಪನು ಕೆದಕಬೇಕಿದೆ
ಭಾವದ ಜಾತ್ರೆಯಲಿ ಸುತ್ತಮತ್ತಲಿನ ವಾತಾವರಣ ಸ್ಥಬ್ದವಾಗಬೇಕಿದೆ
ಜೀವನ ಯಾತ್ರೆಯಲಿ ಸುಪ್ತಮನಸಿನ ಪ್ರೇಮಾವತರಣ  ಸಮೃದ್ಧವಾಗಿರಬೇಕಿದೆ  || ಪ್ರೀತಿಯಲಿ ಮತ್ತೆ||

ಕಾಮತ್ ಕುಂಬ್ಳೆ

Rating
No votes yet

Comments