ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
ಇಲ್ಲಿಯವರೆಗೆ:
http://sampada.net/…
ಕಾಲ್ ಕಟ್ ಮಾಡಿ ನಾವಡವ್ರಿಗೆ ಕಾಲ್ ಮಾಡಿದೆ. ಅವ್ರು ಇಲ್ಲಿ ತುಂಬಾ ಮಳೆ ಚಿಕ್ಕು, ನೇತ್ರಾವತಿ ಬ್ರಿಡ್ಜ್ ದಾಟಿ ಮೇಲೆ ಹತ್ತಿದ್ದಾಳೆ, ಅವ್ಳು ಇಳ್ಯೋತಂಕ ನಾವಿಲ್ಲಂದ ಕದ್ಲಂಗಿಲ್ಲ.
ಸರಿ ಬಿಡಿ ಮುಂದಿನ ಮ್ಯಾಚಿಗೆ ಸಿಗ್ತೀರಾ ನೋಡೋಣ ಅಂದು ಕಾಲ್ ಕಟ್ ಮಾಡಿ ಶ್ರೀಧರವ್ರಿಗೆ ಕಾಲ್ ಮಾಡಿದೆ.
ನಾ: ನಾಳೆ ಸಂಜೆ ಮ್ಯಾಚಿಗೆ ಹೋಗೋಣ ಟೀಮ್ ಸಮೇತ, ಬರ್ತೀರಾ?
ಶ್ರೀ: ಬಹುಶ ಆಗಲ್ಲ ಚಿಕ್ಕು, ಹೈದರಾಬಾದಲ್ಲಿದೀನಿ.
ನಾ: ನೋಡಿ ಪ್ರಯತ್ನ ಮಾಡಿ.
ಶ್ರೀ: ಆಗ್ಲಿ ಚಿಕ್ಕು, ಮತ್ತೆ ಎಷ್ಟು ಕುರಿಗಳು (ಸಂಪದಿಗರು) ಬರ್ತಿವೆ?
ನಾ: ಕುರಿ?? ಓಹೋ ಹಾಗೆ, ಎಲ್ಲಾ ಕುರಿಗಳಿಗೂ ಕಾಲ್ ಮಾಡಿದೀನಿ, ಕೆಲವು ಬರ್ತಿವೆ.
ಶ್ರೀ: ಸರಿ, ಆದ್ರೆ ಕುರಿ ಕಾಲ್ ಕಟ್ ಮಾಡ್ಬೇಡಿ.
ನಾ: ಹ್ಹ ಹ್ಹ ಹ್ಹ, ಹಾಗೆಲ್ಲಾ ಮಾಡೋಕೆ ಬಿಡಲ್ಲ ಅವು.
ಶ್ರೀ: ಎಷ್ಟು ಕಾಗೆಗಳು(ಸಂಪದಿಗರು) ಬರ್ತಿವೆ?
ನಾ: ಕಾಗೆ ಹಾರ್ಸೋರು ಗೊತ್ತಿಲ್ಲ, ಅಲ್ಲಿಗೆ ಹೋದ್ಮೇಲೆ ಗೊತ್ತಾಗತ್ತೆ.
ಶ್ರೀ: ಎಷ್ಟು ಹಕ್ಕಿಗಳು ಬರ್ತಿವೆ.
ನಾ: ಸ್ಟೇಡಿಯಮ್ನಲ್ಲಿ ಅವಕ್ಕೇನು ಕೊರತೆ, ಎಲ್ಲೆಲ್ಲೂ ಅವೇ ತುಂಬಿರ್ತಾವೆ!. ನೋಡಿ ಬರೋದಕ್ಕೆ ಪ್ರಯತ್ನ ಮಾಡಿ.
ಶ್ರೀ: ಸರಿ ಚಿಕ್ಕು, ಪ್ರಯತ್ನ ಮಾಡ್ತೀನಿ, ಸಿಗೋಣ ಮತ್ತೆ.
ಹಾಗೆ ಗೋಪಾಲವ್ರಿಗೆ ಮಾಡಿದ್ರೆ ಅವ್ರು ಮಂಜ ಎಲ್ಲೋ ಮಿಸ್ ಆಗಿದ್ದಾನೆ ಹುಡುಕ್ಬೇಕು ಬರೋಕಾಗಲ್ಲ ಅಂದ್ರು.
ಭಲ್ಲೆಯವ್ರು ಮಾಮೂಲಿನಂತೆ ಮಿಸ್.
ಅಲ್ಲಿಗೆ ಗಣೇಶಣ್ಣ, ಕವಿ ಸರ್, ನಾನು.
ಮಾರನೇ ದಿನ ಸ್ಟೇಡಿಯಮ್ನಲ್ಲಿ ನಾವು ಮೂವರೂ ಒಟ್ಟಿಗೆ ಸೇರಿ ಒಂದು ಕಡೆ ಕೂತಿದ್ವಿ. ಗಣೇಶಣ್ಣ ಹೆಲ್ಮೆಟ್ ಹಾಕೊಂಡು ಬಂದಿದ್ರು (ಹೆಂಗೋ ಡೀಲ್ ಮಾಡಿ ಬಂದಿದ್ರು)
ಏನಕ್ಕೆ ಗಣೇಶಣ್ಣ ಅಂದ್ರೆ, ಸೇಫ್ಟಿ ಕಣಪ್ಪ, ಮೊನ್ನೆ ಗೇಲ್ ಹೊಡೆದದ್ದು ಗೊತ್ತಲ್ಲ?
ಸರಿ ಸರಿ ಅಂದು ಮ್ಯಾಚ್ ನೋಡೋಕೆ ಕೂತ್ವಿ.
ಸ್ವಲ್ಪ ಹೊತ್ತಾದ್ಮೇಲೆ ಶ್ರೀಧರವ್ರು, ರಾಮೋ, ಸತೀಶವ್ರು ಬಂದ್ರು.
ನನಗೆ ರಾಮೋ ಬಂದಿದ್ದು ನೋಡಿ ಆಶ್ಚರ್ಯ.
ನಾ: ಅರೆ ಬಂದಿದೀರಲ್ಲ?
ರಾಮೋ: ಹೂನಪ್ಪಾ, ನೀನು ಕಾಲ್ ಮಾಡಿ ಮನೆಹಾಳು ಕೆಲಸ ಮಾಡಿದೆ, ಸ್ವಲ್ಪನಾದ್ರೂ ನೆಮ್ಮದಿ ಸಿಗ್ಲಿ ಅಂತ ಇಲ್ಲಿಗೆ ಬಂದೆ.
ನಾ: ಅಯ್ಯೋ ನಾನೇನ್ಮಾಡಿದೆ, ಕ್ರಿಕೆಟ್ ನೋಡೋಕೆ ಬರ್ತೀರಾ ಅಂತ ಕಾಲ್ ಮಾಡಿದ್ದೆ ತಪ್ಪಾಯ್ತು. ನಿಮ್ಮ ತಪ್ಪು ಇಟ್ಕೊಂಡು ನನಗೆ ಬಯ್ತೀರಾ.
ರಾಮೋ: ನಾನೇನು ತಪ್ಪು ಮಾಡಿದೆ.
ನಾ: ಮತ್ತೆ ಲಲ್ತಾ, ಶಾರದಾನ ಇಟ್ಕೊಂಡು ತಪ್ಪು ಮಾಡಿಲ್ವಾ?
ರಾಮೋ: ಇಟ್ಕೊಂಡು??? ಏ ಏ ಏ ಏ ಏ ಏನು ಮಾತಾಡ್ತಿದೀಯಾ ಚಿಕ್ಕು?
ನಾ: ಅಯ್ಯೋ ಸಮಾಧಾನ, ನಾನು ಹೇಳಿದ್ದು ನೆನಪಲ್ಲಿ ಇಟ್ಕೊಂಡು ಅಂಥಾ, ನೀವೆನೇನೋ ತಿಳ್ಕೊಬೇಡಿ.
ಅಷ್ಟೊತ್ತಿಗೆ
ಆರ್ ಸಿ ಬಿ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದಿತ್ತು. ಓಪನರ್ ಕೊಹ್ಲಿ, ಗೇಲ್ ಬಂದಿದ್ರು (ಚೇಂಜ್ ಇನ್ ಪ್ಲಾನ್ ಅಂತೆ).
ಮೊದಲ ಬಾಲ್
ಸಿಕ್ಸರ್!!!!
ಗಣೇಶಣ್ಣ, ಕೂತಲ್ಲಿಂದ ಎದ್ದು ಹೋ ಹೋ ಹೋ ಹೋ ಅಂತ ಖುಷಿಯಿಂದ ಚೀರಿದ್ರು.
ಸ್ವಲ್ಪ ಹೊತ್ತಿಗೆ ಗಾಬರಿಯಿಂದ ಕೂತ್ಕೊಬಿಟ್ರು.
ಗಣೇಶಣ್ಣ ಯಾಕೆ ಏನಾಯ್ತು?
ಅಯ್ಯೋ ಚಿಕ್ಕು ನೋಡಲ್ಲಿ, ಚಿಯರ್ ಗರ್ಲ್ಸ್ ಜಾಗದಲ್ಲಿ ಯಾರು ಕುಣಿತಿದ್ದಾರೆ ಅಂತ.
ನಾನು ನೋಡ್ತೀನಿ, ಬಾರಿಮುತ್ತು ಸೀರೆ ಹಾಕೊಂಡು ಸಿಕ್ಸರ್ಗೆ ಡ್ಯಾನ್ಸ್ ಮಾಡ್ತಿದ್ದಾಳೆ.
ಗಣೇಶಣ್ಣಗೆ ನಾಲಗೆ ಎಲ್ಲಾ ಒಣಗಿ ಹೋಗಿತ್ತು (ಚಿಯರ್ ಗರ್ಲ್ಸ್ ನೋಡೋಕೆ ಅಂತಾನೇ ಏನೇನೋ ಪ್ಲಾನ್ ಮಾಡಿ ಬಂದಿದ್ರು!!! ಇಲ್ಲಿ ನೋಡಿದ್ರೆ).
ಬಾರಿಮುತ್ತು ಒಂದೇ ಸಮನೆ ಕುಣಿಯುತ್ತಿದ್ದಾಳೆ, ಇದ್ದಕಿದ್ದಂತೆ ಅವಳು ಕುಣಿಯುತ್ತಿದ್ದ ಟೇಬಲ್ ಲರಕ್ ಲರಕ್ ಅಂತ ಶಬ್ದ ಬಂದು ಮುರಿದು ಬೀಳುವುದರಲ್ಲಿತ್ತು, ಬಾರಿಮುತ್ತು ಅದನ್ನರಿತು ಮುಂದಕ್ಕೆ ನೆಗೆದಳು, ಹಾರಿದವಳು ಸೀದಾ ಗಣೇಶಣ್ಣನ ಮೇಲೆ ಬಿದ್ದಳು.
ಗಣೇಶಣ್ಣ ಕುಳಿತಿದ್ದ ಚೇರ್ ಅರ್ಧ ಕೆಳಕ್ಕೆ ಹೋಗಿತ್ತು, ಗಣೇಶಣ್ಣ ಸೈಡಿಗೆ ಬಿದ್ದಿದ್ದರು, ಅವರ ದೇಹವೆಲ್ಲಾ ಅಪ್ಪಚ್ಚಿಯಾಗಿತ್ತು ತಲೆಯೊಂದನ್ನು ಬಿಟ್ಟು.
ನಾವೆಲ್ಲರೂ ಸೇರಿ ಕಷ್ಟಪಟ್ಟು ಬಾರಿಮುತ್ತುವನ್ನ ಮೇಲಕ್ಕೆಳೆಯಲು ಪ್ರಯತ್ನಿಸಿದೆವು.
ಉಹೂಂ, ಸ್ವಲ್ಪವೂ ಕದಲಿಸಲಾಗಲಿಲ್ಲ.
ಆಂಜನೇಯನ ಬಾಲವನ್ನ ಭೀಮನು ಎಳೆಯಲು ಪ್ರಯತ್ನ ಪಡುವ ಹಾಗೆ ನಮ್ಮ ಕೆಲಸ ನಡೆಯುತ್ತಿತ್ತು.
'ಸೈಡಿಗೆ ಬನ್ನಿ' ಹಿಂದಿಂದ ಒಂದು ಶಬ್ದ ಬಂತು.
ನೋಡಿದರೆ ಮಂಜಣ್ಣ, ನಮಗೆಲ್ಲರಿಗೂ ಸಮಾಧಾನ (ಮಂಜಣ್ಣ ನಮ್ಮಿಂದ ಎರಡು ಸಾಲು ಹಿಂದೆ ಕೂತಿದ್ದರು, ಮ್ಯಾಚ್ ಮುಗಿದ ಮೇಲೆ ನಮ್ಮನ್ನ ಭೇಟಿಯಾಗುವವರಿದ್ದರು ಆದರೆ......).
ಮಂಜಣ್ಣನನ್ನು ಸೇರಿಸಿಕೊಂಡು ನಾವೆಲ್ಲರೂ ಬಾರಿಮುತ್ತುವನ್ನ ಮೇಲಕ್ಕೆಳೆದೆವು.
ಎಲ್ಲರೂ ಕಷ್ಟಪಟ್ಟು ಅವರನ್ನ ಕರೆದುಕೊಂಡು ಹೋಗಿ ಹತ್ತಿರದಲ್ಲಿದ್ದ ಆಸ್ಪತ್ರೆಯಲ್ಲಿ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಮನೆಗೆ ಬಿಟ್ಟು ಬಂದೆವು.
ಅಲ್ಲಿಗೆ ಮೊದಲ ಬಾಲ್ ನಮಗೆ ಕೊನೆಯ ಬಾಲಾಗಿತ್ತು!!!!
(ಕೊನೆಗೆ ತಿಳಿದ ವಿಷಯವೇನೆಂದರೆ, ಕಂಪನಿ ಲಾಸಲ್ಲಿದ್ದುದರಿಂದ ಚಿಯರ್ ಗರ್ಲ್ಸ್ ಬದಲಾಗಿ ಬಾರಿಮುತ್ತುವನ್ನ ಕರೆಸಲಾಗಿತ್ತು, ಮೂರು ಚಿಯರ್ ಗರ್ಲ್ಸ್ ಬದಲಾಗಿ ಆ ಮೂವರಿಗಿಂತ ಜಾಸ್ತಿ ಭಾರವಿದ್ದ ಜೊತೆಗೆ ಲೋಕಲ್ ಆಗಿದ್ದುದರಿಂದ ಅದೂ ಅಲ್ಲದೆ ಬಾರಿಮುತ್ತುವಿನ ಡ್ಯಾನ್ಸ್ ಫೀ ಕಡಿಮೆ ಸಹ ಇದ್ದುದರಿಂದ ಅವಳನ್ನು ಸೇರಿಸಿಕೊಂಡಿದ್ದರು).
ಕೊನೆಹನಿ: ಒಟ್ಟಿನಲ್ಲಿ ಬಾರಿಮುತ್ತುವಿನಿಂದ ಒಂದು ಮುತ್ತನ್ನು ಪಡೆಯುವ ಸೌಭಾಗ್ಯ ಗಣೇಶಣ್ಣನದಾಗಿತ್ತು.
Rating
Comments
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
In reply to ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ by sathishnasa
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
In reply to ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ by Jayanth Ramachar
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
In reply to ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ by sathishnasa
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
ಉ: ಐ ಪಿ ಎಲ್ ಮತ್ಸ0ಪದ ಟೀಮೂ - ಮುಕ್ತಾಯ:ಆ ಭಾರಿ ಮುತ್ತು..!!
In reply to ಉ: ಐ ಪಿ ಎಲ್ ಮತ್ಸ0ಪದ ಟೀಮೂ - ಮುಕ್ತಾಯ:ಆ ಭಾರಿ ಮುತ್ತು..!! by venkatb83
ಉ: ಐ ಪಿ ಎಲ್ ಮತ್ಸ0ಪದ ಟೀಮೂ - ಮುಕ್ತಾಯ:ಆ ಭಾರಿ ಮುತ್ತು..!!
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
In reply to ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ by partha1059
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
In reply to ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ by makara
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
In reply to ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ by Chikku123
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
In reply to ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ by makara
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ:@ಶ್ರೀಧರ್ ಜೀ..??
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
In reply to ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ by ಗಣೇಶ
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
In reply to ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ by RAMAMOHANA
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ
In reply to ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ by ಗಣೇಶ
ಉ: ಐ ಪಿ ಎಲ್ ಮತ್ತೂ ಸಂಪದ ಟೀಮೂ - ಮುಕ್ತಾಯ