ಗಾಂಧಿನಗರ-ನಾನು -ಮತ್ತು ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:())))
ಕನ್ನಡ ಚಿತ್ರರಂಗದಲ್ಲಿ ನಾ ಒಬ್ಬ ಖ್ಯಾತ ನಿರ್ಮಾಪಕ ಆಗಬೇಕು ಅಂದಾಗ ನನ್ನ ಸ್ನೇಹಿತರು ಒಬ್ಬರು, ಗಾಂಧೀ ನಗರಕ್ಕೆ ಹೋಗಿ ಅಲ್ಲಿ ಹೆಸರುವಾಸಿಯಾದ ನಿರ್ಮಾಪಕ ಕಂ ನಟ(ಮಾಜಿ) ನೋಡಿ, ಅವರ ಅನುಭವ ಕಥೆ ಕೇಳಿ- ಆಶೀರ್ವಾದ ತೆಗೆದುಕೊಂಡು ನಿರ್ಮಾಪಕ ಆಗಿ ಎಂದು ಸಲಹೆ ಕೊಟ್ಟಿದ್ದರು...!!
ಅವರ ಮಾತಿನಂತೆ ಅದೊಂದು ಶುಭ ದಿನ- ನಾ ಗಾಂಧೀ ನಗರಕ್ಕೆ ಹೋದೆ,
ಅಲ್ಲಿ ಅವರಿವರನ್ನು ಕೇಳಿ 'ಆ' ಖ್ಯಾತ ನಿರ್ಮಾಪಕರು ಇರುವ ಮನೆಯನ್ನು ಪತ್ತೆ ಮಾಡಿದೆ ...
ಸೆಕ್ಯೂರಿಟಿ ಗಾರ್ಡ್ ಗೆ ಒಳಗೆ ಹೋಗಬಹುದೇ ? ಎಂದಾಗ,
ಯಾರನ್ನ ನೋಡಬೇಕು?
ಯಾಕೆ ನೋಡಬೇಕು?
ನೀವ್ಯಾರು?
ಇಲ್ಲಿ ದಿನಾ ೧೦೬ ಜನ ನಾ ನಟ ಆಗಬೇಕು ನಿರ್ದೇಶಕ ಆಗಬೇಕು, ಅದು ಇದು ಆಗಬೇಕು ಅಂತೆಲ್ಲ ಬರುವರು, ಹಾಗೆಲ್ಲ ಅವರನ್ನು ನೋಡಲು ಆಗೋಲ್ಲ, ನಿಮ್ಮ ಹೆಸರು ಹಿನ್ನೆಲೆ ಎಲ ಹೇಳಿ ಅವರಿಗೆ ತಿಳಿಸುವೆ, ಸಾಧ್ಯ ಆದರೆ ಇನ್ನು ಒಂದು ತಿಂಗಳ ನಂತರ ಅವರ ಭೇಟಿ ಸಿಗಬಹ್ದು ಅಂದಾಗ ಧಿಕ್ಕೆಟ್ಟೆ..!!
ಇವತ್ತೇ ಈಗಲೇ ನೋಡಬೇಕಲ್ಲ...
ನನ್ನನು ಕೆಕ್ಕರಿಸಿಕೊಂಡು ನೋಡಿ,- ಎಲ್ರೂ ಹಾಗೆ ಹೇಳೋದು, ಆದರೆ ಹಾಗೆ ಆಗೊಲ್ಲವೆ...!!
ಓಹೋ!! ಇದಾ ಸಮಾಚಾರ..!! ಅಂದುಕೊಂಡು ಮೆತ್ತಗೆ ಜೇಬಿಂದ ಒಂದು ೧೦೦೦ ಮುಖ ಬೆಲೆಯ ಗಾಂಧೀ ನೋಟು ತೆಗೆದು ಗಾರ್ಡ್ ಕೈಗೆ ಇಟ್ಟೇ ನೋಡಿ.....
ಕೆಲಸ ಸಲೀಸು..:()))
ಅವರಿಗೆ ಕಾಲ್ ಮಾಡಿ ಅರ್ಜೆಂಟ್ ಆಗಿ ಒಬ್ಬರು ನಿರ್ಮಾಪಕ ಆಗಲು ನಿಮ್ಮ ಸಲಹೆ ಕೇಳಲು ಬಂದಿರುವರು ಎಂದಾಗ, ಒಳಗೆ ಕಳಿಸು, ಹತ್ತು ನಿಮಿಷ ಕಾಯಲು ಹೇಳು ಅಂದಿದ್ದು ಗಾರ್ಡ್ ನಂಗೆ ಹೇಳಿದ...
ಒಳಗೆ ಹೋಗಿ ಹತ್ತು ನಿಮಿಷ ಕಾದೆ, 'ಅವರು' ಬಂದರು...
ಒಹ್!! ಇವರೇ?
ಅದಾಗಲೇ ಅವರ ಹಲವು ಚಿತ್ರಗಳನ್ನು ನೋಡಿದ್ದೇ ..
ಸ್ಸಾರ್ ನಮಸ್ಕಾರ, ನಾ ಅಂತ ನನ್ ಹೆಸರು ಹೇಳಿಕೊಂಡು , ಬಂದ ಉದ್ದೇಶ ಹೇಳಿದಾಗ,
ಒಹ್! ಹಾಗೋ.. ಒಳ್ಳೇದು, ಅದಕ್ಕೆ ಮೊದಲು ನನ್ನ ಕಥೆ ಕೇಳಿ, ನಾ ಹೇಗೆ ಆಕಸ್ಮಿಕವಾಗಿ ನಿರ್ಮಾಪಕ ಆದೆ ಅಂತ ಆಗ ನಿಮಗೆ ಒಂದು ಐಡಿಯಾ ಬರಬಹ್ದು ಅಂದರು..
ಸ್ಸರಿ, ಕಥೆ ಹೇಳಿ ಸ್ಸಾರ್ ಅಂದೇ..
-----------------------------------------------------
ಓವರ್ ಟು ಮಾಜಿ ನಟ- ನಿರ್ಮಾಪಕ...
>>ಮುಂದೆ ನಡೆದ ಸಂಭಾಷಣೆ ನನ್ನ ಮತ್ತು ಮಾಜಿ ನಟ- ಹಾಲಿ ನಿರ್ಮಾಪಕ ರ ನಡುವೆ ನಡೆದದ್ದು<<
ನೋಡಿ ಇವರೇ ಅದೊಮ್ಮೆ ನಾ ಫ್ರೀ ಇದ್ದುದರಿಂದ ಹಾಗೆಯೇ ಸುತ್ತಾಡಿಕೊಂಡು ಬರುವ ಅಂತ ಗಾಂಧಿನಗರ ಕಡೆ ಹೋಗಿದ್ದೆ,
ಸುತ್ತ ಮುತ್ತ ಗಮನಿಸುತ್ತಿರಲು ಹಲವು ಸಿನೆಮಾ ವಿತರಣ ಸಂಸ್ಥೆಗಳ- ನಿರ್ಮಾಪಕರ ಕಛೇರಿಗಳು ಅವುಗಳ ಗೇಟ್ ಮುಂದೆಯೇ
ಕಥೆಯ ಫೈಲು ಹಿಡಿದು ಗಡ್ಡ ಬಿಟ್ಟು ನಿಂತಿದ್ದ ನವ ನಿರ್ದೇಶಕರು,
ಅಲ್ಲಿಯೇ ತಮ್ಮ 'ಚೈನಾ' ಮೊಬೈಲುಗಳಲಿ ಹೋಗ್ ಬರುವವರನ್ನ ವಿವಿಧ ಹಾವ ಭಾವದಲಿ ಎದ್ದು ಬಿದ್ದು ಬಗ್ಗಿ ಯಾವ್ ಯಾವ್ದೋ ಯಾಂಗಲ್ನಲ್ಲಿ ಚಿತ್ರೀಕರಿಸುತ್ತಿದ್ದ ೩ ಡೀ ನವ ಛಾಯಾಗ್ರಹಣಕಾರರು
ಪಿಟೀಲು ಕುಯ್ಯುತ್ತಾ ಕುಯ್ ಕುಯ್ ರಾಗ ಹೊರಡಿಸುತ್ತಿದ್ದ ನವ ಸಂಗೀತಗಾರರು,
ಯಾವ್ಯಾವ್ದೋ ಡೈಲಾಗ್ ಹೇಳುತ್ತ ಗೇಟ್ ಮುಂದೆಯೇ ಅಭಿನಯ ತೋರಿಸುತ್ತಾ ನಿರ್ಮಾಪಕರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ಫೇಮಸ್ ಆಗಿ ಅದೇ ನಿರ್ಮಾಪಕರನ್ನ ಮುಂದೊಮ್ಮೆ ತಮ್ಮ ಕಾಲ್ ಶೀಟ್ ಕೇಳಲು ಬಂದಾಗ ....ಲು ನಿಂತಿದ್ದ ನವ ನಟರನ್ನು ಕಂಡೆ...!!
ಓ..!! ಪರವಾಗಿಲ್ಲ, ಕನ್ನಡ ಚಿತ್ರ ರಂಗಕ್ಕೆ ಇನ್ನಸ್ತು ನವ ನವೀನ
ನಿರ್ದೇಶಕರು -
ಛಾಯಾಗ್ರಹಾಣಕಾರರು-
ಸಂಗೀತಗಾರರು -
ನಟರು -ತಂತ್ರಜ್ಞರು ಬರುವ ಹಾಗಿದೆ ಅಂದುಕೊಳ್ಳುತ್ತ ರಸ್ತೆ ದಾಟುವಾಗ ಅದೇ ತಾನೇ ವಿದೇಶಿ ಮಾಡೆಲ್ ಕಾರ್ ಒಂದರಿಂದ ಕೆಳಗಿಳಿದ
ಒಬ್ಬ ಟಾಕ್ ಟೀಕ್ ಆಗಿದ್ದ ತಂಪು ಹೊತ್ತಲ್ಲಿ ಕೂಲಿಂಗ್ ಗ್ಲಾಸ್ ಹಾಕಿದ್ದ ಕೈ ನಲ್ಲ್ಲಿ ಸೂಟ್ ಕೇಸ್ ಹಿಡಿದಿದ್ದ ವ್ಯಕ್ತಿ ನನಗೆ ಧಡಾರ್ ಅಂತ ಡಿಕ್ಕಿ ಹೊಡೆಯಬೇಕೆ....:((
ಕಾಲಿಗೆ ಆ ಭರ್ಜರಿ ತೂಕದ ಸೂಟ್ ಕೇಸು ಮತ್ತು ತಲೆಗೆ ಆಯಪ್ಪನ ಖ0ಡುಗ ತೂಕದ ಶಿರ ಬಡಿದು ಮೈ ಮನ ಕುಯ್ ಅಂದವು..!! ತಲೆ ಗಿರ್ ಅಂದು ಸುತ್ತಿ ಬಂದು ಬೀಳುವ ಹಾಗೆ ಆಯ್ತು...:(((
ನಿಲ್ಲಲೇ ಆಗದಿದ್ದರೂ ಅವನನ್ನ ಕೆಕ್ಕರಿಸಿಕೊಂಡು ನೋಡುತ್ತಾ ನರ ಮನುಷ್ಯರೇ ಹೋಗಲು ಆಗದ ಕಿಷ್ಕಿಂದಾ ಗಲ್ಲಿಯ ಗಾಂಧಿ ನಗರದಲ್ಲಿ ಇವನು ವಿದೇಶಿ ಮಾಡೆಲ್ 'ಐ-ರಾವತ' ಕಾರು ತಂದವನಲ್ಲ..!! ಅಯ್.. ನಿನ್ನ.. ಸ್ಟ್ ಆನ್ ಹೊರಟವನು ಹಾಗೆ ನಾಲಗೆ ಕಚ್ಛ್ಚಿಕೊಂಡೆ....???
ಆ ವ್ಯಕ್ತಿಯನ್ನ ಎಲ್ಲೋ ನೋಡಿದ್ದೇನಲ್ಲ ಅನ್ನಿಸಿತು...
ಎಲ್ಲಿ ... ಎಲ್ಲಿ ಎಲ್ಲಿ??
ಹಾ..!! ನೆನಪಿಗೆ ಬಂತು....
ಇವರು ಬೆಂದ ಕಾಳೂರ್ನ ಫೇಮಸ್ ಬಿಲ್ದರ್(ಬಾಡಿ ಸಹಾ ಕಡಿಮೆ ಏನು ಇದ್ದಿಲ್ಲ..!!) ಕುಬೆರ್ ರೆಡ್ಡಿ ಎಸ್ ಎಸ್ ಎಲ್ ಸೀ...!!
ಎಸ್ ಎಸ್ ಎಲ್ ಸೀ ಅವರ ಕ್ವಾಲಿಫಿಕೇಶನ್ ಇರಬೇಕು ಎಂದುಕೊಂಡರೆ ನಿಮ್ಮ ತಪ್ಪಲ್ಲ ಬಿಡಿ,,,:(((
ಎಸ್ ಎಸ್ ಎಲ್ ಸೀ ಅಂದ್ರೆ
ಸೂಪರ್ ಸ್ವೀಟ್ ಲೋನ್ ಕಂಪನೀ ಅಂತ...!!
ಅದೇನು? ಅಂದಿರ
ಬಡವರು ಮಧ್ಯಮ ವರ್ಗದವರಿಗೆ ಬೆಂದ ಕಾಳೂರ್ನಲ್ಲಿ ಸೈಟು ಕೊಡಿಸುವೆ ಅದಕ್ಕೆ ನಾನೇ ಸಾಲ ಕೊಡುವೆ-ಕೊಡಿಸುವೆ ಅಂತ ಹೇಳಿ ಜನರಿಗೆ ಇಂಡ್ಯಾ- ಆಮ್ರಿಕಾ-ನೇಪಾಳು- ಹೀಗೆ ಯಾವ್ ಯಾವ್ ದೇಸಃದ್ ಬಣ್ಣ ಬಣ್ಣದ ಟೋಪಿ ಹಾಕಿ...!! ಯಾರೀಗ್ ಸೈಟು ಸಿಕ್ಕಿತೋ ಇಲ್ಲವೋ? ಆದರೆ ಈ ಕುಬೆರ್ ರೆಡ್ಡಿ ಮಾತ್ರ ಹೆಸರಿಗೆ ತಕ್ಕ ಹಾಗೆ 'ಕುಬೆರ' ಆಗಿ ಹೋದ ಈ ನಗರದಲ್ಲಿ...
ಮತ್ತೆ ಸೈಟುಗಾಗಿ ಹಣ ಕೊಟ್ಟವರು ಸಾಲ ಎತ್ತಿದವರು?
ಆವ್ರು ಇದಾರೆ ಸ್ವಾಮಿ..!!
ನಿರ್ಗತಿಕ- ದರಿದ್ರ ನರ ಯಣ ಗಳಾಗಿ (ನಾರಾಯಣಾರಾಗಿ)..:(((
ಅವ್ರ್ಯಾರು ಸೊಲ್ಲೆತ್ತಲಿಲ್ಲವೇ? ಸಂಘ ಕಟ್ಟಿ ಹೋರಾಟ ಮಾಡಲಿಲ್ಲವೇ?
ಯಾಕಿಲ್ಲ ಸೊಲ್ಲು ಒಂದೇ ಅಲ್ಲ 'ಎಲ್ಲವನ್ನು' ಎತ್ತಿದರು...!!
ತಮ್ಮದೇ ಹೋರಾಟದ ಸಂಘ ಕಟ್ಟಿದರು
ಧನ್ ದಾಹಿ- ಬಡವರ ಭೂ ಗ ಕಳ್ಳ ಕುಬೆರ್ ವಿರುದ್ಧ ಉಗ್ರ ಹೋರಾಟ ಸಮಿತಿ ಅಂತ...!!
ಆದರೆ ಎದ್ದವರನ್ನ್ ಎತ್ತಿದವರನ್ನ ಕರೆದೊಯ್ದು ದುಬಾಯ್ -ಸಿಂಗಾಪೂರ್ ಫ್ಲೈಟ್ ಹತ್ತಿಸಿ ಇಳಿಸಿ ಫುಲ್ಲ್ ಬಾಡಿ ಫ್ರೀ ಸ್ಟೈಲ್ ಮಾಸಾಜ್ ಮಾಡಿದದರಲ್ಲ, ಆಗ ಕೈ ಕಾಲು ಎತ್ತಲೂ ಆಗದ ಹಾಗೆ ಆಯ್ತು...:()))
ಇನ್ನೂ ಇವರೆಲ್ಲ ಸೇರಿ ಕೆಲವರನ್ ಅದ್ಯಕ್ಷ್ಯ- ಉಪ ಅದ್ಯಕ್ಷ- ಖಜಾಂಚಿ ಅಂತೆಲ್ಲಾ ಮಾಡಿದ್ದಾರಲ್ಲ ಅವರು..?? .ಏನೂ ಮಾಡಲಿಲ್ಲವೇ?
ಯಾಕಿಲ್ಲ?
ಅವರೆಲ್ಲ ಕುಬೆರ್ ಕೊಟ್ಟ ಭರ್ಜರಿ ಪಾರ್ಟಿಯಲ್ಲಿ ಕಂಠ ಮಟ್ಟ ಕುಡಿದು ಬಿರಿಯಾನಿ ತಿಂದು ಕುಬೆರ್ ಗೆ ಜಯಕಾರ ಹಾಕಿ ಅವರು ಕೊಟ್ಟ ನೋಟುಗಳ ಕಟ್ಟು ಒಬ್ಬೊಬ್ಬರು ಹಂಚಿಕೊಂಡು ಮರಿ ಕುಬೆರ್ ಆದರು..:())
ಆಮೇಲೆ ಏನಾಯ್ತು?
ಇನ್ನೇನು ಆಗುತ್ತೆ?
ಏನು ಆಗಬೇಕಿತ್ತೋ ಅದೇ ಆಯ್ತು...
ಅದೇ ಅಂದ್ರೆ?
ರ್ರೀ ಎಲ್ಲಿಂದ್ರೀ ನೀವ್ ಬಂದ್ರಿ?
ಮಹಾ ನಗರದಲ್ಲಿ ಇದ್ದು ದಿನವೂ ಟೀ ವೀ ೯ ನೋಡುತ್ತಾ ಹೀಗೆ ಉಂಟು.. ಅನುವ ಬದಲಿಗೆ ಮುಂದೆ ಏನಾಯ್ತು ಅಂತ ಕೇಳ್ತೀರಲ್ಲ...!!
ಎಲ್ಲರೂ ತೆಪ್ಪಾಗಾದ...- ಕುಬೆರ್ ದಪ್ಪಾಗಾದ ಅಸ್ಟೆ...:()))
ಈ ಕುಬೆರ್ ಮಹಾಶಯ ನನಗೆ ಢಿಕ್ಕಿ ಹೊಡೆದದ್ದೂ ನಾ 'ಅದ್ರುಸ್ಟ ಒಮ್ಮೆ ಮಾತ್ರ ಬಾಗಿಲು ಬಡಿವುದು' ಎನ್ನುವುದನ್ನ- 'ಕುಬೆರ್ ಒಮ್ಮೆ ಮಾತ್ರ ಡಿಕ್ಕಿ ಹೊಡೆವನು, ಆಗಲೇ ನಿನಗೆ ಲಕ್ ಕುದುರುವುದು' ಅಂತ ತಿದ್ದುಪಡಿ ಮಾಡಿಕೊಂಡು ಕೈ ಕಾಲು ಮುರಿದು ತಲೆ ಒಡೆದು ಹೋದವನ ಹಾಗೆ ನೆಲದ ಮೇಲೆ ಬಿದ್ದು ಹೊರಳಾಡುತ್ತಾ ಬಗೆ ಬಗೆಯ ನಾಟಕ ಮಾಡುತ್ತಿದ್ದೆ...
ಆಗಲೇ ಅಲ್ಲಿ ಇಲ್ಲಿ ನಿರ್ಮಾಪಕ- ವಿತರಕರ ಕಛೇರಿ ಮುಂದೆ ಟಳಾಯಿಸುತ್ತಿದ್ದ ಸಕಲ ವಿದ್ಯಾ ಪಾರಂಗತ ಮಂದಿ ಬಂದು ನನ್ನನ್ನೇ ತಮ್ಮ ಯಶಸ್ಸಿಗೆ ಉರುಗೊಲಾಗಿಸಲು- ಮೆಟ್ಟಿಲು ಮಾಡಿಕೊಳ್ಳಲು ಪ್ರಯತ್ನಿಸುತ್ತಾ ಒಬ್ಬರನ್ನೊಬ್ಬರು ತಳ್ಳುತ್ತ ಇವ ನಮ್ಮೋನು ನಮ್ಮನೋ-ನಮ್ಮ ಅಣ್ಣ ಅಂತ ಒಬ್ಬನು ಹೇಳಿದರೆ, ಇನ್ನೊಬ್ಬ ನಮ್ಮ ಮಾವ- ನನ್ನ ಸ್ನೇಹಿತ, ನನ್ನ ಅಳಿಯ ಅಂತೆಲ್ಲ ಅನ್ನುತ್ತಾ, ರೆಕಾರ್ಡ್ ಮಾಡುವವರು ಒಬ್ಬರು- ಸಂಗೀತ ಬಾರಿಸುವವರು ಒಬ್ಬರು ನಿಂತಲ್ಲೇ ಕಥೆ ಬರೆವರು ಒಬ್ಬರು(ಅಪ್ಪಿ ತಪ್ಪಿಯೂ ನನ್ನನ್ನು ಎತ್ತಲು ಒಬ್ಬರಿಗೆ ಕೂಡ ಮನಸು ಬರಲಿಲ್ಲ..!!) ನಟನೆ ಮಾಡುವವರು ಹತ್ತು ಜನ.....:(((
ಅಲ್ಲ ಒಬ್ಬ ಬಿದ್ದ ಕೂಡಲೇ ಆ ಜಾಗದಲ್ಲಿ ಇಷ್ಟು ಜನ ಸಂಬಂಧಿಗಳು ಧಿಡೀರ್ ಎಂದು ಪ್ರತ್ಯಕ್ಷ ಆಗುವರೇ? ಏನೋ ಮೋಸ ಅಂತ ಅಂದುಕೊಂಡರೂ
ಅಸ್ಟು ಜನರನ್ನು ಮತ್ತು ಜನ 'ಫ್ರೀ ಮಸ್ಸಾಜ್' ಮಾಡಲು ಕೈ ರೆಡಿ ಮಾಡಿಕೊಂಡುದು ಕಂಡು ಮೈ ಕೈ ಎಲ್ಲ ಕಂಪಿಸಿ ಬೆವರು ಕಿತು ಕೊಂಡು ಬಂತು ಶ್ರೀ ಮಾನ್ ಕುಬೆರ್ ಅವ್ರಿಗೆ...!!
ಅಲ್ಲ ಡಿಕ್ಕಿ ಹೊಡೆದ ಹತ್ತು ನಿಮಿಷದವರೆಗೂ ನನ್ನನ್ನೇ ನೋಡುತ್ತಾ ಅಚ್ಚರಿ ಆಗಿ ಹಠಾತ್ ಆಗಿ ಕುಸಿದು ಬಿದ್ದು ನರಳಾಡುವ ಕಾರಣ ಏನು ಅಂತ ಯೋಚಿಸುತ್ತಿದ್ದ ಕುಬೆರ್ ಮಹಾಶಯನಿಗೆ ತಟ್ಟನೆ ಹೊಳೆಯಿತು...!!
ಓ!! ಇದಾ ಸಮಾಚಾರ..??
ಸುತ್ತ ಮುತ್ತ ನೋಡದೇ ನನ್ನ ಬಳಿ ಬಗ್ಗಿ ಮಿಸ್ಟರ್- ನಾ ನೀ ರಾಜಿ ಆಗಿ ಬಿಡುವ ನಿನಗೆ ನಾ ಕಾಸು ಕೊಡುವೆ ಅನ್ನಲು, ಅಲ್ಲಿನ ನವ ನಟರನ್ನು ನಾಚಿಸುವಂತೆ ಮೆಲ್ಲಗೆ ಕಣ್ಣು ತೆಗೆದು ಕುಬೆರ್ ಅವ್ರನ್ನ ನೋಡಿ ಕಣ್ಣು ಮುಚ್ಚ ಹೊರಟಾಗ ಕುಬೆರ್ ' ಈ ಮೌನವ ತಾಳೆನು- ಪಾರಾಗೋ ದಾರಿಯ ಕಾಣೆನು ' ಎನ್ನುವಂತೆ ನನ್ನ ನೋಡಲು,
. ಚೆಕ್ ಇದೆಯಾ ನಿಮ್ಮ ಬಳಿ ಎಂದೆ.
ಹಾ..!! ಇದೆ
ಯಾಕೆ?
ಹಾಗಾದರೆ ಬೇಗ ಅದರಲ್ಲಿ ೧೦ ಕೋಟಿ ಗೆ ಸಹಿ ಹಾಕು...:((
ವ್ಹಾಟ್ ರಬ್ಬಿಷ್..!!
ಟೆನ್ ಕ್ರೋರ್?
ಮೈ ಗಾಡ್..!!
ಸಾಧ್ಯವಿಲ್ಲ, ೩ ಲಕ್ಷ ಕೊಡುವೆ ಅನ್ನಲು, ನಾ ಜೋರಾಗಿ ಅಯ್ಯೋ ಅಯ್ಯೋ..!! ತ್ತೆ.. ತ್ತೆ.. ಅನ್ನಲು ಜನರೆಲ್ಲ ಜೋರಾಗಿ ಕಿರುಚುತ್ತಾ ಹತ್ತಿರ ಬರಲು ಕುಬೆರ್ ಬೇರೆ ದಾರಿ ತೋಚದೆ ಚೆಕ್ ತೆಗೆದು ಅದರಲ್ಲಿ ಬರೆದು ಸಹಿ ಮಾಡಿಕೊಟ್ಟ... ಹಾಗೆಯೇ ನನ್ನನು ಆಟೋ ಒಂದನ್ನು ಕರೆದು ಕೂರಿಸಿ ಆಸ್ಪತ್ರೆಗೆ ಸೇರ್ಸು ಅಂತ ಹೇಳಿ ಕಳಿಸಿದ...
ಆಟೋ ನಲ್ಲಿ ಹೋಗುತ್ತಾ ಚೆಕ್ ಮೇಲೆ ಒಮ್ಮೆ ಕಣ್ಣು ಹಾಯಿಸಿದೆ- ೫ ಕೋಟಿ ಅಂತ ಇತ್ತು...
ತತ್..!! ಕುಬೆರ್ ನನಗೆ ಮೋಸ ಮಾಡಿದ, ೫ ಲಕ್ಷ ಗೋತಾ..:())
ಅಂತರಾತ್ಮ ಕ್ಯಾಕರಿಸಿತು- ನಾ ಹುಷಾರ್ ಆಗಿ ..ಯ್ ಮುಚ್ಚಿದೆ.. ಏನು ಶ್ರಮ ಇಲ್ಲದೇ ೫ ಕೋಟಿ ಜೇಬಲ್ಳಿ..
ಹೌದು ಅವನ ಖಾತೆಯಲ್ಲಿ ಕಾಸು ಇರದಿದ್ದರೆ?
ಹೌದಲ್ಲ... ಅಂತ ಆ ಬ್ಯಾಂಕ್ ಶಾಖೆಗೆ ಹೋಗಿ ವಿಚಾರಿಸಲು ಸ್ವಲ್ಪ ಹೊತ್ತು ಕಾಯೀರಿ ಅಂತ ಹೇಳಿ, ಅಸ್ತು ದೊಡ್ಡ ಮೊತ್ತಾದ ಹಣ ಒಯ್ಯಲು ,ಹತ್ತಿರದ ಠಾಣೆಗೆ ಹೋಗಿ ಪೋಲೀಸ್ ಬಂದೋಬಸ್ತ್ ಮಾಡಲು ಕೋರಿಕೆ ಸಲ್ಲಿಸಿ ಎನ್ನಬೇಕೆ..:((
ಜೀವನದಲ್ಲಿ ಕೋರ್ಟು- ಕಛೇರಿ(ತಹಶೀಲ್ ಕಛೇರಿ ಅಲ್ಲ ಸ್ವಾಮಿ..!!) ಅದೇ ಪೋಲೀಸ್ ಕಛೇರಿ. ಮಾತು ಆಸ್ಪತ್ರೆ ಮೆಟ್ಟಿಲು ತುಳಿಯಬಾರದು ಅಂತ ಅಂದುಕೊಂಡವನು ನಾ...ಈಗ..
ಗತ್ಯ0ತರವಿಲ್ಲ..
ಹತ್ತಿರದ ಠಾಣೆ ಗೆ ಹೋಗಿ ಈ ಬಗ್ಗೆ ವಿವರಣೆ ಬರೆದುಕೊಟ್ಟು , ಅಸ್ಟು ಹಣ ಹೇಗೆ ಬಂತು ಎಂಬ ಅವರ ಪ್ರಶ್ನೆಗೆ ತತ್ತರಿಸುವಂತಾದರೂ, 'ಕನ್ನಡ ಕೋಟ್ಯಾಧಿಪತಿ' ಅಂತ ಇನ್ನೂ ಏನೋ ಹೇಳಲು ಹೊರಟಾಗಲೇ, ಸಾಕ್ ಸಾಕ್- ನನ್ನ ಹೆಂಡತಿ ಮನೆಯಲ್ಲಿ ಅದ್ರ ಬಗ್ಗೆಯೇ ತಲೆ ತಿನ್ನುವಳು ಇನ್ನೂ ನೀ ಬೇರೆ ಕಡಿಮೆ ಇದ್ದೇ, ಆಪ್ಪೈ ತಪ್ಪಿ ಎಲ್ಲಿಯೂ ನಾ ಅದರಲ್ಲಿ ಗೆದ್ಡೆ ಅಂತ ಹೇಳಬೇಡ...
ಯಾಕೆ ಸ್ಸಾರ್?? ಅನ್ನಲು
ನಿನ್ನ0ತವರೇ ಗೆದ್ದರೆ, ನನ್ನಂತ ಮೇಧಾವಿ ಪಾಡು ಏನು? ಎನ್ನಬೇಕೆ...
ಆಮೇಲೆ??
ಕುಬೆರ್ ಗುದ್ಧಿ ಕೆಳಕ್ಕೆ ಬಿದ್ದಾಗ ಜನ ಸೇರಿದ್ದರಲ್ಲ ಅವರು ಏನಾದರು??
ಅವರ?
ಅಲ್ಲಿ ಸೇರಿದ್ದ ಜನರೆಲ್ಲ ,ತಮಗಿಂತ ನಟನೆಯಲ್ಲಿ- ಸಂಗೀತ(ಅಯ್ಯೋ ಅಮ್ಮ-ಅಪ್ಪ-ಅಯ್ಯಯ್ಯೋ..!!) -ನಿರ್ದೇಶನ್ ಕಥೆ -ಚಿತ್ರ ಕಥೆ -ಸಂಭಾಷಣೆ-ಅಭಿನಯ - ಹೀಗೆ ಎಲ್ಲ ವಿಧವಾದ ಟ್ಯಾಲೆಂಟ್ ಇರುವ ಆ ವ್ಯಕ್ತಿಯೆ ಮುಂದೆ ಚಿತ್ರ ರಂಗದಲ್ಲಿ ದೊಡ್ಡ ಹೆಸರು ಮಾಡುವನು , 'ಕಾಡಿಗೆ ಒಂದೇ ಸಿಂಹ, ನಾಡಿಗೆ ಒಬ್ಬನೇ ರಾಜ' ಇರಬೇಕು , ನಮಗಿಲ್ಲಿ ಗಂಜಿ ಸಿಕ್ಕದು ಅಂತ ಹೇಳಿ ಪಕ್ಕದ ಮೆಜೆಸ್ಟಿಕ್ ಗೆ ಹೋಗಿ ತಮ್ಮ ತಮ್ಮ ಊರು- ಹಳ್ಳಿ ಕಡೆ ಹೋಗುವ ಕೆಂಪು ಬಸ್ಸು ಹಿಡಿದು ವಾಪಾಸು 'ಬಂದ ದಾರಿಗೆ ಸುಂಕ ಇಲ್ಲ ಅನ್ನುವ ಹಾಗೆ ಹೊರಟರು'..
ಆಮೇಲೆ???
ಆಮೇಲೆ?
ಇನ್ನೇನು
ನಾ ಪೊಲೀಸರ ಸಮೇತ ಬ್ಯಾಂಕ್ ಗೆ ಹೋಗಿ ಹಣ ತೆಗೆದುಕೊಂಡು ಅಲ್ಲಿಯೇ ಜನತಾ ಲಾಡ್ಜ್ ನಲ್ಲಿ ಒಂದು ಕೋಣೆ ಹಿಡಿದು ಗಾಂಧಿ ನಾಗರದ್ಲ್ಲಿ ನಾ ಒಬ್ಬ ಪ್ರಖ್ಯಾತ ನಿರ್ಮಾಪಕ ಆದೆ ....!! :((
ಹಣ ಒಯ್ದ ಕೂಡಲೇ ಅಲ್ಲಿ ಯಾರು ಬೇಕಾರ ನಿರ್ಮಾಪಕ ಆಗ್ಬಹುದಾ ಸ್ವಾಮ್ಮಿ...!!
ಸ್ವಾಮಿ ಈಗ ಗಾಂಧಿ ನಗರದಲ್ಲಿ ಬೇಜಾನ್ ಸೂಟ್ ಕೇಸ್ ಹಿಡಿದ ನಿರ್ಮಾಪಕರೇ ಕಾಣಿಸುತ್ತಿರುವರಲ್ಲ...
ಅದಾ??
ಹಾ. ಹಾ... ಹಣ ಇದ್ದರೆ ಆಗಬಹುದು..
ರಿಯಲ್ ಎಸ್ಟೇಟ್ ನಲ್ಲಿ ಗಳಿಸಿದ್ದವರು ಹಾಲಿ- ಮಾಜಿ -ರವ್ಡಿ ಆಗಿದ್ದವರು ಟಾಕ್ ಟಿಕ್ ಆಗಿ ಡ್ರೆಸ್ ಮಾಡಿಕೊಂಡು ಚಿತ್ರ ಮಾಡಿ ಕೋಟಿ ಕೋಟಿ ಕೊಳ್ಳೆ ಹೊಡೆಯಲು ಬರುತ್ತಿದ್ದಾರೆ..!!
ಆದರೆ.. ಆದರೆ..
ಏನು ಸ್ವಾಮಿ ಆದರೆ ಗೀದರೆ..??
ಅಲ್ಲಿ ಯಾವ ಮುಹೂರ್ತದಲ್ಲಿ ಯಾವ ದಿಕ್ಕಿನಲ್ಲಿ ಯಾವ ಕೊಂಡಲ್ಲಿ ಪೂಜೆ ಮಾಡಬೇಕು- ತೆಂಗಿನ ಕಾಯಿ ಒಡೆದಾಗ ಯಾವ ದಿಕ್ಕಿಗೆ ಬೀಳಬೇಕು ಯಾವ ದೇವಸ್ಥಾನ-ಅರ್ಚಕರೇ ಆಗಬೇಕು, ಯಾರು ಕ್ಲಾಪ್ ಮಾಡಬೇಕು ಅಂತೆಲ್ಲಾ 'ಅಲಿಖಿತ' ರೂಲ್ಸ್ ಉಂಟು..
ಹಾ ಹೀಗೂ ಉಂಟೆ? ಸ್ವಾಮಿ..
ನಾ ಯಾವಾಗ್ಳುನುವೆ ಪತ್ರಿಕೇಲಿ ನೋಡ್ತೀನಿ ಒಬ್ಬ ದೊಡ್ಡ ದೆಹದ್ ಸ್ವಾಮಿ ಒಬ್ರು ಪ್ರಯಾಸ ಪಟ್ಟು ಆರತಿ ಎತ್ತಿ ಪೂಜೆ ಮಾಡುವಾರಲ್ಲ ಆದರೆ ದಕ್ಷಿಣೆ ಮಾತ್ರ ನವೋಲ್ಲಾಸದಿಂದ ತೆಗೆದುಕೊಳ್ಳುವರಲ್ಲ, ಅವರು ನಿರ್ಜೀವಾನಂದ ಸ್ವಾಮಿಯೇ?
ಛೇ ಛೇ..!೧ ಎಂಥ ಮಾತು?
ಅವರು ನಿರ್ಜೀವನಂದ ಸ್ವಾಮಿ ಅಲ್ಲ...
ಮತ್ತೆ???
'
ಅಂದವಾಗಿರೋ-
ಆಂಡ+ಆಂಡ=ಅಂ ಡಾ ಡ ಭಂಡ ಸ್ವಾಮಿ ಜೀ ಅವರು.. :((((
ಹೆಸರೇ ವಿಚಿತ್ರವಾಗಿದೆಯಲ್ಲ..!!
ಅದು ಹಾಗೆಯೇ ಇರಬೇಕು ಅಗಲೆ ಕುತೂಹಲ ಮೂಡುವುದು
ಅವರ ಅನಿಸಿಕೆ-ಅಭಿಪ್ರಾಯ-ಒತ್ತ್ಯಾಯದ-ಆಗ್ರಹ-ಅನುಗ್ರಹದ ಪ್ರಕಾರವೇ ನಾ ನನ್ನ ಎಲ್ಲ ಚಿತ್ರಗಳ ಹೆಸರನ್ನ ಇರಿಸಿ ಆ ಎಲ್ಲ ಚಿತ್ರಗಳು ೧೭೫ ದಿನಕ್ಕಿಂತ ಹೆಚ್ಚಿಗೆ ಓಡುತ್ತಿವೆ....!!
ಹೌದಾ? ಸ್ವಾಮಿ
ಅಂದ್ ಹಾಗೆ ನಿಮ್ಮ ಚಿತ್ರಗಳ ಹೆಸರುಗಳು ಏನು ಸ್ವಾಮಿ?
ಯ್ಯೊ ಎತ್ತ್ಯಯ್ಯ ?
ಯಾಕ್ ಸ್ವಾಮಿ ನಾ ಏನರಾ ತಪ್ಪಾಗಿ ಹೇಳಿದೆನಾ?
ಕೇಳಿದೆನಾ?
ನಾ ಏನು?
ಯಾಕ್ ಎತ್ತಬೇಕು??....!
ರೀ ಅದು ನನ್ ಮೊದಲ ಚಿತ್ರದ ಹೆಸರು...:(೯
ಅದ್ಯಾಕ್ ಆ ತರಹ ಹೆಸರು ಸ್ವಾಮಿ?
ಅದಾ? ನಾ ಕುಬೆರ್ ಅವ್ರೀಗ್ ರೋಪ್ ಹಾಕಿ ಹಣ ಎತ್ತಿಸಿದ್ದೆನಲ್ಲ ಅದಕ್ಕೆ..!!
ಓ..!! ಆಮೇಲೆ ನಿಮ್ಮ ಇತರ ಚಿತ್ರಗಳ ಹೆಸರು
ಖಲಾಸ್..!!
ಗುದ್ದಿಬಿಡ್ತೀನ್...!!
ತಿವಿದ್ ಬಿಡುವೆ..!!
ನಾ ಮೆಂಟಲ್..:((
ನೀ ಯಾರೋ?
ಸ್ವಾಮಿ ನಾ ಸ್ವಾಮಿ.. ಆಗಲೇ ಮರೆತಿರಾ?
ಯ್ಯೊ.. ಕೂತ್ಕೊಳ್ಳಯ್ಯ ಅದು ನನ್ನ ಚಿತ್ರದ ಹೆಸರು....!!
ಓ..!! ಹೌದಾ ಸ್ವಾಮಿ ಚೆನ್ನಾಗಿದೆ..
ಮುಂದೆ???
ಮೀಟರ್ ಇದ್ಯಾ?
ಹಾ:...!! ನಮ್ಮ ಮನೇಲಿ ಕರೆಂಟ್ ನೀರಿನ್ ಮೀಟರ್ ಇದೆ ಸ್ವಾಮಿ,
ನಾ ಸತ್ಯವಂತ,
ಸತ್ಯ ಹರಿಶ್ಚಂದ್ರ ಚಿತ್ರವನ್ಣ ೩೦ ಸಾರಿ ನೋಡಿರುವೆ..!! ಟೀ ವಿ ನಲ್ಲಿ..:((
ಸರಕಾರಕ್ಕೆ ಮೋಸ ಮಾಡೋನ್ ಅಲ್ಲ..:()))
ಅಯ್ಯೋ..!! ರೀ ಅದು ನನ್ ಚಿತ್ರಡ್ ಹೆಸರೇ ಕಣ್ರೀ....!!
ಹೌದ್ರ?
ಮುಂದೆ....??
ಮಚ್ಚು-ಚುಚ್ಚು-ಕೊಚ್ಚು..!!
ಹೈ ಟೆಕ್ ಹುಚ್ಚ..!!
ಅದೇನು? ಹೈ ಟೆಕ್ ಹುಚ್ಚ?
ಹುಚ್ಚರಲ್ಲೂ ವರ್ಗೀಕರಣವೇ?
ಅದಾ?
ಹೈ ಟೆಕ್ ಹುಚ್ಚ ಅಂದ್ರೆ ಈ ಸಾಫ್ಟ್ವೇರ್ ಎಂಜಿನೀರ್ ಪ್ರೀತಿ ಪ್ರೇಂ ಅಂತ ತಲೆ ಕೆಡಿಸಿಕೊಂಡು ಐ ಟೀ ಪೀ ಎಲ್ ಹತ್ತಿರ ಹೈ ವೆ ಮೇಲೆ ಐ ಪೀಲ್ ಮಾಡಿಕೊಂಡು ಐಲ್ ಪೈಲ್ ಆಗಿ
...
ಹಾ... ಗೊತ್ತಾಯ್ತು ಬಿಡಿ
ಮುಂದೆ??
ಎನ್ ಸ್ಸಾರ್ ಬರೀ ಕಲಾಸಿಪಾಳ್ಯ 'ಸರಕೆ' ಆಯ್ತು..
ಮಲ್ಲೇಶ್ವರಂ -ಬಸವನ ಗುಡಿ ಸರಕು ಒಂದು ಇಲ್ಲವೇ?
ಯಾಕಿಲ್ಲ
ಅದನ್ನು ತೆಗೆದೆ
೧ .ಅನ್ನಪೂರ್ಣೆಶ್ವರಿ
೨ .ದಾನ -ದಯಾ -ಧರ್ಮ
ಚಿತ್ರಗಳು ಭಲೇ ಓಡಿರಬೇಕು.. .. ಅಲ್ಲವೇ???
ಹೌದು ಭಲೇ ಓಡಿದವು ಚಿತ್ರ ಮಂದಿರಗಳಿಂದ ಆಚೆಗೆ.....:(
ಯಾಕೆ?
ದೇವರ ಹೆಸರಿನ ಚಿತ್ರಗಳು ಜನ ನೋಡೋಲ್ಳವೇ?
ಅನ್ನಪೂರ್ಣೆಶ್ವರಿ ಅಂತ ಹೆಸರು ಇಟ್ಟು ಪೀ ಜೀ ನಡೆಸುತ್ತಾ ಕಂಡ ಕಂಡವರಿಗೆಲ್ಲ ರೋಪ್ ಹಾಕುತ್ತಾ, 'ಒಬ್ಬರನ್ನು' ಮಾತ್ರ ಕಂಡು ನಾಚುತ್ತಾ ಹಾಗೆ ......ತಾ
ವಸೂಲು ಮಾಡುವ 'ಭಾಮು' ಎಂಬುವವರನ್ನ ಮುಖ್ಯ ಪಾತ್ರವಾಗಿಸ್ ಚಿತ್ರ ತೆಗೆದೆ....
ಭಾ ಮು ಹೆಸರು ಚೆನ್ನಾಗಿದೆ ಅವರು ಹೇಗಿರುವರು?
ಭಾ ಮು ಅಂದರೆ ಭಾರಿ ಮುತ್ತು ..
ನೋಡೋಕೆ ಹೇಗಿರುವರು? ಅಂತಲೇ ಸಿಕ್ಕಾ ಪಟ್ಟೇ ಜನ ಸಿನೆಮಾ ಹಾಲ್ ನಲ್ಲಿ ಸೇರಿ ಅಲ್ಲಿ ಪರದೆ ಮೇಲೆ ಅನ್ನಪೂರ್ಣೆಯ 'ಬರೀ ಪಾದ' ಕಂಡು ಜನ ನಮಸ್ಕಾರ ಮಾಡುತ್ತಾ ಹೋದವರು ಮತ್ತೆ ವಾಪಸ್ಸು ಬಂದಿಲ್ಲ..!!
ಎಲ್ಲಿ ಹೋದರು???
ನನಗನ್ನಿಸುತ್ತೆ
ಬಹುಶ ಕೆಲವು ಜನ 'ಭಾಮು' ಅರ್ಥಾಥ್ ಅನ್ನಪೂರ್ಣೆಶ್ವರಿ ಯ ಇನ್ನುಳಿದ ಭಾಗ ಟಾಕೀಸ್ ಮೇಲೆ ಇರಬಹುದು ಅಂತ ಅದರ ಮೇಲೆ ಹತ್ತಿ ಅನ್ನಪೂರ್ಣೆ ಯ ಮುಖ ನೋಡುವ ಪ್ರಯತ್ನ ಮಾಡುತ್ತಿರಬಹುದು ಅಂತ...:())))
ಮತ್ತೆ ದಯಾ ಧರ್ಮ?
ಅನ್ನಪೂರ್ಣೆಶ್ವರಿ ಕೈ ಕೊಟ್ಟಾಗ
ನಾ ಎದೆ ಗುಂದ್ಬಾರದು ಎನ್ನುತ್ತಾ ಅಂ ಡಾ೦ ಡ ಭಂಡ ಸ್ವಾಮಿಗಳು ಮತ್ತೊಮ್ಮೆ ಪ್ರಯತ್ನಿಸು ಅಂತ ಹೇಳಿ 'ದಾನ -ದಯಾ -ಧರ್ಮ' ಅಂತ ಚಿತ್ರ ತೆಗೆಯಲು ಹೇಳಿದರು..
ಮುಂದೆ?
ಆ ಚಿತ್ರ ಬಿಡುಗಡೆ ಆದಾಗ ,ಸ್ವಾಮಿಗಳು 'ಜಗ ಕಲ್ಯಾಣ ಯಾಗ' ಮಾಡುವೆವು, ಅದಕ್ಕೆ 'ಉದಾರ' ಧಾನ ಮಾಡಿ ಅಂತ ಹೇಳಿ ತಮ್ಮ ಆಶ್ರಮದ 'ದೊಡ್ಡ ಹಣದ ಹುಂಡಿ' ತಂದು ಟಾಕೀಸ್ ಮುಂದೆ ಇಕ್ಕಿದರು, ಆ ಹುಂಡಿ ನೋಡಿ ಜನ ದೂರದಿಂದಲೇ ಭಯ ಭಕ್ತಿಯಿಂದ ನಮಸ್ಕರಿಸಿ ಪೋಸ್ಟರ್ ಗೆ ದೂರದಿಂದಲೇ ನೀ ಅಲ್ಲೇ ಇರು ತುಂಬಾ 'ಚೆನ್ನಾಗಿದೀಯಾ' ಅನ್ನುತ್ತಲೇ ಹೋಗುತ್ತಿದ್ದರು..
ಯಾರು ಬರಲಿಲ್ಲವೇ?
ಬಂದರು..
ಬಂದರೆ? ಸದ್ಯ ಬಂದರಲ್ಲ್..
ಇರಯ್ಯ, ಬಂದರು ಅಂದರೆ ಪ್ರೇಕ್ಷಕರು ಬರಲಿಲ್ಲ,
ಮತ್ತೆ?
ಆಶ್ರಮದ ಕಡೆಯಿಂದ ಸ್ವಾಮಿಜೀಗಲೂ ಹುಂಡಿಯಲ್ಲಿ ಎಸ್ಟು ಕಲೆಕ್ಷನ್ ಆಗಿದೆ ಅಂತ ತಮ್ಮ ದಿವ್ಯ ಧೃಸ್ಟಿಯಿಂದಲೇ ನೋಡುವ ಸಲುವಾಗಿ ಆಗಮಿಸಿ ಆ ಹುಂಡಿ ಒಳಗೆ ಕಣ್ಣುಗಳನ್ನ ಹಾಕಿ ಅಮೂಲಾಗ್ರವಾಗಿ ಹುಡುಕಿದರು ೨೫ ಪೈಸೆ ಬಿಲ್ಲೆ ಸಹಾ ಕಾಣದೆ ಯಾರಿಗೂ ಕಾಣದಂತೆ ತಮ್ಮ ಕೌಪೀನೂ ಒಳಗಿನ 'ಸೀಕ್ರೇಟ್ ' ಜೇಬಿಗೆ ಕೈ ಹಾಕಿ ಒಂದು ನೋಟಿನ ಕಟ್ಟು ತೆಗೆದು ಹುಂಡಿಗೆ ಹಾಕಿ ಅದನ್ನೇ ಎತ್ತಿ ತೆಗೆದು ಎಲ್ಲರಿಗೂ ತೋರಿಸಿ ತಮ್ಮ ಶಿಷ್ಯರಿಗೆ ಈಗ ಈ ಹುಂಡಿ ತೆಗೆದುಕೊಂಡು ನಗರ ಸುತ್ತ ಮುತ್ತ ಓಡಾಡಿ ,ಚೆಕ್ಕು ಕ್ಯಾಷ್ ಸಂಗ್ರಹಿಸಲು ಹೇಳಿದರು...!!
ಒಹ್..!! ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಜನ 'ಹಿಂದೊಮ್ಮೆ ' ಅದೊಂದಿನ ಯಾಕೆ ಎದ್ದೋ -ಬಿದ್ದೋ ಅಂತ ಓಡಿ ಹೋಗಿ ಬಸ್ಸು ರೈಲು ಹತ್ತಿ ,ಪರ ಊರಿಗೆ ಹೊರಟರು ಅಂತ ಈಗ ಗೊತಾಯ್ತು..!!
ಮತ್ತೆ ನಿಮ್ಮ ಹಣ?
ಕಳೆದುಕೊಂಡದ್ದು ಅಲ್ಲೇ ಹುಡುಕಬೇಕಲ್ಲ..!!
ಮತ್ತೆ ಒಂದು ಚಿತ್ರ ಮಾಡಿದೆ
ಹೆಸರು??
ಕರುಳು ಕಿತ್ತಿ ಕೈಗೆ ಕೊಡುವೆ...!!
ಯಪ್ಪ ಶಿವನೇ ಅದೆಂತ ಹೆಸರು?
ಅಂದ್ರೆ ನಿಮ್ಮ ಚಿತ್ತ್ರದಲ್ಲಿ ನೀವು ಖಳ ನಾಯಕನ ಕರುಳು ಕಿತ್ತು ಆಚೆ ತೆಗೆದು, ಅವನಿಗೆ ನೋಡಲು ಕೊಡುತ್ತಿದ್ದೀರ?
ಅಲ್ಲ..
ಮತ್ತೆ??
ಇದು ಹೆಂಗರುಳುಗಳಿಗಾಗಿ ಮಾಡಿದ್ದ ಸ್ಪೇಸಲ್ ಸಿನೆಮಾ..
ಅದರಲ್ಲಿನ ಸೆಂಟಿಮೆಂಟ್- ಸಂಬಂಧಗಳು ಸನ್ನಿವೇಶಗಳು ಅವರ ಕರುಳನ್ನೇ ನಮಗೆ ಕಿ.. ಕೊಟ್ಟು ನಮ್ಮನ್ನು ಶ್ರೀಮಂತ ಮಾಡಿದರು..:
(೦೦
ಅದಕ್ಕೆ ನಿರ್ದೇಶಕರು ಖಂಡಿತ ಆ 'ಸಾಯ್ಸೋ ಪರಿಕಾಸ್' ಅವ್ರೆ ಅಲ್ಲವೇ??
ಹೌದು ನಿಮ್ಮ ಊಹೆ ನಿಜ.. .
ವಾಹ್ವ್..!
ತುಂಬಾ ಚೆನ್ನಾಗಿದೆ..
ಆಮೇಲೆ....?
ಕಾಫೀ ಕುಡಿಯೋಣ ಬಾ...!!
ಬೇಡ ಸ್ವಾಮಿ.. ಕಾಫಿ ಬೇಡ, ಸ್ವಲ್ಪ ಹೊತ್ತು ಆದರೆ ಊಟವೇ ಮಾಡೋಣ...:())
ಅಯ್ಯ ಮಹಾನುಭಾವ - ನಾ ನಿನ್ನನ್ನ ಕಾಫಿ ಕುಡಿಯಲು ಕರೆದಿಲ್ಲ..:(((
ಮತ್ತೆ??
ಅದು ನಂದೇ ಚಿತ್ರದ ಹೆಸರು..:((
ಹೌದೇ? ನಾ ಹಾಗೆ ಅಂದುಕೊಂಡಿದ್ದೆ...!!
ಮುಂದೆ?
ಹೌದು ಇನ್ನೂ ನೀವ್ ಕೊನೆಯದಾಗಿ ತೆಗೆದ್ ಚಿತ್ರ ಯಾವುದು?
ಮತ್ತೆ ಬಂದರೆ ಮಚ್ಚು ಎತ್ತ್ತುವೆ ???
ಅಲ್ಲ ಸ್ವಾಮಿ ನೀವೇ ಬನ್ನಿ ಬನ್ನಿ ನನ್ನ ಕಥೆ ಹೇಳುವೆ ಅಂತ ಕೂರಿಸಿಕೊಂಡು ಮತ್ತೆ ಬಂದರೆ ಮಚ್ಚು ಎತ್ತುವೇ ಅನ್ನೋದು ನ್ಯಾಯವೇ? ಧರ್ಮವೇ?
ಅಯ್ಯ- ಅದು ನನ್ನ ಕೊನೆಯ ಚಿತ್ರದ ಹೆಸರು..!!
ಜನ ಮತ್ತೆ ಮತ್ತೆ ಸಿನೆಮಾ ನೋಡಲು ಬರಲಿಲ್ಲ ಅನ್ನಿಸುತ್ತೆ...!!
ಅಲ್ಲೇ ನೀವು ತಪ್ಪು ತಿಳಿದದ್ದು...???
ತಪ್ಪು?? ಏನು??
ನಮ್ಮ ಜಾಣ ಜನರ ಬಗ್ಗೆ ನಿಮಗೆ ಗೊತ್ತಿಲ್ಲವೆ?
ನಾ ಮಚ್ಚು ಎತ್ತುವುದನ್ನ ನೋಡಲೇ ಜನ ಮುಗಿ ಬಿದ್ದು ಬಂದರು ಬರುತ್ತಲೇ ಇದ್ದರು...!!
ಯಾಕೆ???
ಯಾಕೆ ಅಂದರೆ
ಮಚ್ಚು ಎತ್ಟೋದ್ ಅಂದ್ರೆ ಸುಮ್ನೇನಾ? ಅದಕ್ಕೂ ಒಂದು ಯಾಂಗಲ್ ಬೇಕು, ಇಮೇಜ್ ಬೇಕು, ಗ್ರಿಪ್ ಬೇಕು...!!
ಸ್ಟೈಲ್ ಬೇಕು...
ಅದನ್ನ ನೋಡಲು ಜನ ಬಂದು ಬಂದು ನಾ ಮಚ್ಚು ಎತ್ತಿ ಎತ್ತಿ ಕೊನೆಗೆ ಅದನಂ ಕೆಳಗೆ ಇಳಿಸೋಕೆ ಆಗದೆ ಕೈ ಅಲ್ಲಿಯೇ ನಿಂತು ಹೋಯ್ತು...
ಮತ್ತೆ ಈಗ ಕೈ ಸರಿ ಹೋಗಿದೆ..
ಅದಾ? ಜನ ಬರುವುದು ಕಡಿಮೆ ಆಯ್ತು, ಮಚ್ಚು ತಾನಾಗೇ ಕೆಳಗೆ ಬಿತ್ತು..!!
ಓ ನಿಮ್ದು ಗ್ರೇಟ್ ಸ್ಟೋರೀ ಬಿಡಿ....!!
ಒಂದು ೯ ಡೀ ಚಿತ್ರ ಮಾಡುವ ಯೋಚನೆ ಇದೆ..!!
೯ ಡೀ ಚಿತ್ರವೇ?
ಓ..! ಗೊತ್ತಾತು ಗೊತ್ತಾತು.....
ಗೊತ್ತಾಯ್ತಾ? ನಿನಗೆ?
ಪರವಾಗೀಲ್ವೇ- ನೀ ಜಾಣ, ಹೇಳು ಏನು ಹಾಗನ್ದ್ರೆ?
ನೋಡಿ ಸ್ವಾಮಿ
D=೧
D೨
D೩
D೪
D೫
D೬
D೭
D೮
D೯= ೯ ಡೀ
ಅದೇ ೯ ಡೀ ...:((((
ತಲೆ ಕೂದಲು ಕಿತ್ತಿ ಕೊಳ್ಳಲು ಹೋದರೆ....???
ವಿಗ್ ಕಿತ್ತಿ ಕೈ ಗೆ ಬರಬೇಕೆ..:((
ಸ್ಸಾರ್ ನೀವ್ ಸಿನೆಮಾದಲ್ಲಿ ನಟ ಆಗಿದ್ದಾಗ ಭಲೇ ಕೂದಲು ಇತ್ತು ಈಗ ಟೋಪೆನ್ ಇಟ್ಟುಕೊಂಡಿದ್ದೀರ ಅನ್ನಲು, ನೋಡಯ್ಯ ಚಿತ್ರ ನಟ ಅಲ್ಲವೇ ಮತ್ತೆ ಮತ್ತೆ ಕೂದಲು ಬಾಚಿಕೊಂಡು, ನನ್ ಕಸ್ಟ ನೋಡಲಾಗದೇ ಇವನಿಗೆ ಕಸ್ಟ ಕೊಡುವುದೇ ಬೇಡ ಅಂತ ಎಲ್ಲ ಕೂದಲು ಬಾಯ್ ಹೇಳಿದವು...:()))ಅದಕ್ಕೆ... ಇದು
ಹಾಗಾದ್ರೆ ೯ ಡೀ ಅಂದ್ರೆ ಏನು ಸ್ವಾಮಿ?
ಮಹಾರಾಯ ೯ ಡೀ ಅಂದ್ರೆ ಅದು ಅಲ್ಲ...
,ಮತ್ತೆ??
೩ ಡೀ ಅಂದ್ರ್ತೆ
ಮಾಮೂಲಿ ೨ ಡೀ ನಲ್ಲಿ ನಾವ್ ತೆರೆ ಮೇಲೆ ನೋಡ್ತೀವಿ
ಅದೇ ೩ ಡೀ ಆದರೆ ಕಣ್ಣಿಗೆ ಗ್ಲಾಸ್ ಹಾಕೊಂಡು ನೋಡಿದರೆ ನಮ್ಮ ಕನ್ನಡಕವೇ ತೆರೆ ಆಗಿ ಮತ್ತು ಪಾತ್ರಗಳೇ ನಮ್ಮ ಕಣ್ಣ ಮುಂದೆ ನರ್ತಿಸುತ್ತವೆ
ಗ್ಲಾಸ್ಸ್ ತೆಗೆದು ನೋಡಿದರೆ ಏನು ಕಾಣೋಲ್ಲ...!!
ಅದೊಮ್ಮೆ ಕನ್ನಡದಲ್ಲಿ ಒಂದು ೩ ಡೀ ಚಿತ್ರ ಬಂದಿತ್ತಲ್ಲ 'ಅಯ್ಯಯ್ಯ' ಅಂತ, ಗೊತ್ತಾ?
ಓ..! ಅದಾ??
ನೋಡಿದೆ ಸ್ವಾಮಿ
ಅದರಲ್ಲಿ ೩ ಡೀ ಇದೆ ಅಂತ ೧೦೦೦ ಕೊಟ್ಟು ಅಡ್ವಾನ್ಸ್ ಬುಕಿಂಗ್ ಮಾಡಿಸಿ ಟಿಕೆಟ್ ಪಡೆದು ಒಳಗೆ ಹೋಗಿ ನೋಡಿದರೆ ೩ ಡೀ ನು ಇಲ್ಲ ಪಾಡಿ ನು ಇಲ್ಲ..:(((
ಹೌದಾ???
ಪಾಪ...!!
ಮುಂದೆ ಏನು ಸ್ವಾಮಿ..??
ಅಂ ಡಾ ಡ ಭಂಡ ಸ್ವಾಮಿಗಳ ಆ ಘನ ಕಾರ್ಯ -ಸಮಾಜ ಸೇವೆ- ನೋಡಲು ಆಗದೆ ಈಗ 'ಒಬ್ಬರು' ತಾವ್ ನಿರ್ಮಾಪಕ ಆಗಲು ಮುಂದೆ ಬಂದಿದ್ದಾರೆ
ಆದರೆ ಅವರ ಆ ಚಿತ್ರ ೯ ಡೀ ..
ಈ ೩ ಡೀ ಗಿಂತ ಮೂರು ಪಟ್ಟು ವಿಭಿನ್ನ -ವಿಶಿಸ್ಟ .!!
ಹೌದಾ? ಹೇಗೆ ಸ್ವಾಮಿ?
ಈ ೯ ಡೀ ನೀವ್ ಈಗ ನೋಡಲು ಆಗೋಲ್ಲ...!!
ಮತ್ತೆ? ಮೇಲೆ ಹೋಗಿ ನೋಡಬೇಕೆ?
ಸಮಾಧಾನ....
ಇಲ್ಲೇ ನೋಡಬಹುದು ಆದರೆ, ಅದಕ್ಕೆ ಸಮಯ ಇದೆ.....
ಸಮಯ?
ಎಸ್ಟು?
ಇನ್ನೇನು ಹತ್ತಿರವೇ ಇದೆ..
ಹೌದೇ ಸ್ವಾಮಿ? ಎಸ್ಟು ಖರ್ಚಾಗಿದೆ ಚಿತ್ರಕ್ಕೆ?
ಯಾರಿಗ್ಗೊತ್ತು???
ಎನ್ ಸ್ವಾಮಿ ಇದು? ನೀವ್ ನಿರ್ಮಾಪಕರು ,ನಿಮಗೆ ಗೊತ್ತಿಲ್ಲವೆ?
ನಾ ನಿರ್ಮಾಪಕನೆ,ಆದರೆ ಆ ನಿರ್ಮಾಪಕನ ನಿರ್ಮಾಣದಲ್ಲಿ ಆಗುವ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಇಲ್ಲ, ಆದರೆ ನಿರ್ದೇಶಕ ಬೇರೆ ಇರುವರು......!!
ಯಾರು ಅವರು?
ಸೃಸ್ತಿ ಕರ್ತ
ಹಾ..!! ಹೌದು
ಹೆಸರು ವಿಭಿನ್ನ ವಾಗಿದೆ...
ಗ್ರಾಪ್ಜಿಕ್ಸ್- ಫೈಟ್ಸ್- ನಾಯಕ -ನಾಯಕಿ -ಖಳ ನಾಯಕ ಇರುವರೆ?
ಯಾಕಿಲ್ಲ ಬೇಜಾನ್ ಜನ ಇರುವರು
ಅದರಲ್ಲಿ ಹೆಲ್ಕ್ಯಾಪ್ಟರ್- ವಿಮಾನ- ಹಡಗು ಇರುವವೆ?
ಯಾಕಿಲ್ಲ ? ಬೇಜಾನ್ ಇರುವುದು
ಆದರೆ ಮೊದಲು ತಾವು ತಮ್ಮವರು ಹತ್ತಿ ಕುಳಿತು ನಮ್ಮನ್ನೆಲಾ ಬಿಟ್ಟು ಕೈ ಬೀಸುತ್ತಾ ಹೋಗಿ ಅವರೇ ಪರ ಲೋಕ ಯಾತ್ರೆಗೆ ಹೊರಡುವರು...!!
ನೀವ್ ಯಾರ ಬಗ್ಗೆ ಹೇಳುತ್ತಿರುವಿರಿ?
ಅದೇ ರಾಜ್ಖಳನಾಯಕರ ಬಗ್ಗೆ-
ಅಂದ್ರೆ?
ರಾಜಕೀಯ ನಾಯಕರು, ಉನ್ನತ ಮಟ್ಟದ ಅಧಿಕಾರಿಗಳು..!!
ನೀವ್ ಹೇಳುತ್ತಿರುವ ಚಿತ್ರದ ಹೆಸರೇನು ಸ್ವಾಮಿ?
೩೧-೧೨-೨೦೧೨...:(((
೩*೩=೯ ಡೀ ಸ್ಕೋಪ್
ಹಾ....!!
ಮುಂದೇನು?????
ಬರಹದ ಅಂತ್ಯಕ್ಕೆ ಬಂದು ಮುಂದೇನು????? ಅನ್ನುವ ನಿಮ್ಮ ಬಗ್ಗೆ ನಮಗೆ ಅಪಾರ ಅಭಿಮಾನವಿದೆ- ನೀವ್ 'ಅಂಡಾಡ ಭಂಡ ಸ್ವಾಮಿಗಳ' ಸತ್ಸಂಗಗಳಿಗೆ ಬಂದರೆ ಅಪಾರ ಜ್ಞಾನ ಸಿಕ್ಕು ಮುಂದೇನು ಎನ್ನುವ ಪ್ರಶ್ನೆಯೇ ನಿಮ್ಮ 'ಮುಂದೆ' ಬಾರದು..
ಈಗ ಇಲ್ಲಿ ಬಂದ 'ಸುಕೃತಕ್ಕೆ' ಇಲ್ಲಿ ಈ ದೊಡ್ಡ ಹರಿವಾಣದಲ್ಲಿ ಹಣ ಹಾಕಿ ಹೋಗಿ..
ಹರಿವಾಣ 'ತುಂಬಾ ಚಿಕ್ಕದು' ಇದ್ದ ಹಾಗಿದೆಯಲ್ಲ...!!
ಹೌದು
ಅದರಲ್ಲೇ 'ಅವರು' ೩ ಜನರಿಗೆ ಆಗುವಸ್ತು ಮಾತ್ರ .....?????? .:(((
ಲಕ್ಸ್ಮಿ ನಿಮಗೆ ಅನುಗ್ರಹಿಸಲಿ....
ಹೋಗುತ್ತಾ 'ಅವರ'ಭಜನೆ ಮಾಡಿಕೊಳ್ಳುತ್ತ ಹೋಗಿ, ಅವರಿಗೆ ಆಗ ಇನ್ನಸ್ತು 'ನವ' ಭಕ್ತರು ಸೇರುವರು...:())
ಶುಭವಾಗಲಿ..
ಸಲಹೆ ಕೇಳಲು ಹೋದ ತಪ್ಪಿಗೆ ಒಂದು ನೋಟಿನ ಕಟ್ಟು ಆ ದೊಡ್ಡ(ಚಿಕ್ಕ..!!) ಹರಿವಾಣ ದಲ್ಲಿ ಹಾಕಿ ಬಂದವನು , ಗಾಂಧಿನಗರ ಸಹವಾಸವೇ ಬೇಡ, ಇಲ್ಲೇ ಪಾನಿ ಪೂರಿ ಅಂಗಡಿ ಇಟ್ಟುಕೊಂಡು ಬದುಕುವ ಅಂತ ಅಂದುಕೊಂಡಿರುವೆ..!!
:())
ಅಂದ್ ಹಾಗೆ ಒಂದು ಮುಖ್ಯ ವಿಚಾರ ಹೇಳಲು ಮರೆತಿದ್ದೆ:
ಹೋಗುವಾಗಲೇ ನನ್ನ ಸ್ನೇಹಿತರು ಇನ್ನೊಂದು ವಿಷಯವನ್ನು ತಿಳಿಸಿದ್ದರು - ಆ ಖ್ಯಾತ ನಿರ್ಮಾಪಕರು, ಶ್ರೀ ಶ್ರೀ ಶ್ರೀ ಅಂ ಡಾ ಡ ಭಂಡ ಸ್ವಾಮಿಗಳ ಅತ್ಯಾಪ್ತ ಶಿಷ್ಯರು, ಹೀಗಾಗಿ ಅವರನ್ನು ಸ್ವಾಮೀ ಎಂದೇ ಸಂಬೋಧಿಸು , ಹಾಗೆಯೇ ಅವರನ್ನ ನೋಡಿದರೆ ಅಂಡಾಡ ಭಂಡ ಸ್ವಾಮಿಗಳ ವ್ಯಕ್ತಿತ್ವದ ಇನ್ನೊಂದು ತದ್ರೂಪು ...!!
ಅವರನ್ನ ನೋಡಿದರೆ ಅವರ ಜೊತೆ ಮಾತಾಡಿದರೆ ಅಂಡಾಡ ಭಂಡ ಸ್ವಾಮಿಗಳನ್ನೇ ನೋಡಿದ ಹಾಗೆ ಅನ್ನಿಸುವುದು ಅಂತ..
ಈಗ ನಂಗೆ ಒಂದು ಮಹದ್ ಸಂಶಯ ಬಂದಿದೆ, ಅದು.........????
ಈ ಖ್ಯಾತ ನಿರ್ಮಾಪಕನ ಅವತಾರ ಆ ಅಂಡಾಡ ಭಂಡ ಸ್ವಾಮಿಯೇ ಹಾಕಿರುವ ಇನ್ನೊಂದು ವೇಷವೆ? ಅಂತ...
ನಿಮಗೆ ಹಾಗೆ ಅನ್ನಿಸಲಿಲ್ಲವೇ??.....
Rating
Comments
ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:())))
In reply to ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:()))) by nanjunda
ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:())))
ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:())))
In reply to ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:()))) by sathishnasa
ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:())))
ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:())))
In reply to ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:()))) by partha1059
ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:())))
In reply to ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:()))) by venkatb83
ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:())))
In reply to ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:()))) by ಗಣೇಶ
ಉ: ಗಾಂಧಿನಗರ-ನಾನು-ನೀವು-ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:())))
ಉ: ಗಾಂಧಿನಗರ-ನಾನು -ಮತ್ತು ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ)....:())))
ಉ: ಗಾಂಧಿನಗರ-ನಾನು -ಮತ್ತು ಅಂಡಾ0ಡ ಭಂಡ ಸ್ವಾಮಿ ಜೀ (ಹಾಸ್ಯ).@ಜೀ