ಅಚ್ಚರಿ
ಕವನ
ಇದೀಗ ತಾನೇ ಚಿಪ್ಪೊಡೆದು
ಥಳಥಳಿಸುವ ಮುತ್ತು
ಪಾರ್ಶ್ವ ನೋಟದ ಸ್ಪರ್ಶ
ಮಾತ್ರಕ್ಕೆ ನಿಗಿನಿಗಿ ಕೆಂಡ
-ದುದ್ವೇಗ ಉಮ್ಮಳ
ಎದೆ ಬಗೆವ ಬಗೆ
ಉಪಮಾತೀತ
ಜೀವ ಹನಿ ವ್ಯರ್ಥ ಚಿಪ್ಪೊಳಗೆ
ಮರೆಯಾಗದಿರುತ್ತಿದ್ದರೆ
ಬುವಿಯೊಡಲ ತಂಪು
ಕಂಪರಳಿಸುತಿತ್ತು
ನೆಲ ಮುಗಿಲ ಬಾಂಧವ್ಯ
ಫೆವಿಕೋಲಿನ ಬಿಡಿಸಲಾರದ ನಂಟು
ಅಲ್ಲವೇ ಅಲ್ಲ
ಕಂಡೂ ಕಾಣದ ಬಗೆ-
-ಯರಿವ ಹಿತ
ಸ್ಪರ್ಶಾತೀತ ಪರಿಮಳ
ಇಲ್ಲವೇ
ಚಿಪ್ಪೊಡೆದರೂ
ಮುತ್ತಿನಚ್ಚರಿ
--- ದಿವ್ಯಗಂಗಾ. ಪಿ.
Comments
ಉ: ಅಚ್ಚರಿ