ಗುಣಾತ್ಮಕ ಶಿಕ್ಷಣದಲ್ಲಿ ನಾವೂ ನೀವು
ಗುಣಾತ್ಮಕ ಶಿಕ್ಷಣದಲ್ಲಿ ನಾವೂ ನೀವು
ಇತ್ತೀಚಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣದ ಕುರಿತು ಎಲ್ಲೆಡೆ ಚರ್ಚೆಗಳಾಗುತ್ತಿವೆ. ಶಿಕ್ಷಣತಜ್ಞರು ಹಾಗೂ ಸಾಹಿತಿಗಳು ಶಿಕ್ಷಣ ಹಾಗೂ ಅದರ ಗುಣಮಟ್ಟ ಕುರಿತಂತೆ, ಹಲವಾರು ಲೇಖನಗಳನ್ನು ಬರೆದಿರುವುದನ್ನು ನಾವೆಲ್ಲ ಓದಿದ್ದೇವೆ. ಆದರೂ ಕೂಡಾ ಗುಣಾತ್ಮಕ ಶಿಕ್ಷಣವನ್ನು ನಾವೂ ಲೇಖನಗಳಿಗೆ ಮಾತ್ರ ಸಿಮೀತಗೋಳಿಸಿದ್ದೇವೆ ಹೊರತು ಅದರ ಅನುಷ್ಟಾನದ ಕುರಿತು ಕಾಳಜಿ ವಹಿಸುತ್ತಿಲ್ಲ. ಕೆಲವೊಮ್ಮೆ ನಾವು ಗುಣಾತ್ಮಕ ಶಿಕ್ಷಣವನ್ನು ಶಾಲೆಯ ಅಂದ ಚೆಂದ, ಶಿಸ್ತು, ಹಾಗೂ ಹೆಚ್ಚಿನ ಅಂಕಗಳಿಕೆಯೆ ಎಂದುಕೊಳ್ಳುವ ಸಾಧ್ಯತೆಗಳಿವೆ. ಪ್ರಸ್ತುತ ನಮ್ಮ ವ್ಯವಸ್ಥೆಯೂ ಕೂಡಾ ಅದಕ್ಕೆ ಹೊರತಾಗಿಲ್ಲ. ಪ್ರಸ್ತುತದಲ್ಲಿ ಪಾಲಕರು ಗುಣಾತ್ಮಕ ಶಿಕ್ಷಣದ ಬದಲಾಗಿ ಮಕ್ಕಳು ಹೆಚ್ಚು ಅಂಕಗಳಿಸಬೇಕು ಎಂಬ ಅಭಿಪ್ರಾಯವನ್ನು ತಳೆದಿದ್ದು ಇದು ಮಕ್ಕಳ ಮೇಲೆ ಮಾನಸಿಕ ಒತ್ತಡವನ್ನುಂಟು ಮಾಡಿ ಕೀಳಿರಿಮೆಗೆ ಕಾರಣವಾಗುತ್ತದೆ. ಹಾಗಾಗಿ ಇತ್ತೀಚಿಗೆ ಪತ್ರಿಕೆಗಳಲ್ಲಿ ವಿದ್ಯಾರ್ಥಿಗಳ ಕಡಿಮೆ ಅಂಕ ಗಳಿಕೆ ವಿಚಾರವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತ ಹೆಚ್ಚು ಹೆಚ್ಚು ವರದಿಗಳು ಪ್ರಕಟಗೊಳ್ಳುತ್ತಿವೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಗುಣಾತ್ಮಕ ಶಿಕ್ಷಣ ಎಂದರೇನು? ನಮ್ಮ ಮಕ್ಕಳಿಗೆ ಎಂತಹ ಶಿಕ್ಷಣ ಬೇಕು ಎಂಬುದರ ಕುರಿತು ಚಿಂತಿಸುವ ಅಗತ್ಯತೆ ಇದೆ ಅನಿಸುತ್ತದೆ ಅಲ್ಲವೇ? ಹಾಗಾದರೇ ಗುಣಾತ್ಮಕ ಶಿಕ್ಷಣ ಎಂದರೇನು? ಗುಣಾತ್ಮಕ ಶಿಕ್ಷಣವು ಪ್ರತಿಯೊಂದು ಮಗುವಿನಲ್ಲಿರುವ ಸಾಮಥ್ರ್ಯಗಳನ್ನು ಗುರುತಿಸಿ ಅದನ್ನು ಅಬಿವೃದ್ಧಿಪಡಿಸುವುದಾಗಿದೆ ಹಾಗೂ ಶಿಕ್ಷಣ ಮತ್ತು ಜೀವನಕ್ಕೆ ಸಂಬಂದ ಕಲ್ಪಿಸುವುದಾಗಿದೆ. ಎನ್,ಸಿ,ಎಪ್, 2005ರಲ್ಲಿ ಸ್ಥಳಿಯ ಜ್ಞಾನ ಹಾಗೂ ಮಗುವಿನ ಜ್ಞಾನಕ್ಕೆ ಸಂಬಂದಿಸಿದಂತೆ ಮಗುವಿನ ಪೂರ್ವ ಅನುಭವ ಸ್ಥಳೀಯ ಜ್ಞಾನಕ್ಕೆ ಸಂಬಂಧ ಕಲ್ಪಿಸುವ ಮೂಲಕ ಮಕ್ಕಳಲ್ಲಿ ಕಲಿಕಾ ಅನುಭವವನ್ನುಂಟು ಮಾಡಬೇಕು ಎಂದು ಹೇಳುತ್ತದೆ. ಆದರೂ ಕೂಡಾ ಆಧುನಿಕತೆಯ ಭರಾಟೆಯಲ್ಲಿ ನಾವು ಮಗುವಿನ ಅನುಭವವನ್ನು ನಿರ್ಲಕ್ಷಿಸಿ ಕೇವಲ ಪುಸ್ತಕಜ್ಞಾನಕ್ಕೆ ಸೀಮಿತಮಾಡಿದ್ದೆವೆ. ಹೆಚ್ಚು ಅಂಕ ಗಳಿಸುವುದು ಹೇಗೆ ಎಂದು ನಾವೆಲ್ಲ ಚಿಂತಿಸುತ್ತೆವೆ ಹೊರತು ಮಗುವೆ ತನ್ನ ಜೀವನಕ್ಕೆ ಪೂರಕವಾದ ಸಾಮಥ್ರ್ಯಗಳನ್ನು ಗಳಿಸುವುದು ಹೇಗೆ ಎಂಬ ಬಗ್ಗೆ ಅಲೋಚಿಸುವುದು ತೀರಾ ಕಡಿಮೆ.
ಈ ದಿಸೆಯಲ್ಲಿ ಹಲವಾರು ಸಂಘ ಸಂಸ್ಥೆಗಳು ಪ್ರಯತ್ನಿಸುತ್ತಿವೆ ಆದರೆ ಇವು ನಮ್ಮ ದೊಡ್ಡ ಶಿಕ್ಷಣ ಸಮುದಾಯವನ್ನು ತಲುಪುವುದು ದುಸ್ತರ. ಹೆಚ್ಚು ಸರಕಾರಿ ಶಾಲೆಗಳನ್ನು ಹೊಂದಿರುವ ವ್ಯವಸ್ಥೆಯಲ್ಲಿ ಸಂಘ ಸಂಸ್ಥೆ, ಪಾಲಕರು, ಶಿಕ್ಷಕರು, ಸಮುದಾಯ ಕಾಳಜಿ ವಹಿಸುವ ಮೂಲಕ ಗುಣಾತ್ಮಕ ಶಿಕ್ಷಣವನ್ನು ಒದಗಿಸಲು ಖಂಡಿತ ಸಾಧ್ಯ, ಆದರೆ ಅದರಲ್ಲಿ ತೊಡಗಿಸಿಕೊಳ್ಳುವ ಇಚ್ಚಾಶಕ್ತಿ ಬೇಕು ಅಷ್ಟೇ. ಚಿಕ್ಕ ವಯಸ್ಸಿನಲ್ಲಿ ತುಂಬಾ ಚೂಟಿಯಾಗಿದ್ದ ನಮ್ಮ ಮಗು ಬೆಳೆಯುತ್ತಾ ಮಂದವಾಗುತ್ತಾ ತನ್ನ ಪ್ರಶ್ನೆ ಮಾಡುವ ಮನೋಭಾವವನ್ನು ಕಡಿಮೆ ಮಾಡಿಕೊಳ್ಳುತ್ತದೆ. ಕೆಲವೊಮ್ಮೆ ಮಕ್ಕಳು ಕೇಳುವ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿಲ್ಲದೆ ಮಗುವನ್ನು ನಿರುತ್ಸಾಹಗೋಳಿಸುವ ಮೂಲಕ ನಮಗೆ ಗೊತ್ತಿಲದಂತೆಯೆ ಮಗುವಿನ ಅಲೋಚನಾ ಸಾಮಥ್ರ್ಯಕ್ಕೆ ಕಡಿವಾಣ ಹಾಕುತ್ತೇವೆ. ಮುಂದಿನ ದಿನಗಳಲ್ಲಿ ಮಗು ತರಗತಿಯಲ್ಲಿ ಶಿಕ್ಷಕರು ಬೋಧನೆ ಮಾಡುವಾಗ ಹಲವಾರು ಸಂಶಯ ಹಾಗೂ ಪ್ರಶ್ನೆಗಳಿದ್ದರು ಕೇಳುವ ಸಾಹಸ ಮಾಡುವುದಿಲ್ಲ.
ನಾವೆಲ್ಲ ಮಗುವಿನ ಕಲಿಕೆಗೆ ಪೂರಕವಾದ ವಾತಾವರಣ ಕಲ್ಪಿಸಬೇಕು. ಮಗುವಿಗೆ ಹಲವಾರು ವಿಷಯ/ಸವಾಲುಗಳನ್ನು ನೀಡುತ್ತಾ ಚಿಂತನೆಗೊಳಪಡಿಸಬೇಕು ಆದಷ್ಟು ಸ್ವಕಲಿಕೆಗೆ ಅವಕಾಶ ಮಾಡಿಕೊಡುತ್ತಾ ಮಗುವಿನ ಸಾಮಥ್ರ್ಯ ಬೆಳವಣಿಗೆಗೆ ಬೆಂಬಲಿಸಬೇಕು. ಶಾಲಾ ಸಮಿತಿಯವರು ಕೂಡಾ ಈ ದಿಸೆಯಲ್ಲಿ ಕಾರ್ಯಪ್ರವೃತ್ತರಾಗುವ ಅಗತ್ಯತೆ ಇದೆ. ಮಕ್ಕಳಿಗೆ ಕಲಿಕಾ ಪೂರಕ ವಾತಾವರಣ ನಿರ್ಮಾಣ, ಶಾಲಾ/ಕ್ಷೇತ್ರ ಪ್ರವಾಸ ಆಯೋಜನೆ ಹಾಗೂ ಗ್ರಂಥಾಲಯದ ಸದ್ಭಳಿಕೆಯ ಕುರಿತು ಕಾಳಜಿ ವಹಿಸಬೇಕು. ಶಿಕ್ಷಕರು ಪ್ರತಿಯೊಂದು ಮಗುವಿನ ಸಾಮಥ್ರ್ಯಗಳು ಹಾಗೂ ಕಲಿಕಾ ಸವಾಲುಗಳನ್ನು ಗುರುತಿಸಿ ಪಾಲಕರ ಜೊತೆ ಚರ್ಚಿಸಬೇಕು. ಸಂಘ ಸಂಸ್ಥೆಗಳು ತಮ್ಮಲ್ಲಿರುವ ಮಾನವ ಸಂಪನ್ಮೂಲ ಹಾಗೂ ಇನ್ನಿತರ ಸಂಪನ್ಮೂಲಗಳಲ್ಲಿ ಸ್ವಲ್ಪ ಬಾಗವನ್ನು ಮಕ್ಕಳ ಕಲಿಕೆಗೆ ಮೀಸಲಿರಿಸಿದಾಗ ಮಾತ್ರ ನಾವು ನಿವೆಲ್ಲಾ ನಮ್ಮ ಮಕ್ಕಳಲ್ಲಿ ಗುಣಾತ್ಮಕ ಶಿಕ್ಷಣವನ್ನು ಕಾಣಲು ಸಾಧ್ಯ. ನಾವೆಲ್ಲರೂ ನಮ್ಮ ಅನುಭವ, ಚಿಂತನೆ ಹಾಗೂ ಕಾಳಜಿಗಳನ್ನು ಮಕ್ಕಳಿಗೆ ಧಾರೆ ಎರೆಯುವ ಮೂಲಕ ಒಂದು ಆದರ್ಶ ಸಮಾಜವನ್ನು ನಿರ್ಮಾಣ ಮಾಡಬಹುದಾಗಿದೆ.
Comments
ಉ: ಗುಣಾತ್ಮಕ ಶಿಕ್ಷಣದಲ್ಲಿ ನಾವೂ ನೀವು
In reply to ಉ: ಗುಣಾತ್ಮಕ ಶಿಕ್ಷಣದಲ್ಲಿ ನಾವೂ ನೀವು by makara
ಉ: ಗುಣಾತ್ಮಕ ಶಿಕ್ಷಣದಲ್ಲಿ ನಾವೂ ನೀವು