ಬೇಕು ಬೇಡಗಳ ಮಾಯೆ (ಶ್ರೀ ನರಸಿಂಹ 32)

ಬೇಕು ಬೇಡಗಳ ಮಾಯೆ (ಶ್ರೀ ನರಸಿಂಹ 32)

ಜೀವನವೆನುವಿ ಪಯಣದಲಿ ನಮಗೆ ಬೇಕೆನಿಸುವುದು
ಇನ್ನೊಬ್ಬರ ಮನಸಿನಲಿ ಬೇಡವದು ಎಂದೆನಿಸುವುದು
ನಮ್ಮಂತೆ ಎಲ್ಲವೂ  ನಡೆಯ ಬೇಕೆನುವುದು ಮನಸು
ಬಯಸಿದುದು ಸಿಗದಿರಲು ಹೊಂದುವುದದು ಮುನಿಸು
 
ನೀನು ಬಯಸಿದ ತೆರದಿ ಎಲ್ಲ ನಡೆಯ ಬೇಕೆನ್ನದಿರು
ನಿನ್ನಾಲೋಚನೆಗಳೆ ಸರಿಯೆನುತ ಪರರ ಜರಿಯದಿರು
ಬಾಳಿನ ಪಥದಿ ಹೊಂದಿ ಬಾಳುವುದ ನೀ ಕಲಿಯಬೇಕು
ನಿನಗಾಗಿ ಸೃಷ್ಠಿಯಾಗಿಲ್ಲವಿ ಜಗವೆಂಬುದನರಿಯಬೇಕು
 
ಎಲ್ಲ ನನಗಾಗಿ,ನನ್ನಂತೆ ನಡೆಯಬೇಕೆನ್ನುವುದದು ಮೂಡತೆಯೂ
ನಡೆವುದೆಲ್ಲವೂ ಶ್ರೀನರಸಿಂಹನಿಚ್ಛೆ ಎಂದರಿತರದು ಸಾಧನೆಯೂ

 

Rating
No votes yet

Comments