ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೨

ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೨


ಇಲ್ಲಿವರೆಗೆ ಆಗಿದ್ದು:


ಸೃಷ್ಟಿ ಬಯೋ ಇಂಜಿನಿಯರಿಂಗ್ ಕಂಪನೀ ತನ್ನ ಸಂಶೋಧನಾ ವ್ಯಾಪ್ತಿ ವಿಸ್ತರಿಸಲು ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಏಕಾಧಿಪತ್ಯ ಸ್ಥಾಪಿಸಲು ನವ ಜೀವಿಯೊಂದರ ರಹಸ್ಯ ಸೃಷ್ಟಿಗೆ

 

ಕೈ ಹಾಕಿ ಮೊದಲಿಗೆ ೩ ನವ ಜೀವಿಗಳನ್ನ ಸೃಷ್ಟಿಸುವಲ್ಲ್ಲಿ ಯಶಸ್ವಿಯೂ ಆಗಿ ಅವುಗಳನ್ನ ಒಮ್ಮೆ ಗಾಜಿನ ಬಾಕ್ಸ್ನಲ್ಲಿ ಪ್ರತ್ಯೇಕವಾಗಿ ಇರಿಸಿ ಮದ್ಯದ ಬಾಗಿಲು ತೆಗೆದು ಅವುಗಳು ಪರಸ್ಪರ ಎದುರಾದಾಗ ಹೇಗೆ ವರ್ತಿಸುವುವು ಅಂತ ನೋಡಲು ಬಿಟ್ಟಾಗ, ಎರಡು ಜೀವಿಗಲೂ ಎದುರು ಬದುರಾಗಿ ಬಂದು ತಮ್ಮ ನಾಲಗೆಯಿಂದಲೇ ಪರಸ್ಪರ ಮೂಸುತ್ತಾ ನಾಲಗೆಗಳನ್ನು ಬೆಸೆದುಕೊಂಡು ಸುತ್ತಾಡಿದಾಗ್ ವಿಜ್ಞಾನಿಗಳಿಗೆ ಸಮಾಧಾನ ಆಯ್ತು, ಸಧ್ಯ ಇವುಗಳು ಪರ್ಸ್ಪರ ವಿಶ್ವಾಸ ಪ್ರೀತಿ ಪ್ರೇಮದಿಂದ ವರ್ತಿಸುವುವು- ಶತೃತ್ವದ ಭಾವನೆ ಇಲ್ಲ ಅಂತ..

ಆ ಬಗೆಗಿನ ವಿವರದ ವೀಡಿಯೋ ತೋರಿಸಿದಾಗ ಕಂಪನೀ ಪಾಲುದಾರರು ಅವುಗಳನ ಸ್ವತಹ ನೋಡುವ ಆಶೆ ವ್ಯಕ್ತ ಪಡಿಸಿದಾಗ... ಕಂಪನೀ ಪಾಲುದಾರರ ಮುಂದೆ ಆಯ್ದ ೨ ಜೀವಿಗಳ ವರ್ತನೆ - ಜೀವನ ಶೈಲಿ ತೋರಿಸುವಾಗ ಎರಡೂ ಜೀವಿಗಳು ಪರಸ್ಪರ ತಮ್ಮ ಕೊಂಬು ತರಹದ ಚೂಪಾದ ಅಂಗವೊಂದರಿಂದ ತಿವಿದುಕೊಂಡು ಕಾದಾಡಿ ಈ ಹಠಾತ್ ಬದಲಾವಣೆಗೆ ಅಚ್ಚರಿಯಾಗಿ ನೋಡುತ್ತಿದ್ದ ಪಾಲುದಾರ ಕುಟುಂಬದ ಮೇಲೆ ಅವುಗಳ ಚಿಂದಿಯಾದ ದೇಹದ ತುಂಡುಗಳು ಮತ್ತು ರಕ್ತ ನೀರು ಬಂದು ಬಿದ್ದು ಬಹುತೇಕರು ಮೂರ್ಛೆ ಹೋಗಿ ಇನ್ನೂ ಕೆಲವರು ಆಗಿದ್ದು ಕನಸೋ ನನಸೋ ಎಂಬಂತೆ ನೋಡುತ್ತಿರಲು ಚೇತರಿಸಿಕೊಂಡ ಕೆಲ ಪಾಲುದಾರರು ಡಾ: ಕಣ್ನನ್ ಅವರನ್ನು ನೋಡಲು ಅವರು ತಡ ಬಡಾಯಿಸುತ್ತಾ ಈ ತರಹದ್ದು ನಾವ್ ನಿರೀಕ್ಷಿಸಿರಲಿಲ್ಲ, ಅವತ್  ಪರೀಕ್ಷಿಸಿದಾಗ ಚೆನ್ನಾಗೇ ಇದ್ದವು ಈಗ ಏನಾಯ್ತೋ? ಅದಕ್ಕಾಗಿ ನಾವ್ ಪರೀಕ್ಷಿಸಬೇಕು ಅಂದಾಗ, ಪಾಲುದಾರರು ಈ ಸಂಶೋಧನೆಯೇ ಬೇಡ ಮೊದಲ ಪ್ರಯತ್ನವೇ ಭಯಂಕರವಾಗಿದೆ- ಮೊದಲೇ ರಹಸ್ಯ ಪ್ರಯೋಗ, ಒಂದೊಮ್ಮೆ ಈ ತರಹದ ಜೀವಿಗಳನ ಸೃಷ್ಟಿಸಿ ಅವು ಪರಸ್ಪರ ಕಾದಾಡೊದು ಅಲ್ಲದೇ ಮನುಷ್ಯರ ಮೇಲೂ ಕದನಕ್ಕೆ ಬಂದರೆ???

ಇದನ್ನು ಇಲ್ಲಿಗೆ ನಿಲ್ಲಿಸಿಬಿಡಿ ಎಂದು ಹೊರಟು ಹೋದಾಗ, ಡಾ : ಕಣ್ನನ್ ತಮ್ಮ ಮಹತ್ವಾಕ್ಕಾಂಖ್ಛೆಯ ಈ ಯೋಜನೆ ಹೀಗೆ ದುರಂತವಾಗಿ ಕೊನೆಯಾಯ್ತಲ್ಲ ಅಂತ ಮ್ಲಾನವಾದನರಾಗಲು, ಡಾ: ಸಿರಿ ಮತ್ತು ಡಾ: ವಿಶಾಲ್ ಅವರನ್ ಸಂತೈಸಿ ಲ್ಯಾಬ್ ಗೆ ಬಂದರು..

ಅಲ್ಲಿಗೆ ಬಂದ ಡಾ: ಕಣ್ನನ್ ಈ ರಹಸ್ಯ ಪ್ರಯೋಗ ಇಲ್ಲಿಗೆ ಕೊನೇ ಆಯ್ತು ಅಂತಲೂ ಮತ್ತು ಉಳಿದ ಒಂದು ಜೀವಿಯನ್ ನಾಶ ಮಾಡಲು ಹೇಳಿದಾಗ ತನ್ನದೇ ಪತಿಯ ವಂಶವಾಹಿ ಹೊಂದಿದ ಆ ಜೀವಿ ತನಗೆ ಸೇರಿದ್ದು ಅದನ್ನು ನಾಶ ಮಾಡೋಲ್ಲ ಎಂದಾಗ, ಡಾ: ಕಣ್ನನ್ ಮನೆಗೆ ಹೊಯ್ಯಲು - ಇಲ್ಲ ನಾಶ ಪಡಿಸಲು ತಿಳಿಸುವರು.. ಡಾ: ಸಿರಿ ಮತ್ತು ಡಾ: ವಿಶಾಲ್ ತಮ್ಮ ಕಾರಿನಲ್ಲಿ ಆ ಪುಟ್ಟ ಜೀವಿಯನ್ನ ಶೀತದ ಬಾಕ್ಸ್ ಗೆ ಹಾಕಿ ತಮ್ಮ ಮನೆಗೆ ಹೊಯ್ದು ಅಲ್ಲಿ ತಮ್ಮ ಸ್ವಂತ ಲ್ಯಾಬ್ ನಲ್ಲಿ ಇರಿಸುವರು..

ರಾತ್ರಿ ಮಲಗಿಕೊಂಡಾಗ ಇಬ್ಬರ ಮನದಲ್ಲೂ ಅದೇ ಯೋಚನೆ...??

ಈ ಜೀವಿಯೂ ಆ ಎರಡು ಜೀವಿಗಳಂತೆ ವರ್ತಿಸುವದೇ?

ಸೃಷ್ಟಿಸಿದ್ದೆ ಮೂರು ಜೀವಿಗಳು, ಈಗ ಉಳಿದದ್ದು ಇದೊಂದೇ, ಈಗ ಇದೊಂದೇ ಮುಂದೆ ಏಕಾಂಗಿಯಾಗಿ ಸಹ ಪಾಟೀ ಇಲ್ಲದೇ ಹೇಗೆ ಬೆಳೆದು ಇರಬಲ್ಲುದು? ಏನಾದರಾಗಲಿ- ಇದನ್ನು ಒಂಟಿಯಾಗೇ ಬೆಳೆಸುವ, ಅದಕ್ಕೆ ಆದಸ್ತು ಯಾವ್ ಕೊರತೆಯಾಗದಂತೆ ಬೆಳೆಸುವ ಅಂತಾ ಯೋಚಿಸುತ್ತಾ ನಿದ್ದೆಗೆ ಜಾರಿದರು...

ಮೊದಲನೆ ಭಾಗ: ನವ ಜೀವಿಯ ರಹಸ್ಯ ಸೃಷ್ಟಿ: (ಕಥೆ) ಭಾಗ-೧ |

ಸಂಪದ - Sampada

http://sampada.net/blog/%E0%B2%A8%E0%B2%B5-%E0%B2%9C%E0%B3%80%E0%B2%B5%E0%B2%BF%E0%B2%AF-%E0%B2%B0%E0%B2%B9%E0%B2%B8%E0%B3%8D%E0%B2%AF-%E0%B2%B8%E0%B3%83%E0%B2%B7%E0%B3%8D%E0%B2%9F%E0%B2%BF-%E0%B2%95%E0%B2%A5%E0%B3%86-%E0%B2%AD%E0%B2%BE%E0%B2%97-%E0%B3%A7/10/05/2012/36658

======



ಬೆಳಗ್ಗೆ ಎದ್ದು ಡಾ: ಸಿರಿ ಮತ್ತು ವಿಶಾಲ್ ಕಂಪನೀ ಗೆ ಹೋಗಲಿಲ್ಲ.

ನವ ಜೀವಿಯ ಸೃಷ್ಟಿ ಬಗೆಗಿನ ಪ್ರಯೋಗ ಅನಿರೀಕ್ಷಿತ ಅಂತ್ಯವಾಗಿದ್ದರಿಂದ ಮುಂದಿನ ಪ್ರಾಜೆಕ್ಟ್ ಬಗ್ಗೆ ಹೇಳುವವರೆಗೆ ಬರುವ ಅವಶ್ಯಕತೆ ಇಲ್ಲ ಎಂದು ಡಾ: ಕಣ್ನನ್ ಹೇಳಬೇಕಿತ್ತು ಆದರೆ ನೇರವಾಗಿ ಹೇಗೆ ಹೇಳುವುದು ಎಂಬ ದ್ವಂದ್ವದಲ್ಲಿ ಹಾಗೆಯೇ ಹೋಗಿದ್ದ ಅವರಿಗೆ ಆ ಕೆಲಸ ಸಲೀಸು ಮಾಡುವಂತೆ ಡಾ: ಸಿರಿ ಕರೆ ಮಾಡಿ ತಾವ್ ಇಬ್ಬರು ಇನ್ನು ಮೇಲೆ ತಮ್ಮದೇ ಪ್ರಯೋಗ ಶಾಲೆಯಲ್ಲಿ ವಯುಕ್ತಿಕ ಪ್ರಯೋಗಗಳಲ್ಲಿ ನಿರತರಾಗುವುದಾಗಿಯೂ ತಮ್ಮನ್ನು ಬಿಡುಗಡೆಗೊಳಿಸಿ ಎಂದಾಗ ಡಾ: ಕಣ್ನನ್ ಗೆ ನಿರಾಳ ಆಯ್ತು. ಆದರೂ ಈ ಇಬ್ಬರು ಮೇಧಾವಿಗಳ ಅವಶ್ಯಕತೆ ಕಂಪನೀ ಯ ಮುಂದಿನ ಪ್ರಾಜೆಕ್ಟ್ಸ್ ಗೆ ಬೇಕಾಗಬಹುದು ಎಂದು ಲೆಕ್ಕಾಚಾರ ಹಾಕಿ, ಅವಶ್ಯಕತೆ ಇರುವಾಗಲೆಲ್ಲ ತಮ್ಮನ್ನು ಕರೆಸುವುದಾಗಿಯೂ ಕೆಲಸಕ್ಕೆ ಬಾರದಿದ್ದರೂ ಸಂಬಳ ಕೊಡುವುದಾಗಿ ಇದನ್ನು ರಜೆ ಸಹಿತ ಗಳಿಕೆಗೆ ಶಿಫಾರಸ್ಸು ಮಾಡುವುದಾಗಿ ಹೇಳಿದರು..

ಅದಕ್ಕೆ ಡಾ: ಸಿರಿ ಮತ್ತು ವಿಶಾಲ್ ಹೂಗುಟ್ಟಿದರು..

ಆಮೇಲೆ ತಮ್ಮ ಮನೆಯ ಲ್ಯಾಬ್ ನಲ್ಲಿ ಆ ನವ ಜೀವಿಗೆ ಏನೆಂದು ಹೆಸರಿಡುವುದು ಎಂಬ ಚರ್ಚೆ ನಡೆದಾಗ ಡಾ: ವಿಶಾಲ್ ಹೇಳಿದ್ದು ನೀನೆ ಆಯ್ಕೆ ಮಾಡು ಅಂತ ಡಾ: ಸಿರಿ ಯೋಚಿಸಿ ಯೋಚಿಸಿ ಕೊನೆಗೆ ಒಂದು ಹೆಸರು ಹೊಳೆದು ಹೇಳಿದಳು...

ಸೃಷ್ಟಿ

ಅಂತಲೇ ಇಡೋಣ...!!

ಡಾ: ವಿಶಾಲ್ ನಗುತ್ತಾ ಹೌದಲ್ಲ, ಯಾಕಾಗಬಾರದು ಹೆಂಗು ಈ ಜೀವಿಯ ಆಗಮನಕ್ಕೆ ಸೃಷ್ಟಿಗೆ ತಮ್ಮ ಕಂಪನೀಯು ಕಾರಣ ಆದೀತು ಎಂದ.. ಈಗ ಇಬ್ಬರು ಸರದಿಯಲ್ಲಿ 'ಸೃಷ್ಟಿ' ಯ ಪಾಲನೆ ಪೋಷಣೆಯಲ್ಲಿ ದೇಖಾರೇಖಿಯಲ್ಲಿ ನಿರತರಾದರು.. ೬ ತಿಂಗಳುಗಳು ಗತಿಸಿದ ನಂತರ ತನ್ನ ಸುತ್ತ ಮುತ್ತಲಿನ ಪೊರೆ- ಪದರೂ ಸರಿಸಿಕೊಂಡು ಹೊರ ಬಂತು ಆ ಜೀವಿ ಪುಟ್ಟ ಮಗುವಿನ ಗಾತ್ರದ ಅದು ನೋಡಲು ಹೇಗೆ ಕಾಣಿಸುತ್ತಿತ್ತು? ಸುಮಾರು ೩ ಕೆ ಜಿ ತೂಗುತ್ತಿದ್ದ ಅದು ಮಾಮೂಲಾಗಿ ನವ್ಜಾತ ಶಿಶು ತರಹವೇ ಕಾಣಿಸುತ್ತಿದ್ದರೂ ತಲೆ ಪೂರಾ ಮಿರ ಮೀರನೆ ಮಿನುಗುತ್ತಿತ್ತು, ತಲೆ ಮಧ್ಯಕ್ಕೆ ಸರಿಯಾಗಿ ತಲೆಯ ಒಳ ಮುಖವಾಗಿ ಬಾಗಿದ ಒಂದು ಗೆರೆ, ಗೌರ ವರ್ಣದ ರೂಪ, ಕೈಗಳು ಸಾಮಾನ್ಯವಾಗಿ ಮನುಷ್ಯರಂತೆಯೇ ಇದ್ದರೂ ಉಗುರುಗಳು ಕೊಂಚ ಅಗಲವಾಗೇ ಕಾಣಿಸುತ್ತಿದ್ದವು, ಕಾಲುಗಳು ಮಾತ್ರ ಮನುಷ್ಯರ ತರಹ ಇರದೆ ಪ್ರಾಣಿಗಳ ಕಾಲುಗಳನ್ನ ಹೋಲುತ್ತಿದ್ದವು..

ಅದಕ್ಕಿಂತ ಅಚ್ಚರಿ 'ಬಾಲ' ಒಂದು ಸಹಾ ಮೂಡಿದ್ದು..!!

ಬೆನ್ನ ಹಿಂದಿನ ಹುರಿ ಎದ್ದು ಕಾಣುತ್ತಿದ್ದವು..

ಕಣ್ಣುಗಳು ಕಪ್ಪಾಗಿದ್ದು ಕಣ್ಣು ರೆಪ್ಪೆ ಸಮೇತ ಬಹು ಆಕರ್ಷಕವಾಗಿ ಕಾಣಿಸುತ್ತಿದ್ದವು.

ಮತ್ತಸ್ತು ಕೂಲಂಕುಶ್ವಾಗಿ ಪರೀಕ್ಷಿಸಿದಾಗ ಅದು ಹೆಣ್ಣು ಜೀವಿ ಅಂತ ಗೊತ್ತಾಗಿ ಡಾ: ಸಿರಿ ಯ ಆನಂದಕ್ಕೆ ಪಾರವೇ ಇರಲಿಲ್ಲ...

ಮತ್ತೆ ಇಲ್ಲದೇ ಏನು?

ಡಾ: ಸಿರಿ ಮತ್ತು ವಿಶಾಲ್ ದಂಪತಿಗಳಿಗೆ ಈ ಮೊದಲು ಜನಿಸಿದ್ದ ಒಂದು ಹೆಣ್ಣು ಮಗು ಅಕಾಲಿಕ ಮರಣಕ್ಕೆ ಆಸು ನೀಗಿತ್ತು, ತನ್ನ ಮಗುವಿನ ಫೋಟೋ ಫ್ರೇಮ್ ಕಡೆ ಒಮ್ಮೆ ನೋಡಿದ ವಿಶಾಲ್ ಡಾ: ಸಿರಿ ಗೆ ತಲೆ ನೇವರಿಸಿ ಸಾಂತ್ವಾಣ ಮಾಡಿದ. ಈಗ ಅದಕ್ಕೆ ಮಾಮೂಲಾಗಿ ಮನುಷ್ಯರು ಕುಡಿಸುವ ಹಾಗೆ ಹಾಲು ಕೊಡುವ ಹಾಗಿಲ್ಲ, ಅದಕ್ಕೆ ಕೆಲ ವಿಟಮಿನ್ ಮತ್ತು ಇನ್ನಿತರ ಅಗತ್ಯ ಪೋಷಕಾಂಶಗಳು ಬೆರೆತ ಮಿಶ್ರಣ ಕುಡಿಸಿದರು.. ಕಣ್ಣು ತೆರೆದು ಡಾ: ಸಿರಿ ಮತ್ತು ವಿಶಾಲ್ ಅವರನ್ನ ನೋಡುತ್ತಿದ್ದ ಮಗು ನೋಡುತ್ತಾ ನೋಡುತ್ತ್ತಾ ಕಣ್ಣು ಮುಚ್ಚಿ ಮಲಗಿತು...

ಮುಂದೆ ೩-೪ ವಾರಗಳ ನಂತರ ಹಲ್ಲುಗಳು ಮೂಡಲಾರಂಬಿಸಿದವು ಆ ಕಾರಣಕ್ಕೋ ಮತ್ತು ಇನ್ಯಾವ ಕಾರಣಕ್ಕೋ ಗೊತ್ತಾಗದೇ 'ಸೃಷ್ಟಿ' ಗೆ ಆಹಾರದ ಮಿಶ್ರಣ ಸೇರದೇ ಒಂಥರಾ ಮಂಕು ಭಾವ ಆವರಿಸಿ ಸದಾ ನಿಸ್ತೇಜವಾಗಿ ಬೀಳಲು ಆರಂಬಿಸಿದಳು ಡಾ: ಸಿರಿ ಚಿಂತಾಕ್ರಾಂತಲಾಗಿ ಪತಿಯ ಮುಖ ನೋಡಲು ಡಾ: ವಿಶಾಲ್ ಮತ್ತು ಸಿರಿ ಸೇರಿ ಮಗುವಿನ ಬೆನ್ನು ತಟ್ಟುವುದು ಗಾಳಿ ಹಾಕಿ ಹಾಡು ಹಾಡುವುದು ಏನು ಮಾಡಿದರೂ 'ಸೃಷ್ಟಿ' ಮಾತ್ರ ಮಂಕಾಗಿದ್ದು ಅವಳು ಉಳಿಯುವುದೇ ಇಲ್ಲವೇನೋ? ಎಂಬ ಶಂಕೆ ಇಬ್ಬರ ಮನದಲ್ಲಿ ಉದಯಿಸಲು ಡಾ: ಸಿರಿ ಸಿಟ್ಟಿನಿಂದ ಗಂಡನಿಗೆ ಹೇಳಿದಳು ಏನಾರಾ ಮಾಡಿ, ಅವಳನ್ನು ಹಾಗೆಯೇ ಸಾಯಿಸಲು ಸಮಯ ವ್ಯಯ ಮಾಡುತ್ತಿರುವಿರಾ? ನನಗೆ ಅವಳು ಬೇಕು ಅನ್ನಲು, ಡಾ: ವಿಶಾಲ್ ಒಮ್ಮೆ ತಮ್ಮ ಪ್ರಯೋಗದ ವಿಧಿ ವಿಧಾನ ಎಲ್ಲವನ್ನು ನೆನಪಿಸಿಕೊಂಡ ಏನೇನೋ ನೋಟ್ಸ್ ಬರೆದಿಟ್ಟುಕೊಂಡ ಮತ್ತೊಮ್ಮೆ ಎಲ್ಲವನ್ನು ನೋಡಿ ಏನೊಂದೂ ಹೇಳದೇ ತಟ್ಟನೆ ಆ ಮಗುವಿನ ಬಳಿಗೆ ಹೋಗಿ ಅದನ್ನು ಎತ್ತಿಕೊಂಡು  ಹೋಗಿ ಮನೆ ಮುಂದಿನ ನೀರಿನ ತೊಟ್ಟಿಯಲ್ಲಿ ಮುಳುಗಿಸಿದ, ಅವನ ಹಿಂದೆಯೇ ಬಂದ ಡಾ: ಸಿರಿ

ಏನಿದು?

ಆ ಮಗುವಂನ ನೀರಲ್ಲಿ ಮುಳುಗಿಸಿ ಸಾಯಿಸ ಹೊರಟೆಯಾ?

ನೀ ಒಬ್ಬ ಮನುಷ್ಯನೇ ಎಂದೆಲ್ಲ ಬಯ್ಯುತ್ತಾ ಆ ಮಗುವಂನ ನೀರಿಂದ ಎತ್ತ ಹೊರಟಳು..

ಡಾ: ವಿಶಾಲ್ ತನ್ನ ಪಟ್ಟು ಸಡಿಲಿಸದೇ 'ಸೃಷ್ಟಿಯನ್ನ' ನೀರೊಳಗೆ ಒತ್ತಿ ಹಿಡಿದು ನಿಂತ...

ತನ್ನ ಜನನಕ್ಕೆ ಕಾರಣ ಕರ್ತನಾದವನೆ ತನ್ನ ಕುತ್ತಿಗೆ ಹಿಡಿದು ನೀರಲ್ಲಿ ಮುಳುಗಿಸುತ್ತಿರಲು ಉಸಿರು ಕಟ್ಟಿದಂತಾಗಿ ಗೋಕ್ --ಗೋಕ್ --ಕ್..... ಅನ್ನುತ್ತಾ ಕೈ ಕಾಲು ಬಡಿಯುತ್ತಾ ಇದ್ದಳು 'ಸೃಷ್ಟಿ'.. ಎಸ್ಟೆಲಾ ಪ್ರಯತ್ನ ಮಾಡಿಯೂ ತನ್ ಪತಿಯ ವಜ್ರ ಮುಷ್ಟಿಇಂದ 'ಸೃಷ್ಟಿ'ಯನ್ಣ ಬಿಡಿಸಲು ಆಗದೆ ಡಾ: ಸಿರಿ ಸೋತು ರಪ ರಪನೆ ಡಾ: ವಿಶಾಲ್ ಗೆ ಬೆನ್ನಿನ ಮೇಲೆ ಹೊಡೆಯಲು ಶುರು ಮಾಡಿದಳು.. ಸತತ ಹತ್ತ್ತು ನಿಮಿಷಗಳ ನಂತರ ವಿಫಲ ಪ್ರಯತ್ನ ಮಾಡಿ 'ಸೃಷ್ಟಿ'ಯ ಕೈ ಕಾಲುಗಳು ಹೊಯ್ದಾಟ ನಿಲ್ಲಿಸಿದವು... ಅದನ್ನು ನೋಡಿದ ಡಾ: ಸಿರಿ ಮೂರ್ಚಿತಳಾದಳು.. ಡಾ: ವಿಶಾಲ್ 'ಸೃಷ್ಟಿ' ಯನ್ಣ ನೀರಿನಲ್ಲೇ ಬಿಟ್ಟು ಪತ್ನಿಗೆ ನೀರು ಚಿಮುಕಿಸಿ ಎಬ್ಬಿಸುವ ಪ್ರಯತ್ನ ಮಾಡುತ್ತಿರಲು.....

ಅತ್ತ ನೀರಿನ ತೊಟ್ಟಿಯಲ್ಲಿ.........

????????

ಎಚ್ಚರವಾಗಿ ಗಂಡನ ಮುಖ ನೋಡಿದ ಡಾ: ಸಿರಿ  ..... ಥ್ ನಂಗೆ ಅಸಹ್ಯ ಆಗುತ್ತೆ ಮುಖ ತೋರಿಸಬೇಡಿ ಅನ್ನಲು, ವಿಶಾಲ್, ಸಿರಿ ಏಳು ಸೃಷ್ಟಿ ಗೆ ಏನೂ ಆಗೋಲ್ಲ ಅಂದಾಗ, ಕ್ರುದ್ಧಳಾದ ಡಾ: ಸಿರಿ, ಅವಳನ್ನ ಸಾಯುವವರೆಗೆ ನೀರಲ್ಲಿ ಅದ್ದಿ ಮುಳುಗಿಸಿ ಈಗ ಏನೂ ಆಗೋಲ್ಲ ಅನ್ನುವಿರಾ ಎನ್ನಲು, ಡಾ: ವಿಶಾಲ್ ನಗುತ್ತಾ, ತೊಟ್ಟಿಯ ಕಡೆ ಕೈ ತೋರಿಸಿದ ಅಲ್ಲಿ ಸೃಷ್ಟಿ ಕಣ್ಣು ತೆರೆದು ಇವರಿಬ್ಬರನ್ನೇ ನೋಡುತ್ತಾ ಉಸಿರು ಬಿಡುತ್ತಾ ಅದಕ್ಕೆ ತೊಟ್ಟಿಯ ಮೇಲೆ ಗುಳ್ಲೆಗಳು ಬರಲು ಡಾ: ಸಿರಿ ಉದ್ವೀಘ್ನಳಾಗಿ ಕಿರುಚಿಡಳು 'ಸೃಷ್ಟೀ' ಓ..!! ದೆವ್ರೆ ನನ್ನ ಸೃಷ್ಟಿಗೆ ಏನೂ ಆಗಿಲ್ಲ, 'ಸೃಷ್ಟಿ'ಯನ್ಣ ಮೇಲೆಕ್ಕೆ ಎತ್ತಲು, ಅವಳಿಗೆ ಈಗ ನವ ಶಕ್ತಿ ಚೈತನ್ಯ ಬಂದಂತೆ ಕಾಣಿಸಿತು ಮುಂಚೆ ಇದ್ದ ಕೆಮ್ಮು ನಿಶ್ಯಕ್ತಿ ಎಲ್ಲವೂ ಹೋದ ಹಾಗಿತ್ತು.. ಒಮ್ಮೆ ಇಬ್ಬರತ್ತ ನೋಡಿದ 'ಸೃಷ್ಟಿ' ಒಂದು ನಗೆ ಬೀರಿದಳು ..

ಅವಳನ್ನು ಎತ್ತಿಕೊಂಡು ಮನೆಯೊಳಕ್ಕೆ ಬಂದು ಮಲಗಿಸಿ ಬಂದು ಡಾ: ವಿಶಾಲ್ ಹತ್ತಿರ ಕುಳಿತ ಡಾ: ಸಿರಿ ಇದೆಲ್ಲ ಏನು ಎಂಬಂತೆ ಆವನ ಮುಖ ನೋಡಲು :ಡಾ: ವಿಶಾಲ್ ಹೇಳಿದ- ನಾವ್ ಪ್ರಯೋಗ ಮಾಡುವಾಗಲೆಲ್ಲ ಈ ಜೀವಿಗಳು ನೀರನ್ನು ಹೆಚ್ಚು ಇಸ್ಟ ಪಡುತ್ತವೆ ಎಂಬ ಸಂಗತಿ ಗಮನಕ್ಕೆ ಬಂದಿತ್ತು ಈಗ ಬಹು ದಿನಗಳಿಂದ ನೀರಿಂದ ಆಚೆ ಇರುವುದರಿಂದ 'ಸೃಷ್ಟಿ' ಗೆ ಈ ರೀತಿ ಆಗಿರಬಹುದು ಎನ್ನುವ ಊಹೆ ಮಾಡಿ ನೀರಲ್ಲಿ ಒಯ್ದು ಮುಳುಗಿಸಿದೆ...

ಹಾಗೊಮ್ಮೆ ಅದೇ ಕಾರಣವಾಗಿರದೆ, 'ಸೃಷ್ಟಿ' ನಿಜವಾಗಿಯೂ ಸತ್ತಿದ್ದರೆ?

ನೋಡು ಸಿರಿ- ಕೆಲವೊಮ್ಮೆ ರಿಸ್ಕ್ ತೆಗೆದುಕೊಳ್ಳಲೇ ಬೇಕು, ಇದೂ ಅಸ್ಟೆ ರಿಸ್ಕ್ ಅಂದುಕೊಂಡೆ ಪುಣ್ಯಕ್ಕೆ ಏನೂ ಆಗಲಿಲ್ಲ.. ನಗುತ್ತಾ ಹೇಳಿದ... 'ಸೃಷ್ಟಿ' ಈಗ ಮುಂಚಿಗಿಂತ ಹೆಚ್ಚು ಆರೋಗ್ಯವಾಗಿದ್ದಳು ಈಗಲೂ ಅವಳಿಗೆ ವಿಟಮಿನ್ ಪೋಸಕಾಂಶ ಮಿಶ್ರಣವನ್ನೇ ನೀಡುತ್ತಿದ್ದರು... ಹೀಗೆಯೇ ಒಂದು ವರ್ಷ ಕಳೆದು ಹೋಯ್ತು ಈಗ ದೇಹಾಕಾರದಲ್ಲಿ ಸ್ವಲ್ಪ ಮನುಷ್ಯರನ್ ಹೋಲುವ ಕಳೆ ಕಾಣಿಸುತ್ತಿತ್ತು.. ಅವಳಿಗಾಗಿಯೇ ಬಟ್ಟೆ ಹೊಲ್ಡ್ ಡ್ರೆಸ್ ತೊಡಿಸಿ ಆಟ ಆಡುತ್ತಾ ಖುಷಿ ಪಡುತ್ತಿದ್ದ ಸಿರಿಯನ್ಣ ನೋಡಿದ ಡಾ: ವಿಶಾಲ್ ಕಣ್ಣಲ್ಲಿ ನೀರು ಜಿನುಗಿತು, ಅಯ್ಯೋ ಹುಚ್ಚಿ.. 'ಸೃಷ್ಟಿ' ಯನ್ಣ ಬಹು ಹಚ್ಚಿಕೊಂಡಿದ್ದಾಳೆ, ಒಮ್ಮೆ 'ಸೃಷ್ಟಿ' ಗೆ ಏನಾರಾ ಆದರೆ?.... ಊಹೆ ಮಾತ್ರದಿಂದಲೇ ಅವನಿಗೆ ಭಯ ಆಯ್ತು.. ದೆವ್ರೆ ಏನು ಆಗದಿರಲಿ...!! ಎದುರಿಗಿನ ದೇವರ ಪಟದತ್ತ ನೋಡುತ್ತಾ ಕೈ ಮುಗಿದು ಬೇಡಿದ .. ತಾನೇ ಸೃಷ್ಟಿಸಿದ್ದ 'ಸೃಷ್ಟಿ'ಯ ಕ್ಷೇಮಾಬ್ಯೂದಯಕ್ಕಾಗಿ ,'ಆ ಸೃಷ್ಟಿಕರ್ತನ ಕೃಪೆ' ಗಾಗಿ ಅಂಗಲಾಚಿದ್ದು ಅವನಿಗೆ ನಗು ತರಿಸಿತು....:())

ಈಗ 'ಸೃಷ್ಟಿ' ಗೆ ಪೂರ್ವ ತರಭೇತಿ ಕೊಡಲು ಡಾ: ವಿಶಾಲ್ ಮತ್ತು ಸಿರಿ ಮಾರುಕಟ್ಟೆಯಿಂದ ಹಲವಾರು ಶೈಕ್ಷಣಿಕ ಪರಿಕರಗಳನ್ನ ಆಟ ಆಡುತ್ತಾ ಕಳೆಯುವಂತ ವಸ್ತುಗಳನ್ನ ತಂದಿದ್ದರು.. ಅವುಗಳನ್ನ ಹರಡಿ 'ಸೃಷ್ಟಿ' ಮುಂದೆ ಹಾಕಿ, ಡಾ: ಸಿರಿ ಆ ದಿಂದ ಆ: ವರೆಗೆ ಕನ್ನಡದ ಎಲ್ಲ ಲಿಪಿಯ ಪದಗಳನ ಹೇಳಲು 'ಸೃಷ್ಟಿ' ಸುಮ್ಮನೇ ನೋಡುತ್ತಿದ್ದಳು ಅಸ್ಟೆ, ಯಾಕೋ ಡಾ: ಸಿರಿ ಗೆ 'ಸೃಷ್ಟಿ' ಬುದ್ಧಿ ಮಟ್ಟ ಇನ್ನೂ ವಿಕಸಿತ ಹಂತದಲ್ಲಿ ಇರುವುದರಿಂದ ನಾ ಹೇಳಿದ್ದು ಅವಳಿಗೆ ಏನೂ ಅರ್ಥ ಆಗಿರಲಿಕ್ಕಿಲ್ಲ ಅಂತ ಕುಳಿತಿರಲು....

ಅಮ್ ಮ್ ಮ್ ಆ ಆ.....

ಎಂಬ ವಾಕ್ಯ ಕಿವಿಗೆ ಬಿದ್ದು ಅದೆಲ್ಲಿಂದ ಬಂತು ಅಂತ ಸುತ್ತ ಮುತ್ತ ಕಾತುರಳಾಗಿ ನೋಡಿದ ಸಿರಿ ಒಮ್ಮೆ ತಲೆಯಲ್ಲಿ ಏನೋ ಹೊಳೆದು

ಓ! ದೆವ್ರೆ...!!

'ಸೃಷ್ಟಿ' 'ಸೃಷ್ಟಿ' ಈಗ ನೀ ಅಮ್ಮಾ ಅನ್ಡೆಯ?

ಅಮ್ಮ ಅಮ್ಮ ಓ!!

ಅಂಬೆಗಾಲು ಇಡುತ್ತಾ ಹತ್ತಿರ ಬಂದು ಆ ಮ್ ಮ್ ಮ್ ಆ ಆ ಅಂದಾಗ ಡಾ: ಸಿರಿ ಯ ಹೃದಯ ತುಂಬಿ ಬಂದು ಕಣ್ಣುಗಳ ಮೂಲಕ ನೀರು ಧಾರಾಕಾರವಾಗಿ ಹರಿಯಿತು.. ಧನ್ಯ ನಾ ಧನ್ಯಳಾದೆ ಎಂದುಕೊಳ್ಳುತ್ತ, ಮಗು ಅಮ್ಮ ಅಂತ ಹೇಗಮ್ಮ ನಿನಗೆ ಗೊತ್ತಾಯ್ತು ಅನ್ನಲು ಒಮ್ಮೆ ಗೋಡೆ ಮೇಲಿನ

ಅಮ್ಮ

ಅಪ್ಪ

ಅಕ್ಕ

ಅಣ್ಣ

ಇತ್ಯಾದಿ ತುಂಬಿದ್ದ ಪಟ ತೋರಿಸಿದಳು, ಆಗ ಡಾ: ಸಿರಿ ಗೆ ಗೊತ್ತಾಯಿತು

ಓ!!

ಇವಳು ನಾ ಬರೆಯುತ್ತಾ ಹೇಳುತ್ತಿದ್ದುದನ್ನ ಆ ಗೋಡೆ ಮೇಲ್ ನೋಡುತ್ತಾ ಅಲ್ಲಿ ಈ ಪದಗಳನ್ನೇ ಕೂಡಿಸುತ್ತಾ ಹೇಳಿರ್ವಳು... 'ಸೃಷ್ಟಿ' ಯನ್ಣ ತಬ್ಬಿಕೊಂಡು ಮುತ್ತಿಕ್ಕಿ ನೀ ಏನೂ ದಡ್ದಿ ಅಲ್ಲ ಬೇಜಾನ್ ಚಾಲಾಕಿ ಹುಡುಗಿ ಅನ್ನುತ್ತಾ ಎತ್ತಿ ಹೊಯ್ದು ಬೆಡ್ ಮೇಲೆ ಮಲಗಿಸಿದಳು.. ಹೊರಗಡೆ ಯಾವ್ದೋ ಕೆಲಸಕ್ಕೆ ಹೋಗಿದ್ದ ಡಾ: ವಿಶಾಲ್ ಮನೆಗೆ ಬಂದ ಕೂಡಲೇ ಮಡದಿಯ ಮೊಗ ನವೋಲ್ಲಾಸದಿಂದ ಮಿಂಗುತ್ತಿರುವುದು ಮತ್ತು ಅವಳು ಏನೋ ಹೇಳಲು ಕಾತರದಿಂದಿರುವುದು ಕಾಣಿಸಿತು...

ಸಿರಿ ಏನು ಫುಲ್ಲ್ ಖುಷಿ ಆಗಿರೋ ಹಾಗಿದೆ..

ಏನ್ಸಮಾಚಾರ? ಎನ್ನಲು ಡಾ: ಸಿರಿ ಎಲ್ಲವನ್ನು ಹೇಳಿದಳು , ಅದನ್ನು ಕೇಳಿ ಡಾ: ವಿಶಾಲ್ಗೆ ವಿಪರೀತ ಖುಷಿ ಆಗಿ ಅಂತೂ 'ಸೃಷ್ಟಿ' ಸಾಮಾನ್ಯ ಮನುಷ್ಯರಿಗಿಂತ ಹೆಚ್ಚಿನ ಬುದ್ಧಿ ಮತ್ತೆ ಹೊಂದಿರುವಲು ಅವಳ ಕಲಿಕೆಯಲ್ಲಿ ಏನೂ ಅಡ್ಡಿ ಇಲ್ಲ, ಏನಿದ್ದರೂ ಅವಳಿಗೆ ಏಕಾಂಗಿತನ ಇಲ್ಲದ ಹಾಗೆ ಬೆಳೆಸುವುದು ಅಸ್ಟೆ...

ಊಟ ಮಾಡಿ ಮಲಗುವಾಗ ಡಾ: ವಿಶಾಲ್ ಹೇಳಿದ ಸಿರಿ- ಅವಳನ್ನ ನಾವ್ ಶಾಲೆಗೆ ಕಳಿಸಲು ಆಗೋಲ್ಲ, ಹಾಗೆಯೇ ಹೊರಗಡೆಯೂ ಕರೆದುಕೊಂಡು ಹೋಗಲು ಆಗೋಲ್ಲ, ಅವಳಿಗೆ ಎಲ್ಲವೂ ಇಲ್ಲಿಯೇ ದೊರೆಯಬೇಕು.. ಡಾ: ಸಿರಿ ಹೂ ಗುಟ್ಟಿದಳು... ೫ ವರ್ಷದವರೆಗೂ ಯಾವ ಸಮಸ್ಯೆಯೂ ಆಗಲಿಲ್ಲ ಅವತ್ತು 'ಸೃಷ್ಟಿ' ಒಬ್ಬಳನ್ನೇ ಮನೆಯಲ್ಲಿ ಇರಿಸಿ ಹೇಗೆ ಹೋಗೋದು ಅಂತ ಅವಳನ್ನ ಕರೆದುಕೊಂಡು ಕಾರಲ್ಲಿ ಮಾರುಕಟ್ಟೆಗೆ ಹೋಗಿ ಮಾಂಸ ಖರೀದಿಸಿ ಕಾರಿನಲ್ಲಿ 'ಸೃಷ್ಟಿ' ಯ ಸಮೀಪವೇ ಇಕ್ಕಿದ್ದರು, ಅದರ ವಾಸನೆಗೆ ಆಕರ್ಷಿತಳಾಗಿ ಪೊಟ್ಟಣದಲ್ಲಿ ಕೈ ತೂರಿಸಿ ಸ್ವಲ್ಪ ಮಾಂಸದ ರುಚಿ ನೋಡಿದಳು 'ಸೃಷ್ಟಿ'...

ಮನೆ ತಲುಪಿ ಕಾರು ಇಳಿಯುತ್ತಿದ್ದ ಹಾಗೆಯೇ ಹತ್ತಿರವೇ ಇದ್ದ ಚಿಕ್ಕ ಪುಟ್ಟ ಗಿಡಗಳ ನಡುವೆ ಒಂದು ಮೊಲ ಓಡಿ ಹೋಯ್ತು, ಅದನ್ನು ನೋಡಿದ್ದೆ 'ಸೃಷ್ಟಿ' ಅದರ ಹಿಂದೆ ಓಡುತ್ತಾ ಹೋದಳು, ಈ ಅನಿರೀಕ್ಷಿತ ಘಟನೆಯಿಂದ ಕಂಗಾಲಾದ ಡಾ: ಸಿರಿ ಕೂಗಿದಳು ,ವಿಶಾಲ್ 'ಸೃಷ್ಟಿ' ಅಲ್ಲಿ ಮೊಲದ ಹಿಂದೆ ಓಡುತ್ತಿದ್ದಾಳೆ. ಬೇಗ ಬಾ ಅನ್ನುತ್ತಲೇ ತಾನೂ ಓಡತೊಡಗಿದಳು.. ವಿಶಾಲ್ ಹಿಂಬಾಲಿಸಿದ ಓಡುತ್ತಾ - ಕೂಗುತ್ತಾ, ಸೃಷ್ಟಿ' ಸೃಷ್ಟಿ ಓಡಬೇಡ ನಿಲ್ಲು ನಿಲ್ಲು... ಅರ್ಧ ಕಿಲೋ ಮೀಟರ್ ಅಸ್ತು ದೂರ ಬಂದು ಇಬ್ಬರು ಸುಸ್ತಾಗಿ ಮೊಣಕಾಲು ಮೇಲೆ ಕೈ ಊರಿ ಏದುಸಿರು ಬಿಡುತ್ತಾ ಕುಳಿತರು, ಸುತ್ತ ಮುತ್ತ ನೋಡಿದರೆ ಎಲ್ಲೂ 'ಸೃಷ್ಟಿ' ಸುಳಿವು ಇಲ್ಲ,

ಅಯ್ಯೋ...!! ಇದೇನು ಆಯ್ತು..

ಈಗ ಏನು ಮಾಡುವುದು?

ಅವಳು ಬೇರೆ ಯಾರ ಕಣ್ಣಿಗೆನಾರಾ ಬಿದ್ದರೆ ಅವಳನ್ನು ನೋಡಿ ಇದ್ಯಾವ ವಿಚಿತ್ರ ಜೀವಿ ಅಂತ ಜನ ಭಯ ಪಟ್ಟ್ ....

ಮುಂದಿನದನ್ನ ಯೋಚಿಸಲೂ ಆಗದೆ ಕುಳಿತ ವಿಶಾಲ್...

ಅತ್ತ..

ಹಿಂದಿನ ದಿನ ಯಾರೋ ರಾಜಕೀಯ ವ್ಯಕ್ತಿಗಳು ಮುಂಬರುವ ಚುನಾವಣೆ ಗಮನದಲ್ಲಿ ಇರಿಸಿಕ್ಕೊಂದು ಕೊಟ್ಟಿದ್ದ ಪ್ರೋತ್ಸಾಹದ ಪಾರ್ಟೀಯಲ್ಲಿ ಬಿಟ್ಟಿ ಸಿಕ್ಕಿತು ಅಂತ ಎಗ್ಗ ಮಗ್ಗ ಚಿಕನ್ನು ಬಿರಿಯಾನಿ ತಿಂದು ಕಂಠ ಮಟ್ಟ ಕುಡಿದು ಬೆಳಗ್ಗೆಯಿಂದ ಬೇಧಿ ಹತ್ತಿ ಒಂದೇ ಸಮನೆ ಬಯಲಿಗೆ < >ಮನೆಗೆ ಲೋಟ ಹಿಡಿದು ಹಿಡಿದು ಸುಸ್ತಾಗಿದ್ದ ಗುಂಡ ಮತ್ತೊಮ್ಮೆ ಲೋಟ ಹಿಡಿದುಕೊಂಡು ಬಯಲು ಕಡೆಗೆ ಹೊರಟಿದ್ದ, ಬಿಟ್ಟಿ ಸಿಕ್ಕಿತು ಅಂತ ತಿಂದೆ, ತಿನ್ನುವಾಗ ಅದ್ಯಾವ ಮಹಾತ್ಮನ ಕಣ್ಣು ನನ್ ಮೇಲೆ ಬಿತ್ತೋ..!!

ಆಗಿಂದ ಬರೀ ಬೇಧಿ ...:())) 

ತತ್...!! ಅನ್ನುತ್ತಾ ನೆಲದ ಮೇಲೆ ಕುಕ್ಕರೂ ಬಡಿದನೋ ಇಲ್ಲವೋ....... ಅಸ್ತರಲ್ಲಿ ಏನೋ ಸದ್ಧು ಆಗಿ ತನ್ನತ್ತಲೇ ಏನೋ ಓಡಿ ಓಡುತ್ತಾ ಬರುವುದು ಕಾಣಿಸಿತು, ಅದೇನು ಎಂತ ಅಂತ ಕಾಣಿಸದಿದ್ದರು ಅದು ಒಟ್ಟಿನಲ್ಲಿ ತನ್ನ ಕಡೆಗೆ ಬರುತ್ತಿದೆ ಅಂತ ಗೊತ್ತಾಗಿ ಎದ್ದು ಚಡ್ಡಿ ಕಟ್ಟಿಕೊಳ್ಳುವಾಗಲೆ ತನ್ನ ಕಾಲುಗಳ ಮದ್ಯೆ ಏನೋ ತೂರಿ ಹೋಯ್ತು ಅಂತ ಗೊತ್ತಾಯ್ತು...!!

ಅದು ಹಾವೆ?

ಅಂತ ನೋಡಲು ಚ0ಗನೆ ಜಿಗಿದು ಮಾಯವಾದ ಮೊಲ...:()))

ತತ್..!!

ಯಕಶ್ಚಿತ್ ಒಂದು ಮೊಲ ಕ್ಕೆ ಈ ಪರಿ ಭಯ ಪಡಬೇಕಿತ್ತೇ??? ಅಂತ ಮುಂದಕ್ಕೆ ತಿರುಗಿದಾಗ ಎದುರಿಗೆ ತಲೆಯಲ್ಲಿ ಕೂದಲು ಇಲ್ಲದ, ಮಿರೀ ಮಿರೀ ಮಿಂಚುವ ತಲೆ, ಚುಚ್ಚುವಂತೆ ಕಣ್ಣ ನೋಟ, ವಿಚಿತ್ರ ಕೈ ಕಾಲುಗಳನ್ನ ನೋಡಿ ಇದ್ಯಾವುದೋ ಪ್ರೇತವೋ ಏನೋ? ಅಂತ ಒಂದೇ ಓಟಕ್ಕೆ ಸತ್ತೇನೋ ಬಿದ್ದೆನೋ ಅಂತ ಲೋಟ ಬಿಸಾಕಿ ಓಡುತ್ತಿದ್ದ ಅವನನ್ನು ನೋಡುತ್ತಾ 'ಸೃಷ್ಟಿ' ಮೊಲ ಹಿಡಿಯಲು ಮುಂದಕ್ಕೆ ಗಾಳಿಯಲ್ಲಿ ನೆಗೆಯುತ್ತಾ ಓಡಿದಳು... ಅಲ್ಲಿ ದೂರದಲ್ಲಿ ಕಲ್ಲು ಪೋಟರೆ ಬಳಿ ನಡುಗುತ್ತ ಕುಳಿತಿದ್ದ ಮೊಲದ ಹಿಂದಿನಿಂದ ಸ್ವಲ್ಪವೂ ಶಂಕೆ ಶಬ್ಧ ಬರದಂತೆ ಬಂದು ಗಪ್ಪನೆ ಹಿಡಿದು ಎತ್ತಿ ಮೊಲದ ಕಣ್ಣುಗಳನ್ನ ಧಿಟ್ತಿಸಿದಳು 'ಸೃಷ್ಟಿ....' ಅದನ್ನು ಎತ್ತಿಕೊಂಡು ಕೆಳಗೆ ನೆಲದ ಮೇಲೆ ಕುಳಿತು ಅದರ ಮೈ ದವಡುತ್ಟಿದ್ದ ಅವಳನ್ನು ನೋಡಿದ ಮೊಲ ಯಾಕೋ ಕೇಡು ಶಂಕಿಸಿತು...ಪಾರಾಗುವ ಬಗೆಯನ್ನ ಯೋಚಿಸುತ್ತಿರಲು.......

ಇತ್ತ

ಗಾಬರಿಯಿಂದ ಓಡುತ್ತಾ ಬಂದು ಡಾ: ವಿಶಾಲ್ ಗೆ ಧಡ್ ಅಂತ ಗುದ್ದಿ ಕೆಳಗೆ ಬಿದ್ದ ಗುಂಡನಿಗೆ ಆ ಪ್ರಾಣಿಯೇ ಮತ್ತೆ ಎದುರು ಬಂತೇ ಅಂತ ಭಯವಾಗಿ ನೋಡಲು ಡಾ: ವಿಶಾಲ್ ಕೋಪದಿಂದ ಕಣ್ಣು ಕಾಣಿಸೋಲವೆ ? ಸೀದಾ ಬಂದು ಮೇಲೆಯೇ ಬೀಳಬೇಕಾ? ಅನ್ನಲು, ಅವನ ಹಿಂದೆಯೇ ಬಂದು ನಿಂತ ಡಾ: ಸಿರಿ ವಿಶಾಲ್ ಗೆ ಸುಮ್ಮನಿರಲು ಹೇಳಿ, ಏನಾಯ್ತು? ಎನ್ನಲು, ಗುಂಡ ಅಲ್ಲಿ ದೂರದಲ್ಲ್ ಕೈ ತೋರಿಸಿ ಅಲ್ಲಿ ಯಾವುದೋ ವಿಚಿತ್ರ ಪ್ರಾಣಿ ಕಾಣಿಸಿತು ಅಂತ ಹೇಳಲು ಮನದಲಿ ದುಗುಡ ಆದರೂ ಮುಖದಲ್ಲಿ ತೋರಿಸದೇ, ಓ! ಅದಾ ನಮ್ಮ ಮುಂದಿನಿಂದಲೇ ಹೋಯ್ತು, ಅದು ಕಾಡಿನಲ್ಲಿ ಇರುವ ಪ್ರಾಣಿ ದಾರಿ ತಪ್ಪಿ ಇಲ್ಲಿ ಬಂದಿರಬೇಕು... ಮತ್ತೆ ಕಾಡಿಗೆ ಹೋಗುವುದು ಅಂತ ಹೇಳಿ.. ಗುಂಡನಿಗೆ ಹೋಗಲು ಹೇಳಿದರು..

ಓ!! ಆದ ಕಥೆ, ಎನ್ನುತ್ತಾ ಮನೆಗೆ ಹೋದ ಗುಂಡನಿಗೆ ಮತ್ತೆ ಬೇಧಿ ಆಗಲೇ ಇಲ್ಲ...!!

ಓ! ಆ ಪ್ರಾಣಿ ನೋಡಿದ ಕೂಡಲೇ ಬೇಧಿ ಹೇಳದೇ ಕೇಳ್ಡ ಹೋಯ್ತಾ...?

ತನ್ನಸ್ತಕ್ಕೆ ನಕ್ಕ ಗುಂಡ ಹೇಳಿಕೊಂಡು...

ಇತ್ತ

ಮೊಲವನ್ನ ಕೈನಲ್ಲಿ ಹಿಡಿದು ಅದರ ಮೈ ದಡವತ್ತಿದ್ದ 'ಸೃಷ್ಟಿ' ಗೆ ಹೆಜ್ಜೆ ಶಬ್ಧ ಕೇಳಿಸಿತು ಹಿಂದೆಯೇ 'ಸೃಷ್ಟಿ' ಸೃಷ್ಟಿ' ಎಲ್ಲಿರುವೆ ಎಂಬ ಮಾತುಗಳು ಕೇಳಿಸಿದವು.. ದೂರದಲ್ಲಿ ತಮಗೆ ಬೆನ್ನು ಮಾಡಿ ಕುಳಿತಿದ್ದ 'ಸೃಷ್ಟಿ'ಯ ಸಮೀಪಿಸಿ ನೋಡಿದರೆ ಕೈ ನಲ್ಲಿ ಮೊಲ ಹಿಡಿದು ಕುಳಿತಿರುವಳು....!

ಅವಳನ್ನು ಮೊಲದ ಸಮೇತ ಮನೆಗೆ ಕರೆದೊಯ್ದು ಮೊಲಕ್ಕೆ ಗರಿಕೆ ತಿನ್ನಿಸಿ ಆಟ ಆಡುತ್ತಾ ಕುಳಿತಳು 'ಸೃಷ್ಟಿ'..... ಎರಡು ದಿನಗಳ ನಂತರ 'ಸೃಷ್ಟಿ' ಮತ್ತು ಮೊಲ ಆತ್ಮೀಯವಾದರು...

ಮೊಲದ ಜೊತೆಯೇ ಆಟ ಆಡುತ್ತಾ ಕಾಲ ಕಳೆವ 'ಸೃಷ್ಟಿ' ಗೆ ಡಾ: ಸಿರಿ ಬೈದಿದ್ದು ಮತ್ತು ಮೊಲವನ್ಣ ಅವಳಿಂದ ಬೇರೆ ಮಾಡಿ ಗೂಡಿಗೆ ಸೇರಿಸಿದಳು ಅಸ್ಟೆ....

ಅವತ್ತು ಪೂರ್ತಿ ಮುಖ ಊದಿಸಿಕೊಂಡು ಇದ್ದ 'ಸೃಷ್ಟಿ' ಯನ್ಣ ಅವಳ ಪಾಡಿಗೆ ಬಿಟ್ಟು ತಾವ್ ಇಬ್ಬರು ಮಾತಾಡುತ್ತಾ ಕುಳಿತಿದ್ದರು ಡಾ: ಸಿರಿ ಮತ್ತು ವಿಶಾಲ್.. ಏನೋ ಶಬ್ಧ ಕೇಳಿಸಿ ಏನು ಅಂತ ಹೋಗಿ ನೋಡಿದರೆ ಅಲ್ಲಿ ಅವಳ ಕೋಣೆಯಲ್ಲಿ ಇವರಿಗೆ ಬೆನ್ನು ಮಾಡಿ ನಿಂತಿರುವ 'ಸೃಷ್ಟಿ' ಕೈಗಳಲ್ಲಿ ಕೊಸರಾಡುತ್ತಿರುವ ಮೊಲ, 'ಸೃಷ್ಟಿ' ಕಣ್ಣುಗಳಲ್ಲಿ ಕೆಂಡದ ಛಾಯೆ....ಕಾಣಿಸಿ ದಂಪತಿಗಳಿಗೆ ಭಯ ಆಯ್ತು, ಆದರೂ ಸಾವರ್ಸಿಕೊಂಡು 'ಸೃಷ್ಟಿ' ಆ ಮೊಲ ಬಿಡು, ಪ್ರಾಣಿಗಳಿಗೆ ಹಿಂಸೆ ಕೊಡಬಾರದು ಪಾಪ..! ಅನ್ನುತ್ತಾ ಮುಂದೆ ಮುಂದೆ ಬರಲು, 'ಸೃಷ್ಟಿ' ಮತ್ತಸ್ತು ವ್ಯಗ್ರ ಆಗಿ ವಿಚಿತ್ರ ಶಬ್ಧ ಹೊರಡಿಸುತ್ತಾ ಆ ಮೊಲವನ್ ಗಟ್ಟಿಯಾಗಿ ಹಿಡಿದು ಓಡುತ್ತಾ ಮನೆ ಹಿಂದೆ ಓಡಿದಳು....

ಕತ್ತಲೇ ತುಂಬಿದ್ದ ಮನೆ ಹಿಂದುಗಡೆ ತಡ ಬಡಾಯಿಸುತ್ತಾ ಹೋಗಿ ನೋಡಿದಾಗ ಆಲ್ ದೂರದಲ್ಲಿ 'ಸೃಷ್ಟಿ' ಕುಳಿತಿರುವುದು ಕಾಣಿಸಿ

ಓ! ಸದ್ಯ ಇಲ್ಲೇ ಇರುವಳು ಏನೂ ಆಗಿಲ್ಲ ಅಂತ , 'ಸೃಷ್ಟಿ' ಈ ಕಡೆ ತಿರುಗು ,ಬಾ ಇಲ್ಲಿ ಎಂದರು, ಬರದೇ ಇದ್ದ 'ಸೃಷ್ಟಿ' ಹತ್ತಿರವೇ ಹೋದ ಇಬ್ಬರು ಅವಳನ್ನ ನೋಡಿ ಧಂಗಾಗಿ ಬೆಚ್ಚಿದರು,

ಡಾ: ಸಿರಿ -ಬಸವಳಿದು ಬಿದ್ದಳು...

ಅಲ್ಲಿ ಅವರು ಕಂಡಿದ್ದು ಏನು???.

ನಾಳೆ ಉಳಿದ ಭಾಗಗಳು....!!

ಚಿತ್ರ ಮೂಲಗಳು :

t0.gstatic.com/images

t3.gstatic.com/images

Rating
No votes yet

Comments