ಮೂಢ ಉವಾಚ - 145

ಮೂಢ ಉವಾಚ - 145

ನುಡಿವ ಸತ್ಯವದು ಗೆಳೆತನವ ನುಂಗೀತು
ಬಂಧುತ್ವ ಕಳೆದೀತು ಸೌಜನ್ಯ ಮರೆಸೀತು |
ಮರುಳು ಮಾಡುವ ಸುಳ್ಳಿಗಿಹ ಬೆಲೆಯ
ಕೊಡರು ಸತ್ಯಕಿದು ಸತ್ಯ ಮೂಢ || ..289


ಸಂತೋಷ ಜೊತೆಗಿರಲು ಮತ್ತೇನೂ ಬೇಕಿಲ್ಲ
ಮತ್ತೇನೂ ಬೇಡದಿರೆ ಸಂತೋಷ ಬಾಳೆಲ್ಲ|
ಇರುವುದು ಸಾಕೆಂಬ ಭಾವ ಸಂತೋಷ
ಅರಿತವನೆ ಪರಮಸುಖಿ ಕಾಣು ಮೂಢ || ..290
****************
-ಕ.ವೆಂ.ನಾಗರಾಜ್.

 

Rating
No votes yet

Comments