ಥಟ್ ಅಂತ ಹೇಳಿ - ಲಿಮ್ಕ ದಾಖಲೆ!

ಥಟ್ ಅಂತ ಹೇಳಿ - ಲಿಮ್ಕ ದಾಖಲೆ!

ಗೆಳೆಯರೆ!

ನಿಮಗೆಲ್ಲ ತಿಳಿದಿರುವ ಹಾಗೆ ಚಂದನ ವಾಹಿನಿಯಲ್ಲಿ ’ಥಟ್ ಅಂತ ಹೇಳಿ’ ಕನ್ನಡ ಕ್ವಿಜ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಈ ಕಾರ್ಯಕ್ರಮ ಈಗ ಅಧಿಕೃತವಾಗಿ ಲಿಮ್ಕ ದಾಖಲೆಯನ್ನು ಸೇರಿದೆ. ಸಂಬಂಧಿತ ದಾಖಲೆ ಪತ್ರವನ್ನು ಲಗತ್ತಿಸಿದ್ದೇನೆ. ಈ ಬಗ್ಗೆ ಮಾಹಿತಿಯು ೨೦೧೨ ಆವೃತ್ತಿಯ ಲಿಮ್ಕ ಪುಸ್ತಕದಲ್ಲಿ ಬಂದಿದೆ. ಭಾರತದ ಯಾವುದೇ ವಾಹಿನಿಯಲ್ಲಿ ಸುದೀರ್ಘ ಕಾಲ ಕ್ವಿಜ್ ಕಾರ್ಯಕ್ರಮ ನಡೆಸಿದ್ದಕ್ಕಾಗಿ ಈ ದಾಖಲೆ ಸಂದಿದೆ.

ಈಗ ಥಟ್ ಅಂತ ಹೇಳಿ ೨೦೦೦ ನೆಯ ಕಂತಿನ ಅಂಚಿಗೆ ಬಂದಿದೆ. ಜೂನ್ ೧೭, ೨೦೧೨ ರಂದು ಮೈಸೂರಿನ ಶ್ರೀಸಚ್ಚಿದಾನಂದ ಗಣಪತಿ ಆಶ್ರಮದಲ್ಲಿ ೨೦೦೦ ಕಂತಿನ ಮುದ್ರಣ ನಡೆಯಲಿದೆ. ಹೆಚ್ಚಿನ ವಿವರಗಳನ್ನು ಮುಂದೆ ತಿಳಿಸುವೆ. ಥಟ್ ಅಂತ ಹೇಳಿ ಕಾರ್ಯಕ್ರಮ ಇಷ್ಟು ಸುದೀರ್ಘವಾಗಿ ನಡೆಯಲು ಕಾರಣ ಚಂದನ ವಾಹಿನಿಯ ಉಪ ಮಹಾ ನಿರ್ದೇಶಕರಾದ ಡಾ|ಮಹೇಶ್ ಜೋಷಿ, ಕಾರ್ಯಕ್ರಮ ನಿರ್ಪಾಪಕರಾದ ಶ್ರೀಮತಿ ಉಷಾ ಕಿಣಿ, ಆರತಿ ಎಚ್.ಎನ್ ಹಾಗೂ ರಘು. ಇವರ ಜೊತೆಯಲ್ಲಿ ತಾಂತ್ರಿಕ ವರ್ಗ ಹಾಗೂ ಸೃಜನಶೀಲ ವರ್ಗದಲ್ಲಿ ಕೆಲಸ ಮಾಡುತ್ತಿರುವವರನ್ನು ನೆನೆಯಬೇಕು. ಎರಡನೆಯ ಕೃತಜ್ಞತೆಯು ನಮ್ಮ ಕನ್ನಡ ಜನತೆಗೆ ತಲುಪಬೇಕು. ಅವರಿಲ್ಲದೇ ಈ ಕಾರ್ಯಕ್ರಮವಿಲ್ಲ ಅಲ್ಲವೆ! ಈ ಕಾರ್ಯಕ್ರಮದಲ್ಲಿ ೧೪ ವರ್ಷ ವಯಸ್ಸಿನ ಶಾಲಾ ಬಾಲಕರಿಂದ ಹಿಡಿದು ೮೫ ವರ್ಷದ ವೃದ್ಧರವರೆಗೂ ವಿವಿಧ ವಯೋಮಾನದವರು ಬಂದಿದ್ದಾರೆ. ಅವರೆಲ್ಲರಿಗೂ ನಮ್ಮ ಕೃತಜ್ಞತೆಗಳು.

ನಮ್ಮ ಮುಂದಿನ ಹಾದಿ ತುಸು ಕಠಿಣವೆನಿಸಿದೆ. ನಮ್ಮ ಮುಂದಿನ ಪಯಣದ ನಿಮ್ಮ ಸಲಹೆ ಹಾಗೂ ಮಾರ್ಗದರ್ಶನಗಳು ಅಗತ್ಯ. ದಯವಿಟ್ಟು ನೀಡಿ.



 

ನಿಮ್ಮವ

 

ನಾಸೋಮೇಶ್ವರ

Rating
No votes yet

Comments