ಪ್ಲೀಸ್!! ಸತ್ಯ ಮೇವ ಜಯತೆಯ ಕನ್ನಡ ಅವತರಣಿಕೆಯನ್ನು ಟಿವಿನಲ್ಲಿ ಹಾಕಿ.

ಪ್ಲೀಸ್!! ಸತ್ಯ ಮೇವ ಜಯತೆಯ ಕನ್ನಡ ಅವತರಣಿಕೆಯನ್ನು ಟಿವಿನಲ್ಲಿ ಹಾಕಿ.

ಸತ್ತೇ ಹೋಗದ , ಎ೦ದೂ ಮುಗಿಯದ ಮೇ... ಘಾ  ಧಾರಾವಾಹಿಗಳು ..., ಬ್ರಾಡ್-ಕಾಸ್ಟ್‍ ಮಾಡೋದಕ್ಕೆ ಯೋಗ್ಯತೆನೇ ಇಲ್ಲದೇ ಇರೋ..   ಕೆಲ ರಿಯಾಲಿಟಿ ಶೋಗಳು..
 

ಸತ್ಯ  ಮೇವ ಜಯತೆ ಕಾರ್ಯಕ್ರಮದ ಮೊದಲ ಕ೦ತಿನ ಕಾರ್ಯಕ್ರಮ ನೋಡ್ತಾ ಇದ್ದೆವು(ಕನ್ನಡದಲ್ಲಿ , ಇ೦ಟರ್ನೆಟ್ ನಲ್ಲಿ). ಹೆಣ್ಣು ಮಗುವನ್ನು ಭ್ರೂಣದಲ್ಲಿಯೇ ಕರಗಿಸುವ ಕಟುಕ ಸಮಾಜದ ಕರಾಳತೆಯನ್ನು ೩೬೦ ಡಿಗ್ರಿ ಯಲ್ಲಿ ಹಿಡಿದು ತೋರಿಸುತ್ತಿದ್ದರು. ಕಾರ್ಯಕ್ರಮ ನೋಡ್ತಾ ಇದ್ದವರು ಯಾರೂ ಒಬ್ಬರ ಮುಖ ಒಬ್ಬರು ನೋಡಿಕೊಳ್ಳುವ ಧೈರ್ಯ ಮಾಡಲಿಲ್ಲ. ಯಾಕ೦ದ್ರೆ ಎಲ್ಲರ ಕಣ್ಣಲ್ಲೂ ನೀರಿತ್ತು. ಇ೦ತಹ ಸಮಾಜಮುಖಿ ಕಾರ್ಯಕ್ರಮಗಳು ನಮ್ಮವರಿಗೆ ತಲುಪಬೇಕು. ಎಲ್ಲರೂ ಎಚ್ಚೆತ್ತುಕೊಳ್ಳದಿದ್ದರೂ ಪರವಾಗಿಲ್ಲ, ಬದಲಾವಣೆಯ ಗಾಳಿ ನಮ್ಮೂರಿನ ಕಡೆಗೆ ಬೀಸಲಿ.
ನನಗೆ ಅವೆಲ್ಲಾ ಗೊತ್ತಿಲ್ಲಪ್ಪ..?
ಇಷ್ಟು ಅದ್ಭುತವಾಗಿರುವ ಕಾರ್ಯಕ್ರಮವನ್ನು ನಾನು ನಮ್ಮ ಅಪ್ಪ , ಅಮ್ಮ,  ಅಜ್ಜಿ,  ದೊಡ್ಡಪ್ಪ ಅವರಿಗೆಲ್ಲಾ ತೋರಿಸಬೇಕು. ಡಬ್ಬಿ೦ಗ್ ನ ಸಾಧಕ-ಬಾಧಕ ಗಳು ಏನೇ ಇರಲಿ...  ಪ್ಲೀಸ್ ಸತ್ಯ ಮೇವ ಜಯತೆಯ ಕನ್ನಡ ಅವತರಣಿಕೆಯನ್ನು ಟಿವಿ ಯಲ್ಲಿ ಪ್ರಸಾರ ಮಾಡೋದಕ್ಕೆ .... ಅವಕಾಶ ಕೊಟ್ಟು ಬಿಡ್ರಿ. ಪ್ಲೀಸ್

ಇನ್ನು ಇದನ್ನ ಡಬ್ಬಿ೦ಗ್ ಮಾಡಿ ಟಿವಿ ನಲ್ಲಿ ಹಾಕುವುದಕ್ಕೆ ಅಡ್ಡಿ ಬರ್ತಾ ಇರೋ ಕನ್ನಡ ಸಿನಿಮಾ ರ೦ಗದ  ಬಗ್ಗೆ ಎರಡು ಮಾತುಗಳನ್ನ ಕಟುವಾಗಿ ಹೇಳಿಬಿಡ್ತೇನೆ.
ಇವರು ತೆಗೆಯುವ ಸಿನಿಮಾಗಳಲ್ಲಿ ಕನ್ನಡತನ, ಸ೦ಸ್ಕೃತಿ ಎಲ್ಲಿರುತ್ತೆ .  ನೇಮು-ಫೇಮು ಕಾಸಿಗ೦ತ ಇವರು ಸಿನಿಮಾ ಮಾಡ್ತಾರೆ. ಮನರ೦ಜನೆಗೆ ಅ೦ತ ನಾವು ದುಡ್ಡು ಕೊಟ್ಟು ಸಿನಿಮಾ ನೋಡ್ತೀವಿ. ಇಲ್ಲಿ ಒಬ್ಬರಿಗೊಬ್ಬರು ಸವೆದುಕೊಳ್ಳುತ್ತಿರುವುದೇನು.. ಸ೦ಸ್ಕೃತಿ, ಭಾಷೆಯನ್ನ ಯಾಕಿವರು ಮಧ್ಯ ಹಿಡ್ಕ್೦ಡ್ ಬರ್ತಾರೆ ಗೊತ್ತಾಗ್ತಿಲ್ಲ. ಈ ರೀತಿಯ ಕಾರ್ಯಕ್ರಮ ಮಾಡುವ ಯೋಗ್ಯತೆ ನಮ್ಮವರಿಗೆ ಇಲ್ಲ ಅ೦ತೇನಿಲ್ಲ. ಮನಸ್ಸು ಮಾಡಿದ್ರೆ ಖ೦ಡಿತ ಮಾಡ್ತಾರೆ . ಆದ್ರೆ ಚಕ್ರವನ್ನು ಪುನಃ ಸ೦ಶೋಧಿಸುವ  ಯಾಕೆ..? why to re invent the wheel..? ಜ್ನಾನ ಯಾವ ದಿಕ್ಕಿನಿ೦ದ ಬ೦ದರೂ ಎರಡೂ ಕೈಯಿ೦ದಲೂ ಬಾಚಿಕೊಳ್ಳಬೇಕು ಅ೦ತ ನಮ್ಮೋರೆ ಯಾರೋ ಹೇಳಿದ್ದಾರೆ.
 

ಹೊಸ ಕನ್ನಡ ಸಿನಿಮಾ ಬ೦ದಾಗಲೆಲ್ಲಾ ಥಿಯೇಟರ್ ಗೆ ಹೋಗಿ ನೋಡಿಕೊ೦ಡು ಬರುವ ಅತಿ-ಸಾಮಾನ್ಯ ಅಪ್ಪಟ ಕನ್ನಡ ಪ್ರೇಕ್ಷಕ ನಾನು. ಒ೦ದು ಕೆಟ್ಟ ಸಿನಿಮಾ ನೋಡಿದಾಗಲೂ ಛೇ!! ಇನ್ನೊ೦ದು ಸಾರಿ ಥಿಯೇಟರ್ ಗೆ ಬರಬಾರ್ದು ಅ೦ತ ಅ೦ದ್ಕೋತೀನಿ. ಆದರೂ ಬರ್ತೀನಿ. ನಿಮ್ಮ ಒಳ್ಳೆಯ , ಕೆಟ್ಟ ಸಿನಿಮಾಗಳನ್ನು ನೋಡೋದಕ್ಕೆ ನಾವಿದ್ದೇವೆ. ಅದೆಲ್ಲಿ ಅವಾಸನದ ಅ೦ಚಿಗೆ ಹೋಗಿಬಿಡ್ತೇವೆ ಅ೦ತ ಹೆದರಬೇಡಿ.ಒಳ್ಳೆ ಸಿನಿಮಾ ಮಾಡಿ. ನಾವು ಮತ್ತೆ ಮತ್ತೆ ನೋಡ್ತೇವೆ. ಅದನ್ನು ಬಿಟ್ಟು ,...ಹೊಟ್ಟೆಪಾಡಿಗೆ ಗುಂಡಾಗಿರಿ ಮಾಡಿ ಕನ್ನಡಿಗರನ್ನು ಬಾವಿಯ ಕಪ್ಪೆ ಮಾಡಬೇಡಿ.

 

 ಕ್ರಿಸ್ಟೋಫರ್ ನೋಲಾನ್, ಸ್ಪಿಲ್‍ಬರ್ಗ್, ಪ್ರಿಯದರ್ಶನ್, ಪ್ರಕಾಶ್ ಜಾ ರ೦ತವರ ಅದ್ಭುತ ಕೂಸುಗಳು ಕನ್ನಡಿಗರ ಮನೆ ಮುಟ್ಟಲಿ. ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ೦ತಾದರೆ ಸದಭಿರುಚಿಯ ಸಿನಿಮಾಗಳು ನಮ್ಮಲ್ಲೂ ಸೃಷ್ಟಿ ಯಾಗಬಹುದು. ಬದಲಾವಣೆಯನ್ನು ಒಪ್ಪಿಕೊಳ್ಳೋಣ.

 

ಮುಗಿಸುವ ಮುನ್ನ:   ಸತ್ಯ ಮೇವ ಜಯತೆ ಕಾರ್ಯಕ್ರಮದ ಕೊನೆಗೆ ಬರುವ "ಬಾರೆ ಗುಬ್ಬಚ್ಚಿ" ಹಾಡಿನ ಸಾಲುಗಳು ಕೆಳಗಿವೆ. ಇದು ಹಿ೦ದಿಗಿ೦ತಲೂ ಕನ್ನಡದಲ್ಲಿ ಹೆಚ್ಚು  ಅರ್ಥಪೂರ್ಣವಾಗಿ ಮೂಡಿಬ೦ದಿರುವುದು ನಮ್ಮ ಭಾಷೆಯ ಹೆಮ್ಮೆ.

ಬಾರೆ ಗುಬ್ಬಚ್ಚಿ .. ಮುದ್ದಿನ ಗುಬ್ಬಿ
ಗೂಡಿಗೆ ಮರಳಿ ಬಾರೆ.
ಬಾರೆ ಗುಬ್ಬಚ್ಚಿ .. ಮುದ್ದಿನ ಗುಬ್ಬಿ
ಅ೦ಗಳಕೆ ನೀ ಬಾರೆ..

ಅ೦ಧಕಾರ ಕವಿದಿದೆ..ಆರ್ತನಾದ ಕರೆದಿದೆ.

ಮೋಡದ ಅ೦ಚಿನ, ಕಿರಣದ ಮಿ೦ಚನು
ಅ೦ಗಳಕೆ ನೀ ತಾರೆ.

ಸಾವಿರಾರು ಅನ್ಯಾಯಕೆ ನೀ ಈಡಾದೆ.
ನಮ್ಮ ಹಿ೦ಸೆಗೆ ನೀನು ಬಲಿಯಾದೆ.
ಸಹಿಸಲಾಗದೇ ದೂರ ಹಾರಿ ಹೋದೆ.
ನೀನಿಲ್ಲದೆ ಈ ಧರೆ ಬರಿದಾಗಿದೆ.
ನಮ್ಮ ಅ೦ಗಳ ಬರಡು ಬ೦ಜರ ಆಗಿದೆ.

ಬಾರೆ ಗುಬ್ಬಚ್ಚಿ .. ನಮ್ಮ ಗುಬ್ಬಕ್ಕ
ಗೂಡಿಗೆ ಮರಳಿ ಬಾರೆ.

ನಿನ್ನ ರೆಕ್ಕೆಗೆ ನಾ ರತ್ನ ಪೋಣಿಸುವೆ.
ನಿನ್ನ ಕ೦ಠಕೆ ದೃಷ್ಟಿ ತೆಗೆಯುವೆ.
ಷೋಡಷ ಶೃ೦ಗಾರದಿ ಅಲ೦ಕರಿಸುವೆ.
ಒಲವಿನಾ ಸುರಿಮಳೆ,
ನಿನ್ನ ಮೇಲೆ
ಸುರಿಸುವೆ
ನಿಸರ್ಗ ಸ್ವರ್ಗದಾ ಕನಸು ನನಸಾಗಿಸುವೆ.

ಬಾರೆ ಗುಬ್ಬಚ್ಚಿ .. ನಮ್ಮ ಗುಬ್ಬಕ್ಕ
ಗೂಡಿಗೆ ಮರಳಿ ಬಾರೆ.
ಬಾರೆ ಗುಬ್ಬಚ್ಚಿ .. ಮುದ್ದಿನ ಗುಬ್ಬಿ
ಅ೦ಗಳಕೆ ನೀ ಬಾರೆ.
ಬಾರೆ.. ಗುಬ್ಬಕ್ಕ

- ಸ್ವಾನ೦ದ್ ಕಿರ್‍ಕಿರೆ


http://www.youtube.com/watch?v=keM3u-116XI   Click here to watch full kannada version of satya meva jayate
 

Comments