'ವಿಶ್ವದ ಅತಿ ಎತ್ತರದ ಸಂಕಟ ಮೋಚನ್ ಮಾರುತಿ ದೇವಾಲಯ, ನವ ದೆಹಲಿಯ ಕರೋಲ್ ಬಾಗ್ ನಲ್ಲಿ' !

'ವಿಶ್ವದ ಅತಿ ಎತ್ತರದ ಸಂಕಟ ಮೋಚನ್ ಮಾರುತಿ ದೇವಾಲಯ, ನವ ದೆಹಲಿಯ ಕರೋಲ್ ಬಾಗ್ ನಲ್ಲಿ' !

ಮಹಂತ್ ನಾಗ್ ಬಾಬ ಸೇವಾಗಿರ್ ಜಿ ಮಹಾರಾಜ್ ಎಂಬುವರು, ತಮ್ಮ ಯುವಾವಸ್ಥೆಯಿಂದಲೂ ಮಾರುತಿಯ ದೇವಾಲಯವೊಂದನ್ನು ಕಟ್ಟುವ ಕನಸುಕಾಣುತ್ತಿದ್ದರು. ಉತ್ತರ ಪ್ರದೇಶದವರಾದ ಅವರು, ದೆಹಲಿಗೆ ಬಂದು 'ಕರೋಲ್ ಬಾಗ್' ಎಂಬ ಜಾಗದಲ್ಲಿ ವಾಸ್ತ್ಯವ್ಯ ಹೂಡಿದರು. ಅವರು ಇದ್ದ ಜಾಗದಲ್ಲಿ ಚಿಕ್ಕ ಗುಡಿಯೊಂದಿತ್ತು.  ಅದರಲ್ಲಿ 'ಶಿವನ ವಿಭೂತಿಯ ಧುನ್' ಎಂಬ ವಾಟಿಕೆಯಿತ್ತು. ಅಲ್ಲೇ ಬದಿಯಲ್ಲಿ ಮಾರುತಿಯ ವಿಗ್ರಹವು ಇತ್ತು. ನಾಗ ಬಾಬಾ ಅಲ್ಲಿಯೇ ಕುಳಿತು ತಪಸ್ಸುಮಾಡಲು ಆರಂಭಿಸಿದರು.

ಒಂದು ರಾತ್ರಿ,  ಅವರ ಕನಸಿನಲ್ಲಿ ಮಾರುತಿ ಕಾಣಿಸಿಕೊಂಡು, ಒಂದು ಬೃಹತ್ ಮುರ್ತಿಯನ್ನು ಸ್ಥಾಪಿಸು ಎಂದು ಆಜ್ಞೆಯಾಯಿತು. ಅದನ್ನು ಶಿರಸಾವಹಿಸಿ ಬಾಬಾರವರು, ಅಲ್ಲಿಗೆ ಬರುತ್ತಿದ್ದ ಭಕ್ತರ ನೆರವಿನಿಂದ ೧೯೯೪ ರಕ್ಕೂ ಶುರುಮಾಡಿದ ಅಭಿಯಾನದಲ್ಲಿ  ಸುಮಾರು ೧೩ ವರ್ಷಗಳ ಕಾಲ ಶ್ರಮಿಸಿ, ಆಂಜನೇಯಸ್ವಾಮಿ  ದೇವಾಲಯವನ್ನು ನಿರ್ಮಿಸಿಯೇ ಬಿಟ್ಟರು. ಈ ಹನುಮಾನ್ ದೇವಾಲಯದ ವಿಶೇಷವೆಂದರೆ, ೧೦೮ ಅಡಿಗಳ ಎತ್ತರದ ಭವ್ಯ ಮೂರ್ತಿ, ವಿಶ್ವದಲ್ಲೇ ಅತಿ ದೊಡ್ಡ ಆಂಜನೇಯ ಸ್ವಾಮಿ ವಿಗ್ರಹವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಂಗಳವಾರ ಹಾಗೂ ಶನಿವಾರದ ಬೆಳಿಗ್ಯೆ, ೮-೧೫ ರಿಂದ ಸಾಯಂಕಾಲ ೮-೫ ರ ವರೆಗೆ ಜರುಗುವ ಪೂಜೆಯಲ್ಲಿ ಭಾಗವಹಿಸಲು ದೆಹಲಿಯ ಉಪನಗರಗಳಿಂದ ಶ್ರದ್ಧಾಳುಗಳು ಬರುತ್ತಾರೆ. ಶಿವನ ಧುನ್ ಕೂಡ ಜನಪ್ರಿಯತೆ ಗಳಿಸಿದೆ.

ವೈಷ್ಣುದೇವಿ ಮಂದಿರವು ಹನುಮಾನ್ ಮಂದಿರದ  ಒಂದು ಭಾಗವಾಗಿದೆ. ವಿಷ್ಣು ದೇವಿಯು 'ಪಿಂಡಿಯ ರೂಪ'ದಲ್ಲಿ ಜಮ್ಮು ಕಾಶ್ಮಿರದಲ್ಲಿರುವಂತೆಯೇ ಇಲ್ಲಿಯೂ ನೆಲೆಸಿದ್ದಾಳೆ. ಈಗಲಂತೂ   ಈ ಸಂಕಟ ಮೋಚನ ಹನುಮಾನ್ ಮಂದಿರಕ್ಕೆ ಭೇಟಿನೀಡುವ  ಭಕ್ತರ  ಸಂಖ್ಯೆ ಇಮ್ಮಡಿಸಿದೆ.  ಭಕ್ತರು ಮಾರುತಿಗೆ  ಕಪ್ಪು ವಸ್ತ್ರವನ್ನು ಅರ್ಪಿಸುತ್ತಾರೆ.  ಚೂರಿ, ಸಾಸುವೆ ಎಣ್ಣೆ ಒಂದು ಪ್ರಣತಿ, ಬೆಲ್ಲ, ಕಡಲೆ, ಮತ್ತು ಉದ್ದಿನಬೇಳೆ, ಎಳ್ಳು, ಯಾವುದಾದರು ರೂಪದ ಲೋಹ, ಹೂವಿನ ಹಾರ, ನಿಂಬೆಹಣ್ಣು ಅರ್ಪಿಸಲಾಗುತ್ತದೆ. 

ದೇವಾಲಯದ ಮತ್ತೊಂದು ವಿಶೇಷವೆಂದರೆ, (ಎಲೆಕ್ಟ್ರಾನಿಕ್  ಪದ್ಧತಿಯನ್ನು ಬಳಸಿಕೊಂಡು),  ಈ ಭವ್ಯ ಸಂಜೀವ  ಮೂರ್ತಿಯು  ತನ್ನ  ಎದೆಯನ್ನು ಭೇದಿಸಿ, ಒಳಗಿನಿಂದ ಶ್ರೀರಾಮ, ಸೀತಾಮಾತೆ, ಮತ್ತು ಲಕ್ಷ್ಮಣರ ದರ್ಶನ ಭಾಗ್ಯವನ್ನು ಭಕ್ತರಿಗೆ ಕರುಣಿಸುವ ಏರ್ಪಾಡಿದೆ.  ಹೀಗೆ,  ವಾರದಲ್ಲಿ ಎರಡುಬಾರಿ ಮಂಗಳವಾರ ಮತ್ತು ಶನಿವಾರ, ಬೆಳಿಗ್ಯೆ, ೮.೧೫ ರಿಂದ ಸಾಯಂಕಾಲ, ೮.೧೫ ರ ವರೆಗೆ ಪೂಜೆ ನಡೆಯುವ ಪೂಜಾವಿಧಿಗಳ ಮಧ್ಯೆ, ಈ ದರ್ಶನ ಭಾಗ್ಯವನ್ನು ನಾವು ಪಡೆಯಬಹುದು !

ಮಂದಿರದ ಕಾರ್ಯ ನೆರವೇರುತ್ತಿದ್ದಂತೆ,   ಸನ್, ೨೦೦೮ರ, ಜನವರಿ, ೨೫ ರಂದು ನಾಗಾಬಾಬಾರವರು ದೇಹತ್ಯಾಗ ಮಾಡಿದರು. ಭಕ್ತರು, ಬಾಬಾರವರ ಸಮಾಧಿಯನ್ನು ದೇವಸ್ಥಾನದ ಸಮ್ಮುಖದಲ್ಲೇ ಸ್ಥಾಪಿಸಿದ್ದಾರೆ. ಹನುಮಾನ್ ಮಂದಿರದ ಒಳಗೇ ಬಾಬಾರವರ ಸಮಾಧಿಯನ್ನು ಸ್ಥಾಪಿಸಲು ಭಕ್ತಗಣ ಇಷ್ಟಪಟ್ಟಿದ್ದರು. ಆ ಸ್ಥಳದಲ್ಲೇ ಶಿವಲಿಂಗವನ್ನು ಸ್ಥಾಪಿಸಿದ್ದಾರೆ.  ಅಲ್ಲಿ ಅಖಂಡವಾಗಿ ದೀಪ ಉರಿಯುತ್ತಿರುತ್ತದೆ.

 

'ಮಹಂತ್ ನಾಗಾಬಾಬಾ ಸ್ಮಾರಕ ಟ್ರಸ್ಟ್' ನ ವತಿಯಿಂದ, ಬಾಬಾಜಿಯವರ ದೇಹಾಂತವಾದ ದಿನ, ಜನವರಿ, ೨೫ ರಂದು, ದೇಶದ ವಿವಿಧ ಕಡೆಗಳಿಂದ ಸಾಧು-ಸಂತರು, ಮಹಂತರು, ಪೂಜಾರಿಗಳು, ಹನುಮಾನ್ ಮಂದಿರದ ಬಳಿ ಬಂದು ನೆರೆದರು. ಹೀಗೆ ಆ ಭಂಡಾರದ ವ್ಯವಸ್ಥೆಯಾಯಿತು. ಅವರೆಲ್ಲರೂ ಒಮ್ಮತದಿಂದ ಪ್ರತಿವರ್ಷವೂ ಪೂಜಾಪಾಠಗಳನ್ನು ನಡೆಸುವ ನಿಶ್ಚಯಮಾಡಿದರು.

 

ಹೊಸ ದೆಹಲಿಯ  ಝಂಡೆವಾಲನ್ ಮೆಟ್ರೋ ರೈಲ್ವೆ ನಿಲ್ದಾಣ ದ ಹತ್ತಿರದಲ್ಲೇ ಇರುವ ಈ ಮಂದಿರ, ಪಹಾಡ್ ಗಂಜ್ ಹೊಸ ದೆಹಲಿ ರೈಲ್ವೆ ನಿಲ್ದಾಣಕ್ಕೆ ಸುಮಾರು ೧೧ ಕಿ.ಮೀ.ದೂರದಲ್ಲಿದೆ. 

 

ಚಿತ್ರ  ಹಾಗೂ  ವಿವರಣೆ :

-ಹೊರಂಲವೆಂ 

Comments