ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
ತಿಂಬಟ್ ಸ್ವಾಮಿಗಳ ಉದ್ಗಾರಗಳನ್ನು ಓದಿದ ಅನೇಕರು ಸ್ವಾಮಿಗಳ ಶಿಷ್ಯರಾಗಲು ಮುಂದೆ ಬಂದಿದ್ದಾರೆ ಎಂದು ಸ್ವಾಮಿಗಳ ಬಳಿ ಹೇಳಿದೆ. "ಈ ದಿನ ಗುರು-ಶಿಷ್ಯರ ಆಯ್ಕೆ ಬಗ್ಗೆ ಹೇಳುವೆ. ಓದಿದ ನಂತರ ಎಷ್ಟು ಜನ ಶಿಷ್ಯರಾಗುವರೋ ನೋಡೋಣ" ಎಂದರು.
ಗುರುವಿನ ಆಯ್ಕೆ :
ನಿಮ್ಮ ಸಂಪದಿಗರೇ ಆದ ಆಸುಹೆಗ್ಡೆಯವರು ತಮ್ಮ ಲೇಖನದಲ್ಲಿ ಸ್ವರಗಳ ಏರಿಳಿತ ಸಹಿತ ನ್ಯೂಸ್ ಓದುವ ನ್ಯೂಸ್ ರೀಡರ್ಗಳ ಅಭಿಮಾನಿಯಾಗಿರುವ ಬಗ್ಗೆ ಬರೆದಿರುವರು. ಅದೂ...ಎಷ್ಟೋ ವರ್ಷಗಳ ಹಿಂದೆ.. ಬರೀ ನ್ಯೂಸ್ ಓದುವವರನ್ನೇ ಮರೆಯಲಾಗುತ್ತಿಲ್ಲ.
ಹೀಗಿರುವಾಗ ರತ್ನಗಂಬಳಿ ಹಾಸಿದ ನೆಲ, ಹಿಂದಿನಿಂದ ಹಿತವಾದ ಸಂಗೀತ, ಅಲಂಕೃತ ಪೀಠದಲ್ಲಿ ಕುಳಿತ, ಕಾವಿ ಬಟ್ಟೆ+ರುದ್ರಾಕ್ಷಿ ಇತ್ಯಾದಿ ಧರಿಸಿದ ಸ್ವಾಮಿಗಳು- ಸ್ವರಗಳ ಏರಿಳಿತ ಸಹಿತ ಪ್ರವಚನ ಕಣ್ಣೆದುರಿಗೇ ಮಾಡುವಾಗ, ಪುಂಗಿಯ ನಾದಕ್ಕೆ ಹಾವು ತಲೆ ಆಡಿಸಿದಂತೆ, ಜನ ಮನಸೋಲುವರು. ಹೆಚ್ಚಿನ ಜನರಿಗೆ ಈ ಸ್ವಾಮಿಗಿಂತ ಜಾಸ್ತಿಯೇ ಗೊತ್ತಿರುವುದು. ಆದರೆ ಸ್ವಾಮಿಗಳಿಗೆ ಮಾತನಾಡುವ/ಜನರನ್ನು ಮೋಡಿ ಮಾಡುವ ಕಲೆ ಗೊತ್ತಿದೆ. ಬುದ್ಧಿವಂತ ಜನರೇ ಸ್ವಾಮಿಯ ದಾಸಾನುದಾಸರಾಗುವಾಗ, ಜನಸಾಮಾನ್ಯರು ಕುರಿಗಳಂತೆ ಹಿಂಬಾಲಕರಾಗುವರು.
ಒಂದು ಮಾವಿನ ಹಣ್ಣು ತೆಗೆದುಕೊಳ್ಳುವಾಗ, ಹಣ್ಣಿನ ಸುತ್ತಲೂ ನೋಡಿ, ಒಂದು ಕಪ್ಪು ಕಲೆ ಅಥವಾ ಏಟಾದ ಕಲೆ ಇದ್ದರೆ ತೆಗೆದುಕೊಳ್ಳುವುದಿಲ್ಲ. ಅದೇ ಸ್ವಾಮಿಗಳ ಮಾತಿಗೆ ಮರುಳಾಗಿ, ಅವರ "ಕಲೆ"ಗಳು ಕಣ್ಣಿಗೆ ರಾಚುತ್ತಿದ್ದರೂ, ಕಣ್ಣುಮುಚ್ಚಿ ಶಿಷ್ಯರಾಗುವಿರಿ. ನನ್ನ ಅಪ್ಪ ಪೂಜಿಸುತ್ತಿದ್ದರು-ನಾನೂ ಪೂಜಿಸುತ್ತೇನೆ/ ನಮ್ಮ ಮನೆತನದ ಸ್ವಾಮಿ / ನಮ್ಮ ಜಾತಿಯ ಸ್ವಾಮಿ ಎಂದೆಲ್ಲಾ ಹೇಳಿ ಪೂಜೆ/ಪಾದಪೂಜೆ ಮಾಡುವರಿ.
"ದೇವರು" ನಿಮಗೆ ಬುದ್ಧಿ ಕೊಟ್ಟಿರುವರು ತಾನೆ..?
"ನಿಮ್ಮ ದೇವರು" ನಿಮಗೆ ಬುದ್ಧಿ ಕೊಟ್ಟಿರುವರು ಹೌದಲ್ವಾ?
ಅದಕ್ಕೇ..
ಹೀಗೆ ಬುದ್ಧಿ ಇಲ್ಲದವರಂತೆ ಸ್ವಾಮಿಗಳ ಆಯ್ಕೆ ಮಾಡುವಿರಿ.
ನಾನು : ಹಾಗಿದ್ದರೆ ಸ್ವಾಮಿಗಳ ಆಯ್ಕೆ ಹೇಗೆ ಮಾಡಬೇಕು?
-ಇಷ್ಟು ಹೇಳಿದ ಮೇಲೂ ಇದನ್ನೂ ನಾನೇ ಹೇಳಬೇಕಾ? ದೇವರು ಕೊಟ್ಟದ್ದಲ್ಲ-ನಿಮ್ಮ ಸ್ವಂತ ಬುದ್ಧಿ ಉಪಯೋಗಿಸಿ.
ಶಿಷ್ಯನ ಆಯ್ಕೆ :
ಮೊದಮೊದಲು ಸ್ವಾಮಿಗಳು ಉತ್ತಮರೇ ಇರುತ್ತಾರೆ. ಯಾವಾಗ ಅವರ ಸುತ್ತಲೂ ಶಿಷ್ಯವೃಂದ ಜಾಸ್ತಿಯಾಗುವುದೋ ಆವಾಗ ಸ್ವಾಮಿಗಳು ದಾರಿತಪ್ಪುವ ಅವಕಾಶಗಳು ಒಂದೊಂದಾಗೇ ಬರುವುದು. ಸ್ವಾಮಿಗಳು ಮಾಡುವ ಮೊದಲ ತಪ್ಪು-ಶಿಷ್ಯರನ್ನು ಪರೀಕ್ಷಿಸಿ ಆಯ್ಕೆ ಮಾಡದಿರುವುದು!
ನಾವು ಶಿಷ್ಯರನ್ನು ಆಯ್ಕೆಮಾಡಲೆಂದೇ ಎರಡು " ಸಮ್ಮರ್ ಕ್ಯಾಂಪ್" ಮಾಡಿದ್ದೆವು. ಪಾರ್ಥಸಾರಥಿಯವರು ಕ್ಯಾಂಪ್ನ ಬಗ್ಗೆ ವಿವರವಾಗಿ ಲೇಖನ ಬರೆದಿದ್ದುದನ್ನು ನೀವೆಲ್ಲಾ ಓದಿರುವಿರಿ. ಒಂದು ಹೊತ್ತಿನ ಊಟ ಬಿಡಲಾಗದೇ, ಐಹಿಕ ಭೋಗಭಾಗ್ಯದಲ್ಲಿ ಮುಳುಗಿದವರನ್ನು ನಾವು ಹೇಗೆ ಶಿಷ್ಯರಾಗಿ ಸ್ವೀಕರಿಸುವುದು? ಸಂಪದಿಗರನ್ನು ಬಿಟ್ಟು ಯಾರೊಬ್ಬರೂ ಆಯ್ಕೆಯಾಗಿಲ್ಲ. ಅದಕ್ಕಾಗಿ ಮುಂದಿನ ಕ್ಯಾಂಪ್ ಬೇಡ ಎಂದು ನಿರ್ಧರಿಸಿದೆವು.
ನಾನು : ಸಂಪದಿಗರೂ ಊಟಕ್ಕಾಗಿ ಆಸೆಪಟ್ಟಿದ್ದರಲ್ಲಾ?
ತಿಂ :ಸಂಪದಿಗರೂ ಸಹ ಅವರಂತೇ ಇದ್ದರೂ, ಸ್ವಾಮಿಗಳನ್ನು ಕಣ್ಣುಮುಚ್ಚಿ ನಂಬಲಿಲ್ಲ. ಅವರ ಮೇಲೆ ಸಂಶಯ ವ್ಯಕ್ತಪಡಿಸಿದರು. ಈ ಗುಣ ಶಿಷ್ಯರಲ್ಲಿ ಇದ್ದರೆ ಸ್ವಾಮಿಗಳೂ ಯಾವಾಗಲೂ ಜಾಗೃತರಾಗಿರುವರು. "ಸ್ವಂತ" ಬುದ್ಧಿವಂತ ಸಂಪದಿಗರೆಲ್ಲರೂ ಶಿಷ್ಯರಾಗಲು ಅರ್ಹರೇ...
ಆದರೂ ಅವರಲ್ಲಿ ಒಬ್ಬರನ್ನೂ ಶಿಷ್ಯರಾಗಿ ಆಯ್ಕೆ ಮಾಡಿಲ್ಲ. ಯಾಕೆಂದರೆ..........
ಚೇತನ್ : ಈ ಚಿಕ್ಕು ಚಿಕ್ಕವನಿದ್ದರೂ, ನಮ್ಮನ್ನು ಲೌಕಿಕ ಭೋಗಭಾಗ್ಯದಲ್ಲಿ ಸಿಲುಕಿಸುವನು.
ರಾಮೋ ಮತ್ತು ಪಾರ್ಥಸಾರಥಿ : ಶಿಷ್ಯರಾಗುವುದಕ್ಕಿಂತಲೂ ಇವರಿಗೆ ಗುರುವಿನ ಪೀಠದ ಕಡೆಗೇ ಕಣ್ಣು.
ಜಯಂತ್ : ಇನ್ನೂ ೧೦-೧೨ ದೆವ್ವಗಳ ಪ್ರೇಮಪಾಶದಿಂದ ಬಿಡುಗಡೆಯಾಗಬೇಕಿದೆ.
ಸತೀಶ್, ಶ್ರೀಧರ್, ಕವಿನಾಗರಾಜ್ : ದೇವರಿಲ್ಲ ಎಂಬ ನಮ್ಮ ತತ್ವವನ್ನೇ ಬುಡಮೇಲು ಮಾಡಿಯಾರು.
ಸಪ್ತಗಿರಿವಾಸಿ : ತಾನೇ ಹೊಸ "ಸೃಷ್ಟಿ"ಕ್ರಿಯೆ ಪ್ರಾರಂಭಿಸಿದವನು. ಬಹಳ ಡೇಂಜರ್!
(ಮುಂದಿನ ಭಾಗ- ಆತ್ಮ/ಪರ್ಮಾತ್ಮ)
Comments
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by makara
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by venkatb83
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by partha1059
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ):ಗಮನಕ್ಕೆ..??
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by partha1059
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by sathishnasa
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by kavinagaraj
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by nanjunda
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by kavinagaraj
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by kavinagaraj
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by ಗಣೇಶ
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by partha1059
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by partha1059
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by kavinagaraj
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by ಗಣೇಶ
ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ)
In reply to ಉ: ಗುರುವಿನ ಆಯ್ಕೆ/ಶಿಷ್ಯರ ಆಯ್ಕೆ (-ತಿಂಬಟ್ ಸ್ವಾಮಿ) by Jayanth Ramachar
ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ)
In reply to ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ) by ಗಣೇಶ
ಉ: ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ)
In reply to ಉ: ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ) by sathishnasa
ಉ: ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ)
In reply to ಉ: ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ) by ಗಣೇಶ
ಉ: ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ)
In reply to ಉ: ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ) by RAMAMOHANA
ಉ: ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ)
In reply to ಉ: ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ) by RAMAMOHANA
ಉ: ಮಂತ್ರ-ಹೋಮದ ಹುಟ್ಟು (-ತಿಂಬಟ್ ಸ್ವಾಮಿ)