ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
ಸೃಷ್ಟಿ- ಬಯೋ ಇಂಜಿನಿಯರಿಂಗ್ ಪ್ರೈ.ಲಿ ಕ0
ಮುಖ್ಯ ರಸ್ತೆಯ ಎಡ ಬದಿ ಕಾಣಿಸುತ್ತದೆ ಆ ಬೋರ್ಡ್,ಅದೇ ಬಯೋ ಇಂಜಿನಿಯರಿಂಗ್ ತಂತ್ರಜ್ಞಾನದಲ್ಲಿ ಮುಂದಿರುವ ಭಾರತದ ಪ್ರಖ್ಯಾತ ಕಂಪನೀ. ಕಂಪನೀ ಸುತ್ತ ಮುತ್ತ ಕಟ್ಟಿರುವ ಆ ಗೋಡೆ ಎಸ್ಟು ಎತ್ತರ ಅಂದ್ರೆ-ಒಬ್ಬರ ಮೇಲೆ ಒಬ್ಬರಂತೆ ಮೂವರು ನಿಂತರೂ ನಿಲುಕಲು ಆಗದಸ್ತು ಎತ್ತರದ್ದು. ಅದರ ಮೇಲೆ ಎಲೆಕ್ಟ್ರಿಕಲ್ ಫೆನ್ಸ್...ಅದರ ಸುತ್ತ ಮುತ್ತಲೂ ಅತಿಕ್ರಮ ಪ್ರವೇಶನಿಷೇಧಿಸಿದೆ- ಎಂಬ ಎಚ್ಚರಿಕೆಯ ಬರಹದ ಫಲಕಗಳು..
ಕಂಪನೀ ಪ್ರವೇಶಿಸಲು ಇರೋದು ಒಂದೇ ಗೇಟ್ ,ಅದಕ್ಕೆ ತಾಗಿಕೊಂಡಂತೆ ಸೆಕ್ಯೂರಿಟೀ ಚೆಕ್ಕಿಂಗ್ ಕೊಠಡಿ- ಗೇಟ್ಹತ್ತಿರವೇ ೫ ಜನ ಗಾರ್ಡ್ಗಳು ಮತ್ತು ಆ ಗೋಡೆ ಸುತ್ತ ಮುತ್ತ ಒಳಗಡೆ ಅತಿಕ್ರಮ ಪ್ರವೇಶ ಆಗದಂತೆ ತಡೆಯಲು ಸದಾ ಕಾರ್ಯ ನಿರತ ೩೦ ಜನ ಗಾರ್ಡ್ಗಳು -ಅತಿ ಚುರುಕಾದ ಎತ್ತರವಾಗಿರೋ ಶಕ್ತಿಯುತ ವಿದೇಶಿ ಶ್ವಾನಗಳು ಮತ್ತು ಅತ್ಯಾಧುನಿಕ ಶಸ್ತ್ರ ಸಜ್ಜಿತ ಗಾರ್ಡ್ಗಳು ಸರ್ವ ರೀತಿಯಲ್ಲೂ ಸದಾ ಸಜ್ಜು ಮೈ ಎಲ್ಲ ಕಣ್ನಾಗಿದ್ದು ಕಾಯ್ವರು...
ಹೌದು ಆ ಕಂಪನೀಯಲ್ಲಿ ಏನು ತಯಾರಾಗುತ್ತೆ?
ಯಾಕೆ ಇಸ್ತು ಬದ್ರತಾ ವ್ಯವಸ್ತೆ?
ಆ ಕಂಪನೀ ಆದಾಗಲೇ ಬಯೋ ಇಂಜಿನಿಯರಿಂಗ್ನಲ್ಲಿ ಹಲವಾರು ಪ್ರಯೋಗಗಳನ್ನ ನಡೆಸಿ ಪ್ರಾಣಿಗಳ ಮತ್ತು ಮನುಷ್ಯರಿಗೆ ಬರುವ ಹಲ ರೋಗಗಳಿಗೆ ಮದ್ದು ಕಂಡುಹಿಡಿದದ್ದು ಮತ್ತು ಮುಂದೆ ಬರಬಹುದಾದ ಸಂಭವನೀಯ ರೋಗಗಳಿಗೆ ಮದ್ದು ಕಂಡುಹಿಡಿಯಲು ಪ್ರಯೋಗನಡೆಸುತ್ತಿರುವುದು.
ಅಲ್ಲಿ ಅದಲ್ಲದೇ ಮತ್ತೊಂದು ಪ್ರಯೋಗವೂ ರಹಸ್ಯವಾಗಿ ನಡೆಯುತ್ತಿದೆ- ಅದು ಪ್ರಾಣಿಗಳ ಆಂಡಾಣು ಮತ್ತು ಮನುಷ್ಯರ ವಂಶವಾಹಿಗಳನ್ನ ಒಟ್ಟಿಗೆ ಬೆಸೆದು ಒಂದು ಹೈಬ್ರೀಡ್ ಜೀವಿಯನ್ನ ಸೃಷ್ಟಿಸುವುದು... ಆದಾಗಲೇ ಬಹುತೇಕ ದೇಶಗಳಲ್ಲಿ ಮನುಷ್ಯರ ತದ್ರೂಪಿ ಪ್ರಯೋಗಕ್ಕೆ ವಿರೋಧ ವ್ಯಕ್ತವಾಗಿದ್ದರಿಂದ ಅದಕ್ಕೆ ತಡೆ ಹಾಕಿ ಮನುಷ್ಯರ ತದ್ರೂಪಿ ಸೃಷ್ಟಿ ಬದಲಿಗೆ ಈಗ ಮನುಷ್ಯ ಮತ್ತು ಪ್ರಾಣಿಗಳ ಸಂಯೋಜಿತ ನವ ಜೀವಿಯ ಸೃಷ್ಟಿಗೆ ಈ ಕಂಪನೀ ತಯಾರೀ ನಡೆಸುತ್ತಿದೆ...
ಆ ಕಂಪನೀ ತನ್ನ ಅಸ್ತಿತ್ವ ಸ್ಥಾಪಿಸಲು ನಗರದಿಂದ ದೂರದಲ್ಲಿ ಯಾವುದೋ ಹಳ್ಳಿಯ ಪಕ್ಕದ ೧೦೬ ಎಕರೇ ಭೂಮಿ ನೋಡಿ ಅಲ್ಲಿ ಜೀವ ರಕ್ಷಕ ಔಷಧಿ ತಯಾರಿಸುವೆವು ಇಲ್ಲಿ ಕಂಪನೀ ಶುರು ಮಾಡುವೆವು ಅಂತ ಖರೀದಿಗೆ ಮುಂದಾದಾಗ ವ್ಯಾಪಕ ವಿರೋಧ ಆ ಹಳ್ಳಿಯ ಜನರಿಂದ ವ್ಯಕ್ತವಾಯ್ತು..
ಹಳ್ಳಿಯಲ್ಲಿ ವಿದ್ಯಾವಂತರಿದ್ದರಲ್ಲ ಅವರು ಈ ಕಂಪನಿಯಿಂದ ಮುಂದೆ ಆಗಬಹುದಾದ ಪರಿಸ್ರದ ತೊಂದರೆ ಬಗ್ಗೆ ಹಳ್ಳಿಗರಿಗೆ ಜಾಗೃತಿ ಮೂಡಿಸಿದಾಗ ಜನಜಾಗೃತರಾದರು, ಅದರಲ್ಲೂ ವಿದ್ಯಾವಂತ ಹುಡುಗರು 'ಬೊಪಾಲ್ ದುರಂತದ' ಫೋಟೋ ತೋರಿಸಿ ವಿವರಿಸಿದ್ದರು, ಅದು ಸಾಮಾನ್ಯ ಜನತೆ ಮೇಲೆ ಅಪಾರ ಪರಿಣಾಮ ಬೀರಿತ್ತು .ಆದರೆ ಎಲ್ಲೆಡೆ ಯಾವಾಗಲೂ ಆಗುವಂತೆ ಇಲ್ಲಿಯೂ ಕಂಪನಿ ಹಲವು ಜನರಿಗೆ ಕಂಪನೀಯಲ್ಲಿ ಉದ್ಯೋಗ ಒಳ್ಳೇ ಸಂಬಳ ಇತ್ಯಾದಿ ಆಶೆ ತೋರಿಸಿ ಸೆಳೆಯಿತು, ಒಪ್ಪದೇ ಇದ್ದ ಕೆಲವರು ಒಂದು ಹೋರಾಟದ ಸಂಘ ಮಾಡಿಕೊಂಡಾಗ ಅದರ ಅದ್ಯಕ್ಷರಿಗೆ 'ಸೂಟ್ಕೆಸ್' ಕೊಟ್ಟು ಖರೀದಿಸಿತು..:(((
ನಾಯಕನೆ ಇಲ್ಲದ ಆ ಸಂಘದ ಹೋರಾಟವನ್ಣ ಮುನ್ನಡೆಸಲು ಯಾರೂ ಮುಂದೆ ಬರದೇ ಕ್ರಮೇಣ ಅದರಲ್ಲಿದ್ದವರೆಲ್ಲ ಕಂಪನಿ ಪರವಾಗಿ 'ಬ್ಯಾಟಿಂಗ್' ಆರಂಭಿಸಿದರು, ಇನ್ನೂ ವಿರೋಧಿಸಿದ್ದವರನ್ನ ಪೊಲೀಸರಿಗೆ ಕೆಲಸಕ್ಕೆ ಅಡ್ಡಿ ಪಡಿಸುತ್ತಿರುವರು ಅಂತ ಕೇಸ್ ಕೊಟ್ಟು ಠಾಣೆಗೆ ಎಳೆದೊಯ್ದು ಮೈ ಕೈ ರಿಪೇರಿ ಮಾಡಿಸಿದರು... ಎಲ್ಲೆಡೆಯೂ ಹಣ ಆಮಿಷ ಕೆಲ್ಸಾ ಮಾಡಿ ನ್ಯಾಯವನ್ಣ ನುಂಗಿ ಹಾಕಿ ಅಟ್ಟಹಾಸ ಮೆರೆಯಿತು..
ಒಂದು ಶುಭ ಮುಹೂರ್ತದಲ್ಲಿ ರಾಜ್ಯದ ಮುಖ್ಯಮಂತ್ರಿ ,ಅರಣ್ಯ ಪರಿಸರ ಸಚಿವರು ಮತ್ತು ಅಧಿಕಾರಿಗಳ ದಂಡೆ ಬಂದು ಕಂಪನಿ ಉದ್ಘಾಟನೆ ಮಾಡಿ ಆ ಕಂಪನಿ ಬಡಬಗ್ಗರಿಗಾಗಿಯೇ ಜೀವ ರಕ್ಷಕ ಔಷಧಿ ತಯಾರಿಸುವುದು ಅದು ನಮ್ಮ ರಾಜ್ಯಕ್ಕೆ ಬಂದು ಕಂಪನಿ ಸ್ಥಾಪಿಸಿದ್ದಕ್ಕೆ ಶ್ಲಾಘನೆ ಮಾಡಿ ಹೊಗಳಿ ಅಟ್ಟಕ್ಕೆ ಏರಿಸಿದರು ಕಂಪನಿಯವರು ಕೊಟ್ಟ 'ಸೂಟ್ಕೆಸ್' ಗಳನ್ನ ಕಾರಿನಲ್ಲಿ ತುಂಬಿಕೊಂಡು ಹೊರಟರು ಸಚಿವರು ಮತ್ತು ಅಧಿಕಾರಿ ವೃಂದ.....
ಆ ಕಂಪನಿ ಮುಖ್ಯಸ್ಥರು- ಡಾ: ಕಣ್ಣನ್ನ್
ಬಯೋ ಇಂಜಿನಿಯರಿಂಗ್ನಲ್ಲಿ ಪೀ ಎಚ್ ಡೀ ಪಡೆದು ಹಲವಾರು ಪ್ರಯೋಗಗಳ ಯಶಸ್ಸಿನ ಹಿನ್ನೆಲೆ ಇರುವವರು
೧೦ ಜನರ ಪರಸ್ಪರ ಬಂಡವಾಳ ಹೂಡಿಕೆಯೊಂದಿಗೆ ಸ್ಥಾಪನೆಯಾದ ಆ ಕಂಪನೀ ತನ್ನ ಸಾಧನೆಗಳಿಂದ ತೃಪ್ತಿಗೊಳ್ಳದೇ ಬಯೋ ಇಂಜಿನಿಯರಿಂಗ್ನಲ್ಲಿ ಮಹತ್ತರವಾದುದನ್ನ ಸಾಧಿಸಬೇಕು ಎದುರಾಳಿ ಕಂಪನೀಗಳನ್ನ ಬಗ್ಗು ಬಡಿಯಬೇಕು ಅಂತ ಈ ವಿಷ್ಯವಾಗಿಯೇ ಕ0ಪನಿಯ ಸರ್ವ ಸದಸ್ಯರ ಸಭೆ ಕರೆದು ಏನೆಲ್ಲಾ ಚರ್ಚಿಸಿಯೂ ಯಾವೊಂದೂ ಯಾರಿಗೂ ಹಿಡಿಸದೇ ಏನಾರಾ ವಿಶೇಷವಾದುದು ಕಂಡು ಹಿಡಿಯಬೇಕು ಅಂತ ಹೇಳಿದ ಸರ್ವ ಸದಸ್ಯರ-ಪಾಲುದಾರರ ಒಕ್ಕೊರಲ ಒತ್ತಾಯಕ್ಕೆ
ಡಾ: ಕಣ್ಣನ್ನ್ ಹೇಳಿದ್ದು
ಮನುಷ್ಯರವಂಶವಾಹಿಗಳನ್ನ ಮತ್ತು ಹಲವಾರು ಪ್ರಾಣಿಗಳ ಅಂಡಾಣುಸಂಯೋಜಿತ ನವ ಜೀವಿಯ ಸೃಷ್ಟಿ ಮತ್ತು ಆ ನವ ಜೀವಿ ತನ್ನಲ್ಲಿ ಪಶು- ಪ್ರಾಣಿಗಳಿಗೆ ಮನುಷ್ಯರಿಗೆ ಬರುವ ಹಲ ರೋಗ ಗುಣ ಪಡಿಸುವ ಶಕ್ತಿ ಹೊಂದಿರುವುದರಿಂದ ಅದು ಔಷಧಿ ತಯಾರಿಕೆಗೂ ಉಪಯೋಗಕ್ಕೆ ಬಂದೀತು ಎಂದಾಗ ಎಲ್ಲರೂ ಮೇಜು ಕುಟ್ಟಿ ಸ್ವಾಗತಿಸಿದರು, ಆದರೆ ಈ ಪ್ರಯೋಗ ಮಾಡಲು ಈ ದೇಶದ ಕಾನೂನಿನ ಅಡಿಯಲ್ಲಿ ಅವಕಾಶವಿಲ್ಲ...
ಪ್ರಾಣಿಗಳನ್ನ ಮಾತ್ರ ಉಪಯೋಗಿಸಿಕೊಂಡು ಸಂಶೋಧನೆ ಮಾಡಬಹ್ದು ಆದರೆ ಮಾನವರನ್ನ್ನು ಅವರ ವಂಶವಾಹಿಗಳ ಉಪಯೋಗ ಇರುವ ಈ ಪ್ರಯೋಗ ಸಾಧ್ಯವಿಲ್ಲ ಎಂದಾಗ ಎಲ್ಲರ ಮೊಗದಲ್ಲೂ ನಿರಾಶೆ ಛಾಯೆ ಆವರಿಸಿತು..
ಅದನ್ನೇ ನಾವು ರಹಸ್ಯವಾಗಿ ಮಾಡಿ ಒಂದೊಮ್ಮೆ ಅದು ಯಶಸ್ವಿಯಾದರೆ ಆಗ ಸರ್ಕಾರಕ್ಕೆ ವಿಷ್ಯ ತಿಳಿಸಿ ಮನದಟ್ಟು ಮಾಡಿಸುವ ಎಂದರು ಒಬ್ಬ ಪಾಲುದಾರರು ಅವರ ಮಾತಿಗೆ ಎಲ್ಲ್ರೂ ಹೌದಲ್ಲ- ಹಾಗೆ ಮಾಡಬಹುದಲ್ಲ ಎಂದಾಗ ಸ್ಸರಿ ಹಾಗೆ ಮಾಡುವ ಆದರೆ ಈ ವಿಚಾರ ಭಲೇ ಗುಟ್ಟು ಆಗಿರಬೇಕು..ಈ ಕಳ್ಳ ಪ್ರಯೋಗದ ಮಾಹಿತಿ ಪ್ರಯೋಗದ ಯಾವುದೇ ಹಂತದಲ್ಲಿ ಬಹಿರಂಗ ಆದರೆ ಎಲ್ಲರೂ ಕಂಬಿ ಎಣಿಸಬೇಕಾದೀತು ಎಂದರು ಡಾ: ಕಣ್ನನ್..
ಆಗ ಈ ಪ್ರಯೋಗಕ್ಕೆ ಬೇಕಾದ ಹಣಕಾಸು ವ್ಯವಸ್ಥೆ ಪರಿಕರಗಳು ಮತ್ತು ನಿರ್ವಹಣ ಸಿಬ್ಬಂಧಿ ಮತ್ತು ವಿಜ್ಞಾನಿಗಳ ಪಟ್ಟಿ ತಯಾರಿಸಿ ಹಣಕಾಸು ವಿಭಾಗಕ್ಕೆ ಅನುದಾನಕ್ಕಾಗಿ -ಅನುಮೋದನೆಗಾಗಿ ಕಳಿಸಿದರು ಡಾ: ಕಣ್ನನ್..
ಎಲ್ಲ ವಿಜ್ಞಾನಿಗಳ ದಾಖಲೆ ಪರೀಕ್ಷಿಸಿ ಅದರಲ್ಲಿ ಬಯೋ ಇಂಜಿನಿಯರಿಂಗ್ನಲ್ಲಿ ಬಹು ಸಾಧನೆ ತೋರಿದ್ದ ಡಾ: ಸಿರಿ ಮತ್ತು ಡಾ: ವಿಶಾಲ್ ಅವರನ್ನ ಈ ಪ್ರಯೋಗಕ್ಕೆ ಮುಖ್ಯಸ್ಥರನ್ನಾಗ್ಸಿ ಅವರು ಮಾಡಬೇಕಾಗಿರುವುದರ ಬಗ್ಗೆ ಹೇಳಿದಾಗ ಡಾ: ಸಿರಿ ಮತ್ತು ವಿಶಾಲ್ ಒಪ್ಪದೇ ಇದು ಸಾಮಾಜಿಕ- ಧಾರ್ಮಿಕ ಸಮಸ್ಯೆಗೆ ಕಾರಣ ಆಗಬಹುದು ಮೊದಲೇ ನಿಷಿದ್ಧ ಪ್ರಯೋಗ, ಇದು ಬಿಟ್ಟು ಬೇರೆ ಕೆಲ್ಸಾ ವಹಿಸಿ ಎಂದಾಗ,
ಡಾ: ಕಣ್ನನ್
ನೋಡಿ ಇದು ನಿಷಿದ್ಧವೇ ಆಗಿರಬಹುದು ಆದರೆ ಒಂದೊಮ್ಮೆ ಯಶಸ್ವಿಯಾದರೆ ಆ ನವ ಜೀವಿಯೂ ನಮ್ಮ ಔಷಧಿ ತಯಾರಿಕಾ ಕೆಲಸಕ್ಕೆ ಉಪಯೋಗವಾದರೆ ಇಡೀ ಜಗತ್ತೇ ನಿಮ್ಮನ್ನು ಕೊಂಡಾಡುವುದು ಪ್ರಖ್ಯಾತಿ ಮನ್ನಣೆ ಹಣ ಸಿಗುವುದು ಅಲ್ಲದೇ ಇದು ನೀವೇ ಮಾಡಬಹುದಾದ ಕೆಲ್ಸಾ ಯೋಚಿಸಿ ಎಂದಾಗ ,ನಾವ್ ಯೋಚಿಸಿ ತೀರ್ಮಾನಿಸಿ ಹೇಳುವೆವು ಅಂದು ಡಾ: ಸಿರಿ ಮತ್ತು ವಿಶಾಲ್ ಹೊರ ನಡೆದರು..
ಅಂದ್ ಹಾಗೆ ಈ ಡಾ: ಸಿರಿ ಮತ್ತು ಡಾ: ವಿಶಾಲ್
ಪತಿ ಪತ್ನಿ...!!
ಪ್ರೀತಿಸಿ ಮದುವೆಯಾದವರೂ..
ಒಂದೇ ಕಂಪನಿಯಲ್ಲಿ ಕೆಲ್ಸಾ ಮಾಡುವವರು
ಹಲ ಯಶಸ್ವಿ ಸಂಶೋಧನೆಗಳನ್ನ ಜಂಟಿಯಾಗಿ ನಡೆಸಿದವರು..
ಮನೆಗೆ ಹೋಗಿ ಆ ಬಗ್ಗೆಯೇ ಚರ್ಚಿಸಿ ಕೊನೆಗೆ ವಿಶೇಷವಾದ್ ಸಂಶೋಧನೆ -ಪ್ರಯೋಗ ಪ್ರಯತ್ನಿಸುವ ಅಂತ, ಡಾ: ಕಣ್ನನ್ ಅವ್ರೀಗ್ ಕರೆ ಮಾಡಿ ತಾವ್ ರೆಡಿ ಅಂದರು...
ಮಾರನೆ ದಿನವೇ ಹಲ ಪ್ರಾಣಿಗಳ ಅಂಡಾಣು ಸಂಗ್ರಹ್ಸಿ ಶೀತದಲ್ಲಿ ಇಟ್ಟಿದ್ದರು, ಈಗ ಮಾನವರ ವಂಶವಾಹಿ ಬೇಕು ಅದಕ್ಕೆ ಯಾರು ಕೊಡಲು ತಯಾರು ಅಂದಾಗ,,ಯಾರೊಬ್ಬರೂ ಸಹಾ ತಯಾರ್ ಇರದೆ ನಿರಾಕರಿಸಿದಾಗ ಡಾ: ವಿಶಾಲ್ ತಾನೇ ಕೊಡಲು ಮುಂದಾದಾಗ ಡಾ: ಸಿರಿ ವಿರೋಧಿಸಿದಳು, ಮುಂದೊಮ್ಮೆ ಏನಾರಾ ಅಪಾಯ ಬಂದರೆ ಆ ವಂಶವಾಹಿ ಆಧಾರದಲ್ಲಿ ನಾವ್ ಸಿಕ್ಕಿಹಾಕಿಕೊಳ್ಳಬೇಕಾಗುವುದು ಬೇಡ ಎಂಬ ಪತ್ನಿಗೆ ಸಮಾಧಾನ ಮಾಡಿ ಒಪ್ಪಿಸಿ ತನ್ನ ವಂಶವಾಹಿಗಳನ್ನೇ ಪ್ರಾಣಿಗಳ ಅಂಡಾಣು ಗೆ ಸೇರಿಸಿ ಮೂರು ಪ್ರತ್ಯೇಕ ನಳಿಕೆಗಳಲಿ ಹಾಕಿ ಕೃತಕ ನವ ಜೀವಿಯ ಸಂಯೋಜಣೆಗಾಗಿ ಎರಡನ್ನೂ ಸಂಯೋಜನೆ ಮಾಡುವ ಯಂತ್ರದೊಳಗೆ ಹಾಕಿ ಬಾಗಿಲು ಮುಚ್ಚಿ ಲಾಕ್ ಮಾಡಿ ಎಲ್ಲ ಮೂರು ನಳಿಕೆಗಳಲ್ಲಿ ಪ್ರಾಣಿಗಳ ಅಂಡಾಣು ಮತ್ತು ಮನುಷ್ಯರ ವಂಶವಾಹಿ ಕೂಡುವಿಕೆಯನ್ನ ಮಾನಿಟರ್ ಮೇಲೆ ನೋಡತೊಡಗಿದ,ಹತ್ತು ಸಾರಿ ಪ್ರಯತ್ನ ವಿಫಲ ಆದಾಗ ನಿರಾಶೆ ಆಗಿ ಇನ್ನೂಇದು ಆಗದ ಕೆಲಸ ಅಂತ ಬಿಟ್ಟು ಏಳುವಾಗ ಡಾ: ಸಿರಿ ಕಿರುಚಿದಳು ಅಲ್ಲಿ ನೋಡು ಸಂಯೋಜನೆ ಆಯ್ತು..
ಹುರ್ರೆ...!!
ಯ ವೀ ಡಿಡ್ ಇಟ್.....
ಸಿರಿಯನ್ನ ತಬ್ಬಿಕೊಂಡು ಹೇಳಿದ ಡಾ: ವಿಶಾಲ್..
ಡಾ: ಕಣ್ನನ್ ಗೆ ಫೋನಾಯಿಸಿ ಈ ಬಗ್ಗೆ ವಿವರಿಸಿ ಮನೆಗೆ ಹೊರಟರು...
ಮುಂದೆ ಸಂಯೋಜಿತವಾಗಿರೂವ ಆ ನಳಿಕೆಗಳಲ್ಲಿ ಇರುವ ಜೀವಗಳ ಬೆಳೆಯುವಿಕೆಯನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದು ಅವುಗಳ ರಕ್ಷಣೆ ಮಾಡುವುದು..
ಪ್ರಾಣಿ ಮನುಷ್ಯರ ಅಂಡಾಣು ವಂಶವಾಹಿ ಸಂಯೋಜನೆಯಿಂದ ಜೀವ ತಳೆವ ಆ ಜೀವಿ ಹೇಗಿರಬಹುದು?
ಎಂದೆಲ್ಲ ಹಲವಾರು ಆಕೃತಿ ಆಕಾರಗಳನ್ನ -ರೂಪವನ್ಣ ಕಲ್ಪಿಸಿಕೊಳ್ಳುತ್ತ ಡಾ: ಸಿರಿ ಮತ್ತು ವಿಶಾಲ್ ನಿದ್ದೆಗೆ ಜಾರಿದರು...
ಮಾರನೆ ದಿನ ಎದ್ದು ತಯಾರಾಗಿ ಲಗು ಬಗೆಯಲ್ಲಿ ತಯಾರಾಗಿ ಕಂಪನಿ ತಲುಪಿ ಪ್ರಯೋಗಾಲಯ ಹೊಕ್ಕು ನಳಿಕೆಯತ್ತ ನೋಡಿದಾಗ ಅಲ್ಲಿ ಹಸ್ತ ಹಿಡಿಸುವಸ್ತು ಗಾತ್ರದ ಮೂರು ನವೀನ ಜೀವಿಗಳ 'ಕಂಬಳಿ ಹುಳು' ಹೋಲುವ ಆಕಾರ ನೋಡಿ ಪೆಚ್ಚಾದ ಡಾ:ಸಿರಿ ಗೆ ಡಾ: ವಿಶಾಲ್ ಇದು ಪ್ರಾರಂಬಿಕ ಹಂತವಲ್ಲವೇ ಬರ್ ಬರುತ್ತ ಅವುಗಳ ದೇಹಾಕಾರದಲ್ಲಿ ವ್ಯತ್ಯಾಸ ಆಗಲಿದೆ ಎಂದಾಗ ಡಾ: ಸಿರಿ ಸಮಾಧಾನಗೊಂಡಳು..
ಒಂದು ತಿಂಗಳೂ ಪೂರ್ತಿ ಹುಳುವಿನ ರೂಪದಲ್ಲೇ ಇದ್ದ ಅವುಗಳನ್ನ ದೊಡ್ಡ ಗಾಜಿನ ಬಾಕ್ಸ್ ನಲ್ಲಿ ಪ್ರತ್ಯೇಕವಾಗಿ ಇರಿಸಿ ಅವುಗಳ ರಕ್ಷಣೆ ಮಾಡಿದರು..
ಎರಡು ತಿಂಗಳಲ್ಲಿ ಎರಡು ನವೀನ ಜೀವಿಗಳನ್ನ ತೆಗೆದುಕೊಂಡು (ಇನ್ನೊಂದನ್ನ ಹಾಗೆಯೇ ಬಿಟ್ಟು) ಎರಡು ಜೀವಿಗಳು ಪರಸ್ಪರ ಬೆರೆತಾಗ ಹೇಗೆ ವರ್ತಿಸುವವು ಅಂತ ನೋಡಲು ಎರಡರ ಮದ್ಯದ ಬಾಗಿಲನ್ನು ತೆರೆದು ಅವುಗಳ ವರ್ತನೆ ನೋಡಲು ಉಸಿರು ಬಿಗಿ ಹಿಡಿದು ಕುತೂಹಲಿಗರಾಗಿ ನೋಡುತ್ತಾ ನಿಂತರು..
ಎರಡೂ ಹುಳು ರೂಪದ ಜೀವಿಗಳು ತೆವಳುತ್ತ ಹತ್ತಿರಬಂದವು ಎರಡೂ ತಮ್ಮ ಚಿಕ್ಕ ಬಾಯಿಯಿಂದ ನಾಲಗೆಯನ್ಣ ಹೊರ ಚಾಚಿ ಮುಂದೆ ಬಂದಾಗ ಡಾ: ಕಣ್ನನ್, ಸಿರಿ ಮತ್ತು ವಿಶಾಲ್ ಎರಡು ಕಾದಡಬಹುದೇ?
ಅಂತ ಭಯಗೊಂಡು ಡಾ: ಕಣ್ನನ್ ಅವರ ಕಡೆ ನೋಡಿದಾಗ ಅವರು ವಿಶಾಲ್ ಬೆನ್ನು ತಟ್ಟಿ ಸಮಾಧಾನ ಎನ್ನುವಂತೆ ನೋಡಿದರು, ಆ ಎರಡೂ ಜೀವಿಗಳು ತಮ್ಮ ತಮ್ಮ ನಾಲಗೆಯನ್ನ ಎದುರಿನದರ ಮೇಲೆ ಜೋರಾಗಿ ಬೀಸಿದವು ಆಮೇಲೆ ಒಂದರ ಒಳಗೆ ಒಂದು ತಮ್ಮ ನಾಲಗೆ ಬೆಸೆದುಕೊಂಡು ಸುತ್ತ ಮುತ್ತ ತಿರುಗಿದಾಗ ಅದನ್ನೇ ನೋಡುತ್ತಿದ್ದ
ಡಾ: ಕಣ್ನನ್- ಸಿರಿ ಮತ್ತು ವಿಶಾಲ್ ಗೆ ನೆಮ್ಮದಿಯಾಗಿ .....! ಉಫ್ ಅಂತ ಉಸಿರು ಬಿಟ್ಟರು ಅಲ್ಲಿಗೆ ಈ ಜೀವಿಗಳು ಪರಸ್ಪರ ಪ್ರೀತಿ ಪ್ರೇಮದಿಂದ ನಡೆದುಕೊಳ್ಳುವುವು, ಶತೃತ್ವದ ಭಾವನೆ ಇಲ್ಲ ಅಂತ ಅನ್ನಿಸಿ ಮತ್ತೆ ಆ ಜೀವಿಗಳನ್ನ ಅವುಗಳ ಪ್ರತ್ಯೇಕ ಜಾಗಕ್ಕೆ ಹಾಕಿ ಬಾಗಿಲು ಮುಚ್ಚಿದರು..
ಇದೆಲ್ಲವನ್ನೂ ರೆಕಾರ್ಡ್ ಮಾಡಿ ಕಂಪನೀ ಪಾಲುದಾರರಿಗೆ ತೋರಿಸಿದಾಗ ಈ ಜೀವಿಗಳ ಆಕೃತಿ ರೂಪ ಕಂಡು ಹಲವರು ಈ ಜೀವಿ ನೋಡೋಕೆ ಎಸ್ಟು ಕುರೂಪಿಯಾಗಿದೆ ಇದು ಹೀಗೆಯೇ ಮುಂದೆಯೂ ಇರುವುದೋ? ಇಲ್ಲ ಬದಲಾಗುವುದೋ ಎಂದಾಗ ಡಾ:ಕಣ್ನನ್ ನಗುತ್ತಾ ಇದು ಸದ್ಯಕ್ಕೆ ಬೆಳವಣಿಗೆ ಹಂತದಲ್ಲಿದೆ ಇನ್ನೂ ಒಂದು ವರ್ಷದಲ್ಲಿ ಆಕಾರ ರೂಪ ವಿನ್ಯಾಸ ಬದಲಾಗಬಹುದು ಎಂದರು...
ಬರೀ ರೆಕಾರ್ಡ್ ನೋಡಿ ಸಮಾಧಾನಗೊಳ್ಳದ ಕೆಲ ಪಾಲುದಾರರ ಕೋರಿಕೆ ಮೇರೆಗೆ ಇನ್ನೂ ಮೂರು ದಿನದಲ್ಲಿ ಅವುಗಳನ್ನ ಅವುಗಳ ವರ್ತನೆಯನ್ನ ಪ್ರತ್ಯಕ್ಷ ನೋಡುವ ವ್ಯವಸ್ತೆ ಮಾಡುವುದಾಗಿ ಹೇಳಿದರು ಡಾ: ಕಣ್ನನ್
ಮೂರು ದಿನಗಳ ನಂತರ ಕಂಪನಿಯ ಸಭಾಂಗಣದಲ್ಲಿ ಆಹ್ವಾನಿತ ಪಾಲುದಾರರು ಮತ್ತು ಅವರ ಕುಟುಂಬ ವರ್ಗದ ಮುಂದೆ ಎತ್ತರದ ಗಾಜಿನ ಬಾಕ್ಸ್ ಒಂದನ್ನ ತಂದು ಇಟ್ಟರು.. ಅವುಗಳಲ್ಲಿದ್ದ ಆ ಜೀವಿಗಳನ್ನ ನೋಡಿ ಕೆಲವರು ಮುಖ ಕಿವುಚಿದರು :((, ಹಲವಾರು ಕುತೂಹಲದಿಂದ ನೋಡಿದರು ಇನ್ನೂ ಕೆಲವರು ಏನೊಂದೂ ಭಾವನೆ ಇಲ್ಲದೇ ಸಧ್ಯ ಅವುಗಳಿಂದ 'ಲಾಭ' ಆದರೆ ಸಾಕು ಎಂಬಂತೆ ನೋಡಿದರು..!!
ಆ ಗಾಜಿನ ಬಾಕ್ಸ್ನ ಮದ್ಯದ ಬಾಗಿಲು ತೆಗ್ದು ಆ ಜೀವಿಗಳು ನಾಲಗೆ ಹೊರ ಹಾಕುವುದನ್ನೇ ನಿರೀಕ್ಷಿಸುತ್ತಾ ಇದ್ದ ಎಲ್ಲರ ಅನಿಸಿಕೆಯನ್ನ ಸುಳ್ಳು ಮಾಡಿ ಬಾಯಿಯಿಂದ ಚೂಪಾದದು ಕೊಂಬು ತರಹದ್ದು ಏನನ್ನೋ ತೆಗೆದು ಎರಡು ಘೇಂಡಾ ಮೃಗಗಳು ಪರಸ್ಪರ ಕೊಂಬುಗಳಿಂದ ತಿವಿದು ಕಾದಾಡುವ ಹಾಗೆ ಪರಸ್ಪರ ಸಿಟ್ತಿಂದ ಶಬ್ಧ ಮಾಡುತ್ತಾ ತಿವಿದಾಗ ಅಪಾರ ರಕ್ತ ಹರಿಯಿತು ಅದನ್ನು ನೇರವಾಗಿ ಮತ್ತು ಬೃಹತ್ ಪರದೆ ಮೇಲೆ ನೋಡುತ್ತಿದ್ದ ವಿಜ್ಞಾನಿಗಳು -ಪಾಲುದಾರರು ಮತ್ತು ಅವರ ಕುಟುಂಬ ಸದಸ್ಯರು ಶಾಕ್ ಆಗಿ ಏಳಲು ಹೊರಟಾಗಲೇ ಆ ಎರಡು ಜೀವಿಗಳು ಕಾದಾಡುತ್ತಾ ಕಾದಾಡುತ್ತಾ ಅವುಗಳ ಚಲನೆಗೆ ಆ ಗ್ಲಾಸ್ಬಾಕ್ಸ್ ಕಂಪಿಸಿ ಅದರ ಪರಿಣಾಮ ಅದು ಉರುಳಿ ಅದರಲ್ಲಿದ್ದ ನೀರು ರಕ್ತ ಮತ್ತು ಎರಡು ಜೀವಿಗಳ ಛಿದ್ರ ಛಿದ್ರ ದೇಹ ಬಂದು ನೋಡುತ್ತಾ ಕುಳಿತಿದ್ದವರ ಮೇಲೆ ಬಿದ್ದಾಗ ಹಲವರು ಮೂರ್ಛೆ ಹೋದರು ಇನ್ನೂ ಕೆಲವರು ನಿಷ್ಟೆಸ್ಟಿತರಾಗಿದ್ದರು ಎಲ್ಲರ ಕಾಲುಗಳು ದೇಹ ಗಡಗಡ ನೇ ಕಂಪಿಸುತ್ತಿತ್ತು..
ತಾವ್ ನಿರೀಕ್ಷಿಸಿದ್ದೆ ಒಂದು ಆಗಿದ್ದೆ ಒಂದು...!!
ಎಲ್ಲರೂ ಡಾ: ಕಣ್ನನ್ ಅವ್ರನ್ನ ಮತ್ತು ವಿಜ್ಞಾನಿಗಳನ್ನ ನುಂಗುವವರ ಹಾಗೆ ಕೋಪದಿಂದ ನೋಡಿದರು.. ಆಗ ಡಾ:ಕಣ್ನನ್ ಸುಧಾರಿಸಿಕೊಂಡು ಈ ತರಹದ ಪ್ರಯೋಗಗಳಲ್ಲಿಈ ತರಹ ಆಗೋದು ಸಾಮಾನ್ಯ ಅದಕ್ಕೆ ಏನು ಕಾರಣ ಅಂತ ತಿಳೀದ್ ನಾವ್ ಮುಂದೆ ಈ ತರಹ ಆಗದ ಹಾಗೆ ನೋಡಿಕೊಳ್ಳುವೆವು ಅಂದಾಗ ಬಹುಪಾಲು ಪಾಲುದಾರರು ನಮಗೆ ಈ ಪ್ರಯೋಗವೇ ಬೇಕಿಲ್ಲ, ಇದನ್ನು ಇಲ್ಲಿಗೆ ನಿಲ್ಲ್ಸೀ ಅಂತ ಹೊರ ನಡೆದರು..
ಡಾ: ಕಣ್ನನ್ ಡಾ: ಸಿರಿ ಮತ್ತು ವಿಶಾಲ್ ಅವರತ್ತ ಕಂಬನಿ ತುಂಬಿದ ಕಣ್ಣುಗಳಿಂದ ನೋಡಲು ಅವರನ್ನ ಸಂತೈಸಿ ಲ್ಯಾಬಿಗೆ ಮರಳಿದರು..
ಅಲ್ಲಿ ಇನ್ನೊಂದು ಜೀವಿ ಇತ್ಟಲ್ಲ- ಅದನ್ನು ನಾಶ ಪಡಿಸಲು ಡಾ: ಕಣ್ನನ್ ಸೂಚಿಸಿದರು, ಆದರೆ ತನ್ನ ಪತಿಯ ವಂಶವಾಹಿಗಳಿಂದ ರೂಪುಗೊಂಡ ಅದನ್ನು ನಾಶ ಪಡಿಸಲು -ಮಾಡಲು ಡಾ: ಸಿರಿ ಒಪ್ಪದೇ ಇದ್ದಾಗ ಡಾ: ಕಣ್ನನ್ ಹೇಳಿದರು
ಸ್ಸರಿ- ಈಗ ಅದನ್ನು ಹೊತ್ತೊಯ್ದು ಎಲ್ಲಿಯಾದರೂ ನಾಶ ಪಡಿಸಿ , ನೀವಾದರೂ ಇಟ್ಟುಕೊಳ್ಳಿ ಇಲ್ಲಿ ಅದು ಬೇಡ ಅಸ್ಟೆ...ಹೇಳಿ ಹೊರಟರು..
ಡಾ: ಸಿರಿ ವಿಶಾಲ್ ಕಡೆಗೆ ನೋಡಲು ನಮ್ ಮನೆಗೆ ಹೊಯ್ಯೋಣ ಅಲ್ಲಿ ಹೆಂಗೂ ನಮ್ಮದೇ ಖಾಸಗಿ ಪ್ರಯೋಗಶಾಲೆ ಇದೆ ಅಲ್ಲಿಯೇ ಇದನ್ನು ಬೆಳೆಸೋಣ ಅಂತ ಅದನ್ನು ಒಂದು ಶೀತದ ಬಾಕ್ಸ್ ಗೆ ಹಾಕಿ ಕಾರಲ್ಳಿ ಇಟ್ಟುಕೊಂಡು ಮನೆಗೆ ಹೋಗಿ ತಮ್ಮ ಪ್ರಯೋಗ ಶಾಲೆಯಲ್ಲಿ ಇಟ್ಟರು..
ಇಬ್ಬರಿಗೂ ಮನದ ಒಳಗಡೆ ಒಂದೇ ಆತಂಕ-
ಆ ಎರಡು ಜೀವಿಗಳಂತೆ ಇದೂ ವರ್ತಿಸಿದರೆ?
ಇದಕ್ಕೆ ಸಹಪಾಠಿ ಇಲ್ಲದೇ ಎಕಾಂಗಿ ಆಗಿ ಬೆಳೆವ ಬದುಕುವ ಬಗೆಯನ್ನ ಮೊದಲೇ ಕಲಿಸಬೇಕು ..
ಇಬ್ಬರೂ ನಿದ್ದೆಗೆ ಜಾರಿದರು..
ಆದರೆ 'ಭವಿಷ್ಯ' ಗೊತ್ತಿರುವ ಆ 'ಭಗವಂತ' ಅಲ್ಲಿ ಇದನ್ನೆಲ್ಲ ನೋಡುತ್ತಾ ನಗುತ್ತಿರುವನು....???
ಸಶೇಷ...(ಇನ್ನೂ ಇದೆ..)
----------------------------------------------------------
ಮುಂದೆ ಏನು ಆಗಲಿದೆ?
ಆ ಜೀವಿ ಯಾವ ಆಕಾರ ಪಡೆಯಲಿದೆ?
ಹೇಗೆ ವರ್ತಿಸಲಿದೆ?
ಈ ವಿಚಿತ್ರ ಪರಿಸರದಲ್ಲಿ ಅದು ಹೇಗೆ ಬಾಳಲಿದೆ?
ಎಲ್ಲದಕ್ಕೂ ಉತ್ತರ ಮುಂದಿನ ೨ ಕಂತುಗಳಲ್ಲಿ
ನಿರೀಕ್ಷಿಸಿ....
ಚಿತ್ರ ಮೂಲಗಳು :
http://t0.gstatic.c…
http://t0.gstatic.c…
http://t0.gstatic.c…
Rating
Comments
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧ by makara
ಉ: ನವ ಜೀವಿಯ ರಹಸ್ಯ ಸೃಷ್ಟಿ: ಭಾಗ-೧:ಪ್ರೇರಣೆ- ಸ್ಪೂರ್ತಿ- ಇತ್ಯಾದಿ..!!
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧ by sathishnasa
ಉ: ನವ ಜೀವಿಯ ರಹಸ್ಯ ಸೃಷ್ಟಿ:ರಾತ್ರಿ ೧೦ ಘಂಟೆ ಯೊಳಗೆ ೨ ನೇ ಭಾಗ..!!
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧ by nanjunda
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧ by Premashri
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧ by nanjunda
ಉ: ನವ ಜೀವಿಯ ರಹಸ್ಯ ಸೃಷ್ಟಿ:ಗಜಾನನ, ನರಸಿಂಹ, ಹಯಗ್ರೀವ..???
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧ by Prathik Jarmalle
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧ by partha1059
ಉ: ನವ ಜೀವಿಯ ರಹಸ್ಯ ಸೃಷ್ಟಿ:ತೀರ್ಪನ್ನು ಕಾಯ್ದಿರಿಸಿದ್ದು ..!!????
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ:ತೀರ್ಪನ್ನು ಕಾಯ್ದಿರಿಸಿದ್ದು ..!!???? by venkatb83
ಉ: ನವ ಜೀವಿಯ ರಹಸ್ಯ ಸೃಷ್ಟಿ:ತೀರ್ಪನ್ನು ಕಾಯ್ದಿರಿಸಿದ್ದು ..!!????
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ:ತೀರ್ಪನ್ನು ಕಾಯ್ದಿರಿಸಿದ್ದು ..!!???? by ಗಣೇಶ
ಉ: ನವ ಜೀವಿಯ ರಹಸ್ಯ ಸೃಷ್ಟಿ:ಸಲಾಕೆ- ಬರೆ ...!!.??
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ:ಸಲಾಕೆ- ಬರೆ ...!!.?? by venkatb83
ಉ: ನವ ಜೀವಿಯ ರಹಸ್ಯ ಸೃಷ್ಟಿ:ಸಲಾಕೆ- ಬರೆ ...!!.??
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ:ಸಲಾಕೆ- ಬರೆ ...!!.?? by ಗಣೇಶ
ಉ: ನವ ಜೀವಿಯ ರಹಸ್ಯ ಸೃಷ್ಟಿ: ಬರಹ-೧೦ ನೇ ಅವತರಣಿಕೆ...??
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧
In reply to ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧ by Jayanth Ramachar
ಉ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧: ಜಯಂತ್ ಅವ್ರೆ- ...??