ಬೆಂಗ್ಳೂರು ಟ್ರಾಫಿಕ್ ಹಾಡು

ಬೆಂಗ್ಳೂರು ಟ್ರಾಫಿಕ್ ಹಾಡು

ಸೂಚನೆ:
ಪರಮಾತ್ಮ ಚಿತ್ರದ ``ಕತ್ಲಲ್ಲಿ ಕರಡೀಗೆ ಜಾಮೂನು ತಿನ್ಸೋಕೆ`` ಧಾಟಿಯಲ್ಲಿ ಹೇಳಿ ಕೊಳ್ಳುವುದು.

ಬೆಂಗ್ಳೂರು ರಸ್ತೇಲಿ ಡ್ರೈವಿಂಗ್ ಮಾಡ್ವಾಗ ಬಾಳಾನೆ ಹುಷಾರ್ ಕಣ್ರೀ....
ಯ್ನಾ........... ಯ್ನಾ..........
ಅತ್ಲಿಂದ ಇತ್ಲಿಂದ ಹಿಂದ್ಲಿಂದ ಮುಂದ್ಲಿಂದ ಗುದ್ಗೊಂಡು ಹೋಗ್ಬಿಡ್ತರೀ.....
ಯ್ನಾ........... ಯ್ನಾ..........
ಆಟೋದ ಆರ್ಭಟ ಕಾಮನ್ ಎಲ್ಲೆಲ್ಲು...
ಬೀಟಿಎಸ್ ನುಗ್ಗಾಟ ರಸ್ತೇಲಿ ಮಾಮೂಲು....

ಕಣ್ಣಂತು ರಸ್ತೆ ಮೇಲೆ ಇದ್ದೇ ಇರ್ಲಿ.
ಯಾವ್ದಕ್ಕು ಅಡ್ರೆಸ್ಸು ಜೇಬಲಿರ್ಲಿ...
ಯ್ನಾ........... ಯ್ನಾ..........

ಅತ್ಲಿಂದ ಇತ್ಲಿಂದ ಹಿಂದ್ಲಿಂದ ಮುಂದ್ಲಿಂದ ಗುದ್ಗೊಂಡು ಹೋಗ್ಬಿಡ್ತರೀ.....
ಯ್ನಾ........... ಯ್ನಾ..........
ಬೆಂಗ್ಳೂರು ರಸ್ತೇಲಿ ಡ್ರೈವಿಂಗ್ ಮಾಡ್ವಾಗ ಬಾಳಾನೆ ಹುಷಾರ್ ಕಣ್ರೀ....
ಯ್ನಾ........... ಯ್ನಾ..........



ಔಟರ್ರು ರಿಂಗ್ ರೋಡು, ಇನ್ನರ್ರು ಮೈನ್ ರೋಡು,
ಎಲ್ಲೆಲ್ಲು ನೀನೋಡು, ಊರ್ತುಂಬ ಓಡಾಡು
ರೋಡ್ಜಾಮು ಇಲ್ಲೂ, ಟ್ರಾಫ಼ಿಕ್ ಜಾಮ್ ಅಲ್ಲೂ.
ಸಿಗ್ನಲ್ಲು ರೆಡ್ಡಿದ್ರು ಹಿಂದ್ಲಿಂದ ಹಾರನ್ನು,
ಓಡ್ತಿದ್ರು ನಿಲ್ಸಿದ್ರು ಸುಮ್ಸುಮ್ನೆ ಹಾರನ್ನು
ಪೀಪೀಪಿ ಪೀಪಿ...ಪಿಪಿಪೀಪಿ ಪೀಪಿ...
ಹ್ಯಾ................
ನಡ್ಯೋಕ್ಕೆ ಫ಼ುಟ್ ಪಾತೆ ಇಲ್ಲ ಕಣ್ರೀ.....
ಊರ್ತುಂಬ  ನೋ ಪಾರ್ಕಿಂಗ್ ಬೋರ್ಡುಂಟುರೀ....

ಬೆಂಗ್ಳೂರು ರಸ್ತೇಲಿ......


ಹೆಲ್ಮೆಟ್ಟು ಹಾಕೋದು ತಲೆಗೆ ಸರಿ,
ಕೈಗದುವೆ ಹಾಕಿದ್ರೆ ಯಾವ್ ಸೇಫ಼್ಟಿರಿ,
ಬೇಡ್ರಪ್ಪೊ ಕೇಳ್ರಿ, ತಲೆಗಾಕಿ ಕಟ್ರಿ.
ಸೀಟ್ ಬೆಲ್ಟು ಕಟ್ದಿದ್ರೆ ಫ಼ೈನ್ ಹಾಕ್ತರಿ,
ಸ್ಯಾಟಿ ಲೈಟು ಪಿಚ್ಚರ್ರು ಹಿಡ್ಕಂತರ್ರಿ.....
ಪೋಲೀಸ್ದು ಟಾರ್ಗೆಟ್, ಪೋಲೀಸ್ದು ಟಾರ್ಗೆಟ್
ಹ್ಯಾ........ಯ್ನಾ....
ಹ್ಯಂಗಾರ ಮುನ್ನುಗ್ಗಿ ಮನೆ ಸೇರ್ಕಳಿ...
ಆಗ್ದಿದ್ರೆ ನಿಂತಲ್ಲೆ ತಲೆ ಕೆರ್ಕಳಿ...
ಯ್ನಾ.....ಯ್ನಾ......


ಬೆಂಗ್ಳೂರು ರಸ್ತೇಲಿ ಡ್ರೈವಿಂಗ್ ಮಾಡ್ವಾಗ ಬಾಳಾನೆ ಹುಷಾರ್ ಕಣ್ರೀ...
ಯ್ನಾ.....ಯ್ನಾ......
ಬಾಕೀ ಸಮಾಚಾರ ಬ್ರೇಕ್ ಬಾದ್ ಅಂತಾರೆ.. ಅಂಭಂಬ್ರ ಸ್ವಾಮಿ ಕಣ್ರಿ...

ಕ್ಲಿಷ್ಟ ಪದದ ಅರ್ಥ: `ಅಂಭಂಬ್ರ ಸ್ವಾಮಿ` ಅರ್ಥಾತ್ ಅಂಡಾಂಡ ಭಂಡ ಬ್ರಮ್ಹಾಂಡ ಸ್ವಾಮಿ.

-ರಾಮಮೋಹನ

 

Rating
No votes yet

Comments