ಅಮ್ಮನಿಂದ ಉಮ್ಮದವರೆಗಿನ 'ಹೆಣ್ಣು' ಮಗುವೆಂದರೇಕೆ ಬೇಡ 'ಹೆಣ್ಣು'

ಅಮ್ಮನಿಂದ ಉಮ್ಮದವರೆಗಿನ 'ಹೆಣ್ಣು' ಮಗುವೆಂದರೇಕೆ ಬೇಡ 'ಹೆಣ್ಣು'

ಕವನ

ಜನ್ಮದಾತೆ 'ಹೆಣ್ಣು'

ಜಗನ್ಮಾತೆ 'ಹೆಣ್ಣು'

ಹೆತ್ತು ಹೊತ್ತವಳು 'ಹೆಣ್ಣು'

ಮುತ್ತು ಕೊಟ್ಟವಳು 'ಹೆಣ್ಣು'

ಅಮ್ಮನಿಂದ ಉಮ್ಮದವರೆಗಿನ 'ಹೆಣ್ಣು'

ಮಗುವೆಂದರೇಕೆ ಬೇಡ 'ಹೆಣ್ಣು'

 

ಇದಾವ  ದೇವನ ಬೋದನೆ

ಕ್ರಿಸ್ತನದ್ದೊ!

ಶಿವನದ್ದೊ!     ಇಲ್ಲ್ಲಾ

ಅಲ್ಲನದ್ದೊ!

ದೊಡ್ಡವರಾಗೆ ಮಾಡಿದ್ದು

ದಡ್ಡರಾಗುತ,

ಇನ್ನಾದರು ತೆರೆ

ಮುಚ್ಹಿರುವ ಕಣ್ಣನ್ನು

ಹೆಣ್ಣು ಕಾಣದ ಕಣ್ಣಾದೀತು.

 

ಯಾರೊ ಹೆಳಿದ ನೆನಪು

ಪುಣ್ಯದ ಜೀವನ

'ಹೆಣ್ಣು'

'ಹೋನ್ನು'

'ಮಣ್ಣು' ಎಂದು

ಹೋನ್ನಿದ್ದರೇನು

ಮಣ್ಣಾಗುವುದು,

ಹೆಣ್ಣಿಗಾಗೆ!

'ಹೆರೆಹುಳುವಂತೆ  ಕೆದಕಿದರು'

ಸಿಗದಾಗಿದೆ ಈಗಾಗಲೇ ಹೆಣ್ಣು!

ಹುಡುಕುವುದರಲ್ಲೆ ನಲವತ್ತಾಗಿದೆ ಗಂಡು!

ಅಮ್ಮನಿಂದ ಉಮ್ಮದವರೆಗಿನ 'ಹೆಣ್ಣು'

ಮಗುವೆಂದರೇಕೆ ಬೇಡ 'ಹೆಣ್ಣು'

 

'ಬುದ್ದಿಯಿಲ್ಲದ ವಿದ್ದ್ಯೆಇದ್ದರೇನು!

ಹೆಣ್ಣಿಲ್ಲದ ಮನೆಇದ್ದರೇನು! ಮನವಿದ್ದರೇನು!

ಚಂದವಿಲ್ಲದ ಅಂದನಂತೆ  ಮನುಜ.

Comments