ಬಿಸಿಲಲ್ಲಿ ಮಳೆಹನಿಯಂತೆ

ಬಿಸಿಲಲ್ಲಿ ಮಳೆಹನಿಯಂತೆ

ನೀನಿಲ್ಲದೆ ಬರಡಾಗಿದ್ದ ನನ್ನ ಮನವೀಗ
ನಿನ್ನಾಗಮನದಿಂದಾಗಿದೆ ಬೃಂದಾವನ...
ನಿರೀಕ್ಷೆಗಳ ಹಾದಿಯಲ್ಲಿ ಸೋತು ಸೊರಗಿದ್ದ
ಕನಸುಗಳು ಗರಿಗೆದರಿ ಕುಣಿದಾಡುತಿವೆ ...
 
ಬಿಸಿಲಲ್ಲಿ ಮಳೆಹನಿಯಂತೆ ಬಂದು
ನೀ ಚೆಲ್ಲಿದ ಮೋಹಕ ನಗುವಿನಿಂದ
ಮೂಡಿದೆ ರಂಗು ರಂಗಿನ ಸುಂದರ
ಕಾಮನಬಿಲ್ಲು ನನ್ನೀ ಮನದಾಗಸದಿ
 
ನನ್ನ ಹೃದಯದ ಸೆರೆಮನೆಯಲಿ
 ನಾನು ಮಾಡಿರುವೆ ನಿನ್ನನು ಪ್ರೇಮಖೈದಿಯಾಗಿ  
ಬಿಡುಗಡೆಯೇ ಇಲ್ಲ ಗೆಳತಿ ನಿನಗೆ ಆ ಸೆರೆಯಿಂದ
ನೀನು ಇರಬೇಕು ಅಲ್ಲಿ  ಜೀವಿತಾವಾಧಿಗೆ
Rating
No votes yet

Comments