ನಿಮ್ಮೊಳಗಿರುವ 'ನಾನು' ಸತ್ತಾಗ ಮುಕ್ತಿಯ 'ಜೇನು'

ನಿಮ್ಮೊಳಗಿರುವ 'ನಾನು' ಸತ್ತಾಗ ಮುಕ್ತಿಯ 'ಜೇನು'

ಕವನ

 ಅಲುಗಾಡದ ಗುಡಿಸಲಾಕಿ

ಒಳಗೆರಡು ಬಳೆಗಳಿಟ್ಟು

ಕನಸಿನ ಕೂಸನೆತ್ತು

ಬದುಕಿನ ಜಟಕಾಬಂಡಿಹೇರಿ

ಮುಕ್ತಿಹೆಡೆಗೆ ಹೋರಟೆವೆಂದರೆ

ದೊರೆಯದಣ್ಣ ಮುಕುತಿ.

ನಿಮ್ಮೊಳಗಿರುವ 'ನಾನು'

ಸತ್ತಾಗಲೇ ಮುಕ್ತಿಯ 'ಜೇನು',

 

ರಾಮರಸದ ಸ್ನಾನ ಮಾಡಿ

ಬಕ್ತಿಯಿಲ್ಲದ ವಿಬೂತಿ ಇಟ್ಟು

ಅಲಂಕಾರದ ಗೋಂಬೆಯಂತೆ

ತೋಡಬಾರದ ಕಾವಿ ತೋಟ್ಟು

ಶಿವನೆನ್ನದೆ ಶವವಾದರೆ

ದೊರೆಯುವುದೆ 'ಸ್ವರ್ಗ'

ನಿಮ್ಮೊಳಗಿರುವ 'ನಾನು'

ಸತ್ತಾಗಲೇ ಮುಕ್ತಿಯ 'ಜೇನು',

 

ಮೋಹದ ಮಡಿಯುಟ್ಟು

ಅಪರೂಪದ ಬಸಿರೋತ್ತು

ಹೆಣ್ಣೆಂಬ ಬೆಳೆಕಿತ್ತು

ಗಂಡೆಂಬ ಕೂಸೆತ್ತು

ಗಂಗೆಯಲ್ಲಿ ಮಿಂದೋಡೆ

ತೋಳೆವುದಾ'ಪಾಪ',

 

ದೋರೆಯದಣ್ಣ ಮುಕುತಿ

ನಿಲುಕದಾಗಿದೆ  ಸ್ವರ್ಗ

ತೊಳೆಯದಣ್ನ ಪಾಪ

ನಿಮ್ಮೊಳಗೆ 'ನಾನು' 

ಇರುವವರೆಗೂ, ನೀವು

ಜೀವ ತೊರೆವವರೆಗೂ.

Comments